Sunday, January 27, 2013

Daily Crime Incidents for Jan 27, 2013

ಕಳವು ಪ್ರಕರಣ 

ಕಾವೂರ್  ಪೊಲೀಸ್ ಠಾಣೆ

  • ಫಿರ್ಯಾಧುದಾರರಾದ ಶ್ರೀ ರಾಮಚಂದ್ರ ಭಟ್.ಎನ್. ರವರ ಬಾಬ್ತು ಕೆ.ಎ.-19-ಎಂ.ಡಿ-0110 ಮರುತಿ ರಿಟ್ಜ್ ವಿ.ಡಿ.ಐ. ಕಾರನ್ನು ಅವರ ಮನೆಯ ಕಂಪೌಂಡ್ ಒಳಗೆ ದಿನಾಂಕ 25-01-2013 ರಂದು ರಾತ್ರಿ 11-30 ಗಂಟೆಗೆ ಪಾರ್ಕ್ ಮಾಡಿದ್ದು, ಈ ದಿನ ದಿನಾಂಕ 26-01-2013 ರಂದು ಬೆಳಿಗ್ಗೆ 06-00 ಯ ಮಧ್ಯೆ ಯಾರೋ ಕಳ್ಳರು ಸದ್ರಿ ಕಾರಿನ ಎದುರು ಭಾಗದ ಎಡ ಬದಿಯ ಒಂದು ಚಕ್ರ ಹಾಗೂ ಹಿಂಬದಿಯ ಒಂದು ಚಕ್ರವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಎರಡು ಚಕ್ರಗಳ ಅಂದಾಜು ಮೌಲ್ಯ ರೂ. 15,000 ಆಗಬಹುದು ಎಂಬುದಾಗಿ  ರಾಮಚಂದ್ರ ಭಟ್.ಎನ್. ರವರು ನೀಡಿದ ದೂರಿನಂತೆ  PÁªÀÇgÀÄ ¥ÉưøÀÄ oÁuÁ C.PÀæ. £ÀA. 21/2013 PÀ®A: 379 L¦¹ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಅಪಘಾತ ಪ್ರಕರಣ

ಬಜಪೆ ಠಾಣೆ

  • ದಿನಾಂಕ  25.01.2013  ರಂದು ಮದ್ಯಾಹ್ನ  2.30 ಗಂಟೆ ಸಮಯಕ್ಕೆ ಆರೋಪಿ ಬಾಲಕೃಷ್ಣ  ಇವರು ಈಚರ್ ಟೆಂಪೋ ಕೆಎ 27 ಎ 4204ನೇದನ್ನು ಮುಲ್ಕಿ ಕಡೆಯಿಂದ  ಪಡುಬಿದ್ರಿ ಕಡೆಗೆ  ಅತೀ ವೇಗ  ಹಾಗೂ ಅಜಾಗರೂಕತೆಯಿಂದ  ರಸ್ತೆಯ  ತೀರಾ ಬಲಬದಿಗೆ  ಚಲಾಯಿಸುತ್ತಾ ಬಂದು  ಬಪ್ಪನಾಡು ಬಸ್ಸು ನಿಲ್ದಾಣದ ಬಳಿ ತಲುಪುವಾಗ್ಗೆ  ಪಡುಬಿದ್ರಿ ಕಡೆಯಿಂದ  ಪಿರ್ಯಾದಿ ಅರುಣ್  ಪಿ.ಬಿ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ  ಮೋಟಾರ್ ಸೈಕಲ್  ಕೆಎ 20 ಕೆ 4449ನೇದಕ್ಕೆ ಢಿಕ್ಕಿ ಮಾಡಿದ  ಪರಿಣಾಮ  ಮೋಟಾರ್ ಸೈಕಲ್  ಸವಾರನು ಮೋಟಾರ್ ಸೈಕಲ್  ಸಮೇತ  ರಸ್ತೆಗೆ  ಬಿದ್ದು ಬಲಕೈ ತಟ್ಟಿಗೆ   ಬಲಕಾಲಿನ  ಪಾದಕ್ಕೆ  ಮತ್ತು ಮೊಣಗಂಟಿಗೆ  ಗುದ್ದಿದ   ಗಾಯ ಹಾಗೂ ತಲೆಗೆ  ಕಿವಿಯ ಬಳಿ ರಕ್ತಗಾಯವಾಗಿರುವುದಾಗಿದೆ. ಗಾಯಾಳು ಚಿಕಿತ್ಸೆ ಬಗ್ಗೆ  ಎ.ಜೆ  ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ ಎಂಬುದಾಗಿ ಅರುಣ್  ಪಿ.ಬಿ ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ. 7/2013 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಕೊಣಾಜೆ ಠಾಣೆ

