Thursday, January 29, 2015

Daily Crime Reports : 29-01-2015

ದೈನಂದಿನ ಅಪರಾದ ವರದಿ.
ದಿನಾಂಕ 29.01.201511:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
1
ಕೊಲೆ  ಯತ್ನ
:
1
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
1
ಹಲ್ಲೆ ಪ್ರಕರಣ   
:
2
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
0
ವಾಹನ ಕಳವು
:
2
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
4
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
1
ಇತರ ಪ್ರಕರಣ
:
0





























1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಬಾಬುಲಾಲ್ ಪಟೇಲ್ ರವರ ಹೆಂಡತಿಯ ಅಣ್ಣನ ಮಗನಾದ ದರ್ಶನ್ ಕಿಶೋರ್ ಪಟೇಲ್ (16) ಎಂಬಾತನು ಮಂಗಳೂರು ನಗರದ ರಾಮಕೃಷ್ಣ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿ.ಯು.ಸಿ. ವ್ಯಾಸಂಗ ಮಾಡಿಕೊಂಡಿದ್ದು, ಸದ್ರಿಯವರ ತಂದೆ ತಾಯಿ ಮೃತಪಟ್ಟಿದ್ದರಿಂದ ಪಿರ್ಯಾದುದಾರರೇ ಅವರನ್ನು ನೋಡಿಕೊಳ್ಳುತ್ತಿರುವುದಾಗಿದೆ. ಹೀಗಿರುವಲ್ಲಿ ದರ್ಶನ್ ಕಿಶೋರ್ ಪಟೇಲನು ದಿನಾಂಕ 23-01-2015ರಂದು ಎಂದಿನಂತೆ ಕಾಲೇಜಿನಿಂದ ಸಂಜೆ 4-30 ಗಂಟೆಗೆ ಮನೆಗೆ ವಾಪಾಸ್ಸಾಗಿದ್ದು, ತಿಂಡಿ ತಿಂದು ಮನೆಯ ಟ್ಯಾರೀಸಿನಲ್ಲಿ ಓದಲೆಂದು ಹೋದವನು ನಂತರ ಮನೆಗೆ ವಾಪಾಸ್ಸಾಗದೇ ಇದ್ದುಈತನನ್ನು ಎಲ್ಲಾ ಕಡೆ ಹುಡುಕಾಡಿದ್ದಲ್ಲಿ ಈತನು ಪತ್ತೆಯಾಗದೇ ಇರುವುದಾಗಿದೆ.

2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 28.01.2015 ರಂದು ಬೆಳಿಗ್ಗೆ 10 30 ಗಂಟೆಗೆ  ಮಂಗಳೂರು ನಗರದ ಕೊಡಿಯಾಲ ಬೈಲ್ - ಹಂಪನಕಟ್ಟೆ ಸಾರ್ವಜನಿಕ  ಕಾಂಕ್ರೀಟು ಏಕ ಮುಖ ರಸ್ತೆಯನ್ನು  ಹಳೇ ಬಸ್ಸು ನಿಲ್ದಾಣ ಕಡೆಯಿಂದ  ಪೂಂಜಾ ಆರ್ಕೆಡ್ ಕಡೆಗೆ ಶಾಲಾ ಬಾಲಕ  ಇತರರೊಂದಿಗೆ ರಸ್ತೆಯನ್ನು ದಾಟುತ್ತಾ ರಸ್ತೆ ವಿಭಾಜಕದ ಬಳಿ ತಲುಪುತ್ತಿದ್ದಂತ್ತೆ ಕೊಡಿಯಾಲ ಬೈಲು ಕಡೆಯಿಂದ ಹಂಪನಕಟ್ಟೆ ಕಡೆಗೆ ಬಸ್ಸು ಕೆಎ.19.ಎಎ.4655ನೇದನ್ನು ಅದರ ಚಾಲಕರು ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಶಾಲಾ ಬಾಲಕನಿಗೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದ ಬಾಲಕನ ತಲೆಯ ಮೇಲೆ  ಬಸ್ಸಿನ ಬಲ ಬದಿಯ ಎದುರಿನ ಚಕ್ರ ಹಾದು ಉಂಟಾದ ತೀವೃ ಗಾಯದಿಂದ ಬಾಲಕ ಆನಂದ ರಾಜು ಅಪಘಾತ ಸ್ಥಳದಲ್ಲೇ ಮೃತ ಪಟ್ಟದ್ದಾಗಿದೆ.

