Saturday, January 10, 2015

Murder Case Cracked: By Surathkal Police

ದಿನಾಂಕ 06-01-15 ರಂದು ಬೆಳಿಗ್ಗೆ  06-30  ಗಂಟೆಗೆ ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಸೂರಿಂಜೆ ಕೋಟೆ ಎಂಬಲ್ಲಿ ಮೈದಾನದಲ್ಲಿ ಸಂಪತ್ ವಿ ಮತ್ತು ಕೇಶವ ಶೆಟ್ಟಿ ಎಂಬವರು ಶೆಟಲ್ ಆಡಲು ಬಂದ  ಸಮಯ ಅಲ್ಲಿಗೆ ಬಂದ ಆರೋಪಿಗಳು ಕೇಶವ ಶೆಟ್ಟಿ ಎಂಬವರನ್ನು ಮಚ್ಚು ಲಾಂಗ್‌‌ನಿಂದ ಕೊಚ್ಚಿ ಕೊಲೆ ಮಾಡಿದ್ದು, ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅಕ್ರ 02/2015 ಕಲಂ: 302 506, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

 ಈ ಪ್ರಕರಣಕ್ಕೆ ಸಂಬಂದಿಸಿದಂತೆ ಆರೋಪಿಗಳ ಪೈಕಿ 4 ಜನರನ್ನು ಬಂಧಿಸಲಾಗಿದೆ

   ಬಂಧಿತ ಆರೋಪಿಗಳು; ಸೂರೀಂಜೆ ಕೋಟೆ ನಿವಾಸಿ ಲಿತೇಶ್‌‌ (25) , ಮದ್ಯ ನಿವಾಸಿ ಶೋಬಿ @ ಶೋಬರಾಜ್‌‌  (23), ದೇಲಂತ ಬೆಟ್ಟು ನಿವಾಸಿ ಯುವರಾಜ್‌‌ @ ಅಪ್ಪು (23),  ಕಿನ್ನಿಗೋಳಿ ಮೆನ್ನಬೆಟ್ಟು ನಿವಾಸಿ ಕೃಷ್ಣಾ (19) ಇವರನ್ನು ದಿನಾಂಕ: 10-1-2015 ರಂದು ಹೊರನಾಡಿನಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೇಶವ ಶೆಟ್ಟಿಯ ಕೊಲೆ ಮಾಡಿದ  ಮಾಹಿತಿಯನ್ನು ನೀಡಿರುತ್ತಾರೆ. 

