Wednesday, January 21, 2015

Daily Crime Reports : 21-01-2015

ದಿನಾಂಕ 21.01.201516:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
3
ಮನೆ ಕಳವು ಪ್ರಕರಣ
:
1
ಸಾಮಾನ್ಯ ಕಳವು
:
1
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
14
ವಂಚನೆ ಪ್ರಕರಣ        
:
1
ಮನುಷ್ಯ ಕಾಣೆ ಪ್ರಕರಣ
:
1
ಇತರ ಪ್ರಕರಣ
:
2





























1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 19-01-2015 ರಂದು ಅಪರಾಹ್ನ 04:45 ಗಂಟೆ ಸಮಯಕ್ಕೆ ಮಂಗಳೂರು ಜಿಲ್ಲಾ ಕಾರಾಗೃಹದ "" ಬ್ಲಾಕನಲ್ಲಿದ್ದ ವಿಚಾರಣಾ ಬಂಧಿಗಳಾದ ಅರಾಪತ್ ಮತ್ತು ಅಬ್ದುಲ್ ರವುಫ್ ಎಂಬುವರುಗಳನ್ನು "ಬಿ" ವಿಭಾಗದಲ್ಲಿರುವ ವಿಡಿಯೋ ಕಾನ್ಪರೆನ್ಸ ರೂಮಿಗೆ ಕರ್ತವ್ಯನೀರತ ಕಾರಗೃಹದ ಸಿಬ್ಬಂದಿಯವರು ಕರೆದುಕೊಂಡು ಹೋಗುವ ಸಮಯ " ಬಿ" ವಿಭಾಗದ 1 ನೇ ಕೋಠಡಿಯಲ್ಲಿದ್ದ ವಿಚಾರಣಾ ಬಂಧಿಗಳು ಕಿಟಕಿ, ಬಾಗಿಲುಗಳ ಮೋಲಕ ಕರ್ತವ್ಯ ನೀರತ ಸಿಬ್ಬಂದಿಯವರ ಮೇಲೆ ಸಾಂಬಾರು, ಚಪ್ಪಲಿಗಳನ್ನು ಎರಚಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು  ಈ ಘಟನೆಗೆ ಪ್ರತಿಯಾಗಿ ಕಾರಾಗೃಹದ "" ವಿಭಾಗದ ಕೈದಿಗಳು " " ವಿಬಾಗದಲ್ಲಿ ಅಳವಡಿಸಿರುವ  ಸಿ ಸಿ ಕ್ಯಾಮರಗಳನ್ನು ಹಾನಿಗೋಳಿಸಿ ನಷ್ಟವುಂಟುಮಾಡಿರುವುದಾಗಿದೆ.

2.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಪಿ. ಆರ್ಮುಗಮ್ ರವರು ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಇರುವ ಈಶ್ವರಿ ಗ್ಲೋಬಲ್ ಮೆಟಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಪಾಲುದಾರರಾಗಿದ್ದು ಹಳೇಯ ಬ್ಯಾಟರಿಗಳನ್ನು ಖರೀದಿಸಿ ಲೆಡ್  ಆಗಿ ಪರಿವರ್ತಿಸಿ, ಪರಿವರ್ತಿಸಿದ ಲೆಡ್ ಡೈ ಗಳನ್ನು ಇತರ ಕಂಪನಿಗಳಿಗೆ ಎಕ್ಸ್ ಪೋರ್ಟ್ ಮಾಡುತ್ತಿರುವುದಾಗಿದೆ. ಹೀಗಿರುವುವಾಗ ಸುಮಾರು 3 ತಿಂಗಳಿನಿಂದ ಕಂಪನಿಯ ಉತ್ಪಾದನೆಯಲ್ಲಿ ನಮಗೆ ನಷ್ಟ ಕಂಡು ಬರುತ್ತಿದ್ದು ಈ ಬಗ್ಗೆ ಲೆಕ್ಕ ಪತ್ರ ಪರೀಶೀಲಿಸಿದಲ್ಲಿ ಉತ್ಪಾದನೆಯಾದ ಸುಮಾರು 7,50,000/- ಮೌಲ್ಯದ ಲೆಡ್ ಡೈಗಳನ್ನು ನಮ್ಮ ಗಮನಕ್ಕೆ ಬಾರದೆ ಕಂಪನಿಯ ಗೋಡಾಮಿನಿಂದ ಕಳವು ಮಾಡಿರುವುದು ಕಂಡು ಬಂದಿದ್ದು, ಇದನ್ನು ಯಾರೋ ಕಳ್ಳರು ಕಂಪನಿಯ ಗೋಡಾಮಿನಿಂದ ಕಳವು ಮಾಡಿಕೊಂಡು ಹೋಗಿರುವುದಾಗಿದೆ.

3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-01-2015 ರಂದು ರಾತ್ರಿ ಸುಮಾರು 8:30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಶಾಫಿ ರವರು ತನ್ನ ಸ್ನೇಹಿತ ಶರೀಪ್ ಎಂಬವರ ಜೊತೆ ಮಂಗಳೂರು ತಾಲೂಕು ಅಂಬ್ದಮೊಗರು ಗ್ರಾಮದ ಬರುವ ಎಂಬಲ್ಲಿಗೆ ಬಂದಾಗ ಅಲ್ಲಿ ಕಾದು ನಿಂತಿದ್ದ ಆರೋಪಿಗಳು ಅಕ್ರಮ ಕೂಟ ಸೇರಿಕೊಂಡು ಅಂಬ್ಲಮೊಗರು ಅಡು ಎಂಬಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದ ವೇಳೆ ನಡೆದ ಮಾತುಕತೆಯ ದ್ವೇಷದಿಂದ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ, ಅವ್ಯಾಚ್ಯ ಶಬ್ದಗಳಿಂದ ಬೈದು, ಆರೋಪಿಗಳ ಪೈಕಿ ಪರ್ವೇಜ್ ಎಂಬವರು ಮರದ ತುಂಡಿನಿಂದ ತಲೆಗೆ ಹೊಡೆದಿದ್ದು, ಇತರರು ಕೈಯಿಂದ ಹೊಡೆದಿರುತ್ತಾರೆ.

4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಕಬೀರ್ ರವರಿಗೆ ಅಂಬ್ಲಮೊಗರು ಮದಕ ಅಡು ಎಂಬಲ್ಲಿ ದಿನಾಂಕ 18-01-2015 ರಂದು ಸಂಜೆ 5-30 ಗಂಟೆಗೆ  ಕ್ರಿಕೆಟ್  ಪದ್ಯಾಟದ ಅಂಪೈರ್ ತೀರ್ಮಾನದ ಮಾತುಕತೆಯಾಗಿ ಮದಕ ನಿವಾಸಿಗಳಾದ ಅನ್ಸಾರ್, ಸಲ್ಮಾನ್, ಅಶ್ಪರ್, ಶಾಹುಲ್, ಶಾಫಿ, ಮತ್ತು ಇತರರು ಕೈಯಿಂದ ಹಾಗೂ ಮರದ ಕೋಲಿನಿಂದ ಹೊಡೆದುದಲ್ಲದೆ ಜಗಳ ಬಿಡಿಸಲು ಬಂದ ಇರ್ಷಾದ್  ಮತ್ತು ಫರ್ವೇಜ್ ರವರಿಗೂ ಕೂಡ ಆರೋಪಿಗಳು ಹಲ್ಲೆ  ಮಾಡಿರುತ್ತಾರೆ.

