Saturday, January 26, 2013

Daily Crime Incidents for Jan 26, 2013


ವಾಹನ ಕಳವು ಪ್ರಕರಣ

ಮಂಗಳೂರು ಉತ್ತರ ಪೊಲೀಸ್ ಠಾಣೆ


  • ಫಿಯರ್ಾದಿದಾರರಾದ ನಿತಿನ್ ಮೋಹನ್ .ಎಂ ರವರು ದಿನಾಂಕ 21-01-2013 ರಂದು ಸಂಜೆ 7-30 ಗಂಟೆಗೆ ಮಂಗಳೂರು ಬಾವುಟಗುಡ್ಡೆ ಸಿಟಿ ಸೆಂಟರ್ ಕ್ರಾಸ್ ರಸ್ತೆ ಬದಿಯಲ್ಲಿರುವ ಕ್ಯಾಂಟೀನ್ ಬಳಿ ತನ್ನ ಬಾಬ್ತು ಬಜಾಜ್ ಪಲ್ಸರ್ ಮೊಟಾರು ಸೈಕಲ್  ನಂಬ್ರ ಕೆಎ-19-ಇ.ಎಫ್-8461 ನೇಯ ದನ್ನು ಪಾಕರ್್ ಮಾಡಿ  ಕೆಲಸದ ನಿಮಿತ್ತ ಸಿಟಿ ಸೆಂಟರ್ಗೆ ಹೋಗಿದ್ದು, ರಾತ್ರಿ 12:30 ಗಂಟೆಗೆ ತನ್ನ ಬಾಬ್ತು ಮೊಟಾರು ಸೈಕಲ್ ಪಾಕರ್್ ಮಾಡಿದ ಸ್ಥಳಕ್ಕೆ ಬಂದು ನೋಡಲಾಗಿ ಮೊಟಾರು ಸೈಕಲ್ ಕಾಣೆಯಾಗಿದ್ದು, ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು, ಬಳಿಕ ಸದ್ರಿ ವಠಾರದಲ್ಲಿ ಮತ್ತು ಮಂಗಳೂರು ನಗರದಲ್ಲಿ ಈ ವರೆಗೆ ಹುಡುಕಾಡಿದಲ್ಲಿ ಮೊಟಾರು ಸೈಕಲ್ ಪತ್ತೆಯಾಗದೇ ಇದ್ದು, ಸದರಿ ಮೊಟಾರು ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾಗಿದೆ. ಕಳವಾದ ಮೊಟಾರು ಸೈಕಲ್ನ ಅಂದಾಜು ಮೌಲ್ಯ ರೂ. 49,000/- ಆಗಬಹುದು. ಆದ್ದರಿಂದ ಕಳವಾದ ಮೊಟಾರು ಸೈಕಲನ್ನು ಪತ್ತೆ ಮಾಡಿಕೊಡಬೇಕಾಗಿ ನಿತಿನ್ ಮೋಹನ್ .ಎಂ. ತಂದೆ: ಮೋಹನ್ .ಎಂ ವಾಸ: ಕ್ವಾಟ್ರಸ್ ನಂ ಎಂ.ಹೆಚ್. 9ಎ. ರೈಲ್ವೇ ಕಾಲನಿ ಪಾಂಡೇಶ್ವರ ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಪೊಲೀಸ್ ಠಾಣಾ ಅ.ಕ್ರ 15-2013 ಕಲಂ  379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಹುಡುಗ ಕಾಣೆ ಪ್ರಕರಣ

ಮುಲ್ಕಿ ಠಾಣೆ


  • ಪಿಯರ್ಾದಿದಾರರಾದ ಬೆನರ್ಾಡ್ ಮೆಂಡೋನ್ಸ್ ಎಂಬವರ ಮಗ ಸುಮಾರು 11 ವರ್ಷ ಪ್ರಾಯದ ಮೇಲ್ರಾಯ್ ಮೆಂಡೋನ್ಸ್ ಎಂಬಾತನು ಐಕಳದಲ್ಲಿರುವ ತನ್ನ ಸಂಬಂಧಿ ವೆರಿನಿಕಾ ಸಲ್ದಾನ್ ಎಂಬವರ ಮನೆಯಿಂದ 24/01/2013 ರಂದು ಬೆಳಿಗ್ಗೆ 09-00 ಗಂಟೆಗೆ ಕಿನ್ನಿಗೋಳಿ ಡಾಮಾಸ್ಕಟ್ಟೆ ಪಂಪೈ ಶಾಲೆಕೆಂದು ಹೋದವನು ಶಾಲೆಗೂ ಹೋಗದೇತನ್ನ ಸಂಬಂಧಿಕರ ಮನೆಗೂ ಹೋಗದೇ ಮನೆಗೂ ಬಾರದೇ ಕಾಣೆಯಾಗಿರುವುದಾಗಿದೆ ಎಂಬುದಾಗಿ ಬೆನಾಡ್ ಮೆಂಡೋನ್ಸ್ ತಂದೆ :ಜಾಕೊಬ್ ಮೆಂಡೋನ್ಸ್, ವಾಸ : 1-19 ಐಕಳ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮುಲ್ಕಿ ಠಾಣಾ ಅ.ಕ್ರ 6/2013 ಕಲಂ : ಹುಡುಗ ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಹಲ್ಲೆ ಪ್ರಕರಣ

