Thursday, January 24, 2013

Daily crime Incidents for Jan 24, 2013


ಕಳ್ಳತನ ಪ್ರಕರಣ:

ಮಂಗಳೂರು ಉತ್ತರ ಠಾಣೆ;


  • ದಿನಾಂಕ 22-01-2013 ರಂದು 18.25 ಗಂಟೆಗೆ ಫಿಯರ್ಾದಿದಾರರು ಮತ್ತು ಸಿಬ್ಬಂದಿಯವರು ಮಂಗಳೂರು ನಗರದ ಕೊಡಿಯಾಲ್ ಬೈಲ್ ಫೋಸ್ಟ್ ಆಫೀಸ್ ಕಛೇರಿಯನ್ನು ಬಂದು ಮಾಡಿ ಹೋಗಿದ್ದು ಈ ದಿನ ಬೆಳಗ್ಗೆ 07.15 ಗಂಟೆಗೆ ಎದುರಿನ ಬಾಗಿಲು ತೆರೆದು ಒಳಗೆ ಹೋದಾಗ ಕಛೇರಿಯ ಒಳಗಡೆ ಇದ್ದ ಕಡತಗಳು ಚೆಲ್ಲಾಪಿಲ್ಲಿಯಾಗಿದ್ದು, ಹಿಂಬದಿ ಬಾಗಿಲು ತೆರೆದಿದ್ದು ಟ್ರಜರಿ ಕೌಂಟರಿನ ಮೇಜಿನ ಡ್ರಾವರ್ಗಳು ತೆರೆದು ದಾಖಲಾತಿಗಳು ಚೆಲ್ಲಾಪಿಲ್ಲಿ ಆಗಿತ್ತು ನೋಡಲಾಗಿ ನಿನ್ನೆ ರಾತ್ರಿ ಸಮಯ ಯಾರೋ ಕಳ್ಳರು ಫೋಸ್ಟ್ ಆಫೀಸಿನ ಹಿಂಬದಿ ಬಾಗಿಲಿನ ಶೆಟರಿಗೆ ಹಾಕಿದ ಬೀಗ ಮುರಿದು ಕಛೇರಿಯ ಒಳ ಪ್ರವೇಶಿಸಿ ಕಳವು ಮಾಡಲು ಪ್ರಯತ್ನಿಸಿರುವುದಾಗಿದೆ.  ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಎಂಬುದಾಗಿ ಶಕುಂತಳಸಬ್ ಪೋಸ್ಟ್ ಮಾಸ್ಟರ್ , ಕೊಡಿಯಾಲ ಬೈಲ್ ಪೋಸ್ಟ್ ಆಫೀಸ್ ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಠಾಣೆ ಅಪರಾದ ಕ್ರಮಾಂಕ 13/2013, ಕಲಂ 457, 380,511  ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 



ಅಪಘಾತ ಪ್ರಕರಣ:

ಸಂಚಾರ ಪೂರ್ವ ಠಾಣೆ;


  •  ದಿನಾಂಕ: 23-01-2013 ರಂದು ಸಮಯ ಸುಮಾರು 12.45 ಗಂಟೆಗೆ ಕಾರು ನಂಬ್ರ ಏಂ-19 ಒಃ- 1015 ನ್ನು ಅದರ ಚಾಲಕ ಮೊಹಮ್ಮದ್ ಅನ್ಸಾರ್ ಎಂಬವರು   ಎ ಬಿ ಶೆಟ್ಟಿ ವೃತ್ತದ ಕಡೆಯಿಂದ ಪಾಂಡೇಶ್ವರ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಪಾಂಡೇಶ್ವರದ ಕಾಪರ್ೊರೇಷನ್ ಬ್ಯಾಂಕ್ ಎದುರು ಕಾರಿನ ಮುಂದಿನಿಂದ ಪಿರ್ಯಾದುದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರ್ ನಂಬ್ರ ಏಂ-19 ಇಈ-3572 ಕ್ಕೆೆ ಡಿಕ್ಕಿಯುಂಟು ಮಾಡಿದ ಪರಿಣಾಮ ಪಿರ್ಯಾದುದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದುದಾರರ ತಲೆಗೆ ರಕ್ತಗಾಯವಾಗಿ ಎಡಭುಜಕ್ಕೆ ಗಂಭೀರ ಸ್ವರೂಪದ ಗಾಯ ಉಂಟಾಗಿ ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಸಂಕಪ್ಪ ಶೆಟ್ಟಿ(58) ತಂದೆ- ಪಿ. ತನಿಯಪ್ಪ ಶೆಟ್ಟಿ, ಸತ್ಕರ್ಮ, ಪದ್ಮಶ್ರೀ ಹೋಟೆಲ್ ಹಿಂದುಗಡೆ, 1 ನೇ ಕ್ರಾಸ್, ಪಂಪ್ವೆಲ್, ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 16/2013 279 ,  338, ಐ.ಪಿ.ಸಿ.ಕಾಯ್ದೆ  ರಂತೆ ಪ್ರಕರನ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


