Tuesday, January 22, 2013

Daily Crime Incidents for Jan 22, 2013


ಕಳವು ಪ್ರಕರಣ

ಮಂಗಳೂರು ದಕ್ಷಿಣ ಠಾಣೆ

  • ದಿನಾಂಕ 21-01-2013  ರಂದು ಅಪರಾದ ವಿಭಾಗದ ಪೊಲೀಸ್ ಉಪ ನಿರೀಕ್ಷಕರಾದ ಶಿವರುದ್ರಪ್ಪ ಮೇಟಿ ರವರು ಸಿಬ್ಬಂದಿಗಳೊಂದಿಗೆ ರಾತ್ರಿ ಗಸ್ತು ಕರ್ತವ್ಯದಲ್ಲಿರುವಾಗ ಬೆಳಿಗ್ಗೆ 4-15 ಗಂಟೆಗೆ ಬದ್ರಿಯಾ ಜಂಕ್ಷನ್ನಿಂದ ಅಜೀಜುದ್ದಿನ್ ರಸ್ತೆ ಕಡೆ ಬರುತ್ತಿರುವಾಗ ನಾರಾಯಣ ಹೊಟೆಲ್ ಎದುರುಗಡೆ ಎರಡು ಜನ ವ್ಯಕ್ತಿಗಳು ಗೋಣಿ ಚೀಲಗಳನ್ನು ಹೊತ್ತುಕೊಂಡು ಹೋಗುತ್ತಿದ್ದವರು ಇಲಾಖಾ ಜೀಪನ್ನು ಕಂಡು ಓಡಲು ಪ್ರಯತ್ನಿಸಿರುತ್ತಾರೆ. ನಂತರ ಸಿಬ್ಬಂದಿಗಳ ಸಹಾಯದಿಂದ ಅವರನ್ನು ಹಿಡಿದು, ವಿಚಾರಿಸಲಾಗಿ, ಮಂಗಳೂರು ಹಳೇ ತಾಲೂಕು ಕಛೇರಿಯಲ್ಲಿರುವ ಕೋಣೆಯೊಂದರಿಂದ ರಾಷ್ಟ್ರೀಯ ಚುನಾವಣಾ ಆಯೋಗಕ್ಕೆ ಸಂಬಂದಿಸಿದ ಚುಣಾವಣಾ ಪೆಟ್ಟಿಗೆಗಳನ್ನು, ಅಲ್ಲಿಯೇ ಗುಡಿಸುವ ಕೆಲಸದಲ್ಲಿರುವ ಪಾಂಡೇಶ್ವರ ವಾಸಿ ಗಣೇಶ ಎಂಬವರು ನೀಡಿರುತ್ತಾರೆ. ಇದನ್ನು ಗುಜರಿ ಅಂಗಡಿಗೆ ಮಾರಾಟ ಮಾಡಲು ಕೊಂಡೊಯ್ಯುತ್ತಿರುವುದಾಗಿ ತಿಳಿಸಿರುತ್ತಾರೆ ಮತ್ತು ಮಂಗಳೂರು ದಕ್ಷಿಣ ಠಾಣೆ ಅಕ್ರ 22/13 ಕಲಂ 41 (1), (ಎ), (ಡಿ), 102 ಸಿ.ಆರ್.ಪಿ.ಸಿ ಮತ್ತು ಕಲಂ 379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ

ಪಣಂಬೂರು ಠಾಣೆ

  • ಪಿರ್ಯಾದಿದಾರರಾದ ಹೆಚ್. ಕೆ. ಹಮ್ಮಬ್ಬ (55)ತಂದೆಃ ಕೋಜು ಬ್ಯಾರಿ, ವಾಸಃ ದಡಪಿರ್ ರೆಂಟಲ್ ಹೌಸ್,  ಡೋರ್ ನಂಬ್ರ 6/100ಬಿ ಟೆಲಿಫೋನ್ ಎಕ್ಸ್ಚೇಂಜ್ , 6ನೇಬ್ಲಾಕ್,ಕೃಷ್ಣಾಪುರ, ಸುರತ್ಕಲ್, ಹಾಲಿವಾಸಃ ಮೋಸ್ಕೂ ಬಳಿ, ಇಂದಿರಾ ನಗರ, ಹಳೆಯಂಗಡಿ ಮಂಗಳೂರು ತಾಲೂಕು ರವರು ದಿನಾಂಕ 20-01-2013 ರಂದು ಮದ್ಯಾಹ್ನ 12-00 ಗಂಟೆಗೆ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಅಡ್ಕ ಹಾಲ್ ನಲ್ಲಿ ನಡೆಯುವ ಅವರ ಅಕ್ಕನ ಮಗಳ ಮದುವೆ ಕಾರ್ಯಕ್ರಮಕ್ಕೆ ಸಂಬಂಧಿಕರೊಂದಿಗೆ ಹೋಗಿ ಹಾಲ್ನ ಬಳಿ ನಿಂತುಕೊಂಡಿದ್ದ ಸಮಯ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾ ಕಡೆಯಿಂದ ಬೈಕಂಪಾಡಿ ಜಂಕ್ಷನ್ ಕಡೆಗೆ ಕಾರು ನಂಬ್ರ ಕೆಎ-19ಎಂಸಿ-5124ನೇಯದನ್ನು ಅದರ ಚಾಲಕ  ಮಹಮ್ಮದ್ ಆಸಿಮ್ ಅತೀವೇಗ ಹಾಗೂ ಅಜಾಗರೂತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ರಸ್ತೆ ಬಲ ಬದಿ ನಿಂತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರ ಎಡಕಾಲಿಗೆ ಗುದ್ದಿದ ಗಾಯವಾಗಿ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ ಎಂಬುದಾಗಿ ಹೆಚ್. ಕೆ. ಹಮ್ಮಬ್ಬ ರವರು ನೀಡಿದ ದೂರಿನಂತೆ ಪಣಂಬೂರು ಠಾಣಾ ಅ.ಕ್ರ. 09/2013 ಕಲಂಃ 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಸಂಚಾರ ಪೂರ್ವ ಠಾಣೆ

  • ದಿನಾಂಕ: 20-01-2013 ರಂದು ಸಮಯ ಸುಮಾರು 20.30 ಗಂಟೆಗೆ ಮೊ,ಸೈಕಲ್ ನಂಬ್ರ ಏಂ-19 ಇಈ-0132 ನ್ನು ಅದರ ಸವಾರ ಲಾಯ್ಡ್ ವಿಲ್ಸನ್ ರಾಡ್ರಿಗಸ್ ಎಂಬವರು ಸವಾರರಾಗಿದ್ದುಕೊಂಡು ಅರೋನ್ಹ್ ಡಿಮೆಲ್ಲೊ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಕೆಪಿಟಿ ಜಂಕ್ಷನ್ ಕಡೆಯಿಂದ ಪದವು ಜಂಕ್ಷನ್ ಕಡೆಗೆ ಎನ್ಎಚ್-66 ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಸಪ್ತಗಿರಿ ಪೆಟ್ರೋಲ್ ಪಂಪ್ ಬಳಿ ತಲುಪುವಾಗ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದುದಾರರಾದ ಸುಬ್ರಹ್ಮಣ್ಯ ರವರಿಗೆ ಡಿಕಿಯುಂಟ್ಕು ಮಾಡಿದ ಪರಿಣಾಮ ಪಿರ್ಯಾದುದಾರರು ಮತ್ತು ಮೊ,ಸೈಕಲ್ ಸವಾರರು ಮೊ,ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದುದಾರರ ಮೂಗಿಗೆ, ಬಾಯಿಗೆ ಮತ್ತು ತಲೆಯ ಹಿಂಭಾಗಕ್ಕೆ  ತೀವೃ ಸ್ವರೂಪದ ಗಾಯ ಉಂಟಾಗಿ ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಹಾಗೂ ಮೊ,ಸೈಕಲ್ ಸವಾರ ಮತ್ತು ಸಹಸವಾರ ಗಾಯಗೊಂಡು ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಸುಬ್ರಹ್ಮಣ್ಯ (30)ತಂದೆ- ಪರಶಿವನ್ ವಾಸ- ಮಪ್ಮದಟ್ಟಿ ಅಮ್ಮನ್ ಹವಸ್, ಕೋಮಲ್ ಸ್ವೀಟ್ಸ್ ಬಳಿ, ಉರುಮಲಾಲ್ ಜಯನ್ ಅಂಚೆ, ತೆಂಕೇರಿ, ಚೆನೈ ತಮಿಳುನಾಡು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 15/2013 279 , 337, 338, ಐ.ಪಿ.ಸಿ.ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಮಗು ಕಾಣೆ