ಬಜಪೆ ಠಾಣೆ


  • ದಿನಾಂಕ: 24-01-2013 ರಂದು 14-00 ಗಂಟೆ ಸಮಯಕ್ಕೆ ಆರೋಪಿ ಅಮರ್ ಆಳ್ವ ನು ಫಿರ್ಯಾದಿದಾರರಾದ ಸತೀಶ್ ಶೆಟ್ಟಿ, 43 ವರ್ಷ, ತಂದೆ: ಶೀನ ಶೆಟ್ಟಿ, ವಾಸ:ಗೋಳಿ ಪಲ್ಕೆ ಮನೆ, ಪಡುಪೆರಾರ ಗ್ರಾಮ, ಮಂಗಳೂರು ತಾಲೂಕು ರೊಂದಿಗೆ ದೂರವಣಿ ಕರೆ ಮಾಡಿ ಕೊಡಲು ಬಾಕಿ ಇದ್ದ ಹಣ ಕೊಡುವುದಾಗಿ ಹೇಳಿದಂತೆ ನಂಬಿದ ಫಿರ್ಯಾದಿದಾರರು 14-30 ಗಂಟೆಗೆ ಆರೋಪಿ ಹೇಳಿದ ಸುಂಕದ ಕಟ್ಟೆ ಎಂಬಲ್ಲಿಗೆ ಬಂದಾಗ, ಅಲ್ಲಿಗೆ ಬಂದ ಆರೋಪಿಯು, ನಿನಗೆ ಕೊಡಬೇಕಾದ ಹಣವನ್ನು ಕೊಡುತ್ತಿಲ್ಲವೆಂದು ಇದ್ದವರೆಲ್ಲೆಲ್ಲಾ ಹೇಳಿ  ನನ್ನ ಮಾನ ಮಯರ್ಾದೆ ತೆಗೆಯುತ್ತೀಯಾ? ಎಂದು ಹೇಳಿ ಫಿರ್ಯಾದಿದಾರರನ್ನು ದೂಡಿ ಹಾಕಿ ಆತನ ಕೈಯಲ್ಲಿದ್ದ ಮರದ ರೀಪಿಸಿನಿಂದ ಹೊಡೆದಿದ್ದು, ಇದರಿಂದ ನೋವು ತಾಳಲಾರದೇ ಫಿರ್ಯಾದಿದಾರರು ಅಲ್ಲಿಯೇ ಇದ್ದ ಜ್ಯೂಸ್ ಅಂಗಡಿಯ ಹಿಂಬದಿ ರಊಮಿಗೆ ಹೋಗಿ ಬಾಗಿಲು ಹಾಕಿದಾಗ, ಆರೋಪಿ ಅಮರ್ ಆಳ್ವನು ಅಲ್ಲಿಯೇ ಮರದ ಅಂಗಡಿಯಲ್ಲಿದ್ದ ಕಬ್ಬಿಣದ ಉಳಿಯನ್ನು ತಓರಿಸಿ, ನೀನು ಹೊರಗಡೆ ಬಾ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾನೆ ಎಂಬುದಾಗಿ ಸತೀಶ್ ಶೆಟ್ಟಿ, 43 ವರ್ಷ, ತಂದೆ: ಶೀನ ಶೆಟ್ಟಿ, ವಾಸ:ಗೋಳಿ ಪಲ್ಕೆ ಮನೆ, ಪಡುಪೆರಾರ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ: 21/2013 ಕಲಂ:  324, 506 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮೂಡಬಿದ್ರೆ ಠಾಣೆ