5.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 16-01-2015 ರಂದು ಸಂಜೆ 6-00 ಗಂಟೆಗೆ ಬಂಟ್ವಾಳ ತಾಲೂಕು, ಫಜೀರು ಗ್ರಾಮದ  ಇನ್ಫೋಸಿಸ್ ಬಳಿದೇರಳಕಟ್ಟೆಯಿಂದ ಮುಡಿಪು ಕಡೆಗೆ  ಆರೋಪಿ ಅಬ್ದುಲ್ ಮಜೀದ್ರವರು  ಅವರ ಬಾಬ್ತು ಬುಲೆರೋ ಪಿಕ್ಅಪ್  ಕೆಎ-19-ಎಎ-1390ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ  ಚಲಾಯಿಸಿ ಬಂಟ್ವಾಳ ತಾಲೂಕು, ಫಜೀರು ಗ್ರಾಮದ  ಇನ್ಫೋಸಿಸ್ ಬಳಿ ವಾಹನ ಸ್ಕಿಡ್ ಆಗಿ ಬಿದ್ದು, ಸದ್ರಿ ವಾಹನ ಎಡಬದಿಯಲ್ಲಿ  ಕುಳಿತ ಅಬೂಬಕ್ಕರ್ ರವರಿಗೆ ಎಡ ಕೈ ಕೋಲು ಕೈ ಮುರಿತದ ತೀವ್ರ ಗಾಯವಾಗಿರುತ್ತದೆ. ಸದ್ರಿಯವರನ್ನು ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

6.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಬಿಜೈ   ಬಳಿ ಇರುವ ಭಾರತ್ ಮಾಲ್ ಫಿಜಾಹಟ್ ನಲ್ಲಿ ಕೆಲಸ ಮಾಡುತ್ತಿದ್ದ  ಪಿರ್ಯಾದಿದಾರರಾದ ಶ್ರೀಮತಿ ಸೌಮ್ಯ ಕೆ. ರವರು ಮತ್ತು ಶೆರಿನ್ ಎಂಬವರು ದಿನಾಂಕ 30/12/2014  ರಂದು ಮದುವೆ ಆಗಿದ್ದರುಮದುವೆಯಾದ ನಂತರ ಕೆಲಸವನ್ನು ಬಿಟ್ಟು ಮಾಲೆಮಾರ್ ನಲ್ಲಿ ವಾಸಮಾಡಿಕೊಂಡಿದ್ದರುದಿನಾಂಕ 10012015 ರಂದು ಪಿರ್ಯಾದಿದಾರರು ಗಂಡ ಶೆರಿನ್  ತನ್ನ ತಾಯಿ ಮಾನೆಯಾದ  ಕೇರಳ ರಾಜ್ಯಕ್ಕೆ   ಎರುತ್ತಿಕಲ್ ಗೆ  ಹೋಗಿ ಬರುವುದಾಗಿ ತಿಳಿಸಿದಂತೆ ಅದೇ  ದಿನ ಸಂಜೆ  6.30  ಗಂಟೆಗೆ ಪಿರ್ಯಾದಿದಾರರು ಶೆರಿನ್ ನನ್ನು ಮಂಗಳೂರು ಸೆಂಟ್ರಲ್ ರೈಲ್ವೇ ಸ್ಟೇಶನ್ ನಲ್ಲಿ ಬಿಟ್ಟು ಬಂದಿದ್ದು ದಿನಾಂಕ 11/01/2015 ರಂದು ಬೆಳಿಗ್ಗೆ  5 ಗಂಟೆಗೆ  ಶೆರಿನ್  ಪಿರ್ಯಾದುದಾರರಿಗೆ  ಪೋನ್ ಮಾಡಿ ತಾನು ಊರು  ತಲುಪಿರುವುದಾಗಿ  ತಿಳಿಸಿದ್ದು, ಆ ನಂತರ ಪಿರ್ಯಾದಿದಾರರೂ ಪೋನ್ ಮಾಡಿದರೂ ಶೆರಿನ್ ಪೋನ್ ಕರೆ ಸ್ವೀಕರಿಸದೇ ಇದ್ದು ಪಿರ್ಯಾದಿದಾರರು ಶೆರಿನ್ ನ  ಮನೆಗೆ ಪೋನ್ ಮಾಡಿ  ವಿಚಾರಿಸಿಕೊಂಡಾಗ ಮನೆಯವರು ತಮಗೇನು ತಿಳಿದಿರುದ್ದಿಲ್ಲವಾಗಿ ತಿಳಿಸಿದ್ದುಸ್ನೇಹಿತರಲ್ಲಿ ಪರಿಚಯದವರಲ್ಲಿ ವಿಚಾರಿಸಿಕೊಂಡಲ್ಲಿ  ಗಂಡನ  ಬಗ್ಗೆ ಯಾವುದೇ ಸುಳಿವು   ದೊರೆಯದೇ ಇದ್ದು ಕಾಣೆಯಾಗಿರುತ್ತಾರೆ.