3.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 27-01-2015 ರಂದು ರಾತ್ರಿ 11-40 ಗಂಟೆಗೆ ಪಿರ್ಯಾದಿದಾರರಾದ ಶ್ರೀ ವಿ.ಜೆ. ನೀಲಿಯಾರ್ ರವರು ಮಂಗಳೂರು ನಗರದ ಶಿವಭಾಗ ಬಳಿ ಇರುವ  ಕೆನರಾ ಕ್ಲಬ್ ನಿಂದ ಮನೆಗೆ ಹೋಗುವರೇ  ಕೆನರಾ ಕ್ಲಬ್ ನ ಹಿಂಬದಿ ದ್ವಾರದಿಂದ ಹೊರಗೆ ಬರುತ್ತಾ ಇದ್ದಾಗ  ಪಿರ್ಯಾದಿದಾರರ ಪರಿಚಯದ ಡಾ|| ಭುಜಂಗ ಶೆಟ್ಟಿ ಪಿರ್ಯಾದಿದಾರನ್ನು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ "ನೀನು ಈ ಹಿಂದೆ ಅಧ್ಯಕ್ಷನಾಗಿದ್ದಾಗ ನನ್ನನ್ನು ಕೆನರಾ ಕ್ಲಬ್ ನಿಂದ ಸಸ್ಪೆಂಡ್ ಮಾಡಿಸಿದ್ದಿ" ಎಂದು ಅವಾಚ್ಯವಾಗಿ ಬೈದು ಪಿರ್ಯಾದಿದಾರರ ಎಡಕೈಯನ್ನು ಬಲವಾಗಿ ಎಳೆದು ಕೈಯಿಂದ ಗುದ್ದಿ ಹಲ್ಲೆ ನಡೆಸಿದಲ್ಲದೇ "ನಿನನ್ ಯಾನ್ ತೂಪೆ" ಎಂದು ತುಳು ಭಾಷೆಯಲ್ಲಿ ಬೆದರಿಸಿ ಅಲ್ಲಿಗೆ ಕ್ಲಬ್ ನ ಸದಸ್ಯರಾದ ಶರಣ್ ಶೆಟ್ಟಿ ಮತ್ತು ಇತರರು ಬರುವುದನ್ನು ಕಂಡು ಭುಜಂಗ ಶೆಟ್ಟಿ ಪಿರ್ಯಾದಿದಾರರನ್ನು ಉದ್ದೇಶಿಸಿ " ನಿನ್ನನ್ ಯಾನ್ ಕೆರೆಂದೆ ಬುಡ್ಪುಜಿ" ಎಂದು ತುಳು ಭಾಷೆಯಲ್ಲಿ ಜೀವ ಬೆದರಿಕೆ ಹಾಕಿರುತ್ತಾನೆ.

