Thursday, January 3, 2013

Daily Crime Incidents for Jan 03, 2013


ಅಪಘಾತ ಪ್ರಕರಣ;

ಬಜಪೆ ಠಾಣೆ;


  • ದಿನಾಂಕ:22/12/2012 ರಂದು ಬೆಳಿಗ್ಗೆ 10-45 ಗಂಟೆ ಸಮಯಕ್ಕೆ ಮಂಗಳೂರು ತಾಲೂಕಿನ ಬಡಗ ಉಳಿಪಾಡಿ ಗ್ರಾಮದ ಗಾಂಧೀನಗರ ಎಂಬಲ್ಲಿ ಮೂಡಬಿದ್ರೆ - ಮಂಗಳೂರು ಮಂಗೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಆರೋಪಿಯು ತನ್ನ ಬಾಬ್ತು ಸ್ಕೂಟರ್ ನಂಬ್ರ ಕೆಎ-19-ಕೆ-9572 ಅನ್ನು ಬಹಳ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಶ್ರೀಮತಿ ಗಂಗೂಬಾಯಿ ಎಂಬವರಿಗೆ ಡಿಕ್ಕಿ ಹೊಡೆದು ತಲೆ ಕೈಕಾಲುಗಳಿಗೆ ತೀವ್ರ ಜಖಂಗೊಳಿಸಿದ್ದು, ಅವರನ್ನು ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಕಳುಹಿಸಿದ್ದು, ಅವರು ಸ್ಮತಿಯಿಲ್ಲದೇ ಇದ್ದವರನ್ನು ಈ ದಿನ ಹೊರ ರೋಗಿಯಾಗಿ ಮನೆಗೆ ಕರೆತರುವಾಗ ಸಂಜೆ 5-30 ಗಂಟೆಗೆ ಗುರುಪುರ ಬಳಿ ತಲುಪುವಾಗ ಮೃತರಾಗಿರುವುದಾಗಿ ಎಂಬುದಾಗಿ ವಿಜಯ ಗೌಡ, ಪ್ರಾಯ: 38 ವರ್ಷ, ತಂದೆ: ಚಂದು ಗೌಡ, ವಾಸ: ಶಿಬ್ರಿಕೆರೆ ಮನೆ ಮತ್ತು ಅಂಚೆ, ತೆಂಕ ಎಡಪದವು ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 251/2012 ಕಲಂ: 279, 304(ಎ) ಐ.ಪಿ.ಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಅಸ್ವಾಬಾವಿಕ ಮರಣ  ಪ್ರಕರಣ:

ಪಣಂಬೂರು ಠಾಣೆ;


  • ದಿನಾಂಕ 02-01-2013 ರಂದು ಪಿರ್ಯಾದಿದಾರರ ತಂದೆ ರಾಮಚಂದ್ರ ಕಕರ್ೆರಾ  ಬೆಳಿಗ್ಗೆ ಸಮುದ್ರಕ್ಕೆ ಮೀನು ಹಿಡಿಯಲು ಹೋದವರು ಆಕಸ್ಮಿಕವಾಗಿ ಕಾಲುಜಾರಿ ಸಮುದ್ರ ನೀರಿಗೆ ಬಿದ್ದು ಮುಳುಗಿಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ ಎಂಬುದಾಗಿ ಜಯಶೀಲಾ (35), ತಂದೆ : ರಾಮಚಂದ್ರ ಕಕರ್ೆರಾ, ವಾಸ : ವಿನುತಾ ನಿವಾಸ ಬೆಂಗ್ರೆ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಪಣಂಬೂರು ಠಾಣೆ ಯುಡಿಆರ್ 01/2013 ಕಲಂ: 174 ಸಿಆರ್ಪಿಸಿ  ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ದಕ್ಷಿಣ ಠಾಣೆ;


