Tuesday, January 6, 2015

Daily Crime Report: 06-1-2015

ದಿನಾಂಕ 06.01.201511:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

1

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

2

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-12-2014 ರಂದು ಪಿರ್ಯಾದಿದಾರರಾದ ಶ್ರೀಮತಿ ಆಶಾ ವಾಸ್ ರವರ ಗಂಡನವರಾದ  ಬ್ಲೇನಿ ವಾಸ್ರವರು ಕೆಲಸದ ನಿಮಿತ್ತ ಅವರ ಬಾಬ್ತು ಕಾರು ನಂಬ್ರ ಕೆ.-19-ಎಂ.-5780 ನೇದರಲ್ಲಿ ಕೂಳೂರುಗೆ ತೆರಳಿ ಅಲ್ಲಿಂದ ವಾಪಾಸು ಬರುತ್ತಾ ಮಾಲೆಮಾರ್ಬಳಿಯ ಮಹೀಂದ್ರಾ ಶೋರೂಂಗೆ ಹೋಗಲೆಂದು ಕಾರನ್ನು ರಸ್ತೆಯ ಪೂರ್ವ ಬದಿಯಲ್ಲಿ ನಿಲ್ಲಿಸಿ, ಸಮಯ ಮದ್ಯಾಹ್ನ 12:00 ಗಂಟೆಗೆ ರಸ್ತೆಯನ್ನು ದಾಟಿಕೊಂಡು ರಸ್ತೆ ಮಧ್ಯದ ಡಿವೈಡರ್ಹತ್ತಿ ಪಶ್ಚಿಮದ ಬದಿಯ ರಸ್ತೆಯನ್ನು ದಾಟುವರೇ ಡಿವೈಡರ್ನಿಂದ ಕಾಲನ್ನು ಕೆಳಗೆ ಇಡುತ್ತಿದ್ದಂತೆ, ನಂತೂರು ಕಡೆಯಿಂದ ಲಾರಿ ನಂಬ್ರ ಕೆ.-16--8870 ನೇದನ್ನು ಅದರ ಚಾಲಕನು ನಿರ್ಲಕ್ಷ್ಯತನ ಹಾಗೂ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಗಂಡನವರಿಗೆ  ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಗಂಡನವರು ರಸ್ತೆಗೆ ಬಿದ್ದು, ಪಿರ್ಯಾದಿದಾರರ ಮುಖಕ್ಕೆ ಮತ್ತು ಎದೆಯಲ್ಲಿ ತೀವ್ರ ತರಹದ ಗುದ್ದಿದ ಗಾಯ ಹಾಗೂ ಬಲಕಣ್ಣಿನಲ್ಲಿ ರಕ್ತಕಂದಿದ ಗಾಯ ಉಂಟಾದವರನ್ನು ಲಾರಿಯ ಚಾಲಕರು ಚಿಕಿತ್ಸೆಯ ಬಗ್ಗೆ ನಗರದ .ಜೆ ಆಸ್ಪತ್ರೆಯಲ್ಲಿ ಒಳ-ರೋಗಿಯಾಗಿ ದಾಖಲಿಸಿದ್ದು, ಆದರೆ ಸಮಯ ಅಪಘಾತದಿಂದ ಉಂಟಾದ ಆಘಾತದಿಂದ ಯಾವುದೇ ಪೊಲೀಸ್ಕೇಸು ಅಗತ್ಯವಿಲ್ಲವೆಂದು ತಿಳಿಸಿದ್ದು, ಆದರೆ ಸದ್ರಿಯವರ ಗಾಯವು ತೀವ್ರಗೊಂಡದ್ದರಿಂದ ಪಿರ್ಯಾದಿದಾರರು ಹೆಚ್ಚಿನ ಚಿಕಿತ್ಸೆಯ ಬಗ್ಗೆ ನಗರದ ಫಾದರ್ಮುಲ್ಲರ್ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.