7.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18/01/2015 ರಂದು ಫಿರ್ಯಾದುದಾರರಾದ ಶ್ರೀ ಪ್ರಭಾಕರ್ ರವರ ಅಕ್ಕ ಭಾನುಮತಿಯವರು ತನ್ನ ಮಗಳು ನೀಶಾಳೊಂದಿಗೆ ಕದ್ರಿ ದೆವಸ್ತಾನದ ಜಾತ್ರೆಗೆ ಹೋಗಿ ಮನೆಗೆ ತೆರಳುತ್ತಿದ್ದಾಗ ಸಮಯ ಸುಮಾರು 11:40 ಗಂಟೆಗೆ ಕದ್ರಿ ಬಲ್ಲಾಳ ಗ್ಯಾರೆಜ್ ಬಳಿ ತಲುಪಿದಾಗ ಕೆ ಎ 19 ಡಿ 8023 ನೇ ನಂಬ್ರ ಮಿನಿ ಗೂಡ್ಸ ಟೆಂಪೋವನ್ನು ಅದರ ಚಾಲಕ ಅಬ್ದುಲ್ ರಶಿದ ಎಂಬಾತನು ಮಲ್ಲಿಕಟ್ಟೆಯಿಂದ ನಂತೂರು ಕಡೆಗೆ ಹಾದು ಹೋಗುವ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಾನುಮತಿಯವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಬಾನುಮತಿಯವರ ತಲೆಗೆ ಗಂಭಿರ ಸ್ವರೂಪದ ರಕ್ತ ಗಾಯವಾಗಿದ್ದು ಬಲಕೈಮೊಣಗಂಟಿಗೆ ಮತ್ತು ಬಲಕೈ ಪಾದಕ್ಕೆ ರಕ್ತ ಗಾಯವಾಗಿದ್ದು ಗಾಯಾಳು ಪ್ರಜ್ಞಾ ಹೀನ ಸ್ಥಿತಿಯಲ್ಲಿ ಮಂಗಳೂರಿನ ಜ್ಯೋತಿ ವೃತ್ತದ ಬಳಿಯ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಆರೋಪಿಯು ಅಪಘಾತದ ಬಳಿಕ ವಾಹನವನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಆರೋಪಿಯು ಬಾನುಮತಿಯವರಿಗೆ ಡಿಕ್ಕಿ ಪಡಿಸುವುದಕ್ಕೆ ಮುಂದೆ ಮಲ್ಲಿಕಟ್ಟೆಯಲ್ಲಿರುವ ಡಾ|| ಕ್ರಿಸ್ಟೋಪರ್ಸಿ ಪಾಯಸ್ ಎಂಬವರ ಮನೆಯ ಕಂಪೌಂಡ್ಗೋಡೆಗೆ ಡಿಕ್ಕಿ ಪಡಿಸಿ ಅಲ್ಲಿಂದ ಪರಾರಿಯಾಗಿ ಬರುತ್ತಾ ಪಿರ್ಯಾದಿದಾರರ ಅಕ್ಕ ಬಾನುಮತಿಯವರಿಗೆ ಡಿಕ್ಕಿ ಪಡಿಸಿ ಅಲ್ಲಿಯೂ ವಾಹನವನ್ನು ನಿಲ್ಲಸದೇ ಪರಾರಿಯಾದವನು ಕೂಳೂರು ಸಮೀಪ  ರಸ್ತೆ ಬದಿ ನಿಂತಿದ್ದ ಟಿಪ್ಪರ್ಲಾರಿಯೊಂದಕ್ಕೆ ಡಿಕ್ಕಿ ಯಾಗಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾಗಿ ತಿಳಿದು ಬಂದಿರುತ್ತದೆ.

8.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19.01.2015 ರಂದು ರಾತ್ರಿ ಸುಮಾರು 8:00 ಗಂಟೆಗೆ ಬಂಟ್ವಾಳ ತಾಲೂಕು, ನರಿಂಗಾನ ಗ್ರಾಮದ ಕಂಬಳ ಮನೆ ಎಂಬಲ್ಲಿರುವ ಫಿರ್ಯಾದಿದಾರರಾದ ಶ್ರೀ ನಾರಾಯಣ ಬಂಗೇರಾ ರವರ ಮನೆಯ ಅಂಗಳಕ್ಕೆ ಆರೋಪಿಗಳು ಬಂದು ಫಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಆರೋಪಿಗಳ ಪೈಕಿ ಪ್ರವೀಣ್ಮತ್ತು ಶರತ್ರವರು ಫಿರ್ಯಾದಿದಾರರ  ಹಣೆಯ ಮೇಲ್ಬಾಗಕ್ಕೆ ಹಾಗೂ ಕೈಗಳಿಗೆ ಮರದ ಸೊಂಟೆಯಿಂದ ಹೊಡೆದುದ್ದಲ್ಲದೇ ಆರೋಪಿ ಸುರೇಂದ್ರನು ಫಿರ್ಯಾದಿದಾರರ ಮುಖಕ್ಕೆ ಮತ್ತು ಕೈಗೆ ಕೈಗಳಿಂದ ಹೊಡೆದಿದ್ದು ಅಲ್ಲದೇ ಮುಂದಕ್ಕೆ ಜಾಗದ ವಿಚಾರಕ್ಕೆ ಬಂದಲ್ಲಿ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಗಾಯಾಳು ಫಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

9.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ ; 17-01-2015 ರಂದು ರಾತ್ರಿ 10.30 ಗಂಟೆಗೆ ಪಿರ್ಯಾದಿದಾರರ ಶ್ರೀ ತಿಲಕ್ ರಾಜ್ ರವರು ಗಂಟಾಲ್ ಕಟ್ಟೆಯಿಂದ ಮೂಡಬಿದ್ರೆ ಕಡೆಗೆ ತನ್ನ ಬಾಬ್ತು ಮೋಟಾರ್ ಸೈಕಲ್ ನೇ ಕೆ ಎ 19 ಇಕೆ 8009 ನೇದರಲ್ಲಿ ಸಹಸವಾರರೊಂದಿಗೆ ಬರುತ್ತಿರುವಾಗ ಎಕ್ಸ್ ಲೆಂಟ್ ಕಾಲೇಜಿನ ನಾಮ ಪಲಕ ಇರವುಲ್ಲಿ ತಲುಪುವಾಗ ಮೂಡಬಿದ್ರೆ ಕಡೆಯಿಂದ ಒಂದು ಮೋಟಾರ್ ಸೈಕಲ್ ಅದರ ಸವಾರ ಅತೀ ವೇಗ ಹಾಗೊ ಅಜಾಗೂರುಕತೆಯಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಡಾಮರ್ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಎಡಕಣ್ಣಿನ ಕೆಳಗೆ ಮುರಿತದ ಗಾಯವಾಗಿರುತ್ತದೆ. ಸಹಸವಾರರಿಗೆ ತರಚಿದ ಗಾಯವಾಗಿರುತ್ತದೆ. ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಆಳ್ವಾಸ್ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಮಾಡಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಕೆ ಎಂ ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.

