Friday, January 23, 2015

Daily Crime Reports : 23 01 2015

ದಿನಾಂಕ 23.01.201511:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
1
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
1
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
1
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
3
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
2
ಇತರ ಪ್ರಕರಣ
:
2






























1.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-01-2015 ರಂದು ಸಂಜೆ ಪಿರ್ಯಾದಿದಾರರಾದ ಶ್ರೀ ಅಬ್ದುಲ್ ಹಫೀಜ್ ರವರು ಲಿಂಗಪ್ಪಯ್ಯಕಾಡಿನ ಮೈದಾನದಲ್ಲಿ ಕ್ರಿಕೆಟ್ ಆಟವಾಡಿ ಕೆ ಇ ಬಿ ಕಡೆಯಿಂದ ಮನೆಯ ಕಡೆಗೆ ತನ್ನ ಸ್ನೇಹಿತನ ಬಾಬ್ತು ಬೈಕ್ ನಲ್ಲಿ ಬರುತ್ತಾ ಕೋರ್ದಬ್ಬು ದೈವಸ್ಥಾನದ ಬಳಿ ತಲುಪುತ್ತಿದ್ದಂತೆ ಪೋನ್ ಕರೆ ಬಂದಿದ್ದು, ರಸ್ತೆಯಲ್ಲಿ ಬೈಕನ್ನು ನಿಲ್ಲಿಸಿ, ಪೋನ್ ನಲ್ಲಿ ಮಾತಾನಾಡುತ್ತಿರುವಾಗ ಸುಮಾರು 20-00 ಗಂಟೆಗೆ ಅದೇ ರಸ್ತೆಯಲ್ಲಿ ಬಂದ ತನ್ನ ಪರಿಚಯದ ಸಚ್ಚಿನ್ ಮತ್ತು ನಿತಿನ್ ಎಂಬವರುಗಳು ಬಂದು ಬೈಕನ್ನು ರಸ್ತೆಯಲ್ಲಿ ನಿಲ್ಲಿಸಿದ ಬಗ್ಗೆ ತಕರಾರು ಮಾಡಿ ಹೋಗಿ ಬಳಿಕ ವಾಪಾಸು ಬಂದು ಮರದ ಸೋಂಟೆ ಹಾಗೂ ಕಬ್ಬಿಣದ ರಾಡ್ ನಿಂದ ತಲೆಗೆ ಹಾಗೂ ಕೈ ಕಾಲುಗಳಿಗೆ ಹಲ್ಲೆ ನಡೆಸಿ ಬೈದು, ಬೆದರಿಸಿ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿರುವುದಾಗಿದೆ.

2.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22/01/2015 ರಂದು ರಾತ್ರಿ ಸುಮಾರು 8-00 ಗಂಟೆ ಸಮಯಕ್ಕೆ ಇಮ್ರಾನ್, ರಜಾಕ್, ಅಮೀರ್, ಸಫಾನ್, ನಾಸಿರ್, ನಿಯಾಜ್, ಫಯಾಜ್, ಅಕ್ಬರ್, ನಿಜಾಮ್, ಅನ್ವರ್, ಹಫೀಜ್ ಮತ್ತು ಇತರ 20 ಜನರು ಸೇರಿ ಏಕಾಏಕಿಯಾಗಿ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಕೋರ್ದಬ್ಬು ದೈವಸ್ಥಾನದ ಬಳಿ ಇರುವ ಪಿರ್ಯಾದಿದಾರರಾದ ಸಾವಿತ್ರಿ ರವರ ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ಬೈದು ಮನೆಯಲ್ಲಿರುವ ವಸ್ತುಗಳನ್ನು ನಾಶಪಡಿಸಿ, ಮನೆ ಮುಂದೆ ನಿಲ್ಲಿಸಿದ್ದ ಬೈಕಿಗೆ ಹಾನಿಪಡಿಸಿ ಜೀವಬೆದರಿಕೆ ಒಡ್ಡಿರುತ್ತಾರೆ.