  • ದಿನಾಂಕ : 25/01/2013 ರಂದು ಬೆಳಿಗ್ಗೆ ಸುಮಾರು 10-30 ಗಂಟೆಗೆ ಪಿರ್ಯಾದಿದಾರರಾದ ಉಮ್ಮರಬ್ಬ  ಪ್ರಾಯ: 37 ರವರ ಮನೆಯಾದ ಕಲ್ಲಬೆಟ್ಟು ಗ್ರಾಮದ ನೀರಲ್ಕೆ ಹೌಸ್‌ ಎಂಬಲ್ಲಿ  ಪಿರ್ಯಾದಿದಾರರು ಮನೆಯಲ್ಲಿರುವಾಗ ಆರೋಪಿಗಳಾದ 1. ಹಸನಬ್ಬ ಯಾನೆ ಕಸಾಯಿ ಮೋನು, 2. ಸಮೀರ್‌ ಯಾನೆ ಇಸ್ಮಾಯಿಲ್‌, 3. ಶರೀಫ್‌, 4. ಅಲ್ತಾಫ್‌ ಯಾನೆ ಮಾಬಲ, 5. ಲತೀಫ್‌ ಯಾನೆ ಟೊಪ್ಪಿ ಲತೀಫ್‌ ಎಂಬವರು ಸಮಾನ ಉದ್ದೇಶಿತರಾಗಿ ಬಂದು ಪಿರ್ಯಾದಿ ಉಮ್ಮರಬ್ಬನನ್ನು ಕುರಿತು ಬೇವಾರ್ಸಿ ರಂಡೇ ಮಗ ಮನೆಯಿಂದ ಹೊರಗೆ ಬಾ ನಿನ್ನ ಕಾಲನ್ನು ಕತ್ತರಿಸುತ್ತೇನೆ ಎಂಬಿತ್ಯಾದಿಯಾಗಿ ಅವಾಚ್ಯವಾಗಿ ಬೈದು ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಇವರ ಪೈಕಿ ಹಸನಬ್ಬನು ಕಲ್ಲಿನಿಂದ ಹೊಡೆದು ಪಿರ್ಯಾದಿಯ ಎಡಕೈ ತಟ್ಟಿಗೆ ಮತ್ತು ಸಮೀರ್‌ ಎಂಬವನು ದೊಣ್ಣೆಯಿಂದ ಪಿರ್ಯಾದಿಯ ಎಡ ಭುಜಕ್ಕೆ ಹೊಡೆದು ನೋವನ್ನು ಉಂಟು ಮಾಡಿರುತ್ತಾರೆ ಅಲ್ಲದೇ  ಶರೀಫ್‌ ಎಂಬವನು ದೂಡಿ ಹಾಕಿ ಕೈಯಿಂದ ಹಲ್ಲೆ ಮಾಡಿ ಕಾಲಿನಿಂದ ತುಳಿದು ನೋವನ್ನು ಉಂಟು ಮಾಡಿರುತ್ತಾನೆ, ಅಲ್ತಾಫ್‌ ಎಂಬವನು ಜಾಕ್‌ಲೀವರ್‌ದಿಂದ ಹಲ್ಲೆ ಮಾಡಿ ಬಲಕೈ ತಟ್ಟಿಗೆ ಗುದ್ದಿದ ನೋವನ್ನು ಉಂಟು ಮಾಡಿರುವುದಲ್ಲದೇ ಲತೀಫ್‌ ಎಂಬವನು ಅಪರಾಧ ಮಾಡಲು ಹುರಿದುಂಬಿಸಿರುತ್ತಾನೆ.  ಪಿರ್ಯಾದಿಯ ಪತ್ನಿ ಶ್ರೀಮತಿ ನೆಬಿಸಾಳು ತಡೆಯಲು ಹೋದಾಗ ಆರೋಪಿಗಳ ಪೈಕಿ ಸಮೀರ್‌ ಮತ್ತು ಶರೀಫ್‌ ಎಂಬವರು ಆಶ್ಲೀಲವಾಗಿ ಬೈದು, ದೂಡಿ ಹಾಕಿ ಚೂಡಿದಾರ ಟಾಪ್‌ ಹರಿದಿರುತ್ತದೆ.ಅಲ್ಲದೇ ಪಿಯಾ್ದಿದಾರರ ಮನೆಯ ಕಿಟಕಿಯ ಗಾಜು ಒಡೆದಿರುತ್ತದೆ ಎಂಬುದಾಗಿ ಉಮ್ಮರಬ್ಬ ಪ್ರಾಯ 37 ವರ್ಷ, ತಂದೆ : ಹಸನಬ್ಬ , ವಾಸ ; ನೀರಳಿಕೆ ಹೌಸ್‌ ಕಲ್ಲಬೆಟ್ಟು ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣಾ ಅ.ಕ್ರ 19/2013 ಕಲಂ : 143, 147,148, 323, 324, 504, 427, 354, 506 R/W 149 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 