ಮರಣ ಪ್ರಕರಣ:

ದಕ್ಷಿಣ ಠಾಣೆ;


  • ದಿನಾಂಕ 22-01-13 ರಂದು ಫಿರ್ಯಾದುದಾರರು ವೆನ್ಲಾಕ್ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿರುವಾಗ ಬೆಳಿಗ್ಗೆ ಸುಮಾರು 11-30 ಗಂಟೆಗೆ ಪ್ರಾಯ ಸುಮಾರು 45-50 ವರ್ಷದ ಅಪರಿಚಿತ ಗಂಡಸು ಯಾವುದೋ ಕಾಯಿಲೆಯಿಂದ ನರಳುತ್ತಿದ್ದ ಸ್ಥಿತಿಯಲ್ಲಿ ಮಲಗಿದ್ದವರನ್ನು ಆಸ್ಪತ್ರೆಯ ನೌಕರರ ಸಹಾಯದಿಂದ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಿಸಿರುತ್ತಾರೆ. ನಂತರ ದಿನಾಂಕ 22-01-13 ರಂದು ರಾತ್ರಿ 11-00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಈತನು ಮೃತಪಟ್ಟಿರುತ್ತಾನೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಫಿಯರ್ಾದು ಸಾರಂಶವಾಗಿರುತ್ತದೆ ಎಂಬುದಾಗಿ ಮಂಜುನಾಥ ಮೂಕಿ ಸಿ.ಪಿ.ಸಿ 1019 ಮಂಗಳೂರು ದಕ್ಷಿಣ  ಪೊಲೀಸ್ ಠಾಣ ಅಪರಾದ ಕ್ರಮಾಂಕ  ರವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 



ಮಂಗಳೂರು ಉತ್ತರ ಠಾಣೆ;


  • ದಿನಾಂಕ 23-01-2013 ರಂದು ಬೆಳಿಗ್ಗೆ 09:30 ಗಂಟೆಗೆ ಫಿಯರ್ಾದಿದಾರರಾದ ಎಂ. ರಾಜು ಎಂಬವರು ಸುಮಾರು 20 ವರ್ಷಗಳಿಂದ ಭೂಷಣ್ ಬಾರ್ ಬಳಿ ಚಪ್ಪಲಿ ಅಂಗಡಿಯನ್ನಿಟ್ಟು ವ್ಯಾಪಾರ ಮಾಡಿಕೊಂಡಿರುತ್ತೇನೆ. ಎಂದಿನಂತೆ ಅಂಗಡಿಯಲ್ಲಿರುವಾಗ  ಭೂಷಣ ಬಾರ್ ಬಳಿಯ ಅಶ್ವಥ ಕಟ್ಟೆಯ ಬಳಿ ಬಿದ್ದುಕೊಂಡಿದ್ದನ್ನು ಒಬ್ಬ ಅಪರಿಚಿತ ಗಂಡಸು ವ್ಯಕ್ತಿಯು ಬಿದ್ದವನನ್ನು 3-4 ಜನ ಸಾರ್ವಜನಿಕರು ಉಪಚರಿಸುತ್ತಿದ್ದು, 108 ಅಂಬುಲೇನ್ಸ್ ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನಂತರ ಮೃತಪಟ್ಟಿರುವುದಾಗಿ ತಿಳಿದು ಬಂದಿದ್ದು, ಈ ಬಗ್ಗೆ ಮಂದಿನ ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದಿ ಎಂಬುದಾಗಿ ಎಂ. ರಾಜು, ಪ್ರಾಯ 49 ವರ್ಷ, ತಂದೆ: ದಿ. ಮಾಲಿಂಗ, ವಾಸ: ಉರ್ವಸ್ಟೋರ್ಸ್, ಕೊಡಿಕಲ್ ಡೊಮಿನಿಕ್ ಚಚರ್್ ಬಳಿ, ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಠಾಣೆ ಅಪರಾದ ಕ್ರಮಾಂಕ 07/2013, ಕಲಂ 174 ಸಿಆರ್ ಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

No comments:

Post a Comment