4.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-01-15 ರಂದು ಪಿರ್ಯಾದಿದಾರರಾದ ಶ್ರೀ ಲೋಕೇಶ್ ರವರು ತನ್ನ ಮಾವ ದಯಾನಂದರವರ ಪಾರ್ಟಿ ಇದೆಯೆಂದು ತನ್ನ ಸ್ನೇಹಿತನಾದ  ಪ್ರೀತೇಶ್ ಎಂಬವರೊದಿಗೆ ಇಂಚರ ಬಾರ್ & ರೆಸ್ಟೊರೆಂಟ್ ಗೆ ತೆರಳಿದ್ದು ಅಲ್ಲಿ ಪಿರ್ಯಾದಿಯ ಮಾವ ಹಾಗೂ 4 ಜನ ಅವರ ಸ್ನೇಹಿತರು ಊಟ ಮಾಡಿಕೊಂಡಿದ್ದು ಪಿರ್ಯಾದಿರರು ಅವರೊಂದಿಗೆ ಕುಳಿತು ಊಟ ಮಾಡಿಕೊಂಡಿದ್ದ ಸಮಯ ಪಿರ್ಯಾದಿಯ ಮಾವ ಮತ್ತು ಅವರ 4 ಜನ ಸ್ನೇಹಿತರಿಗೆ ಯಾವುದೋ ವಿಷಯದಲ್ಲಿ ಮಾತಿಗೆ ಮಾತು ಬೆಳೆದು ದ್ವೇಷದಿಂಧ ಸ್ನೇಹಿತರು ಹೊರಟು ಹೋಗಿದ್ದು ನಂತರ ರಾತ್ರಿ 10-00 ಗಂಟೆ ಸಮಯಕ್ಕೆ ಊಟ ಮುಗಿಸಿ ಬಿಲ್ಲನ್ನು ನೀಡಿ ಬಾರ್ ನ 1 ನೇ ಮಹಡಿಯಿಂದ ಕೆಳಗೆ ಬರುತ್ತಿರುವಾಗ ದಯಾನಂದರವರ ಸ್ನೇಹಿತರು ಸೇರಿ ಪಿರ್ಯಾದಿ, ಅವರ ಸ್ನೇಹಿತ ಪ್ರೀತೆಶ್ ಮತ್ತು ಮಾವ ದಯಾನಂದರವರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ "ನೀನು ಬಾರಿ ದೊಡ್ಡ ಜನನ " ಎಂಬಿತ್ಯಾದಿಯಾಗಿ ಅವಾಚ್ಯ ಶಬ್ದದಿಂದ ಬೈದು ಪಿರ್ಯಾದಿದಾರರಿಗೆ ಕೈಯಿಂದ ಹೊಡೆದು ದೂಡಿ ಹಾಕಿ ಪಿರ್ಯಾದಿ ಮಾವ ದಯಾನಂದ ರವರಿಗೆ ಚಾಕುವಿನಿಂದ ತಿವಿದು ಓಡಿ ಹೋಗಿರುತ್ತಾರೆ. ಚಾಕುವಿನಿಂದ ತಿವಿದ ಮತ್ತು ಇತರರು ಕೈಯಿಂದ ಹೊಡೆದ ಪರಿಣಾಮ ಪಿರ್ಯಾದಿ ಮಾವ ದಯಾನಂದರವರಿಗೆ ಹೊಟ್ಟೆಗೆ, ಕಿಬ್ಬೊಟ್ಟೆಗೆ, ತಲೆಗೆ, ಕೈಗಳಿಗೆ  ತೀವೃತರದ ರಕ್ತಗಾಯವಾಗಿರುವುದಾಗಿದೆ.

