Saturday, February 2, 2013

Daily Crime Incidents for Feb 02, 2013

ಸುರತ್ಕಲ್ ಪೊಲೀಸ್ ಠಾಣೆ

ಅಪಘಾತ ಪ್ರಕರಣ 


  • ದಿನಾಂಕ: 31-01-13 ರಂದು ಪಿರ್ಯಾದಿದಾರ ಅಜಯ್ ಕುಮಾರ್ (31), ತಂದೆ: ಲೀಲಾಧರ ಬಂಗೇರ, ವಾಸ: ಶ್ರೀಯಾನ್ ನಿವಾಸ, ಸೈಟ್.ನಂಬ್ರ 67, ಕುಳಾಯಿ ಪೋಸ್ಟ್ , ಚಿತ್ರಾಪುರ, ಮಂಗಳೂರು ತಾಲೂಕು ರವರು ಹಾಗೂ ಅವರ ತಂದೆಯವರಾದ ಲೀಲಾಧರ ಬಂಗೇರ ರವರು  ಕುಳಾಯಿ ಶೆಟ್ಟಿ ಐಸ್ ಕ್ರೀಂ ಎದುರು ರಾ.ಹೆ.66 ರ ರಸ್ತೆ ಬದಿಯಲ್ಲಿ ಕಚ್ಚಾರಸ್ತೆಯಲ್ಲಿ ಪಣಂಬೂರು ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ರಾತ್ರಿ ಸುಮಾರು 19-15 ಗಂಟೆಗೆ ಅವರ ಹಿಂದಿನಿಂದ ಅಂದರೆ ಹೊನ್ನಕಟ್ಟೆ ಕಡೆಯಿಂದ ಪಣಂಬೂರು ಕಡೆಗೆ ಕೆಎ-02-ಇಡಿ-4587 ನೇ ಸ್ಕೂಟರ್ ನ್ನು ಅದರ ಸವಾರರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರ ತಂದೆಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ತಂದೆ ಹಾಗೂ ಸ್ಕೂಟರ್ ಸವಾರ  ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ತಂದೆಗೆ ಕಾಲಿಗೆ,ಮುಖಕ್ಕೆ, ಮೂಗಿಗೆ, ತಲೆಗೆ ರಕ್ತಗಾಯವಾಗಿದ್ದು ಸ್ಕೂಟರ್ ಸವಾರನಿಗೂ ಗಾಯವಾಗಿರುತ್ತದೆ.ಪಿರ್ಯಾದಿದಾರರ ತಂದೆಯನ್ನು ಮಂಗಳೂರು ಎ.ಜೆ.ಆಸ್ಪತ್ರೆ ಚಿಕಿತ್ಸೆಗೆ ದಾಖಲಿಸಿದ್ದು ಅಪಘಾತ ಪಡಿಸಿದ ಸ್ಕೂಟರ್ ಸವಾರನ ವಿರುದ್ದ ಕ್ರಮಕ್ಕಾಗಿ ಅಜಯ್ ಕುಮಾರ್ ರವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣಾ ಅ.ಕ್ರ. 28/2013 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