 

2.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ಮಹಾ ನಗರ ಪಾಲಿಕೆಯ ನೀರು ಸರಬರಾಜು ವಿಭಾಗದಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಪಿರ್ಯಾದಿದಾರರಾದ ಶ್ರೀ ನವೀನಾಕ್ಷ ರವರು ಹಾಗೂ ಇತರ ಸುಮಾರು 263 ಮಂದಿ ಕೆಲಸಗಾರರ ಬಾಬ್ತು 2014ನೇ ವರ್ಷದ ಸಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಮಾಸಿಕ ವೇತನದಿಂದ  ಭವಿಷ್ಯ  ನಿಧಿಗೆ ನೌಕರರ ಕೊಡುಗೆ ಬಾಬ್ತು ಪಾವತಿಸಲೆಂದು ಕಡಿತಗೊಳಿಸಿದ ಒಟ್ಟು ರೂ. 4,16,600/-ನ್ನು ಆರೋಪಿತರಾದ ದೀಪಕ್, ನರೇಶ್ ಶೆಣೈ, ಸುರೇಶ್, ಶೀನಾ ಮೂಲ್ಯ, ಪ್ರಭಾಕರ, ರಿಚರ್ಡ ಡಿ'ಸೋಜಾ, ರಾಜೇಶ್, ಅರುಣ್ ಎಂಬವರುಗಳು ಭವಿಷ್ಯ ನಿಧಿಗೆ ಪಾವತಿಸದೇ, ವಂಚಿಸಿ, ಮೋಸಮಾಡಿರುತ್ತಾರೆ.

 

3.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05-01-2015  ರಂದು ಮದ್ಯಾಹ್ನ 3:30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ರವಿ ಪ್ರಸಾದ್ ರವರು ತಾನು ಕೆಲಸ ಮಾಡುತ್ತಿರುವ ಮಂಗಳೂರು ನಗರದ ಕೆ.ಎಸ್‌.ರಾವ್ರೋಡ್ನಲ್ಲಿರುವ ಶಾಪ್ನಲ್ಲಿರುವಾಗ ಕೆ.ಎಸ್‌. ರಾವ್ರೋಡ್ನಿಂದ ಶರವು ಟೆಂಪಲ್ರಸ್ತೆಯ ಕಡೆಗೆ ಕಾರು ನಂಬ್ರ ಕೆ.-19-ಎಂ.-5257 ನೇದ ನ್ನು ಅದರ ಚಾಲಕನು ಅತೀವೇಗ ಮತ್ತು ತೀರಾ ನಿರ್ಲಕ್ಷ್ಯತನದಿಂದ ರಸ್ತೆಯ ಎಡಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಕೆಲಸ ಮಾಡುತ್ತಿದ್ದ ಶಾಪ್ ಕಟ್ಟಡದ ನೆಲ ಅಂತಸ್ತಿಗೆ ಡಿಕ್ಕಿ ಹೊಡೆದು ಗೋಡೆಯ ಗ್ಲಾಸ್ಗಳಿಗೆ ಹಾಗೂ ಗೋಡೆಗೆ ಜಖಂ ಉಂಟಾಗಿರುತ್ತದೆ.

 