3.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಗಿರೀಜಾ ಬಾಯ್ ರವರ 12 ವರ್ಷ ಪ್ರಾಯದ ಮಗನಾದ  ಗಿರೀಶ್ ಹಾಗೂ 9 ವರ್ಷ ಪ್ರಾಯದ ಮಗನಾದ ಪ್ರಜ್ವಲ್ ಹಾಗೂ 8 ವರ್ಷ ಪ್ರಾಯದ ಮಗನಾದ ಕಾರ್ತಿಕ್ ಎಂಬವರುಗಳು ದಿನಾಂಕ 20-01-2015 ರಂದು ಬೆಳಿಗ್ಗೆ 09-00 ಗಂಟೆಗೆ  ಮನೆಯಿಂದ 8ನೇ ಬ್ಲಾಕ್ ಚೊಕ್ಕಬೆಟ್ಟುವಿನ ಸರಕಾರಿ ಪ್ರಾಥಮಿಕ ಶಾಲೆಗೆಂದು ಒಟ್ಟಿಗೆ ಹೋದವರ ಪೈಕಿ ಗಿರೀಶ್ ಹಾಗೂ ಪ್ರಜ್ವಲ್ ರವರು ಶಾಲೆ ತನಕ ಬಂದು  ಕಾರ್ತಿಕ್ ನನ್ನು ಶಾಲೆಗೆ ಕಳುಹಿಸಿ ಅವರುಗಳು ಮತ್ತೆ ಬರುವುದಾಗಿ ತಿಳಿಸಿ ಹೋದವರು ಶಾಲೆಗೂ ಹೋಗದೇ ಮನೆಗೆ ಕೂಡಾ ವಾಪಾಸು ಬಾರದೇ ಕಾಣೆಯಾಗಿದ್ದು ಸದ್ರಿ ಹುಡುಗರು ಶಾಲೆಗೆ ಹೋಗಲು ಮನಸಿಲ್ಲದೇ ಈ ಹಿಂದೆ ಕೂಡಾ ಮನೆಯಿಂದ ಹೋದವರು ಅವರ ಸ್ನೇಹಿತರ ಮನೆಯಲ್ಲಿ ರಾತ್ರಿ ಉಳಕೊಂಡು ಒಂದು  ದಿನ ನಂತರ  ಬರುತ್ತಿದ್ದು  ಪ್ರಸ್ತುತ ಕೂಡಾ ಬರಬಹುದೆಂದು ಕಾದರೂ ಬರದೇ ಇದ್ದು ವಿಳಂಭವಾಗಿ ದೂರು ನೀಡಿರುವುದಾಗಿದೆ.  ಕಾಣೆಯಾದವರ ಚಹರೆಃ 1. ಗಿರಿಶ್ಃ ಪ್ರಾಯ 12 ವರ್ಷ ಬಿಳಿ ಮೈಬಣ್ಣ, ಲಂಬಾನಿ, ಕನ್ನಡ ಭಾಷೆ ಮಾತನಾಡುತ್ತಿರುತ್ತಾರೆ. ಬಲ ಕಣ್ಣಿನ ಕೆಳಗಡೆ ಕಪ್ಪು ಮಚ್ಚೆ, ಜೀನ್ಸ್ ಪ್ಯಾಂಟ್ ಹಾಗೂ ಟೀಶರ್ಟ್ ಧರಿಸಿರುತ್ತಾರೆ. ಸಾದಾರನ ಮೈಕಟ್ಟು
2. ಪ್ರಜ್ವಲ್ಃ ಪ್ರಾಯ 9 ವರ್ಷ, ಎಣ್ಣೆ ಕಪ್ಪು ಮೈಬಣ್ಣ, ಲಂಬಾನಿ, ಕನ್ನಡ ಬಾಷೆ ಮಾತನಾಡುತ್ತಿರುತ್ತಾರೆ, ತಲೆಯ ಎಡಬದಿಯಲ್ಲಿ ಕೂದಲು ಬೆಳೆದಿರುವುದಿಲ್ಲ, ಜೀನ್ಸ್ ಪ್ಯಾಂಟ್ ಟೀ ಶರ್ಟ್ ಧರಿಸಿರುತ್ತಾರೆ.ಸಾದಾರಣ ಮೈಕಟ್ಟು ದೇಹದಲ್ಲಿ ಮಚ್ಚೆಗಳಿರುತ್ತವೆ.