5.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಪಾಲ್ ಗೋವಿಯಸ್ ರವರು  ತನ್ನ  ಮಗ  ಸ್ಟಾನಿ ಗೋವಿಯಸ್‌‌ರೊಂದಿಗೆ ದಿನಾಂಕ 28.01.2015  ರಂದು  ಬೆಳಿಗ್ಗೆ 8:05  ಗಂಟೆಗೆ ಅತ್ತೂರು  ವಾರ್ಷಿಕ ಹಬ್ಬಕ್ಕೆ ಕಾರ್ಕಳದ ಅತ್ತೂರಿನಲ್ಲಿ  ಸಂಬಂದಿಕರ ಮನೆಯಲ್ಲಿರುವಾಗ  ಪಿರ್ಯಾದಿದಾರರ  2  ನೇ  ಮಗಳಾದ  ಜಾನೆಟ್‌  ಎಂಬವಳು  ದೂರವಾಣಿ  ಮಾಡಿ  ಮನೆಯಲ್ಲಿದ್ದ  ಅಮ್ಮ  ಪೋನ್‌  ತೆಗೆಯುದಿಲ್ಲ  ಎಂದು  ಹೇಳಿದ್ದುಆಗ  ಮಗ ಸ್ಟಾನಿ  ಕೂಡಾ ಮನೆಗೆ ದೂರವಾಣಿ  ಮಾಡಿದಾಗ  ತಾಯಿ  ಪೋನ್ತೆಗೆಯದಿರುವುದನ್ನು ನೋಡಿ  ಹತ್ತಿರದ ಮನೆಯವರಿಗೆ ತಿಳಿಸಿ  ಅವರ  ಮೂಲಕ  ಪರಿಶೀಲನೆ  ಮಾಡಿಸಿದಾಗ  ಹೆಂಡತಿ  ಲಿಲ್ಲಿ  ಗೋವಿಯಸ್‌  ಅಡುಗೆ ಮನೆಯಲ್ಲಿ  ನೇಣು  ಬಿಗಿದು  ನೇತಾಡುತ್ತಿದ್ದಮಾಹಿತಿ  ತಿಳಿದು  ಮನೆಗೆ ಬಂದು  ನೋಡಿದ್ದಾಗಿಯು  ಪಿರ್ಯಾದಿದರರ  2ನೇ  ಮಗ  ಡಾಲ್ಪಿ  ಗೋವಿಯಸ್‌  ಪಿರ್ಯಾದಿದಾರರಲ್ಲಿ  ಸ್ಟಾನಿಯಲ್ಲಿ , ಮತ್ತು  ತಾಯಿಯಲ್ಲಿ  ಹಲವಾರು  ಸಲ ಹೊಡೆದಾಡಿ  ಒಂದು  ವರ್ಷದ ಒಳಗೆ  ನಿಮ್ಮ  ಮೂವರಲ್ಲಿ  ಒಬ್ಬರನ್ನು  ಕೊಲೆ ಮಾಡುತ್ತೆನೆ  ಎಂದು  ಜೀವ ಬೆದರಿಕೆ ಹಾಕಿದ್ದಾನೆ  ಎಂದುಆತನೇ  ದಿನಾಂಕ 28.01.2015  ರಂದು  ಬೆಳಿಗ್ಗೆ 8:45  ಗಂಟೆಯಿಂದ  ಮದ್ಯಾಹ್ನ  1:45  ಗಂಟೆ ನಡುವೆ ಪಿರ್ಯಾದಿದಾರರ  ಹೆಂಡತಿ  ಲಿಲ್ಲಿ  ಗೋವಿಯಸ್ಳನ್ನು  ಕೊಲೆ  ಮಾಡಿ  ಹೆಣವನ್ನು  ನೇತಾಡಿಸಿದ್ದಾನೆ ಎಂದು ಪಿರ್ಯಾದಿ ನೀಡಿರುವುದಾಗಿದೆ.

6.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-01-2015ರಂದು ಪಿರ್ಯಾಧಿದಾರರಾದ ಶ್ರೀ ರಾಮ ಕೆ.ಶೆಟ್ಟಿ ಯವರು ತನ್ನ ಮಿತ್ರರಾದಂತಹ ಧನಂಜಯ ಪೂಜಾರಿಯವರೊಂದಿಗೆ ತನ್ನ ಮನೆಯಿಂದ ಮೋಟಾರು ಸೈಕಲು ನಂಬ್ರ ಕೆಎ-19-3859ನೇದರಲ್ಲಿ ಹೊರಟು ಚೇಳಾರು ಎಂಬಲ್ಲಿ ನಡೆಯುತಿದ್ದ ಯಕ್ಷಗಾನವನ್ನು ನೋಡಿ ಮರಳಿ ಮನೆಯ ಕಡೆಗೆ ಬರುತ್ತಾ ರಾತ್ರಿ 10:30 ಗಂಟೆಗೆ ಮುಕ್ಕ ಜಂಕ್ಷನ್ ಬಳಿಗೆ ತಲುಪಿದಾಗ ಸುರತ್ಕಲ್ ಕಡೆಯಿಂದ ಮೂಲ್ಕಿ ಕಡೆಗೆ ಲಾರಿ ನಂಬ್ರ ಎಪಿ-31-ಟಿ.ಸಿ-0549ನೇಯದನ್ನು ಅದರ ಚಾಲಕ ಮಲ್ಲಿಕಾರ್ಜುನ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ರಸ್ತೆಯ ತೀರ ಬಲ ಬದಿಗೆ ಚಲಾಯಿಸಿ ಪಿರ್ಯಾಧಿದಾರರಿದ್ದ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಸದ್ರಿಯವರುಗಳು ರಸ್ತೆಗೆ ಬಿದ್ದು, ಪಿರ್ಯಾಧಿದಾರರ ತಲೆಗೆ ಅಲ್ಪ ತರದ ಗಾಯವಾಗಿ, ಧನಂಜಯರವರ ಎಡ ಕೈಗೆ ಗಾಯವಾಗಿದ್ದು, ಈ ಬಗ್ಗೆ  ಸುರತ್ಕಲ್ ಪದ್ಮಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.