ಬಕರ್ೆ ಪೊಲೀಸ್ ಠಾಣೆ

  • ಪಿರ್ಯಾಧಿದಾರರಾದ ಅಂಬಾದಾಸ್(24)  ತಂದೆ: ಪಾಂಡುರಂಗ   ವಾಸ:223 ಜಿತಾನಿವಸ್ತಿ ಬಸರಗಿ ಜತ್ ತಾಲೂಕು ಸಾಂಗ್ಲಿ ಯವರ ಗಂಡು ಮಗು ಸುಮಾರು 15 ತಿಂಗಳ ಅಮೋಶ್ ದಿನಾಂಕ 20-01-2013 ರಂದು ಪಿರ್ಯಾದಿದಾರರ ವೇರ್ಹೌಸ್ ಬಳಿ ಇರುವ ಭಾಡಿಗೆ ಮನೆಯ ಅಂಗಳದಲ್ಲಿ ಆಡುತ್ತಿದ್ದು ಸಂಜೆ ಸುಮಾರು 06-00ಗಂಟೆಗೆ ಪಿರ್ಯಾದಿದಾರರ ಹೆಂಡತಿ ಬಂದು ನೋಡಿದಾಗ ಮಗು ಕಾಣೆಯಾಗಿರುತ್ತದೆ. ಮಗುವಿನ ಬಗ್ಗೆ ಅಕ್ಕಪಕ್ಕದಲ್ಲಿ ವಿಚಾರಿಸಿದ್ದು ಮತ್ತು ಸುತ್ತಮುತ್ತ ಹುಡುಕಾಡಿದರೂ ಮಗು ಪತ್ತೆಯಾಗಿರುವುದಿಲ್ಲ ಯಾರಾದರೂ ್ನ ಸಂಬಂಧಿಕರು ಕೊಂಡು ಹೋಗಿರಬಹುದು ಎಂದು ಭಾವಿಸಿ ಅಲ್ಲಿ ಇಲ್ಲಿ ವಿಚಾರಿಸಿ ದೂರು ನೀಡಲು ತಡವಾಗಿರುತ್ತದೆ. ಕಾಣೆಯಾದ ಮಗುವನ್ನು ಪತ್ತೆಮಾಡಿಕೊಡಬೇಕಾಗಿ ಎಂಬುದಾಗಿ ಅಂಬಾದಾಸ್ ರವರು ನೀಡಿದ ದೂರಿನಂತೆ ಬಕರ್ೆ ಪೊಲೀಸ್ ಠಾಣೆ ಅ.ಕ್ರ 5/2013 ಕಲಂ ಮಗು ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಕಳವು ಪ್ರಕರಣ