4.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ನಿತಿನ್ ರವರು ದಿನಾಂಕ 22-01-15 ರಂದು ಸುಮಾರು 20-00 ಗಂಟೆಗೆ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಕೋರ್ದಬ್ಬು ದೈವಸ್ಥಾನದ ಬಳಿ ಕೆಎ-19-ಇಎಚ್-3140 ನಂಬ್ರದ ಬೈಕಿನಲ್ಲಿ ಬರುತ್ತಿರುವಾಗ ಪರಿಚಯದ ಹಫೀಜ್ ಎಂಬಾತನು , ಆತನ ಬೈಕನ್ನು ರಸ್ತೆಗೆ ಅಡ್ಡ ನಿಲ್ಲಿಸಿದ್ದಕ್ಕೆ , 'ಯಾಕೆ ಬೈಕ್ ರಸ್ತೆ ಅಡ್ಡ ನಿಲ್ಲಿಸಿದ್ದು' ಎಂದು ವಿಚಾರಿಸಿದಾಗ ಆತನು ಅವಾಚ್ಯ ಶಬ್ದಗಳಿಂದ ಬೈದು ತುಳುವಿನಲ್ಲಿ ನಿನ್ನ ತಿಗಲೆಡ್ ಎನ್ನ ಬೈಕ್ ದೀತೆನಾ ಎಂಬುದಾಗಿ ಬೈದು ಹಪೀಜನು ಅಲ್ಲೆ ಇದ್ದ ಮರದ ರೀಪಿನಿಂದ ಬಲಕಾಲಿನ ಗಂಟಿಗೆ ಹೊಡೆದು, ಇತರರು ಕೈಯಿಂದ ಹೊಡೆ ಕಾಲಿನಿಂದ ತುಳಿದು ಹಲ್ಲೆ ನಡೆಸಿ, ತಡೆಯಲು ಬಂದ ಅಣ್ಣ ಸಚಿನ್ ರಿಗೂ ಹಫೀಜನು ಮರದ ರೀಪಿನಿಂದ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುತ್ತಾರೆ.

5.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 21.01.2015 ರಂದು ಸಂಜೆ  3.45 ಗಂಟೆಯ ಸುಮಾರಿಗೆ ಪಿರ್ಯಾದಿದಾರರಾದ ಶ್ರೀ ಶಫೀಕ್ ರವರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಮೊಹಮ್ಮದ್ ಅಸ್ತಾರ ಎಂಬವರು ಕೆ ಎ 19ಇಬಿ 6452 ನೇಯದನ್ನು ಚಲಾಯಿಸಿಕೊಂಡು   ಮೂಡಬಿದ್ರೆಯಿಂದ ಮಂಗಳೂರು ಕಡೆಗೆ ಹೋಗುತ್ತಿರುವಾಗ ಹಂಡೇಲ್ ಕ್ರಾಸ್ ಬಳಿ ತಲುಪುವಾಗ ಮಂಗಳೂರು ಕಡೆಯಿಂದ ಕೆ ಎ 20 ಬಿ 7611 ಪಿಕಾಪ್ ಟೆಂಪೋವನ್ನು ಅತೀವೇಗ ಹಾಗೂ ನಿರ್ಲಕ್ಷತೆಯಿಂದ ಚಲಾಯಿಸಿಕೊಂಡು ತೀರಾ ಬಲಭಾಗಕ್ಕೆ ಪಿರ್ಯಾಧಿದಾರರು ಮತ್ತು ಮೊಹಮ್ಮದ್ ಅಸ್ತಾರ್  ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಅ್ಯಕ್ಟೀವ್ ಹೊಂಡಾಕ್ಕೆ ಡಿಕ್ಕಿ ಹೊಡೆದ ಪರಿಣಾಮ  ರಸ್ತೆಗೆ ಎಸೆಯಲ್ಪಟ್ಟಿದ್ದು ಮೊಹಮ್ಮದ್ ಅಸ್ತಾರ್ ಗೆ ತಲೆಗೆ ಮುಖದ ಭಾಗಕ್ಕೆ ತುಟಿಗೆ ಹಾಗೊ ಮೈಕೈಗೆ ರಕ್ತ ಬರುವ ಗಾಯ ವಾಗಿರುತ್ತದೆ ಮತ್ತು ಪಿರ್ಯಾಧಿದಾರರಿಗೆ ಸಣ್ಣ ಪುಟ್ಟ ತರಚಿದ ಗಾಯ ವಾಗಿರುತ್ತದೆ, ಚಿಕಿತ್ಸೆಯ ಬಗ್ಗೆ ಮಂಗಳೂರು ಹೈಲ್ಯಾಂಡ್ ಅಸ್ಪತ್ರಗೆ  ಕರೆದು ಕೊಂಡು  ಒಳರೋಗಿಯಾಗಿ ದಾಖಲಾಗಿರುವುದಾಗಿದೆ.

