Tuesday, January 20, 2015

Murder Case Cracked Panambur Police : Two Held

        ದಿನಾಂಕ. 12/13-01-2015ರ ರಾತ್ರಿ ವೇಳೆ ಪಣಂಬೂರು ಗ್ರಾಮದ ಮೀನಕಳಿಯ ಎಂಬಲ್ಲಿರುವ ಶ್ರೀ ನರಸಿಂಹ ಐತಾಳ್ ರವರ ಕಂಪೌಂಡ್‌ನಲ್ಲಿರುವ ಕಟ್ಟಡದ  1ನೇ ಮಹಡಿಯ ರೂಂ. ನಂ. 6ರಲ್ಲಿ  ವಾಸವಾಗಿದ್ದ ಮಧ್ಯ ಪ್ರದೇಶ ಮೂಲದ  ಮಹಿಳೆ ಕಲ್ಪನಾಳನ್ನು ಆಕೆಯ ಗಂಡ ಹಾಗೂ ಗಂಡನ ಸಂಬಂಧಿ ಇಲ್ಲದ ಸಮಯ ನೋಡಿ ಯಾರೋ ದುಷ್ಕರ್ಮಿಗಳು ರೂಂನ ಬಾಗಿಲನ್ನು ಬಲತ್ಕಾರವಾಗಿ ದೂಡಿ ಒಳಪ್ರವೇಶಿಸಿ ಆಕೆಯನ್ನು ಅತ್ಯಾಚಾರ ಮಾಡುವ ಸಲುವಾಗಿ ಪ್ರಯತ್ನಿಸಿ ಒಪ್ಪದೇ ಇದ್ದಾಗ ಕತ್ತಿಯಿಂದ  ಕಡಿದು ಮತ್ತು ಕಬ್ಬಿಣದ ಪೈಪ್ ತುಂಡಿನಿಂದ ಹೊಡೆದು ಮತ್ತು ಕಲ್ಲನ್ನು ಹಾಕಿ ಕೊಲೆ ಮಾಡಿದ್ದು, ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 03-2015 ಕಲಂ. 302 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
     ಈ ಪ್ರಕರಣದಲ್ಲಿ  ಆರೋಪಿ ಯಾರೆಂದು  ಪತ್ತೆಯಾಗದೇ ಇದ್ದು ಕೂಲಂಕುಷವಾಗಿ ತನಿಖೆ ನಡೆಸಿದಾಗ ಕೃತ್ಯ ನಡೆದ ಕಟ್ಟಡದ ಅಂತಸ್ಥಿನಲ್ಲಿ ವಾಸವಿರುವ ಬಿಹಾರ, ಅಸ್ಸಾಂ, ಝಾರ್ಕಂಡ , ಕೊಲ್ಲತ್ತಾ ಮತ್ತು ಒರಿಸ್ಸಾ ಮೂಲದ ಕೂಲಿಕಾರ್ಮಿಕರು ವಾಸಿಸುತ್ತಿರುವ ಪಕ್ಕದ ಕೋಣೆಯ  ಇಬ್ಬರು  ಯುವಕರು ನಾಪಾತ್ತೆಯಾಗಿರುವುದು ತಿಳಿದು ಬಂದಂತೆ  ಆರೋಪಿಗಳ ಪತ್ತೆಗೆ ಪಿ.ಎಸ್.ಐ ಹಾಗೂ ಸಿಬ್ಬಂಧಿಗಳ ಒಂದು ತಂಡವನ್ನು ರಚಿಸಿದ್ದು, ಮಾನ್ಯ ಪೊಲೀಸ್ ಆಯುಕ್ತರು, ಮಂಗಳೂರು ನಗರ ಹಾಗೂ  ಉಪ ಪೊಲೀಸ್ ಆಯುಕ್ತರು(ಕಾ.