Monday, January 21, 2013

Daily Crime Incidents for Jan 21, 2013



ಅಪಘಾತ ಪ್ರಕರಣ

ಪಣಂಬೂರು ಠಾಣೆ

  • ಫಿರ್ಯಾದಿದಾರರಾದ ಹೆಚ್ ಕೆ ಹಮ್ಮಬ್ಬರವರು ಈ ದಿನ ದಿನಾಂಕ 20-01-2013 ರಂದು  ಮದ್ಯಾಹ್ನ ಸಮಯ ಸುಮಾರು 12-00 ಗಂಟೆಗೆ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಅಡ್ಕ ಹಾಲ್ನಲ್ಲಿ ನಡೆಯುವ ಅವರ ಅಕ್ಕನ ಮಗಳ ಮದುವೆ ಕಾರ್ಯಕ್ರಮಕ್ಕೆ ಸಂಬಂಧಿಕರೊಂದಿಗೆ ಹೋಗಿ ಹಾಲ್ನ ಬಳಿ ನಿಂತುಕೊಂಡಿದ್ದ ಸಮಯ ಬೈಕಂಪಾಡಿ ಇಂಡಸ್ಟ್ರೀಯಲ್ ಏರಿಯಾ ಕಡೆಯಿಂದ  ಬೈಕಂಪಾಡಿ ಜಂಕ್ಷನ್ ಕಡೆಗೆ ಕಾರು ನಂ: ಕೆಎ-19/ಎಂ.ಸಿ-5124ನೇಯದನ್ನು ಅದರ ಚಾಲಕ ಮಹಮ್ಮದ್ ಆಸೀಂ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಾಲಾಯಿಸಿ ರಸ್ತೆ ಬಲ ಬದಿ ನಿಂತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ  ಅವರ ಎಡಕಾಲಿಗೆ ಗುದ್ದಿದ ಗಾಯವಾಗಿ ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ಹೆಚ್ ಕೆ ಹಮ್ಮಬ್ಬರವರು ನೀಡಿದ ದೂರಿನಂತೆ ಪಣಂಬೂರು ಠಾಣಾ ಮೊ.ನಂ.9/13 ಕಲಂ   279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಸುರತ್ಕಲ್ ಠಾಣೆ

  • ದಿ: 19-01-13 ರಂದು ಫಿರ್ಯಾಧಿ ಎಸ್. ಕೃಷ್ಣ ರಾವ್ ಇವರು ಅಗತ್ಯ ಕೆಲಸ ನಿಮಿತ್ತ ಸುರತ್ಕಲ ಪೋಸ್ಟ್ ಆಫೀಸ್ ಗೆ ಹೋಗಿ ವಾಪಾಸು ಹಿಂದಿರುಗಿ ರಸ್ತೆಯ ಬದಿಯಲ್ಲಿ  ನಿಧಾನವಾಗಿ ನಡೆದುಕೊಂಡು ಬರುತ್ತಿರುವಾಗ ಮಧ್ಯಾಹ್ನ ಸಮಯ ಸುಮಾರು  12:00 ಗಂಟೆಗೆ  ಸುರತ್ಕಲ್ ಕಂಕ್ಷನ್ ಕಡೆಯಿಂದ  ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗ್ರತೆಯಿಂದ ಚಲಾಯಿಸಿಕೊಂಡು  ಬಂದು ಫಿರ್ಯಾಧಿದಾರರರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಫಿರ್ಯಾಧಿದಾರರ ಬಲ ಕಾಳಿಗೆ ಮತ್ತು  ತಲೆಯ ಬಾಗಕ್ಕೆ ರಕ್ತಗಾಯವಾಗಿದ್ದು, ಸದ್ರಿ ಕಾರಿನ ಚಾಲಕ ಫಿರ್ಯಾಧಿದಾರರನ್ನು ಆಟೋರಿಕ್ಷಾದಲ್ಲಿ ಸುರತ್ಕಲ್ ನ ಪದ್ಮಾವವತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ  ದಾಖಲಿಸಿದ್ದು, ಬಳಿಕ ವಿಚಾರ ತಿಳಿದು ಬಂದ ಮನೆಯವರು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಕೆ.ಎಂ.ಸಿ ಮಣಿಪಾಲಕ್ಕೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಒಳರೋಗಿಯಾಗಿ ದಾಖಲಿಸಿದ್ದು, ಅಪಾದಿತ ಕಾರು ಚಾಲಕನ ಹೆಸರು  ದಾವುದ್ ಎಂಬುದಾಗಿಯೂ,ತಿಳಿಯಿತು.  ಡಿಕ್ಕಿ ಹೊಡೆದ ಕಾರಿನ ನಂ KA-19-MB 4491 ಆಗಿರುತ್ತದೆ. ಅಪಾದಿತ ಕಾರಿನ ಚಾಲಕನ ಮೇಲೆ  ಕಾನೂನು ಕ್ರಮ ಜರಗಿಸಬೇಕಾಗಿ ಎಂಬುದಾಗಿ ಎಸ್. ಕೃಷ್ಣ ರಾವ್ ರವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣಾ ಅ.ಕ್ರ. 20/2013 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