6.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 22-01-2015 ರಂದು 12-45 ಗಂಟೆಗೆ ಫಿರ್ಯಾದಿದಾರರಾದ ಶ್ರೀ ವಿಶ್ವನಾಥ್ ರವರು ತನ್ನ ಬಾಬ್ತು  ಸಿಎನ್ ಎಕ್ಸ್ 737 ನಂಬ್ರದ ಬುಲೆಟ್ ಮೋಟಾರು ಸೈಕಲ್ ನಲ್ಲಿ  ಪರಂಗಿಪೇಟೆ ಕಡೆಯಿಂದ ಕೈಕಂಬ ಕಡೆಗೆ ಸವಾರಿ ಮಾಡಿ ಕೊಂಡು ಹೋಗುತ್ತಾ  ಮಂಗಳೂರು ತಾಲೂಕಿನ, ಮೂಳೂರು ಗ್ರಾಮದ, ರೋಸಾ ಮಿಸ್ತಿಕಾ ಶಾಲೆಯ ಬಳಿ ಕಾಳಿಕಾಂಬ ಫರ್ನಿಚರ್ ಅಂಗಡಿಯ ಎದುರು ತಲುಪುವಾಗ ಫಿರ್ಯಾದಿದಾರರ ಹಿಂದಿನಿಂದ ಟಾಟಾ ಏಸ್ ಟೆಂಪೋ ನಂ: ಕೆಎ 19 ಡಿ 6855 ನೇದ್ದನ್ನು ಅದರ ಚಾಲಕರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಬುಲೆಟ್ ನ್ನು ಓವರ್ ಟೇಕ್ ಮಾಡುವ ರಭಸದಲ್ಲಿ ಬುಲೆಟ್ ಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ರಸ್ತೆಗೆ ಬಿದ್ದು, ಅವರ ಮುಖಕ್ಕೆ, ಕೈಕಾಲುಗಳಿಗೆ ಗಾಯಗಳಾಗಿದ್ದು, ಫಿರ್ಯಾದಿದಾರರು ಮಂಗಳೂರು ಎಸ್.ಸಿ.ಎಸ್. ಆಸ್ಪತ್ತೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಟಾಟಾ ಏಸ್ ಚಾಲಕನು ತನ್ನ ವಾಹನವನ್ನು ನಿಲ್ಲಿಸದೇ, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸದೇ  ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೇ ಸ್ಥಳದಿಂದ ಪರಾರಿಯಾಗಿರುತ್ತಾನೆ.