ಜೀವ ಬೆದರಿಕೆ ಪ್ರಕರಣ

ಸುರತ್ಕಲ್ ಪೊಲೀಸ್ ಠಾಣೆ


  • ದಿನಾಂಕ: 31-01-13 ರಂದು ರಾತ್ರಿ 9-00 ಗಂಟೆಗೆ  ಪಿರ್ಯಾದಿದಾರರಾದ ಚಂದ್ರಹಾಸ ರವರು ಗಣೇಶ್ ಪುರದಲ್ಲಿರುವ   ಅವರ ಬಾಬ್ತು ಶ್ರೀ ಗಣೇಶ್ ಹೋಟೆಲ್ ಅನ್ನು  ಬಂದ್ ಮಾಡಿ ಮನೆಗೆ ಹೋಗಿದ್ದು ಅದೇ ಹೋಟೆಲ್ ನಲ್ಲಿ ಫಿರ್ಯಾದಿದಾರರ ಅಣ್ಣ ಗಂಗಾಧರ ರವರು ಮಲಗಿದ್ದು ರಾತ್ರಿ ಸುಮಾರು 11-30 ಗಂಟೆಗೆ ಆರೋಪಿಗಳಾದ ಅನೀಫ್ @ ಅನಿಲ್ ಹಾಗೂ ಇತರೆ ಗುರುತು ಪರಿಚಯ ಇರುವ 3 ಜನರು ಕೆ ಎ 19 ಸಿ 8433 ನೇ ಝೈಲೋ ವಾಹನದಲ್ಲಿ ಫಿರ್ಯಾದಿದಾರರ ಹೋಟೆಲ್ ಬಳಿ ಬಂದು ರಸ್ತೆಯಲ್ಲಿ ನಿಂತು ಹೋಟೆಲ್ ಗೆ ಕಲ್ಲು ಬಿಸಾಡಿ ಬೇವರ್ಸಿ ರಂಡೇ ಮಗನೇ ಎಂದು ಅವಾಚ್ಯ ಶಬ್ದಗಳಿಂದ ಬೈದು ನೀನು ಅಂಗಡಿಯಲ್ಲಿ ಮಲಗಬಾರದು ನಮಗೆ ಈ ಪರಿಸರದಲ್ಲಿ ಬೇರೆ ಕೆಲಸ ಇದೆ ನಾವು ಹೇಳಿದ ಮೇಲೂ ನೀನು ಅಲ್ಲಿ ಮಲಗಿದರೆ ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿ ಅದೇ ವಾಹನದಲ್ಲಿ ಹೋಗಿರುತ್ತಾರೆ ಈ ವಿಷಯವನ್ನು ಫಿರ್ಯಾಧಿದಾರರಿಗೆ ಅವರ ಅಣ್ಣ ಗಂಗಾಧರರವರು ಪೋನ್ ಮೂಲಕ ತಿಳಿಸಿದ್ದು ಪಿರ್ಯಾದಿದಾರರು ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುವುದಾಗಿದೆ ಎಂಬುದಾಗಿ  ಚಂದ್ರಹಾಸ ರವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣಾ ಅ.ಕ್ರ. 29/2013 ಕಲಂ: 341, 504 ಮತ್ತು 506 ಜತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 