ಸುರತ್ಕಲ್ ಠಾಣೆ


  • ದಿನಾಂಕ 20-01-2013 ರಂದು ಮದ್ಯಾಹ್ನ 12-10 ಗಂಟೆ ಸುಮಾರಿಗೆ ಸುರತ್ಕಲ್‌ ಸೂರಜ್‌ ಹೋಟೆಲ್‌ ನ ಎದುರಿನ ರಾ.ಹೆ. 66 ರಲ್ಲಿ ಫಿರ್ಯಾದಿದಾರರಾದ ಅಬ್ದುಲ್ ನವಾಜ್‌ (31) ತಂದೆ: ಹಸನ್ ಶಬೀರ್ ವಾಸ: ಜೆಪ್ಪು ಕುಡ್ಪಾಡಿ ರಸ್ತೆ ಮಂಗಳೂರು ರವರ ಅಕ್ಕ ಶ್ರೀಮತಿ ಹಮೀದಾ ಬಾನು, ಚಿಕ್ಕಮ್ಮ ಶ್ರೀಮತಿ ನಫೀಸಾ ಬಾನು ಹಾಗೂ ನೆರೆಕರೆಯ ಶ್ರೀಮತಿ ಪುಂತ್ರಿಜಿ ಯವರೊಂದಿಗೆ ಪಶ್ಚಿಮ ಬದಿಯಿಂದ ರಸ್ತೆ ದಾಟಿ ರಸ್ತೆ ಮದ್ಯದ ಡಿವೈಡರ್‌ನ ಬಳಿ ತಲುಪುತ್ತಿರುವಾಗ ಸುರತ್ಕಲ್‌ ಕಡೆಯಿಂದ ಎನ್‌ಐಟಿಕೆ ಕಡೆಗೆ ಕೆಎ 20 ಸಿ 3897 ನೇ ನಂಬ್ರದ ಟಾಟಾ ಸುಮೋ ವಾಹನವನ್ನು ಅದರ ಚಾಲಕ ಅಬ್ಸಲ್‌ ಎಂಬವರು ಅತಿ ವೇಗದಿಂದ ಚಲಾಯಿಸಿ ಅದರ ಮುಂದಿನಿಂದ ಹೋಗುತ್ತಿದ್ದ ವಾಹನವನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ರಸ್ತೆಯ ಪೂರ್ವ ಬದಿಗೆ ನಿರ್ಲಕ್ಷತನದಿಂದ ಚಲಾಯಿಸಿ ಡಿಕ್ಕಿ ಹೊಡೆದ ಪರಿಣಾಮ ಶ್ರೀಮತಿ ಹಮೀದಾ ಬಾನು, ಶ್ರೀಮತಿ ನಫೀಸಾ ಬಾನು ಹಾಗೂ ಶ್ರೀಮತಿ ಪುಂತ್ರಿಜಿ ಎಂಬವರಿಗೆ ರಕ್ತಗಾಯವಾದವರನ್ನು ಫಿರ್ಯಾದಿದಾರರು ಹಾಗೂ ಪಿ ಇಸ್ಮಾಯಿಲ್‌ ಎಂಬವರು ಆಪಾದಿತನ ಜೊತೆ ಸುರತ್ಕಲ್‌ ಪದ್ಮಾವತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎಸ್‌ಸಿಎಸ್‌ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಒಳರೋಗಿಯಾಗಿ ದಾಖಲಿಸಿದ್ದಾಗಿದೆ. ಆಪಾದಿತನ ವಿರುದ್ದ ಕಾನೂನು ಕ್ರಮ ಜರಗಿಸಬೇಕಾಗಿ ಎಂಬುದಾಗಿ ಅಬ್ದುಲ್ ನವಾಜ್‌ ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣಾ ಅ.ಕ್ರ. 21/2013 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 