10.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 20-01-2015 ರಂದು ಬೆಳಿಗ್ಗೆ 5-30 ಗಂಟೆಗೆ ಮಂಗಳೂರು ತಾಲೂಕು, ಬೆಳ್ಮ ಗ್ರಾಮದ  ದೇರಳಕಟ್ಟೆ ಮೋರ್ ಮಾರ್ಕೆಟ್ ಬಳಿಕುತ್ತಾರ್ ಪದವು ಕಡೆಯಿಂದ ಕೊಣಾಜೆ ಕಡೆಗೆ  ಆರೋಪಿ ಮಹಮ್ಮದ್ ಸಂಶುದ್ದೀನ್ ರವರು  ಅವರ ಬಾಬ್ತು ಆಲ್ಟೋ ಕಾರು  ಕೆಎ-19-ಪಿ-9352ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ  ಚಲಾಯಿಸಿ  ರಸ್ತೆಯ ತೀರಾ ಬಲಕ್ಕೆ ಬಂದು ಕಚ್ಚಾ ರಸ್ತೆಯಲ್ಲಿ ನಿಂತುಕೊಂಡಿದ್ದ, ಪಿರ್ಯಾದಿದಾರರಾದ ಶ್ರೀ ಕೆ.ಟಿ. ಜಾನಿ ರವರಿಗೂ ಮತ್ತು ಪಿರ್ಯಾದಿದಾರರ ಹೆಂಡತಿ ಲಿಸ್ಸಿ ಜಾನಿಗೂ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ತಲೆಗೆ , ಮೈಕೈಗೆ ಗಾಯವಾಗಿದ್ದು, ಪಿರ್ಯಾದಿದಾರರ ಹೆಂಡತಿಗೆ ಎಡಕಾಲಿನ ಕೋಲುಕಾಲಿಗೆ ಮೂಳೆ ಮುರಿತದ ತೀವ್ರಗಾಯವಾಗಿರುತ್ತದೆ. ಸದ್ರಿಯವರನ್ನು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಮಹಮದ್ ಸಂಶುದ್ದಿನ್ ಮತ್ತು ಇತರರು ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ.

11.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20/01/2015 ರಂದು ಸಮಯ ಸುಮಾರು ಬೆಳಿಗ್ಗೆ 7:45 ಗಂಟೆಗೆ ಫಿರ್ಯಾದುದಾರರಾದ ಕಿಂಬರ್ಲಿ ನೊರೋನ್ಹಾ ರವರು ತಮ್ಮ ಬಾಬ್ತು ಸ್ಕೂಟರ್ ನಂಬ್ರ  KA-19-EL-8808 ನೇ ದ ರಲ್ಲಿ ಸವಾರಳಾಗಿದ್ದುಕೊಂಡು ನಾಗುರಿ ಕಡೆಯಿಂದ  ಫಾದರ್ ಮುಲ್ಲರ್ ಆಸ್ಪತ್ರೆಯ ಕಡೆಗೆ ಬರುವರೆ ಪಂಪವೆಲ್ ಸರ್ಕಲ್ ತಲುಪಿದಾಗ ಬಸ್ಸು ನಂಬ್ರ KL-19-A-43 ನೇ ದನ್ನು ಅದರ ಚಾಲಕ NH-66 ರ ತೋಕ್ಕೊಟ್ಟು ಕಡೆಯಿಂದ ಪಂಪವೆಲ್ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜಿವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರ ಸ್ಕೂಟರಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದುದಾರರು ಡಾಮಾರು ರಸ್ತೆಗೆ ಬಿದ್ದು ಎಡಕಾಲಿಗೆ ಗುದ್ದಿದ ನೋವು ಮತ್ತು ತರಚಿದ ಗಾಯ ಉಂಟಾಗಿ ಕೋಲಾಸೊ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.

12.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-01-2015 ರಂದು 23-45 ಗಂಟೆ ಸಮಯ ಲಘು ಸರಕು ವಾಹನ ನಂಬ್ರ ಕೆ ಎ 19 ಡಿ 8023 ನ್ನು ಅದರ ಚಾಲಕ ಅಬ್ದುಲ್ ರಶೀದ್ ಎಂಬವರು ಕೊಟ್ಟಾರ ಚೌಕಿ ಕಡೆಯಿಂದ ಪಣಂಬೂರು ಕಡೆಗೆ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ಎನ್ ಹೆಚ್ 66 ರ ಕೂಳೂರು ಸೇತುವೆ ಬಳಿ ರಸ್ತೆಯ ಬದಿ ನಿಲ್ಲಿಸಿದ್ದ ಟಿಪ್ಪರ್ ಲಾರಿ ನಂಬ್ರ ಕೆಎ 05 ಎಡಿ 3813 ನೇದರ ಹಿಂಬಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಗಂಬೀರ ಸ್ವರೂಪದ ಗಾಯವುಂಟಾಗಿ ಮಂಗಳೂರು ಎ ಜೆ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿರುವುದಾಗಿಯೂ ಇದೇ ವಾಹನವು ನಗರದ ಒಳಗಡೆಯು ಅಪಘಾತ ಮಾಡಿ ಬಂದಿರುವುದಾಗಿದೆ.

13.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18/01/2015 ರಂದು ಸಮಯ ಸುಮಾರು ರಾತ್ರಿ 21:00 ಗಂಟೆಗೆ ಫಿರ್ಯಾದುದಾರರಾದ ಶ್ರೀ ಬಸವರಾಜ್ ರವರು ಮಂಗಳೂರು ನಗರದ ಟೌನ್ ಹಾಲ್ ಎದುರುಗಡೆ ಕಾಂಕ್ರಿಟ್ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೊಗುತ್ತಿರುವಾಗ ಫಿರ್ಯಾದುದಾರರ ಹಿಂದುಗಡೆಯಿಂದ ಟೆಂಪೋ ನಂಬ್ರ KA-19-A-7287 ನೇ ದನ್ನು ಅದರ ಚಾಲಕ ಟೌನ್ ಹಾಲ್ ಕಡೆಯಿಂದ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜಿವಕ್ಕೆ ಹಾನಿಯಾಗುವ ರಿತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದುದಾರರಿಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದುದಾರರು ಕಾಂಕ್ರಿಟ್ ರಸ್ತೆಗೆ ಬಿದ್ದು ಬಲಕಾಲಿನ ಪಾದಕ್ಕೆ ಗಂಭೀರ ಸ್ವರೂಪದ ರಕ್ತ ಗಾಯವಾಗಿರುತ್ತದೆ ಹಾಗೂ ಬಲ ಪಕ್ಕೆಗೆ ಗುದ್ದಿದ ನೋವು ಉಂಟಾಗಿ ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿದ್ದು ಅಪಘಾತ ಪಡಿಸಿದ ನಂತರ ಟೆಂಪೊವನ್ನು ಅದರ ಚಾಲಕ ನಿಲ್ಲಿಸದೆ ಹೊಗಿರುತ್ತಾನೆ.

