Sunday, January 25, 2015

Daily Crime Reports : 24-01-2015

ದೈನಂದಿನ ಅಪರಾದ ವರದಿ.
ದಿನಾಂಕ 24.01.201508:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
0
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
0
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
2
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
0
ಇತರ ಪ್ರಕರಣ
:
1






























1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-01-2015 ರಂದು ಸಮಯ ಸುಮಾರು ಬೆಳಿಗ್ಗೆ 7-30 ಗಂಟೆಗೆ ಬಸ್ಸು ನಂಬ್ರ ಕೆಎ 19-ಎಫ್3144ರ ಚಾಲಕ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದಿಂದ ಕಾಸರಗೋಡ ಕಡೆಗೆ ಹೋಗುವಾಗ ಪಂಪವೆಲ್ ಸರ್ಕಲ್ ತಲುಪುತ್ತಿದಂತೆ ನಂತೂರು ಕಡೆಯಿಂದ ಕಂಕನಾಡಿ ಕಡೆಗೆ ಹೂಗುವ ಲಾರಿ ನಂಬ್ರ ಕೆಎ 25--6059ನೇದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗು ರೀತಿಯಲ್ಲಿ ಪಂಪವೆಲ್ ಸರ್ಕಲ್ ನ್ನು ಬಳಸದೇ ಸರ್ಕಲ್ ನ ಬಲಭಾಗಕ್ಕೆ ಎಕಮುಖ ರಸ್ತೆಯಲ್ಲಿ  ಬಂದು ಪಿರ್ಯಾದುದಾರರಾದ ಶ್ರೀ ಮಹಾಂತೇಶ್ ರವರ ಬಸ್ಸಿಗೆ ಡಿಕ್ಕಿ ಮಾಡಿದ ಪರಿಣಾಮ ಬಸ್ಸಿನ ಬಲಭಾಗದ ಎದುರಿನ ಭಾಗ ಸಂಪೂರ್ಣ ಜಖಂಆಗಿರುತ್ತದೆ ಮತ್ತು ಮುಂದಿನ ದೊಡ್ಡ ಗ್ಲಾಸು ಒಡೆದು ಹೊಗಿರುತ್ತದೆ ಈ ಅಪಘಾತದಿಂದ ಬಸ್ಸಿನಲ್ಲಿದ್ದ ಬಸ್ಸಿನ ನಿರ್ವಾಹಕ ಹಾಗೂ ಮೂರು ಜನ ಮಹಿಳಾ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯವಾಗಿರುತ್ತದೆ.

2.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-01-2015 ರಂದು ರಾತ್ರಿ 20-15 ಗಂಟೆ ಸಮಯ ಕುಡುಂಬೂರು-ಜೋಕಟ್ಟೆ ರಸ್ತೆಯಲ್ಲಿ ಫಿರ್ಯಾದಿದಾರರಾದ ಶ್ರೀ ಪಿ.ಎಸ್. ಅಬೂಬಕ್ಕರ್ ರವರು ತನ್ನ ಕಂಪನಿಯ ರೋಲರ್ ಆಪರೇಟರ ಆದ ಗೋಡಿ ರವೀಂದ್ರ ರೆಡ್ಡಿ ಎಂಬವರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಜೋಕಟ್ಟೆ ಕಡೆಯಿಂದ ಕೆ ಎ 19 ವ್ಹಿ 8026 ನೇ ನಂಬ್ರದ ಬೈಕನ್ನು ಆಪಾದಿತ ಸವಾರರಾದ ತಿರುಮಲೇಶ್ವರ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಗೋಡಿ ರವೀಂದ್ರ ರೆಡ್ಡಿಗೆ ಡಿಕ್ಕಿಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು, ಗಂಭೀರ ರೀತಿಯಲ್ಲಿ ತಲೆಗೆ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಮಂಗಳೂರು ಎ ಜೆ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 10-30 ಗಂಟೆ ಸಮಯಕ್ಕೆ ಮೃತಪಟ್ಟಿರುವುದಾಗಿಯೂ ಆಪಾದಿತ ಬೈಕ್ ಸವಾರನು ಅಲ್ಪ ತರದ ಗಾಯಗೊಂಡಿರುವುದಾಗಿದೆ.

3.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-01-2015 ರಂದು ಅಪ್ರಾಪ್ತ ಬಾಲನೊಬ್ಬ 2ನೇ ಬ್ಲಾಕಿನ ಸರಕಾರಿ ಶಾಲೆಗೆ ಹೋದವರು ಅಪರಾಹ್ನ ಸಮಯ ಸುರತ್ಕಲ್ ಕಾಟಿಪಳ್ಳ 2ನೇ ಬ್ಲಾಕಿನ ಮಸೀದಿಗೆ ತೆರಳಿ ಪ್ರಾರ್ಥನೆ ಬಳಿಕ ಮಸೀದಿ ಮೆಟ್ಟಲಿನ ಮೇಲೆ ಇತರರೊಂದಿಗೆ ಕುಳಿತುಕೊಂಡಿದ್ದ ಸಮಯ ಸಲ್ಮಾನ್ ಮತ್ತು ಹಾರೀಸ್ ಎಂಬವರುಗಳು ಅಪ್ರಾಪ್ತ ಬಾಲಕನನ್ನು ಹಿಡಿದು ಎಳೆದುಕೊಂಡು ಮಸೀದಿಯ ಶೌಚಾಲಯದ ಒಳಗೆ ಕೊಂಡು ಹೋಗಿ ಅಲ್ಲಿ ಬಾಲಕನ ಪ್ಯಾಂಟ್, ಅಂಗಿ ಹಾಗೂ ಒಳ ಚಡ್ಡಿಯನ್ನು ತೆಗೆದು ಸಲ್ಮಾನನು ಬಾಲಕನನ್ನು ಗಟ್ಟಿಯಾಗಿ ಹಿಡಿದುಕೊಂಡ ಸಮಯ ಹಾರೀಸನು ಅನೈಸರ್ಗಿಕ ಲೈಗಿಂಕ ಕ್ರಿಯೆಗೆ ಒಳಪಡಿಸಿದ್ದು, ಅಪ್ರಾಪ್ತ ಬಾಲಕ ಬೊಬ್ಬೆ ಹೊಡೆದಾಗ ಅವರಿಬ್ಬರೂ ಒಡಿ ಹೋಗಿದ್ದು ಈ ಘಟನೆ ನಡೆಯುವಾಗ ಅಪರಾಹ್ನ 2-00 ಗಂಟೆ ಆಗಿರಬಹುದಾಗಿದೆ.

No comments:

Post a Comment