ಹುಡುಗಿ ಕಾಣೆ ಪ್ರಕರಣ

ಮಂಗಳೂರು ಗ್ರಾಮಾಂತರ ಠಾಣೆ

  • ದಿನಾಂಕ  16.01.2013 ರಂದು ಪಿಯರ್ಾದಿದಾರರಾದ ವಿನೋದ, ಗಂಡ : ಗಂಗಾಧರ,  ವಾಸ : ಕಣ್ನೂರು ವೀರ ನಗರ, ಮಂಗಳೂರು ರವರ ಮಗಳು ಕುಮಾರಿ ಸುಷ್ಮಾ ಎಂಬಾಕೆ ಮದ್ಯಾಹ್ನ 2:05 ಗಂಟೆಗೆ ತನ್ನ ಮನೆಯಿಂದ ಹೋದವಳು ವಾಪಾಸ್ಸು ಮನೆಗೆ ಬಾರಾದೇ ಕಾಣೆಯಾಗಿದ್ದು ಹುಡುಕಾಡಿದಲ್ಲಿ ಈ ವರೆಗೆ ಪತ್ತೆಯಾಗಿರುವುದಿಲ್ಲ. ಆದುದರಿಂದ ಆಕೆಯನ್ನು  ಪತ್ತೆಮಾಡಿಕೊಡುವಂತೆ ವಿನೋದ ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಮೊ ನಂಬ್ರ13/13. ಕಲಂ: ಹುಡುಗಿ ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪರಿಚಿತ ಮೃತದೇಹ ಪತ್ತೆ ಪ್ರಕರಣ

ಮಂಗಳೂರು ಉತ್ತರ ಪೊಲೀಸ್ ಠಾಣೆ

  • ಫಿಯರ್ಾದಿದಾರರಾದ ರಾಧಾಕೃಷ್ಣ, ಎ.ಎಸ್.ಐ., ಮಂಗಳೂರು ಉತ್ತರ ಪೊಲೀಸ್ ಠಾಣೆ, ಬಂದರು.  ಮಂಗಳೂರು ರವರು ದಿನಾಂಕ 20-01-2013 ರಂದು ಬೆಳಿಗ್ಗೆ 7-00 ಗಂಟೆಯಿಂದ ಪಿ.ಸಿ.ಆರ್ ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ ಸುಮಾರು 08-15 ಗಂಟೆಗೆ ನಗರದ ಕೃಷ್ಣ ಭವನ ವೃತ್ತದ ಬಳಿಯಿರುವ ಸಾರ್ವಜನಿಕ ಶೌಚಾಲಯದ ಮೆಟ್ಟಲಿನ ಬಳಿ ಒಂದು ಅಪರಿಚಿತ ಮೃತ ದೇಹವಿದೆ ಎಂದು ಪೊಲೀಸ್ ನಿಯಂತ್ರಣ ಕೊಠಡಿಯಿಂದ ಸಂದೇಶ ಬಂದ ಮೇರೆಗೆ ಪಿಯರ್ಾದಿದಾರರು ಸದ್ರಿ ಸಳ್ಥಕ್ಕೆ ಹೋಗಿ ನೋಡಲಾಗಿ  ಒಂದು ಅಪರಿಚಿತ ಗಂಡಸಿನ ಮೃತ ದೇಹ ಕಂಡುಬಂದ್ದು ಸುಮಾರು 50 ರಿಂದ 55 ವರ್ಷ ಆಗಬಹುದು. ಹಾಗೂ ಸುಮಾರು 5 ಅಡಿ ಉದ್ದ ಎಣ್ಣೆಕಪ್ಪು ಮೈಬಣ್ಣ ಬಿಳಿ ಕೂದಲು, ಬಿಳಿ ಕುರುಚಲು ಗಢ್ಡ, ಎರಡು  ಮೊಣಕಾಲು ಚರ್ಮ ರೋಗದಿಂದ ಕಪ್ಪಾಗಿದ್ದು ಬಲಬದಿ ವೃಷಣವು ಬಾವುತರವಿದ್ದು ಸೊಂಟದ ಕೆಳಗೆ ಯಾವುದೇ ಬಟ್ಟೆಬರೆಗಳಿರುವುದಿಲ್ಲ. ಬಲ ಕಣ್ಣು ಮುಚ್ಚಿಕೊಂಡಿದ್ದು, ಬಾಯಿಯಲ್ಲಿ ನೊರೆಬರುತ್ತಿದ್ದು, ಖಾಕಿ ಅಂಗಿ ಧರಿಸಿರುತ್ತಾನೆ, ಆತನು ಮೃತಪಟ್ಟಂತೆ ಕಂಡುಬಂದಿದ್ದರಿಂದ  ಖಾಸಗಿ ಅಂಬುಲೆನ್ಸನ್ನು ಸ್ಥಳಕ್ಕೆ ತರಿಸಿ ವ್ಶೆಧ್ಯಾಧಿಕಾರಿಯವರಿಗೆ ಕೋರಿಕೆ ಪತ್ರದೊಂದಿಗೆ ಸರಕಾರಿ ವೆನ್ಲಾಕ್ ಆಸ್ಪತೃಗೆ ಸಾಗಿಸಿ ಮೃತ ದೇಹವನ್ನು ಶವಾಗಾರದಲ್ಲಿ ಇರಿಸಿದ್ದು, ಸದ್ರಿ ಮೃತ ದೇಹದ ಹೆಸರು ವಿಳಾಸ ಪತ್ತೆ ಮಾಡಿ ಮುಂದಿನ  ಕಾನೂನು ಕ್ರಮ ಜರಗಿಸುವಂತೆ ಪಿಯರ್ಾದಿಯಲ್ಲಿ ಕೋರಿಕೊಂಡಿರುತ್ತಾರೆ ಅದರಂತೆ ಮಂಗಳೂರು ಉತ್ತರ ಪೊಲೀಸ್ ಠಾಣಾ ಯುಡಿಆರ್ ನಂಬ್ರ 03/2013, ಕಲಂ 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ

  • ಪಿರ್ಯಾದಿದಾರರಾದ ಮಂಜಮ್ಮ, ಪ್ರಾಯ 28 ವರ್ಷ, ಗಂಡ: ನಾಗರಾಜ, ವಾಸ: ಕಾನಪಳ್ಳಿ, ಹೋಬಳಿ ತಾಲಗುಂದ, ಶಿಕಾರಿಪುರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಹಾಲಿ ವಾಸ: ಕಾಳಿಕಾಂಬ ದೇವಸ್ಥಾನಕ್ಕೆ ಸಂಬಂಧಪಟ್ಟ ಕೊಠಡಿ, ಕಾರ್ಸ್ಟ್ರೀಟ್, ಮಂಗಳೂರು ಹಾಗೂ ಪಿರ್ಯಾದಿದಾರರ ತಂದೆಯವರಾದ ಸುಮಾರು 65 ರಿಂದ 70 ವರ್ಷ ಪ್ರಾಯದ ನಾಗಪ್ಪ ಮತ್ತು ತಾಯಿ ಬರ್ಮಮ್ಮ ರವರು ಸುಮಾರು 6 ತಿಂಗಳಿನಿಂದ ಮಂಗಳೂರು ಕಾರ್ಸ್ಟ್ರೀಟ್ ಕಾಳಿಕಾಂಬ ದೇವಸ್ಥಾನದಲ್ಲಿ ಶುಚಿತ್ವ ಕೆಲಸ ಮಾಡಿಕೊಂಡಿದ್ದು ಈ ದಿನ ದಿನಾಂಕ 20-01-2013 ರಂದು ಕೆಲಸ ಮಾಡಿಕೊಂಡಿರುವ ಸಮಯ ಪಿರ್ಯಾದಿದಾರರ ತಂದೆಯವರಾದ ನಾಗಪ್ಪ ರವರಿಗೆ ಎದೆನೋವು ಕಾಣಿಸಿಕೊಂಡು ನೆಲಕ್ಕೆ ಬಿದ್ದವರನ್ನು ಉಪಚರಿಸಿ, ಮಾತನಾಡದ ಸ್ಥಿತಿಯಲ್ಲಿದ್ದವರನ್ನು ಚಿಕಿತ್ಸೆಯ ಬಗ್ಗೆ ಆಟೋರಿಕ್ಷಾವೊಂದರಲ್ಲಿ ನಗರದ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಬಂದವರನ್ನು ವ್ಶೆದ್ಯರು ಪರೀಕ್ಷಿಸಿ, ಮೃತಪಟ್ಟಿರುವುದಾಗಿ ತಿಳಿಸಿದ ಮೇರೆಗೆ  ಪಿರ್ಯಾದಿದಾರರ ತಂದೆಯವರಾದ ಸುಮಾರು 65 ರಿಂದ 70 ವರ್ಷ ಪ್ರಾಯದ ನಾಗಪ್ಪ ರವರ ಮರಣದ ಬಗ್ಗೆ ಯಾವುದೇ ಸಂಶಯವಿರುವುದಿಲ್ಲವೆಂದು ಮಂಜಮ್ಮ ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಪೊಲೀಸ್ ಠಾಣಾ ಯುಡಿಆರ್ ನಂಬ್ರ 04/2013, ಕಲಂ 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಕ್ರಮ ಜೂಜಾಟ ಪ್ರಕರಣ