7.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-01-2015 ರಂದು ಸಂಜೆ 05-00 ಗಂಟೆಗೆ ಚೊಕ್ಕಬೆಟ್ಟು-ಕಾನ ಬಳಿ ಫಿರ್ಯಾದಿದಾರರಾದ ಶ್ರೀ ಮಹೇಂದ್ರ ರವರ ಜೊತೆಯಲ್ಲಿ ಅವರ ತಮ್ಮನಾದ ಕೃಷ್ಣ ಎಂಬವರು ರಸ್ತೆ ದಾಟುತ್ತಿರುವಾಗ ಎಮ್ ಆರ್ ಪಿ ಎಲ್ ರಸ್ತೆಯ ಕಡೆಯಿಂದ ಸುರತ್ಕಲ್ ಕಡೆಗೆ ಕೆ ಎ- 19 - 8375 ನೇ ನಂಬ್ರದ ಅಟೋರಿಕ್ಷಾವನ್ನು ಅದರ ಚಾಲಕ ಅಬ್ದುಲ್ ರೆಹಮಾನ್ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಕೃಷ್ಣನಿಗೆ ಡಿಕ್ಕಿಹೊಡೆದ ಪರಿಣಾಮವರು ರಸ್ತೆಗೆ ಬಿದ್ದು, ಗಂಭೀರ ರೀತಿಯಲ್ಲಿ ತಲೆಗೆ, ಎಡಭಾಗದ ಕೆನ್ನೆಗೆ ರಕ್ತ ಗಾಯವಾಗಿ ಅವರನ್ನು ಚಿಕಿತ್ಸೆಗಾಗಿ ಮಂಗಳೂರು ಎ ಜೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

8.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-12-2014 ರಂದು 11-00 ಗಂಟೆಯಿಂದ 12-00 ಗಂಟೆಯ ಮದ್ಯೆ ಅವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಫಳ್ನೀರ್ ಶಿವಾಲಿ ಆರ್ಕೇಡ್ ನ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿದ್ದ ಲೂಡ್ರಿಕ್ ಎಂಟರ್ ಪ್ರೈಸಸ್ ಕಂಪನಿಯ ಬಾಬ್ತು 2010 ನೇ ಮೋಡಲ್ ನ, ಸಿಲ್ವರ್ ಬಣ್ಣದ ಅಂದಾಜು ರೂಪಾಯಿ 40,000/- ಬೆಲೆ ಬಾಳುವ ಕೆ. 19 .ಬಿ 4822 ನೊಂದಣಿ ಸಂಖ್ಯೆಯ ಹಿರೋ ಹೊಂಡಾ ಪ್ಯಾಷನ್ ಪ್ಲಸ್ ದ್ಚಿ ಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ದ್ಚಿಚಕ್ರ ವಾಹನವನ್ನು ಈವರೆಗೂ ಆಸುಪಾಸಿನಲ್ಲಿ ಹಾಗೂ ಇತರ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಕಳವಾದ ವಾಹನದ ಬಗ್ಗೆ ಕಂಪನಿಯ ಮಾಲಕರಾದ ರೊಯಿ ರೋಡ್ರಿಗಸ್ ಇವರಲ್ಲಿ ಚರ್ಚಿಸಿ ದಿನಾಂಕ 28-01-2015 ರಂದು ದೂರು ನೀಡಿರುವುದಾಗಿದೆ.