ಮಂಗಳೂರು ಪೂರ್ವ ಪೊಲೀಸ್ ಠಾಣೆ

  • ದಿನಾಂಕ 28-12-2012 ರಂದು 06-15  ಗಂಟೆಯಿಂದ ದಿನಾಂಕ 20-01-2013 ರಂದು 20-40 ಗಂಟೆಯ ಮದ್ಯೆ ಯಾರೋ ಕಳ್ಳರು ಮಂಗಳೂರು ನಗರದ ಕದ್ರಿ ಕಂಬಳ ಚಂದ್ರಿಕಾ ಬಡಾವಣೆಯಲ್ಲಿರುವ ಪಿರ್ಯಾದಿದಾರರಾದ ಅರವಿಂದ ಪಿ.ಜಿ(48), ತಂದೆ: ಪಿ. ಗೋಪಾಲನ್, ವಾಸ:  ಡೋರ್ ನಂಬ್ರ 3 ಡಬ್ಲ್ಯೂ-33-2945/2, ಆದಿತ್ಯ ಕಿರಣ್, ಚಂದ್ರಿಕಾ ಎಕ್ಸ್ಟೆನ್ಶನ್, ಕದ್ರಿ ಕಂಬ್ಳ, ಮಂಗಳೂರುರವರ ಬಾಬ್ತು ಆದಿತ್ಯ ಕಿರಣ್ ಎಂಬ ಹೆಸರಿನ ಡೋರ್ ನಂ. 3ಘ-33-2945/2, ಮನೆಯ ವೆಂಟಿಲೇಟರ್ನ ಸರಳುಗಳನ್ನು  ತುಂಡರಿಸಿ ಒಳ ಪ್ರವೇಶಿಸಿ ವಿವಿಧ ನಮೂನೆಯ 120 ಗ್ರಾಂ ಚಿನ್ನಾಭರಣ, ಲ್ಯಾಪ್ಟಾಪ್-2, ಸೋನಿ ಹ್ಯಾಂಡಿ ಕ್ಯಾಮರಾ-1, ಸೋನಿ ಕ್ಯಾಮರಾ-1, ಐ.ಪ್ಯಾಡ್-1, ಹಾಗೂ ಇತರ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸೊತ್ತಿನ ಒಟ್ಟು ಅಂದಾಜು ಮೌಲ್ಯ ರೂ 7,31,000/-ರೂ ಆಗಬಹುದು ಎಂಬುದಾಗಿ ಅರವಿಂದ ಪಿ.ಜಿ ಯವರು ನೀಡಿದ ದೂರಿನಂತೆ ಮಂ.ಪೂರ್ವ ಪೊಲೀಸ್ ಠಾಣೆ ಅಕ್ರ : 06/2013,  ಖಜಛಿ 454, 457, 380 ಕಅ ್ರ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಕೊಲೆ ಪ್ರಕರಣ 