14.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 20-01-2015 ರಂದು ಮಧ್ಯಾಹ್ನ 1-45 ಗಂಟೆಗೆ ಮಂಗಳೂರು ತಾಲೂಕು ಬೆಳ್ಮ ಗ್ರಾಮದ ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಯ ಮೇನ್ ಗೇಟ್ ಎದುರುಗಡೆಯಲ್ಲಿ ಬೈಕ್ ನಂಬ್ರ KA-19-EL-7992  ಸವಾರ ಸಂಶುರವರು ಕುತ್ತಾರು ಪದವು  ಕಡೆಯಿಂದ ದೇರಳಕಟ್ಟೆ ಕಡೆಗೆ ಚಲಾಯಿಸಿಕೊಂಡು ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಯ ಮೇನ್ ಗೇಟ್ ತಲುಪಿದಾಗ ಯೆನಪೋಯ ಆಸ್ಪತ್ರೆಯ ಮೇನ್ ಗೇಟ್ ನಿಂದ ಅಡ್ಡವಾಗಿ ಕಾರು ನಂಬ್ರ KL-31-C-5097ರ ಸವಾರಳಾದ ಕು: ಆರತಿ ಅಪ್ಪುಕುಟ್ಟನ್ ಎಂಬವಳು ನಿರ್ಲಕ್ಷತನದಿಂದ ಯಾವುದೇ ಸನ್ನೆ ಮಾಡದೇ ಅಡ್ಡವಾಗಿ ಅತೀ ವೇಗದಿಂದ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ  ಬೈಕಿನ ಸಹಸವಾರಳು ರಸ್ತೆಗೆ ಬಿದ್ದು ಅವಳ ಎಡಕಾಲಿನ ಕೋಲುಕಾಲಿಗೆ ರಕ್ತಗಾಯವಾಗಿರುತ್ತದೆ.

15.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-01-2015 ರಂದು ಮದ್ಯಾಹ್ನ 13-15 ಗಂಟೆ ಸಮಯ ಫಿರ್ಯಾದಿದಾರರಾದ ಶ್ರೀ ನಿತ್ಯಾನಂದ ಪೈ ರವರು ತನ್ನ ಬಾಬ್ತು ಕೆ ಎ- 19 ಆರ್- 1968 ನೇ ಸ್ಕೂಟರ್ ನಲ್ಲಿ ಸುರತ್ಕಲ್ ನಿಂದ ಎಮ್ ಆರ್ ಪಿ ಎಲ್ ರಸ್ತೆಯಲ್ಲಿ ಹೋಗುತ್ತಾ ಸುರತ್ಕಲ್ ಮಾರ್ಕೇಟ್ ಎದುರುಗಡೆ ಇರುವ ಶ್ರೀ ಧೂಮಾವತಿ ದೇವಸ್ಥಾನದ ಎದುರುಗಡೆಯಿರುವ ರಸ್ತೆಯ ಉಬ್ಬಿನಲ್ಲಿ ಚಲಾಯಿಸುತ್ತಿದ್ದಾಗ ಹಿಂದುಗಡೆಯಿಂದ ಆಪಾದಿತ ಚಾಲಕ ಸೈಯದ್ ಅಹಮ್ಮದ್ ರವರು ತನ್ನ ಬಾಬ್ತು ಟ್ಯಾಂಕರ್ ನಂಬ್ರ ಕೆ ಎ- 21 7628 ನೇಯದನ್ನು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ದ್ವಿಚಕ್ರ ವಾಹನದ ಹಿಂದುಗಡೆ ಡಿಕ್ಕಿಹೊಡೆದ ಪರಿಣಾಮ ವಾಹನ ಸಮೇತ ರಸ್ತೆಗೆ ಬಿದ್ದು; ಅವರ ಎಡಕೋಲುಗಾಲಿನ ಮೂಳೆ ಮುರಿತದ ಗಂಭೀರ ಗಾಯಗೊಂಡು ಚಿಕಿತ್ಸೆಗಾಗಿ ಮಂಗಳೂರು ತೇಜಸ್ವಿನಿ ಆಸ್ಪತ್ರಗೆ ದಾಖಲಾಗಿರುತ್ತಾರೆ.

16.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 19/01/2015 ರಂದು ರಾತ್ರಿ ಸುಮಾರು 08-30 ಗಂಟೆಗೆ ಪಿರ್ಯಾದುದಾರರಾದ ಶ್ರೀ ಜಗದೀಶ್ ಆಳ್ವ ರವರು ಮತ್ತು ಅವರ ಮನೆಯವರು, ನೆರೆಕರೆಯ ಮನೆಯಲ್ಲಿ ನಾಗಮಂಡಲ ಕಾರ್ಯಕ್ರಮ ವೀಕ್ಷೀಸಲು ಮನೆಗೆ ಬೀಗ ಹಾಕಿ ಹೋಗಿದ್ದವರು ಕಾರ್ಯಕ್ರಮ ವಿಕ್ಷೀಸಿ ರಾತ್ರಿ ಸುಮಾರು 09-30 ಗಂಟೆಗೆ ಮನೆಗೆ ಬಂದು ಎದುರು ಬಾಗಿಲಿನ ಬೀಗ ತಗೆದು ಮನೆಯೂಳಗೆ ಬಂದು ನೋಡಿದಾಗ, ಮನೆಯ ಪಶ್ಚಿಮ ಭಾಗದ ಕೋಣೆಯಲ್ಲಿದ್ದ ಪೆಟ್ಟಿಗೆಯನ್ನು ತೆಗೆದು ಅದರೂಳಗಿದ್ದ ಸ್ಟೀಲ್ ಡಬ್ಬದಲ್ಲಿದ್ದಂತಹ  ಒಂದು ಜೋತೆ ಬಂಗಾರದ ಬೆಂಡೂಲೆ, ಒಂದು ಬಂಗಾರದ ಪ್ಲೇನ್ ಚೈನ್, ಮತ್ತು 3 ಬಂಗಾರದ ಮುಗುತಿ  ಒಟ್ಟು ಸುಮಾರು 4 ಪವನ್ ಚಿನ್ನದ ಆಭರಣಗಳನ್ನು ಯಾರೋ ಕಳ್ಳರು ಮನೆಯ ಹಿಂದಿನ ದನದ ಕೂಟ್ಟಿಗೆಯ ಬಾಗಿಲಿನಿಂದ ಒಳಗೆ ಪ್ರವೇಶಿಸಿ  ಕಳವು ಮಾಡಿಕೂಂಡು ಹೋಗಿದ್ದು ಇದರ ಅಂದಾಜು ಮೌಲ್ಯ 60,000/- ಆಗಿರುತ್ತದೆ.