7.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಮನೋಜ್ಕುಮಾರ್ರೈ (42) ತಂದೆ ರಮೇಶ್ರೈ ವಾಸ ಬಿ.ಕೆ.ರೈ ಕಂಪೌಂಡು, ಬಬ್ಬುಕಟ್ಟೆ, ಪಂಡೀತ್ಹೌಸ್, ಪೆರ್ಮನ್ನೂರು ಗ್ರಾಮ ಮತ್ತು ಅಂಚೆ, ಮಂಗಳೂರು ತಾಲೂಕು ರವರು ಕಳೆದ ಸುಮಾರು 8 ವರ್ಷದಿಂದ ಮಹಾಸತಿ ಬಿಲ್ಡರ್ಸ್ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಪ್ರಸ್ತುತ ಇವರ ಸಂಸ್ಥೆಯ ಕಾಮಗಾರಿಯು ಪಂಡಿತ್‌‌ಹೌಸ್ಎಂಬಲ್ಲಿಯ ಪ್ರಕಾಶ್ನಗರ ಎಂಬಲ್ಲಿ ಓಕ್ಸಿ ಬ್ಲೂ ಎಂಬ ಅಪಾರ್ಟ್ಮೆಂಟ್ಕಾಮಗಾರಿ ನಡೆಯುತ್ತಿದ್ದು ಈ ಸೈಟ್ನಲ್ಲಿ ಪಿರ್ಯಾದಿ ಸೈಟ್ಇನ್ಚಾರ್ಜ್ಆಗಿರುತ್ತಾರೆ. ಈ ಸೈಟ್ನಲ್ಲಿ ಒಟ್ಟು ಸುಮಾರು 35 ಜನ ಕೆಲಸ ಮಾಡಿಕೊಂಡಿದ್ದು, ದಿನಾಂಕ 21-01-2015 ರಂದು ಸಂಜೆ ಸುಮಾರು 8-00 ಗಂಟೆಯ ತನಕ ಇವರು ಸೈಟ್ನಲ್ಲಿದ್ದು, ದಿನಾಂಕ 22-01-2015 ರಂದು ಬೆಳಿಗ್ಗೆ ಸುಮಾರು 8-30 ಗಂಟೆಗೆ ಸೈಟ್ಗೆ ಹೋಗಿ ಸೈಟ್ನ ಸುತ್ತ-ಮುತ್ತ ಸಂಚರಿಸಿಕೊಂಡು ದಿನದ ಕಾಮಗಾರಿಯ ಬಗ್ಗೆ ಪರಿಶೀಲನೆಯಲ್ಲಿ ತೊಡಗಿರುವಾಗ ಇವರ ಸೈಟ್ನ ಬಿ, ಸಿ, ಜಿ, ಎಫ್ಮತ್ತು ಇ ವಿಂಗ್ನ ಕಟ್ಟಡದ ವಯರಿಂಗ್ಡಟ್ನಲ್ಲಿದ್ದ 20 ಪೈಪಿನ ಒಳಗಡೆ ಅಳವಡಿಸಿದ ವಯರ್ಗಳು ಮೇಲಿನ ಐದನೆಯ ಮಹಡಿಯಿಂದ ನೆಲ ಅಂತಸ್ತಿನ ವರೆಗಿನ ಎಲೆಕ್ಟ್ರೀಕಲ್ವಯರ್ಗಳು ಕಟ್ಮಾಡಿ ತೆಗೆದಿರುವುದು ಕಂಡು ಬಂತು. ಈ ಎಲ್ಲಾ ವಯರ್ಗಳು ಕಪ್ಪು ಕೆಂಪು ಹಸಿರು ಬಣ್ಣದಿಂದ ಕೂಡಿದ್ದು ಇವುಗಳು V-GUARD ಕಂಪೆನಿಯದ್ದಾಗಿರುತ್ತದೆ. ಈ ವಯರ್ಗಳು ವಿವಿದ ಬಣ್ಣದ್ದಾಗಿದ್ದು, ಈ ಎಲ್ಲಾ ಎಲೆಕ್ಟ್ರೀಕಲ್ವಯರ್ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ. ಕಳವಾದ ಎಲೆಕ್ಟ್ರೀಕಲ್ವಯರ್ಗಳ ಅಂದಾಜು ಮೌಲ್ಯ 1,92,989 ರೂಪಾಯಿ ಆಗಬಹುದು.