9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 28-1-2015 ರಂದು ಫಿರ್ಯಾದಿದಾರರಾದ ಶ್ರೀ ವಿಲ್ಸನ್ಫೆರ್ನಾಂಡೀಸ್ ರವರು ತನ್ನ ಬಾಬ್ತು ಹೊಸ ಯಮಹ ಎಫ್ಝಡ್ಎಸ್ (ಇಂಜಿನ್ ನಂ. 21ಸಿಜೆ056767 ಮತ್ತು ಚೇಸಿಸ್ ನಂ.ಎಂಇ121ಸಿಒಜೆಎಇ2056702) ನೇ ಮೋಟಾರು ಸೈಕಲಿನಲ್ಲಿ ಬೆಳಿಗ್ಗೆ ತೊಕ್ಕೊಟಿನಿಂದ ಮಂಗಳೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಬೆಳಿಗ್ಗೆ 8-20 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಪೆರ್ಮನ್ನೂರು ಗ್ರಾಮದ ಕಲ್ಲಾಪು ನಾಗನಕಟ್ಟೆ ಎಂಬಲ್ಲಿಗೆ ತಲುಪುವಾಗ್ಗೆ ಅವರ ಎದುರುಗಡೆಯಿಂದ ಕೆಎ-19-ಬಿ-7287 ನೇ ಟಿಪ್ಪರ್ಲಾರಿಯನ್ನು ಅದರ ಚಾಲಕ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಯಾವುದೋ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಫಿರ್ಯಾದಿದಾರರ ಮೋಟಾರು ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ರಸ್ತೆಗೆ ಬಿದ್ದು ಅವರ ಮೊಣಗಂಟಿಗೆ ಗುದ್ದಿದ ಗಾಯ ಹಾಗೂ ಎಡ ಕಾಲಿನ ಮೊಣಗಂಟಿನ ಬಳಿ ತರಚಿದ ಗಾಯವಾಗಿ ಫಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ತೊಕ್ಕೊಟು ಸಹರಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.

10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28.01.2015 ರಂದು ಫಿರ್ಯಾದಿದಾರರಾದ ಶ್ರೀ ಜಯಂತ್ ರವರು ಎಂದಿನಂತೆ ಮರೋಳಿಯಲ್ಲಿರುವ ವಾಟರ್ ಟೆಕ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಸಂಜೆ ಮನೆಗೆ ಹೋಗುವಾಗ ಸುಮಾರು 6.40 ಗಂಟೆಗೆ ಪಿರ್ಯಾದಿದಾರರು ಕಾಂತರಬೆಟ್ಟು ಮಜಲು ಬಳಿ ತಲುಪಿದಾಗ ಅಲ್ಲಿ ಹತ್ತಿರದ ಮೈದಾನದಲ್ಲಿ ಆಟ ವಾಡುತ್ತಿದ್ದ ಪಿರ್ಯಾದಿದಾರರಿಗೆ ಪರಿಚಯಸ್ಥರಾದ ಅಫ್ರಾನ್ ಮತ್ತು ಇನ್ನೊಬ್ಬ ಬಂದು ಏಕಾಏಕಾಯಿಯಾಗಿ  ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ದಾರಿಗೆ ಅಡ್ಡನಿಂತು ಅಂಗಿಯನ್ನು ಎಳೆದು, ಕೈಯಿಂದ ಮುಖಕ್ಕೆ ಮತ್ತು ಎದೆಯ ಬಾಗಕ್ಕೆ ಹೊಡೆದ ಪರಿಣಾಮ ಪಿರ್ಯಾದುದಾರರ  ಎದೆಯ ಭಾಗಕ್ಕೆ ಗುದ್ದಿದ ನೋವು ಉಂಟು ಮಾಡಿರುವುದಲ್ಲದೇ ಇನ್ನೂ ಮುಂದಕ್ಕೆ ನಮ್ಮ ವಿಷಯಕ್ಕೆ ಬಂದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆಯನ್ನು ಹಾಕಿರುವುದಾಗಿದೆ.