17.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-01-2015 ರಂದು ಬೆಳಿಗ್ಗೆ 09-45 ಗಂಟೆಗೆ  ಫಿರ್ಯಾದಿದಾರರಾದ ಶ್ರೀ ಜೈ ಕೃಷ್ಣ ರವರು ಹಳೆಯಂಗಡಿ ರಾ.ಹೆ 66 ರಲ್ಲಿರುವ ಶ್ರೀಯಾನ್ ಸರ್ವೀಸ್ ಸೆಂಟರನಿಂದ ಹೊರಗೆ ಬರುತ್ತಿರುವಾಗ ಆಪಾದಿತ ಕೆ ಎ 01 ಎನ್ 7419 ನೇ ಮಾರುತಿ ಓಮ್ನಿ ಕಾರಿನ ಚಾಲಕ ಜಯ ಸಿಂಗ್ ಎಂಬವರು ತನ್ನ ಕಾರನ್ನು ಮಂಗಳೂರಿನಿಂದ ಉಡುಪಿಗೆ ಹಾದು ಹೋಗುವ ಏಕಮುಖ ರಸ್ತೆಯ ವಿರುದ್ದ ದಿಕ್ಕಿನಲ್ಲಿ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ತನ್ನ ಎದುರಿನಿಂದ ಬರುತ್ತಿರುವ ನೊಂದಾವಣಿಯಾಗದ ಹೊಸದಾದ ಅಪಾಚ್ಚಿ ಬೈಕ್ ನ್ನು ಚಲಾಯಿಸಿಕೊಂಡು ಬರುತ್ತಿದ್ದ ಪ್ರವೀಣ್ ಎಂಬವರಿಗೆ ಡಿಕ್ಕಿಹೊಡೆದಾಗ ಬೈಕ್ ಮಗುಚಿ ಬಿದ್ದು  ಅದೇ ರಸ್ತೆಯಲ್ಲಿ ಚಲಿಸುತ್ತಿದ್ದ ಲಾರಿ ನಂಬ್ರ ಕೆ.. 52.-5508  ಮುಂಬಾಗದ ಬಲ ಬಾಗದ ಚಕ್ರಕ್ಕೆ ಪ್ರವೀಣರ ಕಾಲುಗಳು ಸಿಲುಕಿ ಮೂಳೆ ಮುರಿತದ ಗಂಬೀರ ಸ್ವರೂಪದ ಗಾಯವಾಗಿರುತ್ತದೆ. ಅವರನ್ನು ಮಕ್ಕಾ  ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿರುವುದಾಗಿದೆ.

18.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-01-2015ರಂದು ಪಿರ್ಯಾಧಿದಾರರಾದ ಶ್ರೀ ಗಣೇಶ್ ಆಚಾರ್ಯರವರು ಕೆಎ-19 ಇಇ-9285 ನಂಬ್ರದ ಮೋಟಾರು ಸೈಕಲಿನಲ್ಲಿ ಸವಾರರಾಗಿ ಗೌರವ್ ಎಂಬವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಕಟೀಲು ದೇವಸ್ಥಾನಕ್ಕೆ ಹೋಗಿ ವಾಪಾಸು ಮನೆಯ ಕಡೆಗೆ ಸೂರಿಂಜೆ ಸುರತ್ಕಲ್ ರಸ್ತೆಯಲ್ಲಿ ಬರುತ್ತಾ ಬೆಳಿಗ್ಗೆ ಸುಮಾರು 7:30 ಗಂಟೆಗೆ ಸೂರಿಂಜೆ ಎಂಬಲ್ಲಿಗೆ ತಲುಪಿದಾಗ ಸುರತ್ಕಲ್ ಕಡೆಯಿಂದ ಶಿಬರೂರು ಕಡೆಗೆ ಕೆಎ-19-ಎಎ-6877 ನಂಬ್ರದ ಬಸ್ಸನ್ನು ಅದರ ಚಾಲಕ ನಾಗರಾಜ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ಪಿರ್ಯಾಧಿದಾರರ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದುಪಿರ್ಯಾದಿದಾರರ ಬಲ ಕೈ ಮೂಳೆ ಮುರಿತದ ಗಾಯವಾಗಿದ್ದು, ಸಹ ಸವಾರ ಗೌರವ್ ರವರಿಗೆ ಬಲ ಕಾಲಿಗೆ ಅಲ್ಪ ಪ್ರಮಾಣದ ತರಚಿದ ಗಾಯವಾಗಿದ್ದು, ಈ ಬಗ್ಗೆ ಚಿಕಿತ್ಸೆಗಾಗಿ ಮಂಗಳೂರು ಎ.ಜೆ ಆಸ್ಪತ್ರೆ ಗೆ ದಾಖಲಾಗಿರುವುದಾಗಿದೆ.

19.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20.01.2015 ರಂದು ಪಿರ್ಯಾದಿದಾರರಾದ ಶ್ರೀ ರಾಮಸ್ವಾಮಿ ರವರು ಅವರ ಬಾಬ್ತು ಕೆಎ.10.ಎಬಿ.7593ನೇ ನಂಬ್ರದ ಟ್ಯಾಂಕರನ್ನು ಗ್ಯಾಸ್ ತುಂಬಿಸಲು ಮಂಗಳೂರಿನಿಂದ ಎಂ ಆರ್ ಪಿ ಎಲ್ ಕಡೆಗೆ  ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಗುತ್ತಾ ಮಧ್ಯಾಹ್ನ ಸುಮಾರು 13.00 ಗಂಟೆಗೆ ಪಣಂಬೂರು ಜಂಕ್ಷನ್ ಬಳಿ  ಕೂಡು ರಸ್ತೆ ಬಳಿ ವಾಹನಗಳ ಓಡಾಟ ಇದ್ದುದರಿಂದ  ನಿಧಾನಿಸಿದಾಗ ತನ್ನ ಹಿಂದಿನಿಂದ ಅಂದರೆ ಮಂಗಳೂರು ಕಡೆಯಿಂದ ಸುರತ್ಕಲ್ ಕಡೆಗೆ ಕೆಎ 19 ಎಂಡಿ 7220ನೇ ನಂಬ್ರದ ಕಾರನ್ನು ಅದರ ಚಾಲಕ ಶ್ರೀಶೈಲರವರು ನಿರ್ಲಕ್ಷ್ಯ ತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿ ಟ್ಯಾಂಕರಿನ ಹಿಂಬದಿಗೆ ಡಿಕ್ಕಿ ಪಡಿಸಿ ಈ ಅಪಘಾತದಿಂದ ಕಾರು ಟ್ಯಾಂಕರಿನಲ್ಲಿ ಸಿಲುಕಿಕೊಂಡು ಕಾರಿನಲ್ಲಿದ್ದ ಚಾಲಕನ ಹಾಗೂ ಶಾಂತ ಬಾಯಿಯವರ ತಲೆ ಹಣೆ ಮುಖ ಮುಂತಾದ  ಭಾಗಗಳಿಗೆ ಗಂಭಿರ ಸ್ವರೂಪದ ಗಾಯವಾಗಿ ಚಿಕಿತ್ಸೆ ಬಗ್ಗೆ  ನಗರದ ಎ.ಜೆ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.