8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀಮತಿ ಸುಮಲತಾ ರವರ ಮಗ ದೀಪಕ್‌ (13 ವರ್ಷಎಂಬಾತನು ದಿನಾಂಕ. 22-1-2015 ರಂದು ಬೆಳಿಗ್ಗೆ 8-45 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಕೋಟೆಕಾರು ಗ್ರಾಮದ ಅಡ್ಕ ಅಜ್ಜನ ಕಟ್ಟೆಯ ಬಳಿಯಿರುವ ತನ್ನ ವಾಸ್ತವ್ಯದ ಮನೆಯಿಂದ ಕೋಟೆಕಾರು ಬೀರಿ ಸರಕಾರಿ ಪ್ರೌಢಶಾಲೆಗೆ 8 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಲು ಎಂದಿನಂತೆ ಹೋದವನು ಸಂಜೆ ಕ್ರಮದಂತೆ ವಾಪಾಸು ಮನೆಗೆ ಬರುವವನು ಬಾರದೇ ಇದ್ದುದನ್ನು ಕಂಡು ಫಿರ್ಯಾದಿದಾರರ ದೊಡ್ಡ ಮಗ ಕಿರಣ್ಎಂಬಾತನು ದೀಪಕ್ನನ್ನು ಹುಡುಕಿಕೊಂಡು ಸದ್ರಿ ಶಾಲೆಗೆ ಹೋಗಿ ನೋಡಿದಾಗ ಶಾಲೆಗೆ ಬೀಗ ಹಾಕಿದ್ದು, ನಂತರ ದೀಪಕ್ನನ್ನು ಫಿರ್ಯಾದಿದಾರರ ಸಂಬಂಧಿಕರ ಮನೆ, ಆಸುಪಾಸು ಹಾಗೂ ಹೆಚ್ಚಿನ ಕಡೆಗಳಲ್ಲಿ ಹುಡುಕಾಡಿದರೂ ದೀಪಕ್ಎಲ್ಲಿಯೂ ಪತ್ತೆಯಾಗದೇ ಇರುವುದಾಗಿದೆ.