4.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-01-15 ರಂದು ಬೆಳಿಗ್ಗೆ 06-30 ಗಂಟೆಗೆ ಕುತ್ತೆತ್ತೂರು ಗ್ರಾಮದ ಜನತಾಬೆಟ್ಟು ಎಂಬಲ್ಲಿಯ ಮೈದಾನದಲ್ಲಿ ಪಿರ್ಯಾದಿದಾರರಾದ ಶ್ರೀ ಸಂಪತ್ ಹಾಗೂ ಕೇಶವ ಶೆಟ್ಟಿ ಎಂಬವರು ಶೆಟಲ್ ಆಟ ಆಡುತ್ತಿದ್ದ ಸಮಯ ಅಲ್ಲಿಗೆ ಬಂದ ಆರೋಪಿಗಳಾದ ಸತೀಶ್, ಲಿತೇಶ್ ಹಾಗೂ ಇತರ ಇಬ್ಬರು ವ್ಯಕ್ತಿಗಳು ಹಳೇ ದ್ವೇಷದಿಂದ ಕೈಯಲ್ಲಿ ತಲವಾರು ಹಿಡಿದುಕೊಂಡು ಬರುತ್ತಿದ್ದಂತೆ ಅವರನ್ನು ಕಂಡ ಕೇಶವ ಶೆಟ್ಟಿ ರವರು ಮೈದಾನದ ಹಿಂಬದಿ ಗಿಡಮರಗಳ ಕಡೆಗೆ ಓಡುತ್ತಿದ್ದಂತೆ ಆರೋಪಿಗಳು ಅವರನ್ನು ಬೆನ್ನಟ್ಟಿ ಅವರ ಮುಖ, ತಲೆ, ಶರೀರಕ್ಕೆ ತೀವ್ರ ತರಹ ಕಡಿದು ಅದರ ಪರಿಣಾಮ ಕೇಶವ ಶೆಟ್ಟಿರವರು ಕುಸಿದು ಬಿದ್ದು ಮೃತಪಟ್ಟಿರುತ್ತಾರೆ ಹಾಗೂ ಆರೋಪಿಗಳು ಪಿರ್ಯಾದಿದಾರರಿಗೆ ನಿನ್ನನ್ನು ಕೂಡ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ.

 

5.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಅಭಿಷೇಕ್ ಕುಮಾರ್ ರವರು ಮೂಲತಃ ಬಿಹಾರದವರಾಗಿದ್ದು, ದಿನಾಂಕ: 20-12-2014 ರಂದು ಮಧ್ಯಾಹ್ನ 12-30 ಗಂಟೆಗೆ ತಾನು ವಾಸ ಮಾಡಿಕೊಂಡಿರುವ ಮಂಗಳೂರು ನಗರದ ಕದ್ರಿ ಶಿವಭಾಗ್ ನಲ್ಲಿರುವ ರತ್ನ ಅಪಾರ್ಟಮೆಂಟ್ ಫ್ಲಾಟ್ ನಂಬ್ರ: 301ನೇದಕ್ಕೆ ಬೀಗವನ್ನು ಹಾಕಿ ತಮ್ಮ ಊರಾದ ಬಿಹಾರಕ್ಕೆ ತೆರಳಿದ್ದು, ದಿನಾಂಕ: 28-12-2014 ರಂದು ರಾತ್ರಿ 21-00 ಗಂಟೆಗೆ ಸದ್ರಿಯವರ ನೆರೆಕರೆಯ ಶ್ರೀಮತಿ. ಜಯಶೀಲಾ ಶೆಟ್ಟಿ ಎಂಬವರು ಪಿರ್ಯಾದಿದಾರರಿಗೆ ದೂರವಾಣಿ ಮೂಲಕ ತಮ್ಮ ಮನೆಯ ಬಾಗಿಲು ಮುರಿದು ತೆರದ ಸ್ಥಿತಿಯಲ್ಲಿರುವುದಾಗಿ ತಿಳಿಸಿದ್ದು, ವಿಷಯ ತಿಳಿದು ಸದ್ರಿಯವರು ದಿನಾಂಕ: 04-01-2015 ರಂದು ಮಂಗಳೂರಿಗೆ ವಾಪಾಸಾಗಿ ಮನೆಯನ್ನು ಪರಿಶೀಲಿಸಿ ನೋಡಲಾಗಿ ಯಾರೋ ಕಳ್ಳರು ಯಾವುದೋ ಆಯುಧವನ್ನು ಉಪಯೋಗಿಸಿ ಮನೆಗೆ ಹಾಕಿದ ಬೀಗವನ್ನು ಮುರಿದು ತೆರೆದು ಮೂಲಕ ಒಳಪ್ರವೇಶಿಸಿ ಮನೆಯ ಬೆಡ್ ರೂಮಿನ ಕಪಾಟಿನಲ್ಲಿಟ್ಟಿದ್ದ ಒಟ್ಟು ಅಂದಾಜು ಮೌಲ್ಯ ರೂ. 24,000/- ಬೆಲೆ ಬಾಳುವ ತಲಾ ಅಂದಾಜು ಸುಮಾರು 5 ಗ್ರಾಂ ತೂಕವಿರುವ 3 ಉಂಗುರಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