ಪಣಂಬೂರು ಠಾಣೆ

  • ಪಿರ್ಯಾದಿದಾರರಾದ ಭಾರತಿ ಜಿ ಪಿ.ಎಸ್‌ಐ ಪಣಂಬೂರು ರವರು ದಿನಾಂಕಃ 20-01-13 ರಂದು ರಾತ್ರಿ 11-00 ಗಂಟೆಗೆ ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ರೌಂಡ್ಸ್ ಬಗ್ಗೆ ಇಲಾಖಾ ವಾಹನದಲ್ಲಿ ಪಿಸಿ-2160ನೇ ಚಂದ್ರಹಾಸ ರವರೊಂದಿಗೆ ಹೊರಟು ಠಾಣಾ ಸರಹದ್ದಿನಲ್ಲಿ ಪದೇ ಪದೇ ರೌಂಡ್ಸ್ ಕರ್ತವ್ಯ ಮಾಡಿ ದಿನಾಂಕಃ 21-01-13 ರಂದು ಬೆಳಗ್ಗಿನ ಜಾವ ಸಮಯ ಸುಮಾರು 03-00 ಗಂಟೆಗೆ ಎನ್.ಎಂ.ಪಿ.ಟಿ.ಆರ್ ಸಿ ಹೆಚ್ ಡಬ್ಲ್ಯೂ ವಸತಿ ಗೃಹದ ಎದುರು ಇಂಡಸ್ಟ್ರಿಯಲ್ ಏರಿಯಾದ ಕಡೆಗೆ ಹೋಗುವ ರಸ್ತೆಯಲ್ಲಿ ಹೋಗುತ್ತಿರುವಾಗ ರಸ್ತೆಯ ಬದಿ ಓರ್ವ ಅಪರಿಚಿತ ಗಂಡಸಿನ ದೇಹದ ಮೇಲೆ ದೊಡ್ಡ ಕಲ್ಲು ಹಾಕಿದ್ದು ಶರೀರ ರಕ್ತ ಸಿಕ್ತವಾಗಿ ಬಿದ್ದುಕೊಂಡಿರುವುದು ಕಂಡು ಬಂದಿದ್ದು ಸದ್ರಿ ಮೃತದೇಹದ ಪಕ್ಕದಲ್ಲಿ ದೊರೆತ ಬಿಪಿಸಿಎಲ್ ಪಡಿತರ ಚೀಟಿಯಲ್ಲಿ ಆತನ ಹೆಸರು ಮಂಜುನಾಥ ವಿಷ್ಣು ಮಡಿವಾಳ, 43 ವರ್ಷ, ಯಶವಂತ ಕಾಲೊನಿ, ಮಡಿವಾಳ ಕೇರಿ, ಬಗ್ಗೋಣ ತಲಬಾಗ ಅಂಚೆ ಕುಮಟಾ ಉತ್ತರ ಕನ್ನಡ ಎಂಬುದಾಗಿ ಇದ್ದು, ಸದ್ರಿ ವ್ಯಕ್ತಿಯನ್ನು ಯಾರೋ ದುಷ್ಕರ್ಮಿಗಳು ಆತನಲ್ಲಿದ್ದ ಹಣ ಅಥವಾ ಬೆಲೆಬಾಳುವ ಸೊತ್ತನ್ನು ದೋಚುವ ಉದ್ದೇಶದಿಂದ ಅಥವಾ ಬೇರಾವುದೋ ಕಾರಣದಿಂದ ಆತನಿಗೆ ಹಲ್ಲೆ ನಡೆಸಿ ಆತನ ದೇಹದ ಮೇಲೆ ಕಲ್ಲು ಹೊತ್ತು ಹಾಕಿ ಕೊಲೆ ಮಾಡಿ ಪರಾರಿಯಾಗಿರುವುದಾಗಿದೆ ಅಂತೆಯೇ ಪಣಂಬೂರು ಠಾಣಾ ªÉÆ.£ÀA.10/2013  PÀ®AB 302 L¦¹ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


