Thursday, January 22, 2015

Daily Crime Reports : 22-01-2015

ದಿನಾಂಕ 22.01.201511:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
0
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
0
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
0
ವಂಚನೆ ಪ್ರಕರಣ        
:
1
ಮನುಷ್ಯ ಕಾಣೆ ಪ್ರಕರಣ
:
0
ಇತರ ಪ್ರಕರಣ
:
2





























1.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 21-01-2015 ರಂದು ಸಂಜೆ 17-30 ಗಂಟೆಗೆ ಬಂದ ಖಚಿತ ವರ್ತಮಾನದಂತೆ ಕೊಣಾಜೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ರಾಘವ್ ಎಸ್. ಪಡೀಲ್ ರವರು ಮತ್ತು ಠಾಣಾ ಉಪನಿರೀಕ್ಷಕರು ಇಲಾಖಾ ಜೀಪು ನಂಬ್ರ KA-19-G-309 ಮತ್ತು KA-19-G-220ನೇದರಲ್ಲಿ ಸಿಬ್ಬಂದಿಯವರೊಂದಿಗೆ ಮತ್ತು ಪಂಚಾಯ್ತಿದಾರರೊಂದಿಗೆ ಠಾಣೆಯಿಂದ ಹೊರಟು ಅಂಬ್ಲಮೊಗರು ಗ್ರಾಮದ ಎಲಿಯಾರುಪದವು ಗಟ್ಟಿಕುದ್ರ ಎಂಬಲ್ಲಿಗೆ 18-00 ಗಂಟೆಗೆ  ಸಿರಿಲ್ ಡಿ ಸೋಜ ಎಂಬವರ ಮನೆಗೆ ತಲುಪಿ, ಅವರ ಮನೆಯ ಹಿಂಬದಿಯ ತೋಟದಲ್ಲಿ ಓರ್ವ ವ್ಯಕ್ತಿಯು ಪ್ಲಾಸ್ಟಿಕ್ ಚೀಲ ಮತ್ತು ರಟ್ಟಿನ ಬಾಕ್ಸ್ ನ್ನು ಇಟ್ಟುಕೊಂಡಿದ್ದು, ವಿಚಾರಿಸಿದಾಗ ಸಮರ್ಪಕವಾದ ಉತ್ತರ ನೀಡದೇ ಇದ್ದು, ಪುನಃ ಪ್ರಶ್ನಿಸಿದಾಗ ಮಧ್ಯದ ಬಾಟಲ್ ಗಳು ಇರುವುದಾಗಿ ತಿಳಿಸಿದ್ದು ಪಂಚಾಯ್ತಿದಾರರ ಸಮಕ್ಷಮ ತೆರೆಯಿಸಿ ನೋಡಲಾಗಿ ಪ್ಲಾಸ್ಟಿಕ್ ಚೀಲದ ಒಳಗಡೆ 90 Mlನ ಮೈಸೂರು ಲ್ಯಾನ್ಸರ್ ವಿಸ್ಕಿ ಪ್ಯಾಕೆಟ್ ಗಳು-73 ಹಾಗೂ ರಟ್ಟಿನ ಬಾಕ್ಸ್ ನ್ನು ತೆರೆದು ನೋಡಲಾಗಿ 180 Ml ಮೈಸೂರು ಲ್ಯಾನ್ಸರ್ ವಿಸ್ಕಿ ಬಾಟಲ್ ಗಳು -15, 180 Mlನ ಪ್ರಿಸ್ಟೇಜ್ ವಿಸ್ಕಿ ಬಾಟಲ್ ಗಳು -24 ಇರುವುದು ಕಂಡು ಬಂತು. ಆರೋಪಿಯು ಮಧ್ಯ ಮಾರಾಟ ಮಾಡುವರೇ ತನ್ನಲ್ಲಿ ಯಾವುದೇ ಪರವಾನಿಗೆ ಅಥವಾ ಯಾವುದೇ ಬಿಲ್ ದಾಖಲಾತಿಗಳು ಇರುವುದಿಲ್ಲವಾಗಿ ತಿಳಿಸಿದ್ದು ಆರೋಪಿಯು ಮಧ್ಯವನ್ನು ಖರೀದಿಸಿ ತಂದು ಅಕ್ರಮವಾಗಿ ಮಾರಾಟ ಮಾಡಿ ಕರ್ನಾಟಕ ಅಬಕಾರಿ ನಿಯಮ ಉಲ್ಲಂಘಿಸಿರುವುದು ಖಚಿತ ಪಟ್ಟ ಮೇರೆಗೆ 18-30 ಗಂಟೆಗೆ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಆರೋಪಿಯ ಹೆಸರು ವಿಳಾಸ ಕೇಳಲಾಗಿ ಸಿರಿಲ್ ಡಿ ಸೋಜ(64) ತಂದೆ: ದಿ: ಅಂಥೋನಿ ಡಿ ಸೋಜ ವಾಸ: ಗಟ್ಟಿಕುದ್ರುಮನೆ, ಅಂಬ್ಲಮೊಗರು ಗ್ರಾಮ ಎಂದು ತಿಳಿಸಿರುತ್ತಾನೆ. ನಂತರ ಸೊತ್ತುಗಳನ್ನು ಮಹಜರು ಮೂಲಕ ಸ್ವಾಧೀನ ಪಡಿಸಿದ್ದು, ಮಧ್ಯದ ಅಂದಾಜು ಮೌಲ್ಯ- 4290/- ರೂ ಆಗಬಹುದು.