9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಎ. ಸುಬ್ರಾಯ ಕಾಮತ್ ರವರು ಬಿಕರ್ನಕಟ್ಟೆಯಿಂದ ಶಕ್ತಿನಗರದ ಗೋಪಾಲಕೃಷ್ನ ದೇವಾಸ್ಥಾನಕ್ಕೆ ಹೋಗುವ ದಾರಿ ಮದ್ಯೆ  ಸರ್ವೆ ನಂಬ್ರ;70/2ಬಿ ಮತ್ತು 70/2 ಸಿ ಯಲ್ಲಿ 83 ¾ ಸೆಂಟ್ಸ್  ಜಾಗವನ್ನು ಹೊಂದಿದ್ದು ಸದ್ರಿ ಸ್ಥಳದಲ್ಲಿ ಮಂಗಳೂರು ಮಹಾನಗರ ಪಾಲಿಕೆಯವರು ಕಾಂಕ್ರೇಟ್ರಸ್ತೆಯನ್ನು ಮಾಡಲು ಆರೋಪಿ 2 ನೇ ಮಂಗಳೂರು ಮಹಾನಗರ ಪಾಲಿಕೆ ಕಮೀಷನರ್ ಮತ್ತು ಆರೋಪಿ 3 ನೇ ಮಂಗಳೂರು ನಗರದ ಟೌನ್ ಪ್ಲ್ಯಾನಿಂಗ್ ಆಫೀಸರ್ ಇವರು ಪ್ರಸ್ತಾವನೆಯನ್ನು ಸಲ್ಲಿಸಿದ್ದು ಫಿರ್ಯಾದಿದಾರರು ಕಾನೂನು ಹೋರಾಟದ ಮೂಲಕ 70 ಸೆನ್ಸ್ ಸ್ಥಳವನ್ನು ದತ್ತನಗರಕ್ಕೆ ರಸ್ತೆ ಮಾಡಲು ಬಿಟ್ಟುಕೊಟ್ಟಿದ್ದು ನಂತರ ಆರೋಪಿ 2 ಮತ್ತು 3 ನೇಯವರು ಸದ್ರಿ ಪ್ರಸ್ತಾವನೆಯನ್ನು ಕೈಬಿಟ್ಟಿದ್ದರೂ ದಿನಾಂಕ; 31.12.2014 ರಂದು ರಾತ್ರಿ 10-30 ಗಂಟೆಗೆ ಆರೋಪಿ 1 ನೇಯ ಹೆಚ್.ಕೆ. ಪುರುಷೋತ್ತಮ್ ಎಂಬವರು ಜೆಸಿಬಿ, ಟಿಪ್ಪರ್ಮುಂತಾದವುಗಳ ಜೊತೆ ಫಿರ್ಯಾದಿದಾರರಿಗೆ ಸೇರಿದ ಜಾಗದ ಎದುರು ಬದಿ 400 ಮೀಟರ್ರಷ್ಟು ಅಗೆಯುದನ್ನು ಕಂಡು ಫಿರ್ಯದಿದಾರರು ಮತ್ತು ಅವರ ಮಗ ಈ ಬಗ್ಗೆ 1 ನೇ ಆರೋಪಿಯಲ್ಲಿ ಕೇಳಲಾಗಿ ಅವರು ನಮಗೆ ಈ ಕೆಲಸವನ್ನು ಮಾಡಲು ಆರೋಪಿ 2 ಮತ್ತು 3 ನೇಯವರು ತಿಳಿಸಿದ ಮೇರೆಗೆ ಮಾಡಿರುವುದಾಗಿ ತಿಳಿಸಿರುತ್ತಾರೆ ಇದರಿಂದ ಫಿರ್ಯಾದಿದಾರರಿಗೆ ಸೇರಿದ 13 3/4 ಸೆಂಟ್ಸ್ ಸ್ಥಳಕ್ಕೆ ಆರೋಪಿಗಳು ಅಕ್ರಮ ಪ್ರವೇಶ ಮಾಡಿ ಕಾನೂನು ಬಾಹಿರವಾಗಿ ಫಿರ್ಯಾದಿದಾರರಿಗೆ ನಷ್ಟವನ್ನುಂಟುಮಾಡಿರುತ್ತಾರೆ.

10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-01-2015 ರಂದು ಮಧ್ಯಾಹ್ನ ಸುಮಾರು 2-30 ಗಂಟೆ ವೇಳೆಗೆ ಮಹೇಶ್ ಬಸ್ಸ್ ನಂಬ್ರ KA 19 D 8229 ನೇ ಯದನ್ನು ಅದರ ಚಾಲಕ ಮನೋಜ್ ಎಂಬವರು ಬಿ.ಸಿ. ರೋಡ್ ಕಡೆಯಿಂದ ಮಂಗಳೂರು ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅಡ್ಯಾರ್ ಸಹ್ಯಾದ್ರಿ ಕಾಲೇಜು ಬಳಿ ರಸ್ತೆ ದಾಟುತ್ತಿದ್ದ ತಿಮ್ಮಪ್ಪ ರೈ ( ಅಂದಾಜು 70 ವರ್ಷ) ಎಂಬವರಿಗೆ ಡಿಕ್ಕಿಹೊಡೆದ ಪರಿಣಾಮ ಸದ್ರಿಯವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಇಂಡಿಯಾನ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದು ಸದ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸಿದೇ ಗಾಯಾಳು ತಿಮ್ಮಪ್ಪ ರೈ ಯವರು ಸಂಜೆ 3-50 ಗಂಟೆಗೆ ಮೃತಪಟ್ಟಿರುತ್ತಾರೆ.

No comments:

Post a Comment