6.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02.01.2015 ರಂದು ಸಮಯ ಸುಮಾರು ಸಂಜೆ 06.00 ಗಂಟೆಗೆ ಬೈಕೊಂದನ್ನು ಅದರ ಸವಾರ ಕರಾವಳಿ ಸರ್ಕಲ್ ಕಡೆಯಿಂದ ಒಮೇಗಾ ಆಸ್ಪತ್ರೆಯ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ  ಜೇವಕ್ಕೆ ಹಾನಿಯಾಗುವ ರೀತಿಯಲ್ಲಿ  ಚಲಾಯಿಸಿಕೊಂಡು ಬಂದು ಒಮೇಗಾ ಆಸ್ಪತ್ರೆಯ  ಎದುರುಗಡೆ ರಸ್ತೆಯಲ್ಲಿ  ರಸ್ತೆ ದಾಟುತ್ತಿದ್ದ ಫಿರ್ಯಾದುದಾರರಾದ ಶ್ರೀ ತಿಲಕ್ ರಾಜ್ ರವರ ತಂದೆ ಕೇಶವ ದಾಸ್ ಎಂಬುವರಿಗೆ ಡಿಕ್ಕಿ ಮಾಡಿದ ಪರಿಣಾಮ ಕೇಶವ ದಾಸ್ ರವರು ಕಾಂಕ್ರೀಟು ರಸ್ತೆಗೆ ಬಿದ್ದು ತಲೆಗೆ ಗುದ್ದಿದ ನೋವು ಮತ್ತು ಬಲಕಾಲಿನ ಮೊಣಗಂಟಿಗೆ ತರಚಿದ ಗಾಯ ಉಂಟಾಗಿ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ  .ಸಿ.ಯು ನಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಹಾಗೂ ಅಪಘಾತ ಗಡಿಬಿಡಿಯಲ್ಲಿ   ಬೈಕು ನಂಬ್ರವನ್ನು  ನೋಡಲು ಆಗಿರುವುದಿಲ್ಲ .ಅಪಘಾತ  ಮಾಡಿದ ಬೈಕು ಸವಾರನು ಬೈಕನ್ನು ನಿಲ್ಲಿಸದೇ ಸ್ಥಳದಿಂಧ ಪರಾರಿಯಾಗಿರುತ್ತಾರೆ.

 