ಸು) ಮತ್ತು  ಉಪ ಪೊಲೀಸ್ ಆಯುಕ್ತರು(ಕ್ರೈಂ) ರವರು ಕಾಲಕಾಲಕ್ಕೆ ನೀಡಿದ ಸೂಕ್ತ ನಿರ್ದೇಶನದಂತೆ ಹಾಗೂ ಸಹಾಯಕ ಪೊಲೀಸ್ ಆಯುಕ್ತರು ಪಣಂಬೂರು ರವರ  ಮಾರ್ಗದರ್ಶನದಡಿ  ಪ್ರಾದೇಶಿಕ ನ್ಯಾಯಾವಿಜ್ಞಾನ ಪ್ರಯೋಗ ಶಾಲೆಯ ತಜ್ಷರ ಸಹಕಾರದೊಂದಿಗೆ ಈ ಕೆಳಗಿನ ಆರೋಪಿಗಳನ್ನು  ಸುರತ್ಕಲ್ ರೈಲ್ವೇ ಸ್ಟೇಷನ್‌ನಲ್ಲಿ  ದಿನಾಂಕ. 19-01-2015ರಂದು ಸಂಜೆ ಪಿ.ಎಸ್.ಐ  ಹಾಗೂ ಸಿಬ್ಬಂಧಿಗಳು ವಶಕ್ಕೆ ತೆಗೆದುಕೊಂಡವನ್ನು ದಸ್ತಗಿರಿ ಮಾಡಲಾಗಿರುತ್ತದೆ.
ದಸ್ತಗಿರಿ ಮಾಡಿದ ಆರೋಪಿಗಳ ಹೆಸರು ವಿಳಾಸ:
1)ಅಜ್ಜು ಯಾನೆ ಅಜ್ಜು ಪ್ರಧಾನ್, ಪ್ರಾಯ 23 ವರ್ಷ ತಂದೆ ಭಿಕ್ಯಾರಿ ಪ್ರಧಾನ್ ವಾಸ: ಬಡಾಪಲ್ಲಿ, ಠಾಣೆ: ಖಲ್ಲಿಕೋಟೆ, ಪೋಸ್ಟ್ ಗೋಲಾಗೊಂಡ ಪಲ್ಲಿ, ಭಯಾರಂಭಾ ಮಾರ್ಕೆಟ್ ಹತ್ತಿರ,   ಬನಿಯಾ ಪಂಚಾಯತ್, ಜಿಲ್ಲೆ: ಗಂಜಾಮ್, ಒರಿಸ್ಸಾ ರಾಜ್ಯ. ಪ್ರಸ್ತುತ ವಾಸ: ರೂಂ ನಂ. 01, ಮೇಲ್ಮಹಡಿ, ನರಸಿಂಹ ಐತಾಳ್ ಕಂಪೌಂಡ್, ಮೀನಕಳಿಯ, ಪಣಂಬೂರು ಗ್ರಾಮ, ಮಂಗಳೂರು.
2) ವೃಂದಾವನ್ ಪ್ರಧಾನ್, ಪ್ರಾಯ 38 ವರ್ಷ ತಂದೆ: ರಘು ಪ್ರಧಾನ್ ವಾಸ: ಬಡಾಪಲ್ಲಿ, ಠಾಣೆ: ಖಲ್ಲಿಕೋಟೆ, ಪೋಸ್ಟ್ ಗೋಲಾಗೊಂಡ ಪಲ್ಲಿ, ಭಯಾರಂಭಾ ಮಾರ್ಕೆಟ್ ಹತ್ತಿರ,   ಬನಿಯಾ ಪಂಚಾಯತ್, ಜಿಲ್ಲೆ: ಗಂಜಾಮ್, ಒರಿಸ್ಸಾ ರಾಜ್ಯ. ಪ್ರಸ್ತುತ ವಾಸ: ರೂಂ ನಂ. 01, ಮೇಲ್ಮಹಡಿ, ನರಸಿಂಹ ಐತಾಳ್ ಕಂಪೌಂಡ್, ಮೀನಕಳಿಯ, ಪಣಂಬೂರು ಗ್ರಾಮ, ಮಂಗಳೂರು.
       ಈ ಮೇಲಿನ ಪ್ರಕರಣವನ್ನು ಭೇಧಿಸುವಲ್ಲಿ ಶ್ರೀ ರವಿ ಕುಮಾರ್ ಎ.ಸಿ.ಪಿ ಪಣಂಬೂರು,  ಶ್ರೀ ಲೋಕೇಶ್ ಎ.ಸಿ. ಪಿ.ಐ,ಪಣಂಬೂರು, ಶ್ರೀ ಸತೀಶ್ ಎಂ.ಪಿ. ಪಿ.ಎಸ್.ಐ,ಪಣಂಬೂರು, ಶ್ರೀ ದೇವುಶೆಟ್ಟಿ ಎಎಸ್‌‌ಐ, ಶ್ರೀ ಕುಶಲ ಮಣಿಯಾಣಿ, ಶ್ರೀ ಸತೀಶ್ ಎಂ, ಶ್ರೀ ಜಗದೀಶ ಕೆ., ಶ್ರೀ ಚಿದಾನಂದ, ಶ್ರೀ ಮಂಜುನಾಥ, ಶ್ರೀ ಚಂದ್ರಹಾಸ ರೈ, ಶ್ರೀ ರಾಧಕೃಷ್ಣ ರವರುಗಳು ಭಾಗಿಯಾಗಿರುತ್ತಾರೆ.

No comments:

Post a Comment