Monday, January 28, 2013

Daily Crime Incidents for Jan 28, 2013


ಅಪಘಾತ ಪ್ರಕರಣ

ಸುರತ್ಕಲ್ ಪೊಲೀಸ್ ಠಾಣೆ

  • ಫಿರ್ಯಾದಿದಾರರಾದ ನಿರಾವ್ ರವರು ನಿಟ್ಟೆ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಕಲಿಯುತ್ತಿದ್ದು ದಿನಾಂಕ 26-01-2013 ರಂದು ಅವರ ಸ್ನೇಹಿತರಾದ ಅಭಿನಾಶ್  ಮತ್ತು ಕುಶಾಲ್ ರವರೊಂದಿಗೆ ಸುರತ್ಕಲ್ ಗೆ ಪುಸ್ತಕ ತೆಗೆದು ಕೊಂಡು ಹೋಗಲು ಬಂದು ಸುರತ್ಕಲ್ ಪೋಸ್ಟ್ ಆಫೀಸ್ ಹತ್ತಿರ ಬಸ್ ಇಳಿದು ರಸ್ತೆ ದಾಟುವರೇ ರಾ ಹೆ 66 ರ ಡಿವೈಡರ್ ಬಳಿ ಸಂಜೆ 5-00 ಗಂಟೆಗೆ ನಿಂತುಕೊಂಡಿದ್ದು ಆ ವೇಳೆಗೆ ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ಕೆ ಎ 19 ಬಿ 5600 ನೇ ರಿಕ್ಷಾವನ್ನು ಅದರ ಚಾಲಕ ಗಣೇಶ್ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಸ್ನೇಹಿತ ಅಭಿನಾಶ್ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅಭಿನಾಶ್ ರಸ್ತೆಗೆ ಬಿದ್ದಿದ್ದು,  ಅಭಿನಾಶ್ ನಿಗೆ ಮುಖಕ್ಕೆಹಲ್ಲಿಗೆಹಾಗೂ ಬಲಕೈ ಬಲ ಕಾಲಿಗೆ ಗಾಯ ಆಗಿದ್ದು ಚಿಕಿತ್ಸೆ ಬಗ್ಗೆ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಾಗಿದ್ದುರಿಕ್ಷಾ ಕೂಡ ಮಗುಚಿ ಬಿದ್ದ ಪರಿಣಾಮ ರಿಕ್ಷಾದಲ್ಲಿದ್ದವರಿಗೂ ಕೂಡ ಗಾಯ ಆಗಿದ್ದು ರಿಕ್ಷಾ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿರುತ್ತದೆ ಎಂಬುದಾಗಿ ನಿರಾವ್‌‌ ರವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣಾ ಅ.ಕ್ರ. 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಮೂಡಬಿದ್ರೆ ಠಾಣೆ

