Saturday, January 12, 2013

Daily Crime Incidents for January 12, 2013.

ಕಳವು ಪ್ರಕರಣ:

ಉತ್ತರ ಠಾಣೆ;

  • ದಿನಾಂಕ 10-01-2013 ರಂದು ಸಮಯ 10:28 ರಿಂದ 10:32 ರ ಮಧ್ಯೆ ಫಿಯರ್ಾದಿದಾರರು ಮಂಗಳೂರು ಬಲ್ಮಠ ರಸ್ತೆಯಲ್ಲಿರುವ ಭಾರತ್ ಮೋಟಾರ್ಸ್ ಬಿಲ್ಡಿಂಗ್ ನಲ್ಲಿ ತೊಷಿಬಾ ಲ್ಯಾಪ್ಟಾಪ್ ನ ಶೋರೂಮ್ ನ್ನು ಹೊಂದಿದ್ದು, ದಿನಾಂಕ 10-01-2013 ರಂದು ಸೇಲ್ಸ್ಮೆನ್ ಜಯರಾಮ ಎಂಬವರು ಬೆಳಿಗ್ಗೆ ಸುಮಾರು 10:15 ಗಂಟೆಗೆ ಶೋರೂಮ್ ತೆರೆದಿದ್ದು, ಸಮಯ ಸುಮಾರು 10:28 ಗಂಟೆ ಸಮಯಕ್ಕೆ 3 ಜನ ಗಿರಾಕಿಗಳು ಬಂದು, ನಮಗೆ ಜಪಾನ್ ಮಾದರಿಯ ತೊಷಿಬಾ ಲ್ಯಾಪ್ಟಾಪ್ ಬೇಕೆಂದು ಕೇಳಿದ್ದು, ಸೇಲ್ಸ್ಮೆನ್ ಜಯರಾಮ ರವರಲ್ಲಿ ಲ್ಯಾಪ್ಟಾಪ್ನ ವಿವರವನ್ನು ಕೇಳುತ್ತ ಸೇಲ್ಸ್ಮೆನ್ ಜಯರಾಮ ರವರ ಗಮನವನ್ನು ಬೇರೆಡೆ ಸೆಳೆದು, ಇನ್ನೊಬ್ಬನ್ನು ಟೇಬಲ್ ಮೇಲಿದ್ದ ಸುಮಾರು ರೂ.42,700/- ಮೌಲ್ಯದ ಲ್ಯಾಪ್ಟಾಪ್ವೊಂದನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವು ಮಾಡಿದ ದೃಶ್ಯವನ್ನು ಸಿಸಿ ಕ್ಯಾಮಾರಾದಲ್ಲಿ ನೋಡಿದಾಗ, ಗಿರಾಕಿಯ ಸೋಗಿನಲ್ಲಿ ಬಂದವರಲ್ಲಿ ಒರ್ವನು ಆತನು ಧರಿಸಿದ್ದ ಬಟ್ಟೆಯೊಳಗಡೆ ಲ್ಯಾಪ್ಟಾಪ್ನ್ನು ಇರಿಸಿಕೊಂಡು ಹೋಗಿರುತ್ತಾನೆ. ಸದ್ರಿ ಕಳವಾದ ಲ್ಯಾಪ್ಟಾಪ್ನ್ನು ಪತ್ತೆಮಾಡಿಕೊಡುವಂತೆ ನೀಡಿದ ಪಿರ್ಯಾದಿದಾರರಾದ  ಡೆಬ್ರಾಹ್ ಆರ್ ಲಾಕರ್ ತೊಶಿಬಾ ಎಂಡೀಸ್  ಭಾರತ್ ಮೋಟಾರ್ಸ್ ಬಿಲ್ಡಿಂಗ್ , ಬಲ್ಮಠ ರಸ್ತೆ ಮಂಗಳೂರು. ನೀಡಿದ ದೂರಿನಂತೆ ಉತ್ತರ ಠಾಣೆ ಅಪರಾದ ಕ್ರಮಾಂಕ  08/2013 ಕಲಂ 379 ಐಪಿಸಿ ರಂತೆ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲಾಗಿದೆ.

ವಾಹನ ಕಳವು ಪ್ರಕರಣ:

