Friday, February 1, 2013

Daily Crime Incidents for Feb 01, 2013


ಕಳವು ಪ್ರಕರಣ


  • ದಿನಾಂಕ. 18-11-2012 ರಂದು ರಾತ್ರಿ ಸುಮಾರು 7-30 ಗಂಟೆಯಿಂದ 8-00 ಗಂಟೆಯ ಮದ್ಯೆ ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ಮಾಸ್ತಿಕಟ್ಟೆ ಭಾರತ್ ಪ್ರೌಢಶಾಲೆಯ ಬಳಿ ಇರುವ ಹಶ್ರೂನ ಕೋಟೇಜ್ ಎಂಬ ಫಿರ್ಯಾದಿದಾರರ ವಾಸದ ಮನೆಯ ಸ್ಟಡಿ ರೂಮಿನಲ್ಲಿ ಫಿರ್ಯಾದಿದಾರರ ಮಗಳಾದ ರುಬೀನರವರ ಬ್ಯಾಗಿನಲ್ಲಿ ಇರಿಸಿದ್ದ ಸುಮಾರು 5,000/ ರೂಪಾಯಿ ನಗದು ಹಣವನ್ನು ಮತ್ತು ದಿನಾಂಕ. 3-1-2013 ರಂದು ರಾತ್ರಿ 8-00 ಗಂಟೆಯ ಸಮಯಕ್ಕೆ ಫಿರ್ಯಾದಿದಾರರ ಹೆಂಡತಿ ಮತ್ತು ಅವರ ಮಗಳಾದ ಶಭಾನರವರು ಧರಿಸುವ 3 ಲಕ್ಷ ರೂಪಾಯಿ ಬೆಲೆಬಾಳುವ ಸುಮಾರು 10 ಪವನ್ ತೂಕದ ಚಿನ್ನಾಭರಣಗಳನ್ನು  ಅವರ ವಾಸದ ಮನೆಯ ಬೆಡ್ರೂಮಿನಲ್ಲಿ ಇರಿಸಿದ್ದ ಮರದ ಕಪಾಟಿನಲ್ಲಿ ಇಟ್ಟಿದ್ದು, ದಿನಾಂಕ. 6-1-2013 ರಂದು ರಾತ್ರಿ 8-00 ಗಂಟೆಗೆ ನೋಡಿದಾಗ ಸದ್ರಿ ಚಿನ್ನಾಭರಣಗಳು ಕಳವಾಗಿರುವುದು ಕಂಡು ಬಂದಿದ್ದು, ಈ ಮೇಲಿನ ನಗದು ಹಣ ಹಾಗೂ ಚಿನ್ನಾಭರಣಗಳು ಕಳವಾದ ಬಗ್ಗೆ ಫಿರ್ಯಾದಿದಾರರ ಮನೆಯಲ್ಲಿ ಸುಮಾರು 13 ವರ್ಷದಿಂದ ಮನೆ ಕೆಲಸ ಮಾಡುತ್ತಿದ್ದ ನಫೀಸ @ ಬದ್ರುನ್ನಿಸಾ ರವರ ಮೇಲೆ ಸಂಶಯ ಇರುವುದಾಗಿ ಫಿಯರ್ಾದಿದಾರರಾದ ಯು.ಮಹಮ್ಮದ್ ಆಲಿ (67) ತಂದೆ. ದಿ.ಯು.ಮೊಧೀನ್ ವಾಸ. ಹಶ್ರೂನ ಕೋಟೇಜ್, ಭಾರತ್ ಪ್ರೌಢಶಾಲೆಯ ಬಳಿ, ಮಾಸ್ತಿಕಟ್ಟೆ ಉಳ್ಳಾಲ ರವರು ನೀಡಿದ ದೂರಿನಂತೆ  ಉಳ್ಳಾಲ ಠಾಣೆ ಅಪರಾದ ಕ್ರಮಾಂಕ 30/2013  ಕಲಂ 381  ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ

ಮಂಗಳೂರು  ಪೂರ್ವ ಠಾಣೆ


  • ದಿನಾಂಕ 31.01.2013 ರಂದು ಸುಮಾರು 19.15 ಗಂಟೆಗೆ ಫಿಯರ್ಾದಿದಾರರು ಕೆಲಸ ಮಾಡಿಕೊಂಡಿರುವ ಮಂಗಳೂರು ನಗರದ ಕಂಕನಾಡಿಯಲ್ಲಿರುವ ಅಮಿನೂರ್ ರೆಹಮಾನ್ ಖಾನ್ ರವರ ಆಶೆಲ್ ಫ್ರಂಟ್ಲೈನ್ ಲಿಮಿಟೆಡ್ನಲ್ಲಿ ಕರ್ತವ್ಯ ಮುಗಿಸಿ ತಮ್ಮ ಮನೆಯಾದ ಮಣ್ಣಗುಡ್ಡಕ್ಕೆ ತೆರಳುವರೇ ತಮ್ಮ ಮಾಲೀಕರಾದ ಶ್ರೀ. ಅಮಿನೂರ್ ರೆಹಮಾನ್ ಖಾನ್ರವರೊಂದಿಗೆ ಸದ್ರಿಯವರ ಕಾರು ನಂಬ್ರ ಅಊ 03ಘ 2817 ನೇ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಕಛೇರಿಯಿಂದ ಹೊರಟು ಸ್ವಲ್ಪ ಮುಂದೆ ತಲುಪಿದಾಗ ಕಂಕನಾಡಿ ಬೈಪಾಸ್ ರಸ್ತೆ ಬಳಿ ಯಾರೋ ಅಪರಿಚಿತ ವ್ಯಕ್ತಿಗಳು ಸದ್ರಿಯವರ ಕಾರನ್ನು ತಡೆದು ನಿಲ್ಲಿಸಿ ಯಾವುದೇ ವಿಷಯವನ್ನು ಕೇಳದೆ ಫಿಯರ್ಾದಿದಾರರನ್ನು ಏಕಾಏಕಿ ಎಳೆದಾಡಿ ಅವಾಚ್ಯ ಶಬ್ದಗಳಾದ ನಾಯಿ, ಬೇವಾಸರ್ಿ ರಂಡೆ ಎಂದು ಬೈದು ಪಿಯರ್ಾದಿದಾರರ ಮುಖಕ್ಕೆ ಹಾಗೂ ಕೈಗೆ ಮತ್ತು ಡ್ರೈವರ್ ಸೀಟಿನಲ್ಲಿದ್ದ ಅಮಿನೂರ್ ರೆಹಮಾನ್ ಖಾನ್ ರವರ ಮುಖಕ್ಕೆ ಹಾಗೂ ಕೈಗೆ ಕೈಯಿಂದ ಹಾಗೂ ಹೆಲ್ಮೆಟ್ನಿಂದ ಹೊಡೆದಿದ್ದು ಗುದ್ದಿದ ಗಾಯವಾಗಿರುತ್ತದೆ. ಅಲ್ಲದೆ ಪಿಯರ್ಾದಿದಾರರ ಮೊಬೈಲನ್ನು ನೆಲಕ್ಕೆ ಬಿಸಾಡಿ ತುಂಡು ಮಾಡಿರುತ್ತಾರೆ. ಪಿಯರ್ಾದಿದಾರರು ಅಮಿನೂರ್ ರೆಹಮಾನ್ ಖಾನ್ರವರೊಂದಿಗೆ ಇರುವುದನ್ನು ಕಂಡು ಸದ್ರಿ ವ್ಯಕ್ತಿಗಳು ಯಾವುದೋ ದುರುದ್ದೇಶದಿಂದ ಈ ಕೃತ್ಯವನ್ನು ಎಸಗಿರುತ್ತಾರೆ ಎಂಬುದಾಗಿ ಶ್ರೀಮತಿ  ಮಾನಸ(24), ಗಂಡ: ದಿವಿನ್ ಶೆಟ್ಟಿ, ವಾಸ: ರಾಮ ನಿವಾಸ, ಮಣ್ಣಗುಡ್ಡ, ಮಂಗಳೂರು ರವರು ನೀಡಿದ ದೂರಿನಂತೆ ಮಂ.ಪೂರ್ವ ಪೊಲೀಸ್ ಠಾಣೆ ಅಪರಾದ ಕ್ರಮಾಂಕ 10/2013 ಕಲಂ: 341 323 324 504  354 427, ಡಿ/ತಿ 34 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