ಮನುಷ್ಯ ಕಾಣೆ ಪ್ರಕರಣ

ದಕ್ಷಿಣ ಠಾಣೆ


  • ಫಿಯರ್ಾದುದಾರರಾದ ಶ್ರೀಮತಿ ಸುಚೇತಾರವರು ಅಂಬರ್ ವ್ಯಾಲಿ ಕೈರಂಗಳದಲ್ಲಿ ಶಾಲಾ ಶಿಕ್ಷಕಿಯಾಗಿ ಕೆಲಸವನ್ನು ಮಾಡಿಕೊಂಡಿರುತ್ತಾರೆ. ಇವರ ಗಂಡ ಎ. ಪ್ರಕಾಶ್ ಕುಮಾರ್ ಪ್ರಾಯ 50 ವಷ್ ಎಂಬವರು ಅಸೌಖ್ಯದ ನಿಮಿತ್ತ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇರುವುದಾಗಿದೆ. ದಿನಾಂಕ 31-01-13 ರಂದು ಬೆಳಿಗ್ಗೆ 10-00 ಗಂಟೆಗೆ ಫಿಯರ್ಾದುದಾರರು ಎಂದಿನಂತೆ ಕೆಲಸಕ್ಕೆ ಹೋಗಿದ್ದು, ಈ ಸಮಯ ಎ. ಪ್ರಕಾಶ್ ಕುಮಾರ್ ರವರು ಮನೆಯಲ್ಲಿಯೇ ಇದ್ದವರು, ಫಿಯರ್ಾದುದಾರರು ಸಂಜೆ 4-30 ಗಂಟೆಗೆ ಕೆಲಸ ಮುಗಿಸಿ  ಮನೆಗೆ ಬಂದಾಗ, ಎ. ಪ್ರಕಾಶ್ ಕುಮಾರ್ ರವರು ಮನೆಯಲ್ಲಿ ಇಲ್ಲದೇ ಇದ್ದು, ಅವರ ಬಗ್ಗೆ ನೆರೆಕರೆಯವರಲ್ಲಿ ಅವರ ಸಂಬಂಧಿಕರ ಮನೆಯಲ್ಲಿ ವಿಚಾರಿಸಿಕೊಂಡಾಗ, ಅಲ್ಲಿಗೆ ಕೂಡಾ ಹೋದ ಬಗ್ಗೆ ಮಾಹಿತಿ ಸಿಗಲಿಲ್ಲ. ಫಿಯರ್ಾದುದಾರರ ಮನೆಯ ಗೋದ್ರೇಜಿನಲ್ಲಿ ಇಟ್ಟಿರುವ 4,000-00 ರೂಪಾಯಿ ಮತ್ತು ಎ. ಪ್ರಕಾಶ್ ಕುಮಾರ್ ದಿನಂಪ್ರತಿ ಸೇವಿಸುತ್ತಿರುವ ಮಾತ್ರೆಯನ್ನು ಮತ್ತು ಅವರ ಬಾಬ್ತು ನೋಕಿಯೋ ಮೊಬೈಲನ್ನು ಕೂಡಾ ಕೊಂಡು ಹೋಗಿದ್ದು, ಈ ತನಕ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಅವರನ್ನು ಪತ್ತೆ ಮಾಡಿಕೊಡುವಂತೆ ಸುಚೇತಾರವರು ನೀಡಿದ ದೂರಿನಂತೆ ದಕ್ಷಿಣ ಠಾಣಾ ಮೊ.ನಂ. 28/13 ಕಲಂ ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹುಡುಗಿ ಕಾಣೆ

ದಕ್ಷಿಣ ಠಾಣೆ


  • ಫಿಯರ್ಾದುದಾರರಾದ ಕುಮಾರಿ ವಿಲ್ಮಾ(24), ತಂದೆ: ಫೆಲಿಕ್ಸ್ ಅಲ್ಬುಕಕರ್್, ವಾಸ: ಪ್ರಜ್ಞಾ ಶಾಟರ್್ ಹೋಂ ಸ್ಟೇ, ಜಪ್ಪಿನ ಮೊಗರು, ಮಂಗಳೂರು ರವರು ಪ್ರಜ್ಞಾ ಅಲ್ಪಾವಧಿ ವಸತಿ ಗೃಹ, ಜೆಪ್ಪಿನಮೊಗರು, ಮಂಗಳೂರು ಇಲ್ಲಿನ ಸಲಹೆಗಾರರಾಗಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 12-12-2012 ರಂದು ಸುರತ್ಕಲ್ ಇಡ್ಯಾ ವಾಸಿ ಪ್ರೀತಿ ಪ್ರಾಯ 23 ವರ್ಷ ಎಂಬವಳು ಸ್ವ ಇಚ್ಚೆಯಿಂದ ಫಿಯರ್ಾದುದಾರರು ಕೆಲಸ ಮಾಡುವ ಸಂಸ್ಥೆಯಲ್ಲಿ ಆಶ್ರಯಕ್ಕಾಗಿ ಬಂದಿದ್ದು, ಅವಳ ಗಂಡ ರಾಜೇಶ ಮಂಗಳೂರು ಮಹಿಳಾ ಠಾಣೆಯ ಪ್ರಕರಣವೊಂದರಲ್ಲಿ ಆರೋಪಿತನಾಗಿದ್ದು, ಈತನು ಮಂಗಳೂರು ಕಾರಾಗೃಹದಲ್ಲಿರುವಾಗ ಬ್ಲೇಡ್ನಿಂದ ಸ್ವತಃ ತನ್ನ ಕುತ್ತಿಗೆಗೆ ಮತ್ತು ಕೈಗಳಿಗೆ ಗಾಯ ಮಾಡಿಕೊಂಡವನನ್ನು ಮಂಗಳೂರು ವೆನ್ಲಾಕ್ ಅಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದು, ಪ್ರೀತಿಯು ತನ್ನ ಗಂಡನನ್ನು ನೋಡಬೇಕೆಂದು ಒತ್ತಾಯಿಸುತ್ತಿದ್ದರಿಂದ ಫಿಯರ್ಾದುದಾರರು ಪ್ರೀತಿ ಮತ್ತು ಅಸೌಖ್ಯದಲ್ಲಿರುವ ಇನ್ನೊಬ್ಬಳನ್ನು ವೆನ್ಲಾಕ್ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಸ್ಪತ್ರೆಯ ಖೈದಿಗಳ ವಿಭಾಗದಲ್ಲಿ ಪ್ರೀತಿಯು ತನ್ನ ಗಂಡ ರಾಜೇಶನೊಂದಿಗೆ ಮಾತನಾಡುತ್ತಿದ್ದು, ಫಿಯರ್ಾದುದಾರರು ಅಸೌಖ್ಯದಲ್ಲಿರುವ ಇನ್ನೊಬ್ಬಳ ರಕ್ತ ಪರೀಕ್ಷೆಗಾಗಿ ಕರೆದುಕೊಂಡು ಹೋಗಿದ್ದ ಸಮಯ ಸುಮಾರು ಮದ್ಯಾಹ್ನ 2-00 ಗಂಟೆಗೆ ವಾಪಾಸು ಖೈದಿಗಳ ವಿಭಾಗಕ್ಕೆ ಬಂದಾಗ, ಪ್ರೀತಿ ಅಲ್ಲಿ ಇರದೇ ಇದ್ದು, ಹುಡುಕಾಡಿದರೂ ಪತ್ತೆಯಾಗದೆ ಕಾಣೆಯಾಗಿರುತ್ತಾಳೆ. ಇದ್ದು, ಇವಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ಕುಮಾರಿ ವಿಲ್ಮಾ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಮೊ.ನಂ. 29/13 ಕಲಂ ಹುಡುಗಿ ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ

ಸಂಚಾರ ಪೂರ್ವ ಠಾಣೆ


  • ದಿನಾಂಕ: 31-01-2013 ರಂದು ಸಮಯ ಸುಮಾರು 15.30 ಗಂಟೆಗೆ ಪಿರ್ಯಾದುದಾರರಾದ ಶ್ರೀಮತಿ ಸಾರಮ್ಮ ಜಯರಾಜ ತಂದೆ: ಎ.ಸಿ.ಜಯರಾಜ, ವಾಸ: ಸುವಿಧ, 2ನೇ ಕ್ರಾಸ್,  ಈಡನ್ ಕ್ಲಬ್ ರೋಡ್,, ಪದವು, ಮಂಗಳೂರು ರವರ ಮಗ ಶ್ರೀ ಅಜಯ್ ಎ ಜಯರಾಜ್ ಎಂಬವರು ಕಾರು ನಂಬ್ರ ಏಂ-19 ಒಃ-8898 ನ್ನು   ಕದ್ರಿ - ಶಿವಬಾಗ್ನ 5ನೇ ಕ್ರಾಸ್ ಬಳಿ ಪಾಕರ್್ ಮಾಡಿ ಹೋಗಿದ್ದು ಸಮಯ ಸುಮಾರು 15.45 ಗಂಟೆಗೆ ಕಾರಿನ ಬಳಿ ಬಂದು ನೋಡಿದಾಗ ಯಾವುದೊ ವಾಹನ ಕಾರಿನ ಎಡಭಾಕ್ಕೆ ಡಿಕ್ಕಿ ಮಾಡಿ ಪರಾರಿಯಾಗಿದ್ದು, ಕಾರಿನ ಎಡಭಾಗ ಸಂಪೂರ್ಣ ಜಖಂಗೊಂಡಿರುವುದಾಗಿದೆ ಎಂಬುದಾಗಿ ಸಾರಮ್ಮ ಜಯರಾಜ ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 23/2013 279 , ಐ.ಪಿ.ಸಿ.ಕಾಯ್ದೆ ಮತ್ತು 134(ಬಿ) ಮೋ.ವಾ. ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


No comments:

Post a Comment