Friday, January 11, 2013

Daily Crime incidents for Jan 11, 2013


ಅಪಘಾತ ಪ್ರಕರಣ;

ಸಂಚಾರ ಪೂರ್ವ ಠಾಣೆ;


  • ದಿನಾಂಕ: 07-01-2013 ರಂದು ಸಮಯ ಸಂಜೆ ಸುಮಾರು  18.00 ಗಂಟೆಗೆ ಪ್ರತಾಪ್ ಶೆಟ್ಟಿ ಎಂಬವರು ಕೈನೆಟಿಕ್ ಹೊಂಡ ಸ್ಕೂಟರ್ ನಂಬ್ರ ಏಂ19 ಇಇ-5429ನೇದರಲ್ಲಿ ತನ್ನ ಅಣ್ಣ ಪ್ರದೀಪ್ ಶೆಟ್ಟಿ ಹಿಂಬದಿ ಸವಾರರಾಗಿ ಕುಳ್ಳಿರಿಸಿಕೊಂಡು ರಾ.ಹೆ.-66ರಲ್ಲಿ ಕೆ.ಪಿ.ಟಿ. ಜಂಕ್ಷನ್ ಕಡೆಯಿಂದ ಕುಂಟಿಕಾನದ ಕಡೆಗೆ, ಹೋಗುತ್ತಾ ಲ್ಯಾಂಡ್ ಮಾಕರ್್ ಕ್ರಾಸ್ ಬಳಿ ತಲುಪುವಾಗ ನಾಯಿಯೊಂದು ಅಡ್ಡ ಬಂದಾಗ ನಿರ್ಲಕ್ಷತನದಿಂದ ಬ್ರೇಕ್ ಹಾಕಿದ ಪರಿಣಾಮ ಫಿರ್ಯಾದಿದಾರರು ಮತ್ತು ಸ್ಕೂಟರ್ ಸವಾರ ರಸ್ತೆಗೆ ಬಿದ್ದು ಹಿಂಬದಿ ಸವಾರರಿಗೆ ಗಾಯಗಳು ಉಂಟಾಗಿ ಜಯಶ್ರೀ ನಸರ್ಿಂಗ್ ಹೊಂ ಗೆ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ ಆರೋಪಿ ಸ್ಕೂಟರ್ ಸವಾರ ಠಾಣೆಗೆ ಮಾಹಿತಿ ನೀಡಿರುವುದಿಲ್ಲ ಎಂಬುದಾಗಿ ಪಿರ್ಯಾದಿದಾರರಾದ ಪ್ರದೀಪ್ ಶೆಟ್ಟಿ (46)ತಂದೆ- ದಿ|| ವೆಂಕಪ್ಪ ಕಾವ. ಪರಮ ಜ್ಯೋತಿ ಬಜನಾ ಮಂದಿರ, ಅಳಪೆ,  ಮಂಗಳೂರುವ ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 09/2013 279 , 337,  ಐ.ಪಿ.ಸಿ.ಕಾಯ್ದೆ 134 (ಬಿ) ಮೋ ವಾಹನ ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


  • ದಿನಾಂಕ 10-01-2013 ರಂದು ಸಮಯ ಸುಮಾರು 18.45 ಗಂಟೆಗೆ ಪಿರ್ಯಾದುದಾರರು ನಂತೂರು ಜಂಕ್ಷನ್ನಲ್ಲಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿರುವಾಗ ಬಿಕರ್ನಕಟ್ಟೆ ಕಡೆಯಿಂದ ಕದ್ರಿ ಶಿವಭಾಗ್ ಕಡೆಗೆ ಇನ್ನೋವಾ ಕಾರು ನಂಬ್ರ ಏಂ-21 ಓ-2909 ನ್ನು ಅದರ ಚಾಲಕ ಯೋಗೀಶ್ ಎಂಬವರು ಮತ್ತು ಬಸ್ಸು ನಂಬ್ರ ಏಂ-20ಂಃ- 8178 ನ್ನು ಅದರ ಚಾಲಕ ಸುದೇಶ್ ಎಂಬವರು ತಮ್ಮ ವಾಹನಗಳನ್ನು ನಾ ಮುಂದು ತಾ ಮುಂದು ಎಂಬುದಾಗಿ ಸ್ಪದರ್ಾತ್ಮಕ ರೀತಿಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ನಂತೂರು ಜಂಕ್ಷನ್ ತಲುಪುವಾಗ ಎರಡೂ ವಾಹನಗಳು ಪರಸ್ಪರ ಡಿಕ್ಕಿಯಾಗಿ ಜಖಂಗೊಂಡಿರುವುದಾಗಿದೆ ಹಾಗೂ ಈ ಅಪಘಾತದಿಂದ ಯಾರಿಗೂ ಗಾಯಗಳಾಗಿರುವುದಿಲ್ಲ  ಎಂಬುದಾಗಿ ದಯಾನಂದ ಸಿಹೆಚ್ಸಿ 876, ಸಂಚಾರ ಪೂರ್ವ ಠಾಣೆ. ಕದ್ರಿ ಮಂಗಳೂರು. ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 11/2013 279 ಐ.ಪಿ.ಸಿ.ಕಾಯ್ದೆ ಜೊತೆಗೆ 189 ಮೋ.ವಾಹನ ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ.



