Thursday, January 10, 2013

Daily Crime Incidents for Jan 10, 2013


ಅಪಘಾತ ಪ್ರಕರಣ:

ಸಂಚಾರ ಪೂರ್ವ ಠಾಣೆ;

  • ದಿನಾಂಕ: 08-01-2013 ರಂದು ಸಮಯ ಸಂಜೆ ಸುಮಾರು  7.00 ಗಂಟೆಗೆ ಪಿರ್ಯಾದುದಾರರು ತನ್ನ ಬಾಬ್ತು ಮೋ.ಸೈಕಲ್ ನಂಬ್ರ ಏಂ19 ಇಃ-5716 ರಲ್ಲಿ ಸವಾರರಾಗಿ, ದಿನೇಶ್ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಕಲ್ಪನೆ ಕಡೆಯಿಂದ ಕುಲಶೇಖರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಕುಲಶೇಖರ ಮೆಸ್ಕಾಂ ಕಚೇರಿಯ ಎದುರು ತಲುಪುವಾಗ ಎದುರಿನಿಂದ ಅಂದರೆ ಕುಲಶೇಖರ ಡೈರಿ ಕಡೆಯಿಂದ ಕಲ್ಪನೆ ಕಡೆಗೆ ಸ್ಕೋಪರ್ಿಯೋ ಕಾರು ಏಂ19     ಕ-9905 ನ್ನು ಅದರ ಚಾಲಕ ಅತಿವೇಗ ಹಾಗೂ ಅಜಾಗರುಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ರಸ್ತೆಯ ತೀರಾ ಬಲಭಾಗದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಮೋ.ಸೈಕಲ್ಲಿನ ಬಲಹ್ಯಾಂಡಲ್ಗೆ ಡಿಕ್ಕಿ ಮಾಡಿದ ಪರಿಣಾಮ ಮೊ,ಸೈಕಲ್ ಸವಾರರು, ಮೋ.ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದುದಾರರ ಬಲಕೈಯ ಕಿರುಬೆರಳು ತುಂಡಾಗಿ, ಬೆನ್ನಿನ ಭಾಗಕ್ಕೆ ತರಚಿದ ಗಾಯ ಉಂಟಾಗಿ ಎ.ಜೆ.ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ ಎಂಬುದಾಗಿ ಗೌತಮ್ ಬಂಗೇರ (27) ತಂದೆ- ನಾರಾಯಣ ಪೂಜಾರಿ. ಸೋಜಾ ಟ್ಯಾಂಕರ್ ಬಳಿ, ಚಂಡೀರಾ ಹೌಸ್, ಬೈರಡಿಕೆರೆ ಎದುರು,  ಪಡೀಲ್,  ಮಂಗಳೂರು. ರವರು ನೀಡಿದ ದೂರಿನಂತೆ ಸಂಚಾರಿ ಪೂರ್ವ ಠಾಣೆ ಅಪರಾದ ಕ್ರಮಾಂಕ  07/2013 ಸ279 , 338,  ಐ.ಪಿ.ಸಿ.ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ.