ಮುಲ್ಕಿ ಠಾಣೆ

  • ದಿನಾಂಕ 20-01-2013 ರಂದು 15:40 ಗಂಟೆಯ ಸಮಯಕ್ಕೆ  ಮಂಗಳೂರು ತಾಲೂಕು ಕಿಲ್ಪಾಡಿ ಗ್ರಾಮದ ರೈಲೈ ಟ್ರಾಕ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಮಂಜುನಾಥ 2) ವಿಶಾಲ್3) ದೇವೇಂದ್ರ ಎಂಬವರು ಓಡಿ ಪರಾರಿಯಾದ ಇತರ ಆರೋಪಿತರ ಜತೆ ಸೇರಿ ಹಣವನ್ನು ಪಣವಾಗಿಟ್ಟು, ಇಸ್ಪೀಟು ಎಲೆಗಳಿಂದ ಉಲಾಯಿ-ಪಿದಾಯಿ ಎಂಬ ಜೂಜಾಟವನ್ನು ಆಡುತ್ತಿದ್ದ ವೇಳೆ ಖಚಿತ ಮಾಹಿತಿಯಂತೆ ಮುಲ್ಕಿ ಠಾಣಾ ಪಿ.ಎಸ್.ಐ.ರವರು ಸಿಬ್ಬಂದಿಗಳ ಜೊತೆ ನಡೆಸಿ ,ಆರೋಪಿತರು ಜೂಜಾಟಕ್ಕೆ ಬಳಸಿದ ನಗದು ಹಣ ರೂ 1,015/- , ಮೊಬ್ಯೆಲ್-3, ಇಸ್ಪೀಟು ಎಲೆಗಳು -52, ಮತ್ತು ನೆಲಕ್ಕೆ ಹಾಸಲು ಉಪಯೋಗಿಸಿದ ಹಳೆ ನ್ಯೂಸ್ ಪೇಪರ್ ಹಾಳೆಗಳು -2 ಇವುಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ ಮತ್ತು ಮುಲ್ಕಿ ಠಾಣಾ ಅ.ಕ್ರ 05/2013 ಕಲಂ: 87 ಕನರ್ಾಟಕ ಪೊಲೀಸ್ ಕಾಯ್ದೆ 1963 ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ

ಕಾವೂರು ಪೊಲೀಸ್ ಠಾಣೆ

  • ಫಿರ್ಯಾಧುದಾರರಾದ ಶ್ರೀಮತಿ ಮೀನಾಕ್ಷಿಯವರು ಈ ದಿನ ದಿನಾಂಕ 20-01-2013 ರಂದು ತನ್ನ ಮನೆಯಲ್ಲಿರುವಾಗ ಆರೋಪಿಗಳಾದ ಅಶೋಕ ಮತ್ತು ಹೇಮಂತ್ ರವರು ಫಿರ್ಯಾಧುದಾರರ ಮನೆಯ ಬಳಿ ಬಂದು ಫಿರ್ಯಾಧುದಾರರ ಗಂಡನಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ದೂಡಿ ಗಾಯಗೊಳಿಸಿ, ಹಲ್ಲೆ ಮಾಡಿದ್ದು, ಇದನ್ನು ಬಿಡಿಸಲು ಹೋದ ಫಿರ್ಯಾಧುದಾರರ ಕೈಯನ್ನು ಹಿಡಿದು ಎಳೆದು, ಕೆನ್ನೆಗೆ ಅಶೋಕನು ಹೊಡೆದು, ಮಾನಭಂಗಕ್ಕೆ ಪ್ರಯತ್ನಿಸಿ, ಫಿರ್ಯಾಧುದಾರರನ್ನು ಮತ್ತು ಅವರ ಮಗುವನ್ನು ದೂಡಿ ಹಲ್ಲೆ ನಡೆಸಿರುವುದಾಗಿದೆ ಎಂಬುದಾಗಿ ಮೀನಾಕ್ಷಿಯವರು ನೀಡಿದ ದೂರಿನಂತೆ ಕಾವೂರು ಪೊಲೀಸು ಠಾಣಾ ಅ.ಕ್ರ. ನಂ. 14/2013 ಕಲಂ: 323, 354, 504 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


No comments:

Post a Comment