ಗಂಡಸು ಕಾಣೆ ಪ್ರಕರಣ 

ಪಣಂಬೂರು ಠಾಣೆ 


  • ಪಿರ್ಯಾದಿದಾರರಾದ ಶಂಕರ ಮಹಾದೇವ (65) ವಾಸ: ಅಂಕಾಳಿ ಕೋಟು ಚಿಕ್ಕೋಡಿ ಬೆಳಗಾಂ ರವರ  ತಮ್ಮ ಶ್ರೀ ಶಂಭಾಜಿ ಮಹದೇವ ಬುರುಡ ಎಂಬವರು ಕೆ.ಎ.23.5129ನೇ ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸದಲ್ಲಿದ್ದವರು ದಿನಾಂಕ 08-01-2013ರಂದು ಬಾಂಬೆಯಿಂದ ಕಬ್ಬಿಣದ ಪೈಪುಗಳನ್ನು ಲೋಡ್ ಮಾಡಿಕೊಂಡು ಬಂದು ಪಣಂಬೂರು ಬಂದರು ಪ್ರದೇಶಕ್ಕೆ ತಲುಪಿ,ಎನ್.ಎಮ್.ಪಿ.ಟಿ ಮುಖ್ಯದ್ವಾರದ ಬಳಿ ಸದ್ರಿ ಲಾರಿಯ ಚಾಲಕ ಮಹಮ್ಮದ್ ಶರೀಫ್ ಎಂಬವರು ಲಾರಿಯನ್ನು ಪಾರ್ಕ್ ಮಾಡಿದ ಸಮಯ ಸಂಜೆ 4-30 ಗಂಟೆಗೆ ಲಾರಿಯಿಂದ ಇಳಿದು ಹೋದವರು ವಾಪಾಸು ಬರದೆ ಕಾಣೆಯಾಗಿದ್ದು ,ಲಾರಿ ಚಾಲಕರು ಪಿರ್ಯಾದಿದಾರರಿಗೆ ಈ ಬಗ್ಗೆ ಫೋನ್ ಮುಖೇನಾ ಮಾಹಿತಿ ನೀಡಿದ್ದು ಪಿರ್ಯಾದಿದಾರರು ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗದೇ ಇರುವುದರಿಂದ ಪತ್ತೆ ಮಾಡಿ ಕೊಡುವರೇ ವಿಳಂಭವಾಗಿ ನೀಡಿದ ಪಿರ್ಯಾದಿಯ ಸಾರಾಂಶವಾಗಿದೆ ಎಂಬುದಾಗಿ ಶಂಕರ ಮಹಾದೇವ ರವರು ನೀಡಿದ ದೂರಿನಂತೆ ಪಣಂಬೂರು ಠಾಣಾ ಮೊ.ನಂ. 11/2013 ಗಂಡಸು ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಕಾಣೆಯಾದವರ ಚಹರೆ ಗುರುತು.:
ವಯಸ್ಸು : 50 ವರ್ಷ
ವೃತ್ತಿ :ಬುಟ್ಟಿ ನೇಯುವುದು ಮತ್ತು ಲಾರಿ ಕ್ಲೀನರ್
ಎತ್ತರ: 5ಅಡಿ 5 ಇಂಚು
ಮೈಬಣ್ಣ :ಎಣ್ಣೆ ಕಪ್ಪು
ಮುಖ : ಗುಂಡು ಮುಖ ಸಾದಾರಣ ಮೈಕಟ್ಟು

ಅಸ್ವಾಭಾವಿಕ ಮರಣ ಪ್ರಕರಣ 

ಕಾವೂರು ಪೊಲೀಸ್ ಠಾಣೆ


  • ದಿನಾಂಕ 21-01-2013 ರಂದು ಬೆಳಿಗ್ಗೆ 5-00 ಗಂಟೆಗೆ ಪಿರ್ಯದಿದಾರರಾದ ಪ್ರಶಾಂತ್ ರವರ ತಾಯಿ ಪಿರ್ಯದಿದಾರರಿಗೆ ದೂರವಾಣಿ ಕರೆ ಮಾಡಿ ತಂದೆಯವರಾದ ಸದಾಶಿವರವರು ರಾತ್ರಿ ಮದ್ದು ಕುಡಿಸಿ ಮಲಗಿದ ನಂತರ ಬೆಳಿಗ್ಗೆ ಎದ್ದು ನೋಡಿದಾಗ ಪಕ್ಕದ ಮನೆಯ ಜೋನಿ ಎಂಬವರ ತೆಂಗಿನ ಮರದ ಗರಿಗೆ ಲುಂಗಿಯಿಂದ ಕುತ್ತಿಗೆಗೆ ಬಿಗಿದು ಆತ್ಮಹತ್ಯೆಮಾಡಿಕೊಂಡಿರುವ ವಿಷಯ ತಿಳಿಸಿದ್ದು, ಸುಮಾರು 2 ವರ್ಷದಿಂದ ಟಿ.ಬಿ ಖಾಯಿಲೆಯಿಂದ ನರಳುತ್ತಿದ್ದು, ಕಳೆದ 3 ದಿನಗಳಿಂದ  ಕಫಾ ಖಾಯಿಲೆ ಯಿಂದ ಉಸಿರಾಟದ ತೊಂದರೆಯಾಗುತ್ತಿದ್ದು, ಜೊತೆಗೆ ಮದ್ಯಪಾನದ ಚಟವು ಇದ್ದು, ಆರೋಗ್ಯ ಸರಿ ಇಲ್ಲದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿರುವುದಾಗಿದೆ ಎಂಬುದಾಗಿ ಪ್ರಶಾಂತ್ (30 ವರ್ಷ), ತಂದೆ: ಸದಾಶಿವ, ವಾಸ: ಸರ್ಕಾರಿಗುಡ್ಡೆ, ಬೊಲ್ಪುಗುಡ್ಡೆ, ಮಂಗಳೂರು ರವರು ನೀಡಿದ ದೂರಿನಂತೆ ಕಾವೂರ್ ಠಾಣಾ ಯು.ಡಿ.ಆರ್ ನಂ. 03/2013 ಕಲಂ 174 ಸಿ.ಆರ್   ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



