Wednesday, January 7, 2015

Sanitary Shop Theft Cracked by Mangalore South Police: Two Held

ಪಾಂಡೇಶ್ವರ ಠಾಣಾ ಪೊಲೀಸರಿಂದ ಮಂಗಳೂರು ನಗರದಲ್ಲಿ ಮೂರು ಕಡೆಯಲ್ಲಿರುವ ಪ್ರತಿಷ್ಠಿತ ಸ್ಯಾನಿಟರಿ ಶೋ ರೂಮ್ ನಲ್ಲಿ ಲಕ್ಷಾಂತರ ರೂ ಬೆಲೆ ಬಾಳುವ ಸೊತ್ತುಗಳನ್ನು ಕಳವು ಮಾಡಿದ ಕಳ್ಳರ ಬಂಧನ

ದಿನಾಂಕ 19-07-2013 ರಂದು ಮಂಗಳೂರು ನಗರದ ಹೈಲ್ಯಾಂಡ್ ನಲ್ಲಿರುವ ಪಿ. ಸಿ. ಮಲ್ಲಪ್ಪ & ಕಂಪನಿ ಇದರ ಮ್ಯಾನೇಜರ್ ಆದ ಶ್ರೀ ನಿತ್ಯಾನಂದ ಹೆಗ್ದೆ, ಇವರು ಮಂಗಳೂರು ದಕ್ಷಿಣ ಠಾಣೆಗೆ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ, ತಾವು ದಿನಾಂಕ 18-07-2013ರಂದು ಎಂದಿನಂತೆ ನಮ್ಮ ಶೋ ರೂಮ್ ನ ವ್ಯವಹಾರ ಮುಗಿಸಿ ರಾತ್ರಿ 8-00 ಗಂಟೆಗೆ ಅಂಗಡಿ ಬಂದ್ ಮಾಡಿ ಹೋಗಿದ್ದು ವಾಪಾಸು ಮರುದಿನ ಅಂದರೆ, ದಿನಾಂಕ 19-07-2013 ರಂದು ಬೆಳಗ್ಗೆ 9-00 ಗಂಟೆಗೆ ಶೋ ರೂಮ್ ಗೆ ಬಂದು ನೋಡಿದಾಗ ಒಳಗಡೆ ಸ್ಟೋರ್ ರೂಂನಲ್ಲಿದ್ದ ಸೊತ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದ್ದು ಸ್ಟಾಕ್ ಚೆಕ್ ಮಾಡಿ ನೋಡಿದಾಗ ಜಾಗ್ವಾರ್ ಕಂಪೆನಿಯ ಟ್ಯಾಪ್ ಫಿಟ್ಟಿಂಗ್ಸ್ ತುಂಬಿದ ರಟ್ಟಿನ ಪೆಟ್ಟಿಗೆಗಳು ಖಾಲಿಯಾಗಿದ್ದು, ಅದರ ಕವರುಗಳು ಲ್ಯಾಟ್ರಿನ್ ಒಳಗಡೆ ಬಿದ್ದಿರುವುದು ಕಂಡು ಬಂದಿರುವುದಾಗಿಯೂ ಹಾಗೂ ಶೋ ರೂಮ್ ನ ಸುತ್ತ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅಂಗಡಿ ಹಿಂಬದಿಯ ಶಟರ್ ಒಂದಕ್ಕೆ ಹಾಕಿದ ಬೀಗವನ್ನು ಯಾರೋ ಕಳ್ಳರು ತೆಗೆದು ಒಳಗೆ ಪ್ರವೇಶಿಸಿ ದಾಸ್ತಾನು ಕೋಣೆ ಮತ್ತು ಮಹಡಿಯಲ್ಲಿ ಇರಿಸಿದ್ದ ಜಾಗ್ವಾರ್ ಮತ್ತು ಇತರ ಫಿಟ್ಟಿಂಗ್ ವಸ್ತುಗಳನ್ನು ಹಾಗೂ ಕ್ಯಾಶ್ ಬಾಕ್ಸ್ ನಲ್ಲಿ ಇಟ್ಟಿದ್ದ ನಗದು ಹಣ ರೂ 49,181/- ನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು. ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂ 6,93,563/- ಆಗಿರುತ್ತದೆ. ಎಂಬಿತ್ಯಾದಿ ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿರುತ್ತದೆ.