  • ನಿನ್ನೆ ದಿನ ತಾರೀಕು 26-01-2013 ರಂದು  16-30 ಗಂಟೆಗೆ ಮಂಗಳೂರು ತಾಲೂಕು ಮಾರ್ಪಾಡಿ ಗ್ರಾಮದ ನಾಗರಕಟ್ಟೆ ತಿರುವು ಎಂಬಲ್ಲಿಗೆ ಪಿರ್ಯಾದಿದಾರರಾದ ಆನಂದ ಸುವರ್ಣ 36) ತಂದೆ: ಲಕ್ಷಣ ಕೋಟ್ಯಾನ್‌, ವಾಸ : ಜೋನ್‌ ಡಿಸೋಜಾ ಕಂಪೌಂಡ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಬಳಿ , ಮಾರ್ಪಾಡಿ ಗ್ರಾಮ, ಮಂಗಳೂರು ತಾಲೂಕು ರವರು ಮತ್ತು ಭೋಜ ಕೋಟ್ಯಾನ್, ಸಂಪತ್‌ ಯಾನೆ ಸಂಪು ಎಂಬವರು ಕೆಎ 19 ಡಿ 7916 ನಂಬ್ರದ ಆಟೋರಿಕ್ಷಾದಲ್ಲಿ ಮೂಡಬಿದ್ರೆ ಕಡೆಯಿಂದ ಒಂಟಿಕಟ್ಟೆ ಕಡೆಗೆ ಹೋಗುತ್ತಿದ್ದಂತಹ ಸಮಯದಲ್ಲಿ ಸದ್ರಿ ಆಟೋರಿಕ್ಷಾ ಚಾಲಕ ಮನೋಹರ ಎಂಬವರ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದಾಗಿ ಸದ್ರಿ ರಿಕ್ಷಾವು ಬಲ ಮಗ್ಗುಲಿಗೆ ಮಗುಚಿ ಬಿದ್ದ ಪರಿಣಾಮ ಪಿರ್ಯಾದಿ ಆನಂದ ಸುವರ್ಣರವರ ಎಡ ಕೈ ತಟ್ಟಿಗೆ, ಮಣಿಗಂಟಿಗೆ ಮತ್ತು ತಲೆಯ ಬಲಭಾಗದಲ್ಲಿ ರಕ್ತಗಾಯ ಆಗಿರುವುದಲ್ಲದೇ ಸದ್ರಿ ಭೋಜ ಕೋಟ್ಯಾನ್‌ ರವರ ಬಲಕೈ ತಟ್ಟಿಗೆ ರಕ್ತಗಾಯವಾಗಿದ್ದು ಬಲ ಪಕ್ಕೆಲುಬು, ಬೆನ್ನಿಗೆ ಕುತ್ತಿಗೆಗೆ ಬಾರಿ ಗುದ್ದಿದ ನೋವು ಆಗಿರುವುದಲ್ಲದೇ ಸದ್ರಿ ಚಾಲಕ ಮನೋಹರನ ಬಲಭುಜ ಮತ್ತು ಬಲಕಾಲಿನ ತೊಡೆಗೆ ಗುದ್ದಿದ ನೋವು ಆಗಿದ್ದು ಪಿರ್ಯಾದಿ ಆನಂದ ಸುವರ್ಣ ಎಂಬವರು ಮತ್ತು ಆಟೋ ಚಾಲಕ ಮನೋಹರ ಇವರು ಮೂಡಬಿದ್ರೆ ವಿದ್ಯಾಗಿರಿಯ ಆಳ್ವಾಸ್‌ ಆಯುರ್ವೇದ ಮೆಡಿಕಲ್‌ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಮತ್ತು ಗಾಯಾಳು ಭೋಜ ಕೋಟ್ಯಾನ್‌ರವರು ಮಂಗಳೂರು ಎ. ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ಆನಂದ ಸುವರ್ಣ ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣಾ ಅ.ಕ್ರ 21/2013 ಕಲಂ : 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಮಂಗಳೂರು ಗ್ರಾಮಾಂತರ ಠಾಣೆ

  • ದಿನಾಂಕ  :27.01.2013 ರಂದು ಬೆಳಿಗ್ಗೆ ಸುಮಾರು 08.15 ಗಂಟೆ ಸಮಯಕ್ಕೆ ಆಟೋ ರಿಕ್ಷಾ ಕೆಎ-19-ಎ-3813 ನ್ನು ಅದರ ಚಾಲಕ ಫೆಡ್ರಿಕ್‌ ಲೋಬೋ ಎಂಬವರು ತನ್ನ ಬಾಬ್ತು ಆಟೋ ರಿಕ್ಷಾವನ್ನು ಮಂಗಳೂರು ನಗರದ ಸಾರ್ವಜನಿಕ ರಸ್ತೆಯಾದ ಕಂಕನಾಡಿ ಮಹಾಲಿಂಗೇಶ್ವರ ದೇವಸ್ಥಾನ ರಸ್ತೆಯಿಂದ ಅತೀವೇಗ ಯಾ ನಿರ್ಲಕ್ಷ್ಯತನದಿಂದ ಚಲಾಯಿಸಿ  ರಾ.ಹೆ 75 ನೇ ರಸ್ತೆಯಾದ ಪಡೀಲ್‌ ಕಡೆಯಿಂದ ಪಂಪ್‌ವೆಲ್‌ ಕಡೆಗೆ ಬರುತ್ತಿದ್ದ ಮೋಟಾರ್‌ ಬೈಕ್‌ ಕೆಎ-19-ಇಎ-1168 ನೇ ಯದಕ್ಕೆ ಕಂಕನಾಡಿ ಗ್ರಾಮದ ಕಪಿತಾನಿಯಾ ಶಾಲೆ ಬಳಿ ಡಿಕ್ಕಿ ಹೊಡೆದು ಸವಾರ ಹಾಗೂ ಸಹಸವಾರರು ಮೋಟಾರು ಬೈಕ್‌ ಸಮೇತ ರಸ್ತೆಯಲ್ಲಿ ಬಿದ್ದು ಸವಾರ ಮನೋಜ್‌ ಎಂಬವರ ಎಡ ಕೈ ಯ ಭುಜಕ್ಕೆ, ಎಡ ಕೈಗೆ ಮತ್ತು ಎಡ ಕಾಲಿಗೆ ತರಚಿದ ಮತ್ತು ಗುದ್ದಿದ ಗಾಯ ಉಂಟಾಗಿರುವುದಲ್ಲದೆ, ಸಹಸವಾರರಾದ ಲೋಕೇಶ್‌ ಎಂಬವರ ಹೊಟ್ಟೆಯ ಎಡಭಾಗಕ್ಕೆ ತೀವ್ರ ಸ್ವರೂಪದ ಗುದ್ದಿದ ನೋವುಂಟಾಗಿರುವುದು ಎಂಬುದಾಗಿ ಮನೋಜ್ ತಂದೆ: ಸತ್ಯವಾನ್  ಅಡ್ಯಾರ್ ಪದವು ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಅ.ಕ್ರ. 17/2013 ಕಲಂ: 279, 337, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