    ಪ್ರಕರಣದ ಪ್ರಮುಖ ಆರೋಪಿ ಸತೀಶ್‌‌ @ ಸಚ್ಚು ಈತನ ಪತ್ತೆಗೆ ಬಾಕಿ ಇದೆ

          ಮೃತ ಕೇಶವ ಶೆಟ್ಟಿಯು ಉದ್ಯಮಿಯಾಗಿದ್ದು, ಹೊಸಬೆಟ್ಟು ಎಂಬಲ್ಲಿ ಕಾರ್‌ಲೈನ್‌ ಎಂಬ ಗ್ಯಾರೆಜ್‌‌‌‌ ಇಟ್ಟುಕೊಂಡಿದ್ದನು. ಆರೋಪಿತ ಸತೀಶ್‌ @ ಸಚ್ಚು  ಎಂಬಾತನು  ಮೃತ ಕೇಶವ ಶೆಟ್ಟಿ ಇವರಲ್ಲಿ ಹಣ ಕೇಳಿದ್ದು,  ಕೇಶವ ಶೆಟ್ಟಿ  ಹಣ ಕೊಡಲು ನಿರಾಕರಿಸಿದ ಕಾರಣ ಆತನಿಗೆ ಆರೋಪಿ ಸತೀಶ್‌‌ @ ಸಚ್ಚು ಎಂಬಾತನು ಈ ಮೊದಲು ಬೆದರಿಕೆ ಹಾಕಿದ್ದು, ಈ ಬಗ್ಗೆ ಸುರತ್ಕಲ್‌‌‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಸತೀಶ್‌‌ @ ಸಚ್ಚು ಎಂಬಾತನನ್ನು ದಸ್ತಗಿರಿ ಮಾಡಿದ್ದು, ಇದರಿಂದ ಸತೀಶ್‌‌ನಿಗೆ ಕೇಶವ ಶೆಟ್ಟಿ ಮೇಲೆ ದ್ವೇಷ ಇತ್ತು. ಅಲ್ಲದೇ ಲಿತೇಶ್‌ ಎಂಬಾತನು ಕೂಡ ಕೇಶವ ಶೆಟ್ಟಿ ಇವರಲ್ಲಿ ಹಣ ಕೇಳಿದ್ದು, ಆತನಿಗೆ ಕೂಡ ಕೇಶವ ಶೆಟ್ಟಿ ಹಣ ಕೊಡಲು ನಿರಾಕರಿಸಿರುತ್ತಾನೆ.  ಇದರಿಂದ ಲಿತೇಶ್‌ಗೆ ಕೇಶವ ಶೆಟ್ಟಿ ಮೇಲೆ ದ್ವೇಷ ಇದ್ದು, ಲಿತೇಶ್‌‌ನು ಕೇಶವ ಶೆಟ್ಟಿಯನ್ನು ದುರುಗುಟ್ಟಿ ನೋಡುವುದು ಇತ್ಯಾದಿ ಮಾಡುತ್ತಿದ್ದು, ಇದಕ್ಕೆ ಕೇಶವ ಶೆಟ್ಟಿ ಈಗ್ಗೇ ಕೆಲವು ದಿನಗಳ ಹಿಂದೆ ತನ್ನ ಸ್ವೇಹಿತರೊಂದಿಗೆ ಲಿತೇಶ್‌‌ನ ಮನೆಗೆ ಹೋಗಿ ತನ್ನ ಸಹವಾಸಕ್ಕೆ ಬಂದರೆ ಎಚ್ಚರಿಕೆ ನೀಡಿ ಬಂದಿದ್ದನ್ನು ಇದರಿಂದ ಕುಪಿತನಾದ ಲಿತೇಶ್‌‌ ನು ತನ್ನನ್ನು ಕೇಶವನು ಕೊಲೆ ಮಾಡುತ್ತಾನೆಂದು ಬಾವಿಸಿ ಸ್ವೇಹಿತರಾದ ಸತೀಶ್‌ @ ಸಚ್ಚು, ಶೋಭರಾಜ್‌‌‌, ಯುವರಾಜ್‌‌‌, ಕೃಷ್ಣಾ ಇವರು ಸೇರಿ ಕೊಲೆ ಮಾಡುವ ಸಂಚು ರೂಪಿಸಿ ಎಲ್ಲರೂ ರಾತ್ರಿಯಿಂದ ಬೆಳಿಗ್ಗೆ ತನಕ ಸೂರಿಂಜೆ ಕೋಟೆ ಎಂಬಲ್ಲಿ ಒಂದು ಸ್ಥಳದಲ್ಲಿ ಇದ್ದು, ದಿನಾಂಕ: 06-01-15 ರಂದು ಬೆಳಿಗ್ಗೆ 6-30 ಗಂಟೆಗೆ ಸೂರಿಂಜೆ ಕೋಟೆಯಿಂದ ಬೈಕಿನಲ್ಲಿ ಕೇಶವ ಶೆಟ್ಟಿ ಆಟ ಆಡಲು ಬರುವ ಮೈದಾನದ ಬಳಿಗೆ 5 ಜನರು ಬಂದು ಅಲ್ಲಿನ ಪೊದೆಯಲ್ಲಿ ತಲವಾರು ಚೂರಿಯೊಂದಿಗೆ ಅವಿತು ಕುಳಿತು ಕೊಂಡು ಆಗ ಶಟಲ್‌ ಆಡಲು ಬಂದ ಕೇಶವ ಶೆಟ್ಟಿ ಇವರನ್ನು ಕೇಶವ ಶೆಟ್ಟಿ ಇವರ ಸ್ವೇಹಿತ ಸಂಪತ್‌ನ ಎದುರೇ ಅಟ್ಟಿಸಿಕೊಂಡು ಹೋಗಿ  ಮೈದಾನದ ಬಳಿ ಇರುವ  ಪೊದೆಯೊಳಗೆ ಎಲ್ಲರೂ ಸೇರಿ ಕೊಚ್ಚಿ ಕೊಲೆ ಮಾಡಿದ್ದಾಗಿರುತ್ತದೆ. ಭರತ್‌‌ ಎಂಬಾತನು ಕೊಲೆ ಸಂಧರ್ಬದಲ್ಲಿ ದೂರದಲ್ಲಿದ್ದು, ಕೇಶವ ಶೆಟ್ಟಿ ಸತ್ತ ಬಗ್ಗೆ ಮಾಹಿತಿ ನೀಡಿದ್ದಲ್ಲದೇ ಆರೋಫಿಗಳ ಮೋಟಾರು ಸೈಕಲನ್ನು ಬೇರೆ ಕಡೆಗೆ ಸಾಗಿಸಲು ಹಾಗು ದಸ್ತಗಿರಿಯಾದಲ್ಲಿ ಜೈಲಿಗೆ ಬಂದು ಎಂಟ್ರಿ ಹಾಕುವುದಾಗಿ ಒಪ್ಪಿಕೊಂಡಿರುತ್ತಾನೆ. ಸದ್ರಿ ಭರತನನ್ನು ಕೂಡ ಸಂಚಿನಲ್ಲಿ ಬಾಗಿಯಾಗಿ ಕೃತ್ಯಕ್ಕೆ ಸಹಕರಿಸಿದಂತೆ ದಸ್ತಗಿರಿ ಮಾಡಲಾಗಿದೆ

         ಮಾನ್ಯ ಪೊಲೀಸ್‌ ಆಯುಕ್ತರಾದ ಎಸ್‌‌ ಮುರುಗನ್‌‌ ಐಪಿಎಸ್‌, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್‌ ಆಯುಕ್ತರಾದ ಸಂತೋಷ್‌ ಬಾಬು ಐಪಿಎಸ್‌‌‌ , ಅಪರಾಧ ವಿಭಾಗದ ಉಪ ಪೊಲೀಸ್‌ ಆಯುಕ್ತರಾದ ವಿಷ್ಣುವರ್ಧನ, ಮಂಗಳೂರು ಉತ್ತರ ಉಪ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು ರವಿ ಕುಮಾರ್.ಎಸ್ ರವರ ಮಾರ್ಗದರ್ಶನದಂತೆ ಠಾಣಾ ಪೊಲೀಸ್‌‌ ನಿರೀಕ್ಷಕರಾದ ಎಂ ಎ ನಟರಾಜ್‌‌‌ , ಪಿಎಸ್ಐ ರವಿಶಂಕರ್ ಸಿ., ಹಾಗೂ ಸಿಬ್ಬಂದಿಗಳಾದ  ಕೃಷ್ಣ.ಬಿ.ಕೆ, ರಾಜ , ಸಂತೋಷ್ ರವರು ಅರೋಪಿಗಳನ್ನು ಪತ್ತೆ ಮಾಡಿರುತ್ತಾರೆ,

No comments:

Post a Comment