20.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 19.01.2015 ರಂದು ಪಿರ್ಯಾದಿದಾರರಾದ ಶ್ರೀ ಇಂದ್ರಪ್ಪ ರವರು ಅವರ ಮಿತ್ರ ನಾಗರಾಜ ರವರೊಂದಿಗೆ ಬೈಕಂಪಾಡಿಯ ಹೋಟೇಲ್ ಒಂದಕ್ಕೆ ಮಧ್ಯಾಹ್ನ ಊಟಕ್ಕಾಗಿ ನಾಗರಾಜರವರ ಕೆಎ.19. ಎಕ್ಸ್. 0942 ನಂಬ್ರದ ಮೋಟಾರು ಸೈಕಲಿನಲ್ಲಿ ನಾಗರಾಜರವರು ಸವಾರರಾಗಿ ಪಿರ್ಯಾದಿಯು ಸಹಸವಾರರಾಗಿ ಬೈಕಂಪಠಾಡಿಗೆ ಹೋಗಿ ಊಟ ಮುಗಿಸಿ ಬಳಿಕ ಅವರ ಬಾಡಿಗೆ ಮನೆಯಾದ  ಮೀನಾಕಳಿಯಕ್ಕೆ  ಹೋಗುತ್ತಾ ಮಧ್ಯಾಹ್ನ ಸುಮಾರು 14.15 ಗಂಟೆಗೆ ಬೈಕಂಪಾಡಿ ಗಣೇಶ್ ಸಿಮೇಂಟ್ ಗೋಡಾನ್ ಬಳಿಗೆ ತಲುಪಿದಾಗ ಸವಾರ ನಾಗರಾಜನಿಗೆ ಬೈಕ್ ಮೇಲಿನ  ನಿಯಂತ್ರಣ ತಪ್ಪಿ ಬೈಕ್ ಸಮೇತ ರಸ್ತೆಗೆ ಬಿದ್ದು ನಾಗರಾಜರವರ ತಲೆಗೆ ಗಂಭೀರ ಸ್ವರೂಪದ ಗುದ್ದಿದ ಗಾಯವಾಗಿ ಮಂಗಳೂರು ಎ ಜೆ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ. ಗಾಯಾಳುವಿಗೆ ಪ್ರಜ್ಞೆ ಬರುವುದಾಗಿ ತಿಳಿದು ಇಲ್ಲಿಯವರೆಗೆ ಕಾದು ಈ ವರೆಗೆ ಗುಣಮುಖವಾಗದೆ ಪ್ರಜ್ಞೆ ಬಾರದೇ ಇದ್ದುದರಿಂದ ತಡವಾಗಿ ದಿನಾಂಕ 20.01.2015 ರಂದು  ದೂರನ್ನು ನೀಡಿರುವುದಾಗಿದೆ.

21.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-01-2015 ರಂದು ಪಿರ್ಯಾದುದಾರರಾದ ಶ್ರೀ ನವೀನಚಂದ್ರ ಬಿ. ರವರು ತನ್ನ ಬಾಬ್ತು ಕಾರ್ ನಂಬ್ರ ಕೆ..19, ಎಂಸಿ 2152 ನೇ V/W VENTO TDI ಕಾರನ್ನು ಅಜೀಜುದ್ದೀನ್ ರಸ್ತೆಯ ಅಡ್ಡ ರಸ್ತೆಯಲ್ಲಿ ಮಧ್ಯಾಹ್ನ 12.00 ಗಂಟೆಗೆ ನಿಲ್ಲಿಸಿ ಸಾಮಾನು ಖರೀದಿಸಲು ಹೋಗಿದ್ದು ಮದ್ಯಾಹ್ನ ಸುಮಾರು 12.30 ಗಂಟೆಗೆ ಕಾರಿನ ಬಳಿಗೆ  ಬಂದು ನೋಡಿದಾಗ ಕಾರಿನ ಎರಡೂ ಬದಿಯ ಮೂರು ಬಾಗಿಲಿಗಳಿಗೆ ಯಾರೋ ದುರುದ್ದೇಶದಿಂದ ಹರಿತವಾದ ಯಾವುದೋ ಕಬ್ಬಿಣದ ಅಸ್ತ್ರದಲ್ಲಿ ಗೆರೆ ಎಳೆದು ಜಖಂ ಗೊಳಿಸಿದ್ದು ಕಾರಿಗಾಗಿರುವ ನಷ್ಟ ಸುಮಾರು 25 ರಿಂದ 30ಸಾವಿರ ರೂ ಆಗಿರುತ್ತದೆ.