ಉತ್ತರ ಠಾಣೆ

  • ದಿನಾಂಕ 07-01-2013 ರಂದು ಮದ್ಯಾಹ್ನ 12:00 ಗಂಟೆಗೆ ಫಿಯರ್ಾದಿದಾರರು ಮಂಗಳೂರು ಕಾರ್ಸ್ಟ್ರೀಟ್ ಶಾರದಾ ಪ್ರೆಸ್ನ ಬಳಿ ಕಾಡಹಿತ್ತಿಲು ಶಾಲೆಗೆ ಹೋಗುವ ರಸ್ತೆಯ ಬದಿಯಲ್ಲಿ ತನ್ನ ಬಾಬ್ತು ಕಾರು ನಂಬ್ರ ಕೆಎ-19-ಎಂ-8725 ನೇಯ ಮಾರುತಿ 800 ಕಾರನ್ನು ಪಾಕರ್್ ಮಾಡಿ ಕೆಲಸದ ನಿಮಿತ್ತ ಹೋಗಿದ್ದು, ದಿನಾಂಕ 08-01-2013 ಮದ್ಯಾಹ್ನ 12:00 ಗಂಟೆಗೆ ತನ್ನ ಬಾಬ್ತು ಕಾರು ಪಾಕರ್್ ಮಾಡಿದ ಸ್ಥಳಕ್ಕೆ ಬಂದು ನೋಡಲಾಗಿ ಕಾರು ಕಾಣೆಯಾಗಿದ್ದು, ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು, ಸದ್ರಿ ಕಾರನ್ನು ಯಾರೋ ಕಳ್ಳರು ಕಳವು ಮಾಡಿಕೋಮಡು ಹೋಗಿರುತ್ತಾರೆ. ಬಳಿಕ ಸದ್ರಿ ಕಾರು ಕೇರಳಾ ರಾಜ್ಯದ ಪಯ್ಯನೂರು ಪೊಲೀಸ್ ಠಾಣಾ ಪ್ರಕರಣವೊಂದರಲ್ಲಿ ಒಳಗೊಂಡಿರುವ ವಿಚಾರ ತಿಳಿದು ಬಂತು. ಪಯ್ಯನೂರಿಗೆ ಹೋಗಿ ಕಾರನ್ನು ದೃಢಪಡಿಸಲು ಹಾಗೂ ಈ ಬಗ್ಗೆ ವಿಚಾರಿಸಲು ಹೋಗಿದ್ದರಿಂದ, ದೂರು ನಿಡಲು ತಡವಾಗಿರುತ್ತದೆ. ಕಾರು ಕಳವು ವಿಚಾರದಲ್ಲಿ ಸೂಕ್ತ ರೀತಿಯ ತನಿಖೆ ನಡೆಸಬೇಕಾಗಿ ನೀಡಿದ ಪಿರ್ಯಾದಿದಾರರಾದ  ಕೆ.ರಮೇಶ್ ರಾವ್ ಬಸವನ ಗುಡಿ ಮಂಗಳೂರು ನೀಡಿದ ದೂರಿನಂತೆ ಉತ್ತರ ಠಾಣೆ ಅಪರಾದ ಕ್ರಮಾಂಕ  09/2013 ಕಲಂ 379 ಐಪಿಸಿ ರಂತೆ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣ:

ಸಂಚಾರ ಪೂರ್ವ ಠಾಣೆ;

  • ದಿನಾಂಕ 10-01-2013 ರಂದು ಸಮಯ ಸುಮಾರು 17.30 ಗಂಟೆಗೆ ಪಿರ್ಯಾದುದಾರರು ಮೋ.ಸೈಕಲ್ ನಂಬ್ರ ಏಂ-19 ಘ-8627 ರಲ್ಲಿ ಸವಾರನಾಗಿ ಸುರೇಂದ್ರ ರವರನ್ನು ಹಿಂಬದಿ ಸವಾರನ್ನಾಗಿ ಕುಳ್ಳಿರಿಸಿಕೊಂಡು ಪದವು ಜಂಕ್ಷನ್ ಕಡೆಯಿಂದ ನಂತೂರು ಕಡೆಗೆ ಹೋಗುತ್ತಾ ನಂತೂರು ಬಳಿ ಇರುವ ಆಳ್ವಾರೀಸ್ ಎಂಬ ಕಟ್ಟಡದ ಬಳಿ ತಲುಪುವಾಗ ಪಿರ್ಯಾದುದಾರರ ಹಿಂದಿನಿಂದ ಅಂದರೆ ಪದವು ಜಂಕ್ಷನ್ ಕಡೆಯಿಂದ ಕಾರು ನಂಬ್ರ ಏಂ-19ಒಅ- 7415 ನ್ನು ಅದರ ಚಾಲಕ ಕೃಷ್ಣಪ್ರಸಾದ್ ಎಂಬವರು ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಮೋಟಾರ್ ಸೈಕಲ್ಲಿನ ಹಿಂಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ಮತ್ತು ಸುರೇಂದ್ರರವರು  ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರ ಎಡಕಾಲಿನ ಪಾದದ ಗಂಟಿಗೆ ರಕ್ತಗಾಯ ಮತ್ತು ಸುರೇಂದ್ರರವರ ಎಡಕೈಯ ಮಣಿಗಕಟ್ಟಿಗೆ ಮತ್ತು ಭುಜಕ್ಕೆ ಹಾಗೂ ಸೊಂಟಕ್ಕೆ ತೀವೃ ಸ್ವರೂಪದ ಗಾಯ ಉಂಟಾಗಿ ವಿನಯ ಕ್ಲಿನಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ  ಎಂಬುದಾಗಿ ಅರುಣ್ ಕುಮಾರ್ (26 )ತಂದೆ- ಮಾಧವ ಪೂಜಾರಿ, ಪಾರ್ಲಡ್ಕ ಹೌಸ್, ಬೋಂಡತಿಲ ಗ್ರಾಮ,  ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 12/2013 279 , 337,338, ಐ.ಪಿ.ಸಿ.ಕಾಯ್ದೆ 134 ಮೋ.ವಾಹನ ಕಾಯ್ದೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:

Post a Comment