ಮಂಗಳೂರು ಗ್ರಾಮಾಂತರ ಠಾಣೆ

  • ದಿನಾಂಕ 27/01/2013 ರಂದು ಮದ್ಯಾಹ್ನದ ಸಮಯ ಪಿರ್ಯಾದಿದಾರರಾದ ಮನೋಜ್ ತಂದೆ: ಕರುಣಾಕರ ಸಫಲ್ಯ @ ವಾಮನ ಕಲಶೇಖರ ಚ್ವೌಕಿ ಪದವು ಮಂಗಳೂರು ತಂದೆ ಕರುಣಾಕರ ಯಾನೆ ವಾಮನ ಎಂಬುವರು ವಿಪರಿತ ಶರಾಬು ಸೇವಿಸುವ ಚಟದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮಂಗಳೂರು ನಗರದ ಪದವು ಗ್ರಾಮದ ಕುಲಶೇಖರ ಚೌಕಿ ಎಂಬಲ್ಲಿ ಬಸ್ ಸ್ಟ್ಯಾಂಡ್‌ ಬಳಿ ಇರುವ ವಾಸ್ತವ್ಯವಿಲ್ಲದ ಮನೆ ಜಾಗದಲ್ಲಿನ ಬಾವಿಗೆ ಹಾರಿ ಆತ್ಮಹತ್ಯ ಮಾಡಿದ್ದು  ಅಗ್ನಿಶಾಮಕದಳದವರು ಮೃತಶರೀರವನ್ನು ತೆಗೆದು ಶವಾಗಾರಕ್ಕೆ ಸಾಗಿಸಿದ್ದಾಗಿ ಮನೋಜ್ ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಯುಡಿಆರ್ ನಂಬ್ರ. 9/2013 ಕಲಂ.174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣ

ಮುಲ್ಕಿ ಠಾಣೆ

  • ಬೆಂಗಳೂರು ಬನ್ನೇರುಘಟ್ಟ  ರಸ್ತೆ  ವಿವರ್ಸ ಕಾಲೋನಿ ನಾಗರಾಜರವರ ಮಗ ಪಿರ್ಯಾದಿದಾರರಾದ ಬಾಲಾಜಿ  ಎನ್  ಎಂಬವರು  ಠಾಣೆಗೆ  ಬಂದು ನೀಡಿದ  ಹೇಳಿಕೆಯ  ಸಾರಾಂಶವೇನೆಂದರೆ  ಫಿರ್ಯಾದಿದಾರರು  ಕೆಎ 05  ಎಸಿ 1757 ನೇ ಟೆಂಪೋದ ಚಾಲಕರಾಗಿದ್ದು  ಈ ದಿನ ದಿನಾಂಕ  27.01.2013  ರಂದು ಟೆಂಪೋದಲ್ಲಿ ಬೆಂಗಳೂರು  ಯಾತ್ರಿಕರನ್ನು   ತುಂಬಿಸಿಕೊಂಡು ಉಡುಪಿ ಮಾರ್ಗವಾಗಿ ಮುಲ್ಕಿ ಕಡೆಯಿಂದ  ಕಿನ್ನಿಗೋಳಿ ಕಡೆಗೆ  ಚಲಾಯಿಸಿಕೊಂಡು ಹೋಗುವಾಗ  ಬೆಳಿಗ್ಗೆ  10.15 ರ ವೇಳೆಗೆ  ಕುಬೆವೂರು  ಎಂಬಲ್ಲಿ ಕಿನ್ನಿಗೋಳಿ ಕಡೆಯಿಂದ  ಬಸ್ಸು ಕೆಎ 20 ಬಿ  1978 ನ್ನು ಅದರ ಚಾಲಕ  ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿ  ಟೆಂಫೋಗೆ  ಢಿಕ್ಕಿ ಮಾಡಿದ  ಕಾರಣ  ಟೆಂಪೋದ  ಬಲಬದಿಯಲ್ಲಿ ಕುಳಿತಿದ್ದ  ವರಲಕ್ಷ್ಮೀ ರವರ  ಬಲಕೈ ಭುಜದಿಂದ  ಕೆಳಗೆ  ಗಂಭೀರ  ಸ್ವರೂಪದ  ಜಖಂ  ಆಗಿ ರಕ್ತಗಾಯವಾಗಿದ್ದವರನ್ನು  ಮಂಗಳೂರು  ಎ.ಜೆ  ಆಸ್ಪತ್ರೆಗೆ  ದಾಖಲಿಸಲಾಗಿರುತ್ತದೆ ಎಂಬುದಾಗಿ ಬಾಲಾಜಿ ಎನ್  ರವರು ನೀಡಿದ ದೂರಿನಂತೆ ಮುಲ್ಕಿ ಠಾಣಾ ಅ.ಕ್ರ  08/2013 ಕಲಂ :279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ವಾಹನ ಕಳವು ಪ್ರಕರಣ

ದಕ್ಷಿಣ ಠಾಣೆ

  • ಫಿಯರ್ಾದುದಾರರು ದಿನಾಂಕ 24-01-2013 ರಂದು ರಾತ್ರಿ 10-00 ಗಂಟೆಗೆ ತನ್ನ ಬಾಬ್ತು ಬಜಾಜ್ ಪಲ್ಸರ್ ಮೋಟಾರು ಸೈಕಲ್ನ್ನು ತನ್ನ ಮನೆ ಇರುವ ಮಂಗಳೂರು ಅತ್ತಾವರದಲ್ಲಿನ ಝಾಫಿರ್ ಹೈಟ್ಸ್ ಅಪಾಟರ್್ಮೆಂಟ್ನ ಪಾಕರ್ಿಂಗ್ ಸ್ಥಳದಲ್ಲಿ ಪಾಕರ್್ ಮಾಡಿದ್ದು, ದಿನಾಂಕ 25-01-2013 ರಂದು ಬೆಳಿಗ್ಗೆ 07-30 ಗಂಟೆಗೆ ಮೋಟಾರು ಸೈಕಲ್ ಪಾಕರ್್ ಮಾಡಿದ ಸ್ಥಳಕ್ಕೆ ಬಂದು ನೋಡಿದಾಗ, ಫಿಯರ್ಾದುದಾರರು ಪಾಕರ್್ ಮಾಡಿದ್ದ ಮೋಟಾರು ಸೈಕಲ್ ಅಲ್ಲಿರದೇ ಇದ್ದು, ಸದ್ರಿ ಮೋಟಾರು ಸೈಕಲ್ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಸದ್ರಿ ಮೋಟಾರು ಸೈಕಲ್ನ್ನು ಈವರೆಗೂ ಹುಡುಕಾಡಿದರೂ ಪತ್ತೆಯಾಗದ ಕಾರಣ ಈ ದಿನ ಠಾಣೆಗೆ ಬಂದು ಫಿಯರ್ಾದು ನೀಡಿರುವುದಾಗಿದೆ.  ಕಳವಾದ ಮೋಟಾರು ಸೈಕಲ್ನ ಅಂದಾಜು ಬೆಲೆ ರೂ 45,000/- ಆಗಬಹುದು. ಈ ಬಗ್ಗೆ  ಕಾನೂನು ಕ್ರಮ ಕೈಗೊಳ್ಳುವಂತೆ ದಕ್ಷಿಣ ಠಾಣಾ ಮೊ.ನಂ.23/2013 ಕಲಂ 379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:

Post a Comment