  • ದಿನಾಂಕ: 08-01-2013 ರಂದು ಸಮಯ ಮಧ್ಯಾಹ್ನ ಸುಮಾರು  3.45 ಗಂಟೆಗೆ ಪಿರ್ಯಾದುದಾರರು ತನ್ನ ಬಾಬ್ತು ಹೊಂಡ ಸ್ಕೂಟರ್ ನಂಬ್ರ ಏಂ19 ಎ-6053 ರಲ್ಲಿ ಸವಾರರಾಗಿ, ರಾಜನ್ ಕೆ.ವಿ. ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಪದವು ಜಂಕ್ಷನ್ ಕಡೆಯಿಂದ ಕದ್ರಿ ಶಿವಭಾಗ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ನಂತೂರು ಜಂಕ್ಷನ್ ಬಳಿ ಇರುವ ಬಸ್ಸು ನಿಲ್ದಾಣದ ಬಳಿ ತಲುಪುವಾಗ ಪಿರ್ಯಾದುದಾರರ ಹಿಂದಿನಿಂದ ಅಂದರೆ ನಂತೂರು ಜಂಕ್ಷನ್ ಕಡೆಯಿಂದ ಸಿಲ್ವರ್ ಬಣ್ಣದ ಮಾರುತಿ ಸ್ವಿಪ್ಟ್ ಕಾರು ಏಂ19 ಒಂ-7474 ನ್ನು ಅದರ ಚಾಲಕ ಅತಿವೇಗ ಹಾಗೂ ಅಜಾಗರುಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಸ್ಕೂಟರಿನ ಬಲಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಮೊ,ಸೈಕಲ್ ಸವಾರರು, ಸಹಸವಾರರ ಸಮೇತ ಡಾಮರು ರಸ್ತೆಗೆ ಬಿದ್ದು ಪಿರ್ಯಾದುದಾರರ ಬಲಕೈಗೆ ರಕ್ತ ಗಾಯ, ಬಲಕಾಲಿಗೆ, ಸೊಂಟಕ್ಕೆ ಗುದ್ದಿದ ಗಾಯ ಹಾಗೂ ರಾಜನ್ರವರ ಬಲಕಾಲಿನ ಗಂಟಿಗೆ ಚರ್ಮ ಕಿತ್ತುಹೋದ ಗಾಯ, ಬಲಕೈಗೆ ರಕ್ತಗಾಯ ಉಂಟಾಗಿ ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದುಕೊಂಡಿರುವುದಾಗಿದೆ. ಅಪಘಾತವನ್ನುಂಟು ಮಾಡಿದ ನಂತರ ಅರೋಪಿತರು ವಾಹನ ಸಮೇತ ಅಪಘಾತ ಸ್ಥಳದಿಂದ ಪರಾರಿಯಾಗಿರುವುದಾಗಿದೆ ಎಂಬುದಾಗಿ  ಪ್ರವೀಣ್ ರೋಡ್ರೀಗಸ್. (47) ತಂದೆ- ದಿ|| ಡಬ್ಲೂ. ಜೆ. ರಾಡ್ರೀಗಸ್,  ವಾಸ್ ಲೇನ್, ಬಲ್ಮಠ, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರಿ ಪೂರ್ವ ಠಾಣೆ  279 , 337,  ಐ.ಪಿ.ಸಿ.ಕಾಯ್ದೆ 134 (ಎ) & (ಬಿ) ಮೋ.ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಸುರತ್ಕಲ್ ಠಾಣೆ;