  • ದಿನಾಂಕ 21-01-2013 ರಂದು ಫಿರ್ಯಾಧುದಾರರಾದ ಶರಣಪ್ಪ (20) ತಂದೆ: ನಿಂಗಪ್ಪ, ವಾಸ: ಗಜೇಂದ್ರಗಡ, ಕೊಡಗನ್ನೂರು ಹಳ್ಳಿ, ರೋಣ ತಾಲೂಕು, ಗದಗ ಜಿಲ್ಲೆ. ಹಾಲಿ ವಾಸ: ಕೇರಾಫ್ ಸುರೇಶ್, ಕೊಂಚಾಡಿ, ದೇರೆಬೈಲ್, ಮಂಗಳೂರು ರವರು ಸಂಜೆ 4-00 ಗಂಟೆಗೆ ಕೊಂಚಾಡಿಯಿಂದ ಮಾಲೆಮಾರ್ ಕಡೆಗೆ ಹೋಗುತ್ತಿದ್ದಾಗ, ಮಾಲೆಮಾರ್ ರಸ್ತೆಯಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಕಟ್ಟಡದ ಬಳಿ ಫಿರ್ಯಾಧುದಾರರ ಜೊತೆ ಎರಡು ದಿವಸ ಕೂಲಿ ಕೆಲಸ ಮಾಡಿಕೊಂಡಿದ್ದ ಶಿವಪ್ಪ ಎಂಬವರು ಬಿದ್ದಿರುವುದನ್ನು ನೋಡಿ ಅವರ ಬಳಿ ಹೋಗಿ ನೋಡಿದಾಗ ಅವರು ಮೃತಪಟ್ಟಿದ್ದು, ಅವರು ವಿಪರೀತ ಕುಡಿತದ ಚಟ ಹೊಂದಿರುವವರಾಗಿದ್ದು, ವಿಪರೀತ ಕುಡಿದು ರಸ್ತೆಯ ಬದಿಯಲ್ಲಿ ಮಲಗಿದ್ದವರು ಗಂಟಲು ಒಣಗಿ, ಹೃದಯಾಘಾತದಿಂದ ಅಥವಾ ಅವರಿಗಿದ್ದ ಇನ್ಯಾವುದೋ ಖಾಯಿಲೆಯಿಂದ ಮೃತಪಟ್ಟಿರಬಹುದು ಎಂಬುದಾಗಿ ಶರಣಪ್ಪ ರವರು ನೀಡಿದ ದೂರಿನಂತೆ ಕಾವೂರ್ ಠಾಣಾ ಯು.ಡಿ.ಆರ್ ನಂ. 04/2013 ಕಲಂ 174 ಸಿ.ಆರ್   ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


No comments:

Post a Comment