ಉಳ್ಳಾಲ ಠಾಣೆ;


  • ದಿನಾಂಕ 10.01.2013 ರಂದು ಸಂಜೆ 18.45 ಗಂಟೆಗೆ ಕರ್ತವ್ಯ ಮುಗಿಸಿ ಮನೆ ಕಡೆಗ ಬರುತ್ತಿದ್ದಾಗ ಸಾಯಂಕಾಲ 18.45 ಗಂಟೆಗೆ ಪೆರ್ಮನ್ನೂರು ಗ್ರಾಮದ ಹೊಯಿಗೆ ಧಕ್ಕೆಗೆ ತಿರುಗುವ ರಾ.ಹೆ.66ರಲ್ಲಿ ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಕಾರು ನಂಬ್ರ ಕೆಎಲ್ 14 ಹೆಚ್ 867ನೇಯದನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಯ ಬೈಕ್ ನಂಬ್ರ ಕೆಎ19 ವೈ 7559ನೇಯದರ ತೀರಾ ಎಡಭಾಗಕ್ಕೆ ಬಂದು ಡಿಕಿ ಹೊಡೆದ ಪರಿಣಾಮ ಪಿರ್ಯಾದಿಯು ರಸ್ತೆಗೆ ಬಿದ್ದು ಮೂಳೆ ಮುರಿತದ ರಕ್ತ ಗಾಯವಾಗಿರುತ್ತದೆ ಎಂಬುದಾಗಿ ಪಿರ್ಯಾದಿದಾರರಾದ ಬಾಲಕೃಷ್ಣ ಸಿ.ಹೆಚ್.(42) ತಂದೆ: ಕುಂಞರಾಮ ಮಣಿಯಾನಿ, 2-28-3-3, ಕೃಷ್ಣಾ ಕೃಪಾ ನಿಲಯ, ಕನೀರ್ ತೋಟ, ಕೊಲ್ಯ, ಕೊಟೆಕಾರ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿ ತನಿಘೆ ಕೈಗೊಳ್ಳಲಾಗಿದೆ.


ಕಳವು ಪ್ರಕರಣ:

ಉಳ್ಳಾಲ ಠಾಣೆ;


  • ದಿನಾಂಕ 10.01.2013 ರಂದು 12.30 ಗಂಟೆ ವೇಳೆಗೆ ಇಬ್ಬರು ವಿದೇಶಿಗಳು ಪಿರ್ಯಾದಿದಾರರು ಕೆಲಸ ಮಾಡುತ್ತಿದ್ದ ಜ್ಯುವೆಲ್ಲರಿ ಅಂಗಡಿಗೆ ಬಂದು ಚಿನ್ನದ ಬ್ರೇಸ್ ಲೇಟ್ ಮತ್ತು ಚಿನ್ನದ ಬಳೆ ಬೇಕೆಂದು ಕೇಳಿದ್ದು ಅದರಂತೆ ಪಿರ್ಯಾದಿಯು ಅವರಿಬ್ಬರಿಗೆ ಚಿನ್ನದ ಬ್ರೇಸ್ ಲೇಟ್ ಮತ್ತು ಬಳೆಯನ್ನು ನೋಡಲು ನೀಡಿದ್ದು ಅಂಗಡಿಯಲ್ಲಿ ಬೇರೆ ಗಿರಾಕಿಗಳು ಇದ್ದುದರಿಂದ ಪಿರ್ಯಾದಿಯು ಬೇರೆ ಗಿರಾಕಿಗಳಲ್ಲಿ  ಮಾತಾಡಿಕೊಂಡಿದ್ದು  ಅ ಸಮಯ ಇಬ್ಬರು ವಿದೇಶಿಗಳು ಅಂಗಡಿಯಿಂದ ಹೊರಗೆ ಹೋಗಿದ್ದು ಪಿರ್ಯಾದಿಯು ಅ ಕೂಡಲೇ ಚಿನ್ನದ ಬ್ರೇಸ್ ಲೇಟ್ ಮತ್ತು ಬಳೆಗಳನ್ನು ಪರಿಶೀಲಿಸಿದ್ದು ಸುಮಾರು 20 ಗ್ರಾಂ ತೂಕದ ಚಿನ್ನದ ಬ್ರೇಸ್ ಲೇಟ್ ಮತ್ತು 20 ಗ್ರಾಂ ತೂಕದ ಚಿನ್ನದ ಬಳೆಗಳನ್ನು ವಿದೇಶಿಯರು ಕದ್ದುಕೊಂಡು ಹೋಗಿರುತ್ತಾರೆ ಎಂದು ಸದ್ರಿ ವಿದೇಶಿಗಳು ತೆಗೆದುಕೊಂಡು ಹೋದ ಚಿನ್ನದ ಬ್ರೇಸ್ ಲೆಟ್ ಮತ್ತು ಬಳೆಗಳ ಬೆಲೆಯೂ ರೂ 1,30,000 ಆಗಬಹುದು ಎಂಬುದಾಗಿ ಪಿರ್ಯಾದಿದಾರರಾದ ರಶೀದ್  (26) ತಂದೆ:ಐದ್ರೋಸ್ ವಾಸ: ಕಂಬಲ ಕಾಡ್, ಕಂಬಲ ಕಾಡ್ ಪಾರಕ್ಕಲ್ ಹೌಸ್ ತಾಲೂಕು: ವಯತ್ರಿಜಿಲ್ಲೆ: ವಯನಾಡ್, ಕೇರಳ ರಾಜ್ಯ ರವರು ನೀಡಿದ ದೂರಿನಂತೆ ಉಳ್ಳಾಲ ಠಾಣೆ ಅಪರಾದ ಕ್ರಮಾಂಕ 12/2013 ಕಲಂ 380 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:

Post a Comment