  • ದಿನಾಂಕ : 25-01-2013 ರಂದು 11-00 ಗಂಟೆಗೆ ಪಿರ್ಯಾದಿ ಹಸನಬ್ಬ ರವರು ಶರೀಫ್‌ರವರನ್ನು ಮೋಟಾರು ಸೈಕಲಿನ ಹಿಂಬದಿಯಲ್ಲಿ ಕುಳ್ಳಿರಿಸಿಕೊಂಡು ಮನೆ ಕಡೆಗೆ ಹೋಗುತ್ತಾ ಅಪಾದಿತರು ಮಂಗಳೂರು ತಾಲೂಕು ಕಲ್ಲಬೆಟ್ಟು ಗ್ರಾಮದ  ನೀರಲ್ಕೆ ಬಳಿ ತಲುಪುವಾಗ ಆರೋಪಿ ಉಮ್ಮರಬ್ಬ, ನೆಬಿಸಾ, ಸುಲೈಮಾನ್‌, ಮಹಮ್ಮದ್‌ ಹನೀಫ್‌ ಮತ್ತು ಅಬೂಬಕ್ಕರ್‌ ಸಮಾನ ಉದ್ದೇಶದಿಂದ ಅಕ್ರಮ ತಡೆ ಒಡ್ಡಿ ಕಲ್ಲುಗಳನ್ನು ಎಸೆದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುವುದಾಗಿದೆ ಪಿರ್ಯಾದಿದಾರರ ಹಿಂಬದಿಯಿಂದ ಬಂದಿದ್ದ ಸಮೀರ್‌, ಅಲ್ತಾಫ್‌, ಲತೀಫ್‌ ಎಂಬವರಿಗೂ ಕೂಡಾ ಆರೋಪಿಗಳು ಕಲ್ಲು ಬಿಸಾಡಿದ್ದು ಸಮೀರ್‌ ಎಂಬವನಿಗೆ ಚೂರಿಯಿಂದ ಗೀರಿದ  ಪರಿಣಾಮ ರಕ್ತಗಾಯವಾಗಿರುತ್ತದೆ. ಶರೀಫ್‌ ಮತ್ತು ಅಲ್ತಾಫ್‌ಗೆ ಗುದ್ದಿದ ನೋವಾಗಿರುತ್ತದೆ. ಸದ್ರಿ ಮೂಡಬಿದ್ರೆ ಸರಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ ಎಂಬುದಾಗಿ ಹಸನಬ್ಬ ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣಾ ಅ.ಕ್ರ 20/2013 ಕಲಂ : 143, 147,148, 341, 323, 324, 504, 506,  R/W 149 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


ಅಪಘಾತ ಪ್ರಕರಣ

ಕೊಣಾಜೆ ಠಾಣೆ



  • ದಿನಾಂಕ 25.01.2013 ರಂದು ಬೆಳಿಗ್ಗೆ 10:30 ಗಂಟೆಗೆ ಮಂಗಳೂರು ತಾಲೂಕು ಅಂಬ್ಲಮೊಗರು ಗ್ರಾಮದ ಬಸ್ತಿಕಟ್ಟೆ ತೊಜ್ಜ ಎಂಬಲ್ಲಿ ಆರೋಪಿ ಮಹಮ್ಮದ್ ಇರ್ಫಾನ್ ತನ್ನ ಬಾಬ್ತು ಮೊಟಾರ್‌ ಸೈಕಲ್‌ ಕೆಎ19ಕ್ಯೂ-5868ನ್ನು ಮದಕ ಕಡೆಯಿಂದ ಬಸ್ತಿಕಟ್ಟೆ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ ಹಸನಬ್ಬ ಎಂಬವರಿಗೆ ಢಿಕ್ಕಿ ಹೊಡೆದ ಪರಿಣಾಮ ಸದ್ರಿಯವರ ಬಲಕೋಲು ಕೈಗೆ, ಬಲಕೋಲು ಕಾಲಿಗೆ ಮತ್ತು ಬಲ ಕಾಲಿನ ಪಾದಕ್ಕೆ ತೀವ್ರ ಗಾಯ ಉಂಟಾಗಿರುವುದಲ್ಲದೇ ತಲೆಯ ಮುಂಬಾಗಕ್ಕೆ ತರಚಿದ ಗಾಯವಾಗಿರುತ್ತದೆ. ಗಾಯಾಳು ದೇರಳಕಟ್ಟೆ ಕೆ.ಎಸ್‌. ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಓಬುದಾಗಿ ಸುದರ್ಶನ ಶೆಟ್ಟಿ (60) ತಂದೆ:ದಿ|ಆನಂದ ಶೆಟ್ಟಿ, ವಾಸ: ಪರಿಯಾಲಮನೆ, ಅಂಬ್ಲಮೊಗರು ಗ್ರಾಮ ಮಂಗಳೂರು ರವರು ನೀಡಿದ ದೂರಿನಂತೆ ಕೊಣಾಜೆ ಠಾಣಾ ಅ.ಕ್ರ. 11/2013 ಕಲಂ: 279, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


No comments:

Post a Comment