11.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 24-01-2015 ರಂದು ರಾತ್ರಿ ಸುಮಾರು 9-30 ಗಂಟೆ ಸಮಯಕ್ಕೆ ಫಿರ್ಯಾದಿದಾರರಾದ ಶ್ರೀ ಅನಿಲ್ರಾಜ್ಎಂಬವರು ತನ್ನ ಹೊಸ ಡಿಸ್ಕವರಿ ಬೈಕನ್ನು ಸವಾರಿ ಮಾಡುತ್ತಾ ಹೊಟೇಲ್ಮೋತಿಮಹಲ್ಎದುರುಗಡೆ ಹೋಗುತ್ತಿದ್ದಾಗ ನಾಯಿಯೊಂದು ರಸ್ತೆಗೆ ಅಡ್ಡ ಬಂದ ಕಾರಣ ಬೈಕಿನ ನಿಯಂತ್ರಣ ತಪ್ಪಿ ಕೆಳಗಡೆ ಬಿದ್ದು ಫಿರ್ಯಾದಿದಾರರಿಗೆ ಗಾಯವಾಗಿದ್ದು ಅಲ್ಲದೇ ಬೈಕ್ಕೂಡಾ ಜಖಂಗೊಂಡಿದ್ದು ಸಾರ್ವಜನಿಕರು ಸೇರಿ, ಆರೈಕೆ ಮಾಡಿ ಮೋಟಾರು ಸೈಕಲನ್ನು ಅಲ್ಲಿಯೇ ಬಿಟ್ಟು ಹೋಗಿದ್ದು ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಬೈಕು ನಿಲ್ಲಿಸಿದ ಸ್ಥಳಕ್ಕೆ ರಾತ್ರಿ ಸುಮಾರು 11-00 ಗಂಟೆಗೆ ಹೋದಾಗ ಬೈಕು ಕಾಣಿಸದೇ ಇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಬೈಕ್ವಿವರ: ಹೊಸ ಬಜಾಜ್ಡಿಸ್ಕವರಿ ಮೋಟಾರು ಸೈಕಲ್ನೋಂದಣಿ ಸಂಖ್ಯೆ ಆಗಿರುವುದಿಲ್ಲ ಇಂಜಿನ್ನಂ. PAZWFK37156, ಚಾಸಿಸ್ನಂ. MD2A57BZ7FWK00013, ಮೋಡೆಲ್‌ 2015 ಬಣ್ಣಕಪ್ಪು ಮೌಲ್ಯ ರೂ. 45,000/-.

12.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 28.01.2015 ರಂದು ಸಂಜೆ 4.40 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮಹಾದೇವಪ್ಪ ಹೂಗಾರ್ ರವರು ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಎ-40-ಎಫ್-908 ನೇ ಕೆಎಸ್ಆರ್ಟಿಸಿ ಬಸ್ಸಿಗೆ ಮೇರಿ ಹಿಲ್ ಬಸ್ಸ್ ಸ್ಟಾಪನಲ್ಲಿ  ರೂಟ್ ನಂಬ್ರ: 19,  ಕೆಎ-19-ಡಿ-5665 ನೇ ಕೆನರಾ ಹೆಸರಿನ ಬಸ್ಸನ್ನು ಅದರ ಚಾಲಕರು ಮುಂದೆ ಹೋಗದಂತೆ ಅಡ್ಡ ನಿಲ್ಲಿಸಿ, ಕೆಎ-19-ಡಿ-5665 ನೇ ಬಸ್ಸಿನ ನಿರ್ವಾಹಕರು ಪಿರ್ಯಾದುದಾರರು ಕರ್ತವ್ಯ ನಿರ್ವಹಿಸುತ್ತಿದ್ದ ಬಸ್ಸಿನ ಮುಂದಿನ ಬಾಗಿಲ ಬಳಿಗೆ ಹೋಗಿ ಪಿರ್ಯಾದಿದಾರರ ಮೈ ಮೇಲೆ ಕೈ ಹಾಕಿ ಶರ್ಟ್‌‌ನ್ನು ಎಳೆದು ಶರ್ಟಿನ ಬಲ ಬದಿಯ ಜೇಬಿನಲ್ಲಿದ್ದ 2.000 ರೂಪಾಯಿ ಮತ್ತು ಮೂಬೈಲ್ ಪೋನನ್ನು ಎಳೆದುಕೊಂಡು ಇನ್ನೂ ಮುಂದಕ್ಕೆ ಇಲ್ಲಿ ಜನ ಹತ್ತಿಸಿದರೇ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರ ಮತ್ತು ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಕೆಎಸ್ಆರ್‌‌ಟಿಸಿ ಬಸ್ಸಿನ ಚಾಲಕರಾದ ಗುರುವಯ್ಯ ಮಠಪತಿ ಎಂಬವರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ.

No comments:

Post a Comment