22.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಆರೋಪಿ 1 ನೇ ರೋಜಿ, 2 ನೇ ಜೋಸಕುಟ್ಟಿ ಅಗಷ್ಟಿನ್ ಮತ್ತು 3 ನೇ ಅಂಟೋ ಅಗಷ್ಟಿನ್ ಎಂಬವರು ಪಿರ್ಯಾದುದಾರರಾದ ಎಂ ಅಹಮ್ಮದ್ ಎಂಬವರಲ್ಲಿ  ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ ಪಾಪಲಿಕಾಡ್ ಎಸ್ಟೇಟ್ ಇದ್ದು, ಅದರಲ್ಲಿ 185.5 ಎಕ್ರೆಯಷ್ಟು ಸ್ಥಳವನ್ನು ಒಂದು ಎಕ್ರೆಗೆ 25.50 ಲಕ್ಷ ದಂತೆ ಖರೀದಿಸಿಕೊಂಡಿದ್ದೇವೆ. ಈಗಾಗಲೇ 25 ಕೋಟಿ ರೂಗಳನ್ನು ನಾವು ಮುಂಗಡವಾಗಿ ಅದರ ಮಾಲಕರಿಗೆ ಕೊಟ್ಟಿದ್ದೇವೆಂದು ನಕಲಿ ಎಗ್ರಿಮೆಂಟನ್ನು ತೋರಿಸಿದ್ದು ಅದರಲ್ಲಿರುವ ಸಿಲ್ವರ್  ಮರಗಳನ್ನು ಮಾರಾಟ ಮಾಡುವುದಾಗಿಯೂ ತಿಳಿಸಿದಂತೆ ಪಿರ್ಯಾದಿದಾರರು ಆರೋಪಿಗಳ ಮಾತನ್ನು ನಂಬಿ  1 ಕೋಟಿ 50 ಲಕ್ಷ ರೂಗಳನ್ನು  ಮುಂಗಡವಾಗಿ ನೀಡುವುದಾಗಿ ಒಪ್ಪಿಕೊಂಡಂತೆ ಆರೋಪಿತರು ಮಂಗಳೂರು ನಗರದ ರಾಮಭವನ ಕಾಂಪ್ಲೆಕ್ಸ್ ನಲ್ಲಿರವ ವಕೀಲರ ಕಚೇರಿಯಲ್ಲಿ  ದಿನಾಂಕ 09-10-2014 ರಂದು ಅಗ್ರಿಮೆಂಟ್ ಮಾಡಿ ನಂತರ ಹಣವನ್ನು ಕರಾರು ಪತ್ರಕ್ಕೆ ಅನುಗುಣವಾಗಿ ಪಿರ್ಯಾದಿದಾರರು ಕದ್ರಿ ಎಸ್ .ಬಿ. ಎಂ ಶಾಖೆಯಿಂದ ಒಂದನೇ ಆರೋಪಿತರಿಗೆ RTGS  ಮುಖಾಂತರ ವರ್ಗಾವಣೆ ಮಾಡಿದ್ದು ಆರೋಪಿತರು 1 ಕೊಟಿ 50 ಲಕ್ಷ ರೂಗಳನ್ನು ಪಿರ್ಯಾದುದಾರರಿಂದ ಪಡೆದುಕೊಂಡಿರುತ್ತಾರೆನಂತರ ಆರೋಪಿತರ ಬಗ್ಗೆ ಸಂಶಯಗೊಂಡು ಪಾಪಲಿಕಾಡ್ ಎಸ್ಟೇಟಿನ ಮಾಲಕರಾದ ಕೆ ಪಿ ಬೆಳ್ಳಿಯಪ್ಪರವರನ್ನು ಕಂಡು ವಿಚಾರಿಸಿಕೊಂಡಾಗ ಎಸ್ಟೇಟ್ ಮಾಲಕರು ತಾನು ಯಾರಿಗೂ ಎಸ್ಟೇಟನ್ನು ಮಾರಾಟ ಮಾಡಿಲ್ಲ ಎಂದು ತಿಳಿಸಿದ ಮೇರೆಗೆ   ಪಿರ್ಯಾದುದಾರರು ಆರೋಪಿಗಳನ್ನು ಕಂಡು ವಿಚಾರಿಸಿಕೊಂಡಾಗ ಆರೋಪಿಗಳು  ಪಿರ್ಯಾದುದಾರರಿಂದ ಪಡೆದ ಹಣವನ್ನು ವಾಪಾಸ್ಸು ನೀಡುವುದಾಗಿ  ತಿಳಿಸಿ ವಯನಾಡು ಜಿಲ್ಲೆಯ Indian Overseas Bank Kalpatla ಶಾಖೆಯ, 4 ಚೆಕ್ ಗಳನ್ನು 1.50 ಕೋಟಿ ರೂಗೆ ಹಾಗೂ 1.50 ಕೋಟಿ ರೂ ಗಳಿಗೆ ಬಡ್ಡಿ ಎಂದು 4 ಲಕ್ಷ 28 ಸಾವಿರ ರೂಗಳ ಇನ್ನೊಂದು ಚೆಕನ್ನು ಅಂದರೆ ಒಟ್ಟು 5 ಚೆಕ್ ಗಳನ್ನು ನೀಡಿದ್ದು ಸದ್ರಿ 5 ಚೆಕ್ ಗಳನ್ನು ಪಡೆದ ಪಿರ್ಯಾದುದಾರರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕದ್ರಿ ಬ್ರಾಂಚ್ ಗೆ ಹಾಕಿದಾಗ 5 ಚೆಕ್ ಗಳು ಅಮಾನ್ಯ ಗೊಂಡಿರುತ್ತದೆಆರೋಪಿಗಳು ಪಾಪಲಿಕಾಡು ಎಸ್ಟೇಟ್ ನ ಮಾಲಕರಾದ  ಕೆ.ಪಿ ಬೆಳ್ಳಿಯಪ್ಪ ರವರ ಹೆಸರಿನಲ್ಲಿದ್ದ  ಜಮೀನಿಗೆ ಸಂಬಂದಿಸಿ ನಕಲಿ  ದಾಖಲೆ ಪತ್ರಗಳನ್ನು  ಸೃಷ್ಟಿಸಿ ನಕಲಿ ಸೀಲು ಹಾಗೂ  ನಕಲಿ ಸಹಿಯನ್ನು ಮಾಡಿ ಪಿರ್ಯಾದಿದಾರರಾದ ಎಂ ಅಹಮ್ಮದ್ ರವರಿಂದ 1 ಕೋಟಿ 50 ಲಕ್ಷ ರೂಗಳನ್ನು ಪಡೆದು ವಂಚನೆ ಮಾಡಿರುವುದಾಗಿದೆ.

23.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಜೀತೇಶ್ ಶೆಟ್ಟಿ ರವರ ಅಣ್ಣ ಸುಜೀತ್ಕುಮಾರ್ಎಂಬಾತನು ದಿನಾಂಕ;19.01.2015 ರಂದು ತನ್ನ ಬಾಬ್ತು ಕೆಎ-19-ಇಎ-4111 ನಂಬ್ರದ ಮೊಟಾರ್ಸೈಕಲ್ನಲ್ಲಿ ಅಜ್ಜಿ ಮನೆಯಾದ ಫರಂಗಿಪೇಟೆಯಿಂದ  ಬಿ.ಸಿ ರೋಡ್ಕಡೆಯಿಂದ ಮಂಗಳೂರು ಕಡೆಗೆ ಹಾದುಹೋಗುವ  ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಬರುತ್ತಾ ಸಮಯ ಸುಮಾರು 12.30 ಗಂಟೆಗೆ  ಪಡೀಲ್ಜಂಕ್ಷನ್ತಲುಪಿದಾಗ ಕೆಎ-19-ಎಫ್‌-2939 ನಂಬ್ರದ ಕೆಎಸ್ಆರ್ಟಿಸಿ ಬಸ್ಸನ್ನು ಅದರ ಚಾಲಕ ಚಂದ್ರಶೇಖರ ಎಂಬಾತನು ಕಂಕನಾಡಿ ಕಡೆಯಿಂದ ಬಿ.ಸಿ ರೋಡ್ಕಡೆಗೆ ಮಾನವ ಜೀವಕ್ಕೆ  ಹಾನಿಯಾಗುವ ರೀತಿಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಿ.ಸಿ ರೋಡ್ಕಡೆಯಿಂದ ಮರೋಳಿ ಕಡೆಗೆ ಬರುತ್ತಿದ್ದ ಫಿರ್ಯಾದಿದಾರರ ಅಣ್ಣ ಸುಜೀತ್ಕುಮಾರ್ನು ಸವಾರಿ ಮಾಡುತ್ತಿದ್ದ ಮೋಟಾರ್ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಸುಜೀತ್ಕುಮಾರನು ರಸ್ತೆಗೆ ಬಿದ್ದಿದ್ದು ಆತನ ತಲೆಗೆ, ಮುಖಕ್ಕೆ ಗಂಬೀರ ಸ್ವರೂಪದ ಗಾಯವಾಗಿದ್ದು ಕೈಕಾಲುಗಳಿಗೆ ಕೂಡ ಗಾಯವಾಗಿರುತ್ತದೆಸದ್ರಿ ಫಿರ್ಯಾದಿದಾರರ ಅಣ್ಣ ಸುಜೀತ್ಕುಮಾರ್ನು ಕೊಲೊಸೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಎ-19 ಎಫ್‌-2939 ನಂಬ್ರದ ಕೆಎಸ್ಆರ್ಟಿಸಿ ಬಸ್ಸನ್ನು ಅದರ ಚಾಲಕ ಚಂದ್ರಶೇಖರನು ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿರುವುದೇ ಈ ಅಪಘಾತಕ್ಕೆ ಕಾರಣವಾಗಿದೆ.

No comments:

Post a Comment