2.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 21/01/2015 ರಂದು ಬೆಳಿಗ್ಗೆ 08.30 ಗಂಟೆಗೆ ಮುಂಬೈಗೆ ಜೆಟ್ ಏರ್ ವೇಸ್ ಫ್ಯೈಟ್ ನಂ. 9W - 436 ರಲ್ಲಿ ಪ್ರಯಾಣಿಸಲೆಂದು ಮಂಗಳೂರು ತಾಲೂಕು ಕೆಂಜಾರು ಗ್ರಾಮದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಆರೋಪಿ ಸಾಜಿದ್ ಸಮ್ರಾನ್ ಎಂಬವನು ತನ್ನ ಹೆಸರಿನಲ್ಲಿ ಹಾಗೂ ತನ್ನ ತಾಯಿ ಶಶಾದ್ಬೇಗಂ ಎಂಬವರ ಹೆಸರಿನಲ್ಲಿ ಬೋರ್ಡಿಂಗ್ ಪಾಸನ್ನು ಪಡೆದುಕೊಂಡು ವಿಮಾನ ನಿಲ್ದಾನಕ್ಕೆ ಬಂದವನು ತನ್ನ ತಾಯಿಯನನ್ನು ಜೊತೆಯಲ್ಲಿ ಕರೆಕೊಂಡು ಬಾರದೆ ತನ್ನ ಜೊತೆಯಲ್ಲಿ ಮಹಮ್ಮದ್ ಶಕೀಲ್ ಎಂಬಾತನನ್ನು ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಬಂದು ತಪಾಸಣೆಯ ವೇಳೆ ಸಿ..ಎಸ್.ಎಫ್. ಅಧಿಕಾರಿಗಳನ್ನು ವಂಚಿಸುವ ಇರಾದೆಯಿಂದ ತನ್ನ ತಾಯಿ ಶೌಚಾಲಯಕ್ಕೆ ಹೋಗಿರುತ್ತಾರೆ ಎಂದು ತಿಳಿಸಿ ತನ್ನ ಗೆಳೆಯ ಆರೋಪಿ ಮಹಮ್ಮದ್ ಶಕೀಲ್ ಎಂಬಾತನ್ನು ಮುಂಬೈಗೆ ಅಕ್ರಮವಾಗಿ  ಕರೆದುಕೊಂಡು ಹೋಗಲು  ಪ್ರಯತ್ನಿಸಿರುವುದಾಗಿದೆ.

3.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ; 21-01-2015 ರಂದು ಫಿರ್ಯಾದುದಾರರಾದ ಶ್ರೀ ಅಭಿಲಾಷ್ ರವರು ಮತ್ತು ವಾಸು ಎಂಬುವರು ಮೋಗವೀರ ಪಟ್ನದಿಂದ  ಕೋಟೆಪುರ ಕಡೆಗೆ  ಮೀನು ಹಿಡಿಯಲು ಬೋಟಿಗೆ ನಡೆದುಕೊಂಡು ಹೋಗುತ್ತಿರುವಾಗ ರಾತ್ರಿ.10-15 ಗಂಟೆ ವೇಳೆಗೆ ಬರಕಾ  ಫ್ಯಾಕ್ಟರಿ ಬಳಿ ತಲುಪುವಾಗ ಕುಂಬ್ಲೆ ತೌಸೀಫ್ ಮತ್ತು ಇನ್ನೊಬ್ಬನು ಫಿರ್ಯಾದುದಾರರನ್ನು ಮತ್ತು ವಾಸು ರವರನ್ನು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ  ಬೈದು ದುರುಗುಟ್ಟಿ ನೋಡಿ, ಕೊಲ್ಲುತ್ತೇನೆ ಎಂದು ಜೀವ ಬೆದರಿಕೆ ಹಾಕಿ, ಅವರುಗಳು ಬಂದಿದ್ದ ಬೈಕನ್ನು ಚಲಾಯಿಸಿಕೊಂಡು ಕೋಟೆಪುರ ಕಡೆ ಹೋದರು. ಈ ದಾರಿಯಲ್ಲಿ ಫಿರ್ಯಾದುದಾರು ಹೋಗಬಾರದೆಂಬುದೇ ಈ ಘಟನೆಗೆ ಕಾರಣವಾಗಿರುತ್ತದೆ.

No comments:

Post a Comment