  • ಫಿರ್ಯಾದಿದಾರರಾದ ಖಲೀಲ್‌ ರೆಹೆಮಾನ್‌ (18) ತಂದೆ: ಇಸ್ಮಾಯಿಲ್‌,  ವಾಸ: ಖಂಡಿಲಮನೆ ಮಲಾರ್‌ ಹರೇಕಳ ಗ್ರಾಮ ಮಂಗಳೂರು ರವರು ತಮ್ಮ ಸ್ನೇಹಿತ ಹ್ಯಾರಿಸ್‌ ಎಂಬವರೊಂದಿಗೆ ಮೋಟಾರ್‌ ಸೈಕಲ್‌ ನಂಬ್ರ ಕೆಎ-19ಇಡಿ-1844 ನೇದರಲ್ಲಿ ಸಹ ಸವಾರನಾಗಿ ಕುಳಿತುಕೊಂಡು ತನ್ನ ಮನೆಯಿಂದ ಕೊಣಾಜೆ ಕಡೆಗೆ ಬರುತ್ತಿರುವಾಗ  ಈ ದಿನ ದಿನಾಂಕ 26.01.2013 ರಂದು ಬೆಳಿಗ್ಗೆ 10:30 ಗಂಟೆಗೆ ಮಂಗಳೂರು ತಾಲೂಕು ಕೊಣಾಜೆ ಗ್ರಾಮದ ಸಣ್ಣ ಮದಕ ಎಂಬಲ್ಲಿ ತಲುಪುತ್ತಿದ್ದಂತೆಯೇ ಆರೋಪಿ ಮೋಟಾರ್‌ ಸೈಕಲ್‌ ಸವಾರನು ಮೋಟಾರ್‌ ಸೈಕಲನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಮೋಟಾರ್‌ ಸೈಕಲ್‌ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಫಿರ್ಯಾದಿದಾರರ ತಲೆಯ ಹಿಂಬಾಗಕ್ಕೆ ತೀವ್ರ ಗಾಯ, ಬೆನ್ನಿಗೆ ಗುದ್ದಿದ ಗಾಯವಾಗಿದ್ದು, ಆರೋಪಿ ಹ್ಯಾರಿಸ್‌ನ ಕಿವಿಗೆ ಗಾಯವಾಗಿರುತ್ತದೆ. ಗಾಯಾಳು ಫಿರ್ಯಾದಿದಾರರು ದೇರಳಕಟ್ಟೆ ಯೆನೆಪೋಯಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಮತ್ತು ಆರೋಪಿ ಹ್ಯಾರಿಸನು ಮಂಗಳೂರು ಹೈಲ್ಯಾಂಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ಖಲೀಲ್‌ ರೆಹೆಮಾನ್‌ ರವರು ನೀಡಿದ ದೂರಿನಂತೆ ಕೊಣಾಜೆ ಠಾಣಾ ಅ.ಕ್ರ. 12/2013 ಕಲಂ: 2179, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಗಂಡಸು ಕಾಣೆ ಪ್ರಕರಣ