  • ದಿನಾಂಕ 09-01-2013 ರಂದು ಕೆಎ-19-ಎಬಿ-3618 ನೇ ಪಿರ್ಯಾದಿದಾರರು ಸ್ವರಾಜ್ ಮಜ್ದಾ ಹಾಲಿನ ವಾಹನದಲ್ಲಿ ಚಾಲಕರಾಗಿದ್ದು ಕುಲಶೇಖರದ ಹಾಲಿನ ಡೈರಿಯಿಂದ ಹಾಲನ್ನು ಕ್ರೇಟ್ನಲ್ಲಿ ತುಂಬಿಸಿಕೊಂಡು ಸುರತ್ಕಲ್ ಪರಿಸರದಲ್ಲಿ ಹಾಲು ವಿತರಣೆ ಮಾಡಿ ಬಳಿಕ ಮಂಗಳೂರು ಕಡೆಗೆ ಹೋಗುತ್ತಾ ಕುಳಾಯಿ ಶೆಟ್ಟಿ ಐಸ್ಕ್ರೀಂನ ಎದುರು ರಸ್ತೆಯ ಎಡ ಬದಿಯಲ್ಲಿ ಸ್ವರಾಜ್ ಮಜ್ದಾ ನಿಲ್ಲಿಸಿ ಹಾಲಿನ ಡೀಲರ್ ಆಗಿದ್ದ ಉದಯಕುಮಾರ್ ಎಂಬವರ ಬಾಬ್ತು ಖಾಲಿ ಕ್ರೇಟ್ಗಳನ್ನು ವಾಹನಕ್ಕೆ ತುಂಬಿಸುತ್ತಿದ್ದಾಗ ಅಪರಾಹ್ನ 15-45 ಗಂಟೆಗೆ ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ಸಿಎನ್ಜಿ-1609 ನೇ ಕಾರನ್ನು ಅದರ ಚಾಲಕ ರಾಮ ಮಣಿಯಾಣಿ ಎಂಬವರು ಬೇರೆ ವಾಹನವನ್ನು ಹಿಂದಿಕ್ಕಲು ಅತೀವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ತೀರಾ ಎಡ ಬಾಗ ಮಣ್ಣು ರಸ್ತೆಯಲ್ಲಿ ಚಲಾಯಿಸಿಕೊಂಡು ಬಂದು ನಿಂತಿದ್ದ ಪಿರ್ಯಾದಿದಾರರ ಬಾಬ್ತು ಹಾಲಿನ ವಾಹನಕ್ಕೆ ಹಿಂಬದಿಯ ಬಲಬಾಗಕ್ಕೆ ಡಿಕ್ಕಿ ಹೊಡೆಯಿತು. ಪರಿಣಾಮ ಕಾರಿನ ಎಡ ಬಾಗದ 2 ಬಾಗಿಲುಗಳು ಸಂಪೂರ್ಣ ಜಖಂಗೊಂಡು ಕಾರಿನ ಒಳಗೆ ಕುಳಿತಿದ್ದ  ಕೆ. ರಘು ಶೆಟ್ಟಿ ಮತ್ತು ಜಯಶ್ರೀ ಶೆಟ್ಟಿ ರವರಿಗೆ ತೀವ್ರ ತರದ ರಕ್ತಗಾಯವಾಗಿದ್ದು ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ. ಆಸ್ಪತ್ರೆಗೆ ಸಾಗಿಸಿರುವುದು ಎಂಬುದಾಗಿ ಪಿರ್ಯಾದಿದಾರರು ಚಿದಾನಂದ ಪ್ರಾಯ ಃ 24 ವರ್ಷ ತಂದೆಃ ಲೋಕಯ್ಯ ಕುಂಬಾರ ವಾಸಃ ಹೊಡಿಕ್ಕಾರು ಮನೆ ನಾವೂರು ಅಂಚೆ ಮತ್ತು ಗ್ರಾಮ ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 09/2013 ಕಲಂ: 279, 338 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಮುಲ್ಕಿ ಠಾಣೆ:

  • ದಿನಾಂಕ 08-01-2013 ರಂದು 18.30 ಗಂಟೆಗೆ ತಾಳಿಪಾಡಿ ಗ್ರಾಮದ ಪುನರೂರು ಭಾರತ್ ಮಾತಾ ಶಾಲೆಯ ಬಳಿ ಪಿರ್ಯಾಧಿದಾರರು ತನ್ನ ಬಾಬ್ತು ಅಟೋರಿಕ್ಷಾದಲ್ಲಿ ಹೋಗುತ್ತಿದ್ದಾಗ ಪಿರ್ಯಾಧಿದಾರರ ತಾಯಿ ಗೋಪಿ(75) ಎಂಬವರು ಮನೆಯ ಕಡೆಗೆ ಮಣ್ಣು ಕಚ್ಚಾರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕಿನ್ನಿಗೋಳಿ ಕಡೆಯಿಂದ ಒಂದು ಮೋಟಾರು ಸೈಕಲು ನಂ ಕೆ.ಎ-19-ವೈ-8465 ನೇದನ್ನು ಸವಾರ ಸುವಿತ್ ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರರ ತಾಯಿಗೆ ಡಿಕ್ಕಿಹೊಡೆದ ಪರಿಣಾಮ ಎಡಕಾಲಿನ ಬಳಿ ಗುದ್ದಿದಂತಹ ರಕ್ತಗಾಯವಾಗಿ ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಪಿರ್ಯಾದಿದಾರರಾದ ಪುರುಶೊತ್ತಮ ಶೆಟ್ಟಿಗಾರ್ (59) ಬಿನ್ ಅಂಗಾರ ಶೆಟ್ಟಿಗಾರ್ ವಾಸ: ಹರಿಪ್ರಸಾದ್ ನಿಲಯ ಬೆಳ್ಳಾಯೂರು ಗ್ರಾಮ ಕೆಂಚನಕೆರೆ ಮಂಗಳೂರು ರವರು ನೀಡಿದ ದೂರಿನಂತೆ ಮುಲ್ಕಿ ಠಾಣೆ ಅಪರಾದ ಕ್ರಮಾಂಕ 02/2013 ಕಲಂ: 279, 338 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:

Post a Comment