7.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-12-2014ರಂದು 14-30 ಗಂಟೆಯಿಂದ 20-30 ಗಂಟೆಯ ಮದ್ಯೆ ಯಾರೋ ಕಳ್ಳರು ಮಂಗಳೂರು ನಗರದ ಪಾಂಡೇಶ್ವರ ಅಮೃತ ನಗರದಲ್ಲಿರುವ . ಎಸ್. ಮೆನ್ಸನ್ ಎಂಬ ಹೆಸರಿನ ಪಿರ್ಯಾದಿದಾರರಾದ ಶ್ರೀ ಅಬ್ದುಲ್ ಹಮೀದ್ ರವರ ವಾಸ್ತವ್ಯದ ಮನೆಯ ಎದುರುಗಡೆ ರಸ್ತೆ ಬದಿಯಲ್ಲಿ ಪಿರ್ಯಾದುದಾರರು ಪಾರ್ಕ್ ಮಾಡಿದ್ದ  ಪಿರ್ಯಾದುದಾರರ ಆರ್. ಸಿ. ಮಾಲಕತ್ವದ 2003ನೇ ಮೋಡಲ್ B.C. YELLOW ಬಣ್ಣದ ಅಂದಾಜು ರೂಪಾಯಿ 10000/- ಬೆಲೆ ಬಾಳುವ KA 19 R 7355 ನೊಂದಣಿ ಸಂಖ್ಯೆಯ ಹೀರೊ ಹೊಂಡಾ ಸ್ಲೈಂಡರ್ ಪ್ಲಸ್ ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ದ್ಚಿಚಕ್ರ ವಾಹನದ ಟೂಲ್ಸ್ ಬಾಕ್ಸ್ ನಲ್ಲಿ ವಾಹನಕ್ಕೆ ಸಂಬಂಧಪಟ್ಟ R.C. ಜೇರಾಕ್ಸ್ ಪ್ರತಿ ಕೂಡ ಇದ್ದು ಕಳವಾದ ದ್ಚಿಚಕ್ರ ವಾಹನವನ್ನು ಕಳವಾದ ದಿನದಿಂದ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.

 

8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 19.12.2014 ರಂದು  ಪಿರ್ಯಾದಿದಾರರಾದ ಶ್ರೀ ಕೆ. ಸುರೇಂದ್ರ ರವರು ಮತ್ತು ಅವರ ಮನೆಯವರು ಕಪಿತಾನಿಯೋದಲ್ಲಿರುವ ತನ್ನ ಮನೆಗೆ ಬೀಗ ಹಾಕಿ ಪೂನಾಕ್ಕೆ ಹೋಗಿದ್ದು, ದಿನಾಂಕ: 04.01.2015 ರಂದು ಸುಮಾರು 11.00 ಗಂಟೆಗೆ ಪಿರ್ಯಾದಿದಾರರ ಬಾವ  ಅವರಿಗೆ ಫೋನ್‌‌ ಮಾಡಿ ಮನೆಗೆ ಕಳ್ಳರು ನುಗ್ಗಿ 5 ಭಾಗಿಲು ಮುರಿದು ಅದರೊಳಗೆ ಇರುವ ವಸ್ತು, ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿಯಾಗಿದೆಯೆಂದು ತಿಳಿಸಿದ್ದು ಅದರಂತೆ ಪಿರ್ಯಾದಿದಾರರು ದಿನ ದಿನಾಂಕ: 05.01.2015 ರಂದು  ಮನೆಗೆ ತಲುಪಿ ನೋಡಲಾಗಿ  2 ಪವನ್‌‌ ತೂಕದ ಚಿನ್ನದ ಕರಿಮಣಿ ಸರ-1, ಕಿವಿಯ ಬೆಂಡೋಲೆ 1/2 ಪವನಿದ್ದು - 2 ಜೊತೆ , ಬೆಳ್ಳಿಯ ಕಳಸ-1, ಬೆಳ್ಳಿಯ ದೀಪ ಮತ್ತು ಹರಿವಾಣ-1, ಬೆಳ್ಳಿಯ ಲೋಟ-2, ಬೆಳ್ಳಿಯ ಕುಂಕುಮ ಮತ್ತು ಅರಸಿನ ಕರಡಿಗೆ-2, Nikkon ಕ್ಯಾಮೆರಾ-1, Rayban Sun glass-1, ನಗದು ರೂ 2000/-, ಬೆಳ್ಳಿಯ ನಾಣ್ಯ-3  ಕಳವಾಗಿರುವುದು ಕಂಡು ಬಂದಿದ್ದು ಕಳವಾದ ಸೊತ್ತಿನ ಅಂದಾಜು ಮೌಲ್ಯ ರೂ 1 ಲಕ್ಷ ಆಗಬಹುದು.

No comments:

Post a Comment