ಮಂಗಳೂರು ಉತ್ತರ ಪೊಲೀಸ್ ಠಾಣೆ

  • ಫಿಯರ್ಾದಿದಾರರಾದ ನಿತಿನ್ ಮೋಹನ್ . ಗಣೇಶ್ ಹೊಳ್ಳ ಪ್ರಾಯ 39 ವರ್ಷ ತಂದೆ: ಚಂದ್ರ ಶೇಖರ್ ಹೊಳ್ಳ ಗೊಲ್ಲರ ಕೇರಿ, ಮಂಗಳೂರು ರವರ ಅಣ್ಣ ಪ್ರಭಾಕರ ಹೊಳ್ಳ ಮದುವೆಯಾಗದೇ ಇದ್ದು, ಸುಮಾರು 15 ವರ್ಷಗಳಿಂದ ಮಂಗಳೂರು ಹಂಪನಕಟ್ಟೆಯಲ್ಲಿರುವ ತಾಜ್ ಮಹಲ್ ಹೊಟೇಲ್ ನಲ್ಲಿ ವೇಟರ್ ಆಗಿ ಕೆಲಸ ಮಾಡಿಕೊಂಡಿದ್ದು, ಹೀಗಿರುತ್ತ ಸುಮಾರು 13 ವರ್ಷದ ಹಿಂದೆ ಒಂದು ದಿನ ಮನೆಯಿಂದ ತಾಜ್ಮಹಲ್ ಹೋಟೇಲ್ಗೆ ಕೆಲಸಕ್ಕೆ ಹೋದವರು ಮರಳಿ ಮನೆಗೆ ಬಾರದೇ ಕಾಣೆಯಾಗಿದ್ದು, ಈ ಬಗ್ಗೆ ತಾಜ್ಮಹಲ್ ಹೋಟೇಲ್ಗೆ ಹೋಗಿ ವಿಚಾರಿಸಿದ್ದಲ್ಲಿ ಪ್ರಭಾಕರ ಹೊಳ್ಳ ರವರು ಸಂಬಳದ ಬಾಬ್ತು ಹಣವನ್ನು ಪಡೆದುಕೊಂಡು ಬೇರೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋಗಿರುವುದಾಗಿ, ನಂತರ ಬೆಂಗಳೂರಿನ ಮೆಜೆಸ್ಟಿಕ್ ಕಡೆ ಇರುವುದಾಗಿ ಬಂದ ಮಾಹಿತಿಯಂತೆ, ಬೆಂಗಳೂರು ಕಡೆ ಹುಡುಕಾಡಿದಾಗ ಈ ತನಕ ಪತ್ತೆಯಾಗಿರುವುದಿಲ್ಲವಾಗಿ, ಪ್ರಸ್ತುತ ಪಿರ್ಯಾದಿದಾರರ ಅಣ್ಣ ಪ್ರಭಾಕರ ಹೊಳ್ಳ ರವರು ಮಂಗಳೂರು ಹಂಪನಕಟ್ಟಾ ತಾಜ್ಮಹಲ್ ಹೋಟೇಲ್ನಲ್ಲಿ ಕೆಲಸಕ್ಕಿದ್ದ ಸಮಯ ಮಾಡಿದ 2 ಎಲ್ಐಸಿ ಪಾಲಿಸಿಗಳು ಮೆಚ್ಯೂರಿಟಿ ಆಗಿದ್ದು, ಅದನ್ನು ಪಡೆಯಲು ಕಾಣೆಯಾದ ಪಿರ್ಯಾದಿದಾರರ ಅಣ್ಣ ಪ್ರಭಾಕರ ಹೊಳ್ಳ ರವರ ಅವಶ್ಯಕತೆ ಇದ್ದು, ಕಾಣೆಯಾದ ಪ್ರಭಾಕರ ಹೊಳ್ಳ ರವರನ್ನು ಪತ್ತೆ ಮಾಡಿಕೊಡುವಂತೆ ನಿತಿನ್ ಮೋಹನ್ . ಗಣೇಶ್ ಹೊಳ್ಳ  ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಪೊಲೀಸ್ ಠಾಣಾ ಅ.ಕ್ರ 16-2013 ಕಲಂ ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

ಬಕರ್ೆ ಪೊಲೀಸ್ ಠಾಣೆ

  • ಪಿರ್ಯಾದಿದಾರರಾದ ವಿಶ್ವನಾಥ(60) ತಂದೆ: ದಿ| ಏಕನಾಥ ವಾಸ:ಕೊಡೆಕ್ಕಲ್ ಶಿವನಗರ ಪಡೀಲ್ ಮಂಗಳೂರು ರವರ ಮಗಳಾದ ಶ್ರೀಮತಿ ಬಬಿತಾ (25) ರವರು ದಿನಾಂಕ 26-01-2013 ರಂದು ಬೆಳಿಗ್ಗೆ 09-00ಗಂಟೆಗೆ ಬೋಳೂರಿನ ಮನೆಯಲ್ಲಿತಾನು ತಂದಿದ್ದ ವಿಷ ಪದಾರ್ಥವನ್ನು ಸೇವಿಸಿದ್ದು ಆ ಕೂಡಲೇ ಅವಳ ಗಂಡ ಕಿಶೋರ್ರವರು ಅವಳನ್ನು ಎಸ್ಸಿಎಸ್ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿದ್ದು ಸಂಜೆ 18-00ಗಂಟೆಗೆ ಶ್ರೀಮತಿ ಬಬಿತಾಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾಳೆ.    ಶ್ರೀಮತಿ ಬಬಿತಾಳು ಮದುವೆಯಾಗಿ 1ವರ್ಷ2 ತಿಂಗಳಾಗಿದ್ದು ಗಂಡ ಹೆಂಡತಿ ಅನ್ಯೋನತೆಯಿಂದಿದ್ದು ಬಬಿತಾಳು ತುಂಬಾ ಹಟ ಸ್ವಭಾವದಳಾಗಿದ್ದು ತನ್ನ ಗಂಡ ಯಾವಾಗಳಾದರೊಮ್ಮೆ ಕುಡಿದು ಬರುತ್ತಿದ್ದ ವಿಚಾರದಲ್ಲಿ ಮನನೊಂದು ಸ್ವಇಚ್ಚೆಯಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ ಹೊರತು ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ ಎಂಬುದಾಗಿ ವಿಶ್ವನಾಥ ರವರು ನೀಡಿದ ದೂರಿನಂತೆ ಬಕರ್ೆ ಪೊಲೀಸ್ ಠಾಣೆ ಯುಡಿಆರ್ ನಂ.1/2013ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ 

No comments:

Post a Comment