 

       ದಿನಾಂಕ 06-01-2015 ರಂದು ಮದ್ಯಾಹ್ನ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ದಿನಕರ್ ಶೆಟ್ಟಿ ಇವರು ಸಿಬ್ಬಂದಿಗಳ ಜೊತೆ ಮಂಗಳೂರು ನಗರದ ರೊಸಾರಿಯೋ ಚರ್ಚ್ ರಸ್ತೆಯಲ್ಲಿ ವಾಹನ ತಪಾಸಣೆ ಮಾಡಿಕೊಂಡಿದ್ದ ಸಮಯ ಒಂದು ಮೋಟಾರ್ ಬೈಕ್ ನಲ್ಲಿ ಇಬ್ಬರು ಯುವಕರು ಕುಳಿತುಕೊಂಡು ಅವರಿಬ್ಬರ ಮಧ್ಯ ಒಂದು ಪ್ಲಾಸ್ಟಿಕ್ ಗೋಣಿ ಚೀಲದ ಕಟ್ಟನ್ನು ಇಟ್ಟುಕೊಂಡು ಬರುತ್ತಿರುವುದನ್ನು ಕಂಡು ಅವರನ್ನು ನಿಲ್ಲಿಸುವಂತೆ ಸಂಜ್ಞೆ ಕೊಟ್ಟಾಗ ಕೂಡಲೇ ಅವರು ಬೈಕ್ ನ್ನು ವಾಪಾಸು ಬಂದ ಕಡೆಗೆ ತಿರುಗಿಸಿ ಹೋಗಲು ಪ್ರಯತ್ನಿಸಿದಾಗ ಅವರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ವಿಚಾರಿಸಿದಾಗ ಅವರು ಗಲಿಬಿಲಿಗೊಂಡಿದ್ದು ಅವರ ಹೆಸರು ವಿಳಾಸ ಕೇಳಿದಾಗ ಬೈಕ್ ಸವಾರ ತನ್ನ ಹೆಸರು ಮೊಹಮ್ಮದ್ ಆಶೀಪ್ ಎಂಬುದಾಗಿಯೂ, ಹಿಂಬದಿ ಸವಾರನ ಹೆಸರು ಕೇಳಿದಾಗ ಆತ ತನ್ನ ಹೆಸರು ಮೊಹಮ್ಮದ್ ಎಂಬುದಾಗಿ ತಿಳಿಸಿರುತ್ತಾನೆ. ಅವರಲ್ಲಿರುವ ಗೋಣಿ ಚೀಲದ ಕಟ್ಟಿನ ಬಗ್ಗೆ ವಿಚಾರಿಸಿದಾಗ ಸಮರ್ಪಕವಾದ ಉತ್ತರ ನೀಡದೇ ಇದ್ದು ತೀವ್ರವಾಗಿ ಪ್ರಶ್ನಿಸಿದಾಗ ಅವರು ತಡವರಿಸುತ್ತಾ  ಸದ್ರಿ ಸೊತ್ತು 2013ನೇ ಇಸವಿಯ ಜುಲೈ ತಿಂಗಳಲ್ಲಿ ಮಂಗಳೂರು ನಗರದ ಹೈಲ್ಯಾಂಡ್ ಎಂಬಲ್ಲಿರುವ ಪಿ. ಸಿ. ಮಲ್ಲಪ್ಪ ಎಂಡ್ ಕಂಪನಿ ಎಂಬ ಹೆಸರಿನ ಸ್ಯಾನಿಟರಿ ಶೋ ರೂಮ್ ನಿಂದ ಕಳವು ಮಾಡಿದ ಸೊತ್ತುಗಳ ಪೈಕಿ ಕೆಲವು ಸೊತ್ತುಗಳು ಆಗಿರುವುದಾಗಿ  ತಿಳಿಸಿರುತ್ತಾರೆ. ಅವರನ್ನು ಪದೇ ಪದೇ ತೀವ್ರವಾಗಿ ಪ್ರಶ್ನಿಸಿದಾಗ ಅವರುಗಳು ತಾವು ಈ ಮೊದಲು ಮಂಗಳೂರು ನಗರದ ಕದ್ರಿ ಸಿಟಿ ಆಸ್ಪತ್ರೆಯ ಹತ್ತಿರವಿರುವ ಸಾಯಿ ರಾಮ್ ಸ್ಯಾನಿಟರಿ ಎಂಬ ಹೆಸರಿನ ಶೋ ರೂಮ್ ಮತ್ತು ಮಂಗಳೂರು ನಗರದ ನಾಗುರಿಯಲ್ಲಿರುವ ಗಣಪತಿ ಸ್ಯಾನಿಟರಿ ಶೋ ರೂಮ್ ನ ಬಾಗಿಲನ್ನು  ರಾತ್ರಿ ವೇಳೆ ಮುರಿದು ಒಳಗಡೆ ಪ್ರವೇಶಿಸಿ ಕಳವು ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿರುತ್ತಾರೆ. ಅವರುಗಳನ್ನು ದಸ್ತಗಿರಿ ಮಾಡಿ ಅವರುಗಳ ವಶದಲ್ಲಿ ಇದ್ದ ಸ್ಯಾನಿಟರಿ ಸೊತ್ತುಗಳನ್ನು ಹಾಗೂ ಯಾವುದೇ ದಾಖಲೆ ಪತ್ರ ಹಾಜರುಪಡಿಸದ ಅಪ್ಪಚ್ಚಿ ದ್ಚಿಚಕ್ರ ವಾಹನವನ್ನು ಮತ್ತು ಅವರು ಕಳವು ಮಾಡಿ ಮಾರಾಟ ಮಾಡಿದ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳನ್ನು ಮಂಗಳೂರು ನಗರದ ಬಿಕರ್ಣಕಟ್ಟೆಯಲ್ಲಿರುವ ಗುಜರಿ ಪ್ಯಾಪಾರದ ಅಂಗಡಿಯಿಂದ ಸ್ವಾಧೀನಪಡಿಸಲಾಗಿದೆ. ಸ್ವಾಧೀನಪಡಿಸಲಾದ ಸೊತ್ತುಗಳ ಒಟ್ಟು ಮೌಲ್ಯ 14,35,968/- ರೂಪಾಯಿ ಆಗಿರುತ್ತದೆ.