ಜುಗಾರಿ ಆಡುತ್ತಿದ್ದವರ ಬಂಧನ

ಉಳ್ಳಾಲ ಠಾಣೆ


  • ದಿನಾಂಕ 31-01-2013 ರಂದು ಉಳ್ಳಾಲ ಪೊಲೀಸು ಠಾಣಾ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್ಐ ಆದ ನಾನು ಮತ್ತು ಸಿಬ್ಬಂದಿಯವರು ಖಚಿತ ಮಾಹಿತಿಯಂತೆ, ಮಂಗಳೂರು ತಾಲೂಕು ತಲಪಾಡಿ ಗ್ರಾಮದ ಮೇಲಿನ ತಲಪಾಡಿ ದೊಡ್ಡಮೇರು ಎಂಬಲ್ಲಿ ಹೋಗಿ ನೋಡಿದಾಗ ಕೆಲವು ವ್ಯಕ್ತಿಗಳು ಅನಧಿಕೃತವಾಗಿ ಹಣ ಮತ್ತು ಮೊಬೈಲ್ ಸೆಟ್ಗಳನ್ನು ಪಣವಾಗಿ ಬಳಸಿ ಇಸ್ಪೀಟು ಎಲೆಗಳನ್ನು ಉಪಯೋಗಿಸಿ ಉಲಾಯಿ-ಪಿದಾಯಿ ಎಂಬ ಜುಗಾರಿ ಆಟವನ್ನು ಆಡುತ್ತಿದ್ದು, ಆಟವಾಡುತ್ತಿದ್ದ ಆರೋಪಿಗಳು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿ ಹೋಗಿದ್ದು, ಅವರ ಪೈಕಿ ನವೀನ ಎಂಬಾತನನ್ನು ಬೆನ್ನಟ್ಟಿ ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ಆತನು ಜುಗಾರಿ ಆಟವಾಡುತ್ತಿದ್ದನ್ನು ಒಪ್ಪಿಕೊಂಡಿರುವುದರಿಂದ, ಸ್ಥಳದಲ್ಲಿ ದೊರೆತೆ ರೂಪಾಯಿ 180/- ನಗದು ಹಣ, ಎರಡು ಮೊಬೈಲ್ ಹ್ಯಾಂಡ್ ಸೆಟ್, ಮತ್ತು ಕೆಎ 19 ಎಸ್ 7458 ನೇ ನಂಬ್ರದ ಮೋಟಾರು ಸೈಕಲ್, ಆಟಕ್ಕೆ ಉಪಯೋಗಿಸಿದ 44 ಇಸ್ಪೀಟು ಎಲೆಗಳು, ಖಾಕಿ ಬಣ್ಣದ ರಟ್ಟು ಪೀಸ್ಗಳನ್ನು ಮುಂದಿನ ಕ್ರಮದ ಬಗ್ಗೆ ಮಹಜರು ಮುಖೇನ ಸ್ವಾಧೀನಪಡಿಸಿಕೊಂಡು, ಆರೋಪಿಗಳ ವಿರುದ್ದ ಕಲಂ 87 ಕೆಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಎಂಬುದಾಗಿ ರಮೇಶ್ ಹೆಚ್ ಹಾನಪುರ ಪಿಎಸ್ಐ, ಉಳ್ಳಾಲ ಪೊಲೀಸು ಠಾಣೆ ರವರು ನೀಡಿದ ದೂರಿನಂತೆ ಉಳ್ಳಾಲ ಠಾಣೆ ಅಪರಾದ ಕ್ರಮಾಂಕ 32/2013 ಕಲಂ 87 ಕೆಪಿ ಆಕ್ಟ್ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



No comments:

Post a Comment