  • ಫಿಯ ದಿನಾಂಕ 01-01-2013 ರ ರಾತ್ರಿ ಸಮಯ ವೇಳೆ ಫಿರ್ಯಾದಿದಾರರು ಮಂಗಳೂರು ದಕ್ಕೆಯಲ್ಲಿ ಐಸ್ ಲೋಡ್ ಮಾಡುತ್ತಿರುವಾಗ, ಸಿಲ್ವ ಮೆರಿನ್ ಐಸ್ ಪ್ಲಾಂಟ್ನ ಎದುರು, ನೀರಿನಲ್ಲಿ ಪ್ರಾಯ ಸುಮಾರು 30 ರಿಂದ 35 ವರ್ಷದ ಅಪರಿಚಿತ ಗಂಡಸಿನ ಮೃತ ದೇಹವನ್ನು ನೋಡಿದ್ದು, ಮೃತದೇಹವು ಸಪೂರ ಶರೀರವಾಗಿದ್ದು, ಕಪ್ಪು ಮೈ ಬಣ್ಣವಾಗಿರುತ್ತದೆ ಮೃತ ದೇಹದ  ಮೈಮೇಲೆ ನೀಲಿ ಪ್ಯಾಂಟ್, ಬಿಳಿ ನೀಲಿ ಚಕ್ಸ್ ಉದ್ದ ತೋಳಿನ ಅಂಗಿ ಇರುತ್ತದೆ. ಸದ್ರಿ ವ್ಯಕ್ತಿ ಮಂಗಳೂರು ದಕ್ಕೆ ಅಥವಾ ಬೇರೆ ಎಲ್ಲಿಯೋ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರಬಹುದಾಗಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡು ಮೃತ ದೇಹವನ್ನು ರಕ್ತ ಸಂಬಂಧಿಕರಿಗೆ ಬಿಟ್ಟು ಕೊಡುವಂತೆ ನೀಡಿದ ಫಿಯರ್ಾದಿದಾರರಾದ ಅಬ್ದುಲ್ ರಜಾಕ್ (55) ತಂದೆ: ಹಾಜಿ ಜುಬೈರ್ ಅಹಮ್ಮದ್ ವಾಸ: ಆಶಿಯಾನ ಪಿಂಟೋ ಗೇಟ್ ಬಳಿ ಬೋಳಾರ, ಮಂಗಳೂರು  ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಯು,ಡಿ.ಆರ್ ನಂಬ್ರ 01/13 ಕಲಂ : 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮಹಿಳೆ ದೌರ್ಜನ್ಯ ಪ್ರಕರಣ;

ದಕ್ಷಿಣ ಠಾಣೆ;


  • ದಿನಾಂಕ 02-01-2013 ರಂದು ಸಂಜೆ ಸುಮಾರು 5-00 ಗಂಟೆಗೆ ಕುಮಾರಿ ದಿವ್ಯ ರವರಿಗೆ ಮೊಬೈಲ್ ಪೋನ್ ನಂಬ್ರ 9740763885 ನೇದರಿಂದ ಅಶ್ಲೀಲ ಮೆಸೇಜ್ ಮಾಡಿ ನಂತರ ಪುನಃ ನೀನು ಎಲ್ಲಿ ಸಿಕ್ಕುತ್ತಿಯಾ ಅತ್ತಾವರ ಕಟ್ಟೆಯ ಬಳಿ ಸಿಕ್ಕುತ್ತಿಯಾ ಎಂದು ಕರೆ ಮಾಡಿದಾಗ ಫಿರ್ಯಾದುದಾರರು ತನ್ನ ಪರಿಚಯದವರೆಂದು ಮಾತನಾಡಿರುತ್ತಾರೆ. ನಂತರ ದಿವ್ಯ ರವರು ದೀಪಕ್ ಎಂಬವರ ಜೊತೆ ಈಝೀ ಡೇ ಬಳಿ ಹೋದಾಗ ರಾತ್ರಿ ಸುಮಾರು 10-15 ಗಂಟೆಗೆ ಕೆಎ 19 ಎಂಬಿ 8939 ಮಾರುತಿ ಕೆಂಪು ಬಣ್ಣದ ಕಾರಿನಲ್ಲಿ ಇಬ್ಬರು ವ್ಯಕ್ತಿಗಳು ಕಾರಿನಿಂದ ಇಳಿದು ಫಿರ್ಯಾದುದಾರರನ್ನು ತಡೆದು ನಿಲ್ಲಿಸಿ ಕಾರಿನಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸಿ, ಕೊಂಡು ಕೈಯನ್ನು ಹಿಡಿದುಕೊಂಡು ಎಳೆದಾಗ, ಕುಮಾರಿ ದಿವ್ಯರವರು ಬೊಬ್ಬೆ ಹಾಕಿರುತ್ತಾರೆ. ಆ ಸಮಯದಲ್ಲಿ ದೀಪಕ್ ಮತ್ತಿತರರು ಬಂದು ಪ್ರಶ್ನಿಸಿದಾಗ ಕೈಯನ್ನು ಬಿಟ್ಟು ಕಾರಿನ ಬಳಿಗೆ ಹೋಗಿರುತ್ತಾರೆ. ನಂತರ ಇವರುಗಳ ಹೆಸರು ತಿಳಿಯಲಾಗಿ ಕಮಲೇಶ್ ರಾಜ್ ಹಾಗೂ ದಿನೇಶ್ ಭಟ್ ಎಂದು ತಿಳಿದು ಬಂದಿರುತ್ತದೆ. ಅಲ್ಲದೇ ಮೇಸೆಜು ಮಾಡಿದ ವ್ಯಕ್ತಿ ಕಮಲೇಶ್ ರಾಜ್ರವರು ಸಾಯಾಂಕಾಲ 5-30 ಗಂಟೆಗೆ ಅತ್ತಾವರ ಕೆಎಂಸಿ ಬಳಿ ಮೆಡಿಕಲ್ ಶಾಪ್ಗೆ ಫಿರ್ಯಾದುದಾರರು ಹೋದಾಗ ಕಾರಿನಲ್ಲಿ ಬರುವಂತೆ ಒತ್ತಾಯಿಸಿರುತ್ತಾರೆ. ಎಂಬುದಾಗಿ ಫಿರ್ಯಾದಿದಾರರಾದ ಕುಮಾರಿ ದಿವ್ಯ (25), ತಂದೆ : ಶೀನ ಕುಲಾಲ್, ವಾಸ : ಪಾರ್ವತಿ ನಿವಾಸ, ಅತ್ತಾವರ, ಬಾಬು ಗುಡ್ಡೆ, ಮಂಗಳೂರು ರವರು ನೀಡಿದ ದೂರಿನಂತೆ 02/2013 ಕಲಂ 341, 354 ಜೊತೆಗೆ 34 ಐಪಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಅಕ್ರಮವಾಗಿ ತಡೆದು, ಬೈದ ಪ್ರಕರಣ; 