   ಆರೋಪಿಗಳ ಪೈಕಿ ಮೊಹಮ್ಮದ್ ಆಶೀಪ್ ಎಂಬಾತನ ಮೇಲೆ ಈ ಮೊದಲು ಮಂಗಳೂರು ಕದ್ರಿ ಪೊಲೀಸ್ ಠಾಣೆ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಕಳವು ಕೇಸ್ ದಾಖಲಾಗಿರುವ ಬಗ್ಗೆ ತಿಳಿದು ಬಂದಿರುತ್ತದೆ.

ಆರೋಪಿಗಳ ಹೆಸರು ವಿಳಾಸ ಹಾಗೂ ಫೋಟೊ

ಮೊಹಮ್ಮದ್ ಆಶೀಪ್ @ ಆಶೀಪ್  

ಪ್ರಾಯ 27 ವರ್ಷ, ತಂದೆ-ಅಬೂಬಕ್ಕರ್, ಮುಸ್ಲಿಯಾರ್, ಅಂಗನವಾಡಿ ಶಾಲೆ ಬಳಿ,  ಕುಕ್ಕಾಜೆಬೈಲ್,ಇರಾ ಗ್ರಾಮ, ಬಂಟ್ವಾಳ

 ಮಹಮ್ಮದ್, ಪ್ರಾಯ 30 ವರ್ಷ,

   ತಂದೆ-ದಿ| ಹಮೀದ್, 

    ದಾಸರಬೈಲು ಮನೆ, ಮಾರ್ಣಮಿಬೈಲ್,

    ಪಾಣೆ ಮಂಗಳೂರು ಅಂಚೆ, ಬಂಟ್ವಾಳ ತಾಲೂಕು.

 

ಪತ್ತೆ ಕಾರ್ಯಾಚಾರಣೆ :-

ಮಾನ್ಯ ಎಸ್. ಮುರುಗನ್ IPS ಪೊಲೀಸ್ ಆಯುಕ್ತರು, ಮಂಗಳೂರು ನಗರ, ಮಾನ್ಯ ಉಪ ಪೊಲೀಸ್ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ) ಕೆ. ಸಂತೋಷ್ ಬಾಬು IPS, ಮಾನ್ಯ  ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ವಿಷ್ಣುವರ್ಧನ್, ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಪವನ್ ನೆಜ್ಜೂರು, ಇವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ದಿನಕರ್ ಶೆಟ್ಟಿ ಇವರು ಆರೋಪಿಗಳನ್ನು ದಸ್ತಗಿರಿ ಮಾಡಿ ಸೊತ್ತುಗಳನ್ನು ಸ್ವಾಧೀನಪಡಿಸಿದ್ದು ಪಾಂಡೇಶ್ವರ ಠಾಣಾ ಪೊಲೀಸ್ ಉಪನಿರೀಕ್ಷಕರುಗಳಾದ ಅನಂತ ಮುರ್ಡೇಶ್ವರ್ ಹಾಗೂ. ಶರೀಪ್ ಕೆ., ಹಾಗೂ ಸಿಬ್ಬಂದಿಗಳಾದ ವಿಶ್ವನಾಥ, ಕೇಶವ ಪರಿವಾರ, ಜನಾರ್ಥನ ಗೌಡ, ಸತ್ಯನಾರಾಯಣ, ಗಂಗಾಧರ, ದಾಮೋದರ್, ಮಣಿಕಂಠ, ಶರತ್, ಶರತ್ ಕುಮಾರ್, ಸಾಜು ಕೆ. ನಾಯರ್, ಜಯಪ್ರಕಾಶ್, ವಿಶ್ವನಾಥ ಪೂಜಾರಿ, ಪ್ರದೀಪ್ ಕುಮಾರ್ ರೈ, ಪ್ರಕಾಶ್ ಇವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿದರು 

No comments:

Post a Comment