ದಕ್ಷಿಣ ಠಾಣೆ; 


  • ದಿನಾಂಕ 02-01-2013 ರಂದು ಫಿರ್ಯಾದುದಾರರು ತನ್ನ ಕೆಲಸ ಮುಗಿಸಿ ಮನೆಗೆ ಹೋಗುವ ಸಂದರ್ಬದಲ್ಲಿ ರಾತ್ರಿ 9-00 ಗಂಟೆಗೆ ಪರಿಚಯದ ಕಮಲೇಶ್ ರವರು ಮೊಬೈಲ್ ನಂಬ್ರ 9845081287 ನೇದಕ್ಕೆ ಕರೆ ಮಾಡಿ ನಾನು ಫಳ್ನೀರ್ನಲ್ಲಿ ಇದ್ದೇನೆ ನನಗೆ ಅತ್ತಾವರ ಕಟ್ಟೆ ಬಳಿ ಇರುವ ಈಝಿ ಡೇಗೆ ಹೋಗಬೇಕೆಂದು ತಿಳಿಸಿದಾಗ ಪಳ್ನೀರ್ಗೆ ಬಂದು ಅವರನ್ನು ತನ್ನ ಕಾರು ಕೆಎ 19 ಎಂಬಿ 8939 ನೇದರಲ್ಲಿ ಕುಳ್ಳಿರಿಸಿ ಅತ್ತಾವರ ಕಟ್ಟೆಗೆ ಕರೆದುಕೊಂಡು ಹೋಗಿರುತ್ತಾರೆ. ಅಲ್ಲಿ ಒಂದು ಮಹಿಳೆ ನಿಂತುಕೊಂಡಿದ್ದಳು. ಆ ಸಮಯದಲ್ಲಿ ಸುಮಾರು 4-5 ಜನರು ಬಂದು ಹುಡುಗಿಯರಿಗೆ ಮೆಸೇಜ್ ಮಾಡಿ ತೊಂದರೆ ಕೊಡುತ್ತಿಯಾ ಎಂದು ಹೇಳಿ ಕೈಯಿಂದ ಹೊಡೆದು ಬೇವಸರ್ಿ ರಂಡೇಮಗ ಎಂದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ನಂತರ ಕಾರಿನ ಗ್ಲಾಸ್ ಪುಡಿ ಮಾಡಿ ಸುಮಾರು ರೂ 25,000/- ನಷ್ಟ ಉಂಟು ಮಾಡಿರುತ್ತಾರೆ. ಗ್ಲಾಸ್ ಪುಡಿ ಮಾಡಿದವರ ಹೆಸರು ತಿಳಿದುಕೊಂಡಲ್ಲಿ ದೀಪಕ್ ಎಂದು ತಿಳಿದುಕೊಂಡಿದ್ದು, ಈತನೊಂದಿಗೆ ಇದ್ದ ಇತರರು ಸೇರಿ ಕಾರಿನ ಗ್ಲಾಸನ್ನು ಪುಡಿ ಮಾಡಿದ್ದಾಗಿದೆ ಎಂಬುದಾಗಿ ಶ್ರೀ ವಿವೇಕಾನಂದ (320, ತಂದೆ : ದಯಾನಂದ ಭಟ್, ವಾಸ : ಸಿದ್ದಿ ವಿನಾಯಕ, ಬಿಕರ್ಣ ಕಟ್ಟೆ, ಮಂಗಳೂರು ನೀಡಿದ ದೂರಿನಂತೆ 03/2013 ಕಲಂ 143, 147, 148, 323, 341, 504 ಖ/ಘ 149 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:

Post a Comment