Thursday, July 3, 2014

Daily Crime Reports 03-07-2014

ದೈನಂದಿನ ಅಪರಾದ ವರದಿ.

ದಿನಾಂಕ 03.07.201411:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

1

ವಂಚನೆ ಪ್ರಕರಣ       

:

1

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 01-07-2014 ರಂದು ಸಮಯ ಸುಮಾರು 20-10 ಗಂಟೆ ಸಮಯಕ್ಕೆ ಪಿರ್ಯಾದುದಾರರಾದ ಶ್ರೀ ಮಹಮ್ಮದ್ ಪಿ.ಎ. ರವರು ಮಂಗಳೂರು ನಗರದ ಅಂಬೇಡ್ಕರ್ ಸರ್ಕಲ್ ಬಳಿ ಕೆ.ಎಂ.ಸಿ ಆಸ್ಪತ್ರೆ ಎದುರಿನಿಂದ ಜ್ಯೋತಿ ಟಾಕೀಸ್ ಕಡೆಗೆ ರಸ್ತೆ ದಾಟುತ್ತಿರುವಾಗ ಕೆಎ-19-.ಸಿ-7001 ನೇ  ಬಸ್ ಚಾಲಕನು ಬಂಟ್ಸ್ ಹಾಸ್ಟೇಲ್ ಕಡೆಯಿಂದ ಮಿಲಾಗ್ರೀಸ್ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಬಸ್ ನ್ನು ಚಲಾಯಿಸಿಕೊಂಡು ಬಂದು ಪಿರ್ಯಾದುದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು, ತಲೆಗೆ ರಕ್ತಗಾಯ, ಎಡಕೈ ಭುಜಕ್ಕೆ ಮೂಳೆ ಮುರಿತದ ಗಾಯವಾಗಿದ್ದು, ಗಾಯಾಳು ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

2.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಎಂ ರಮೇಶ್ ಶೆಟ್ಟಿ ಎಂಬವರು M/s Smart Detective & Allied Service (INDIA) Pvt Ltd ಸಂಸ್ಥೆಯ ಸೂಪರ್ ವೈಸರ್ ಆಗಿದ್ದು,  ಸದ್ರಿ ಸಂಸ್ಥೆಯು ವಿದ್ಯುಚ್ಚಕ್ತಿ ಬಿಲ್ಲು ಪಾವತಿಯ ATP ಮಿಷಿನ್ ಗಳನ್ನು ನಿರ್ವಹಿಸಿ ಕೆಲಸವನ್ನು ಮಾಡುತ್ತಿರುವವರಾಗಿರುತ್ತಾರೆ.  ಮಂಗಳೂರು ನಗರ ಅತ್ತಾವರ ಮೆಸ್ಕಾಂ 1 ನೇ ವಿಭಾಗದ ATP ಕೇಂದ್ರದ ಕೌಂಟರಿನಲ್ಲಿ  ದಿನಾಂಕ 23-06-2014 ರಂದು ಒಟ್ಟು ನಗದು 7,56,668/- ರೂಪಾಯಿ ಹಾಗೂ ಚೆಕ್ ರೂಪದಲ್ಲಿ 6,11,563/- ರೂ ಕಲೆಕ್ಷನ್ ಆಗಿರುತ್ತದೆ. ಸದ್ರಿ ನಗದು ಕಲೆಕ್ಷನ್ ಆದ 7,56,,668-00 ರೂಪಾಯಿಯನ್ನು ಎಣಿಕೆ ಮಾಡಿದಲ್ಲಿ 4,86,730/- ರೂಪಾಯಿ ಇದ್ದು, 2,69,938/- ರೂಪಾಯಿ ಕಡಿಮೆ ಬಂದಿರುತ್ತದೆ. ಸದ್ರಿ ಹಣವನ್ನು ATP  ನಿರ್ವಹಣೆ ಮಾಡುತ್ತಿದ್ದ ಕುಮಾರಿ ಶಿಲ್ಪಾ ರವರು  ಹಣವನ್ನು ಸಂಸ್ಥೆಗೆ ಪಾವತಿಸದೇ ತನ್ನ ಸ್ವಂತಕ್ಕೆ ಉಪಯೋಗಿಸಿ ಹಣ ದುರುಪಯೋಗ ಮಾಡಿರುವುದಾಗಿದೆ.

 

3.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-07-2014 ರಂದು ಬೆಳಗ್ಗೆ 09.00 ಗಂಟೆಯ ವೇಳೆಗೆ ಪಿರ್ಯಾದಿದಾರರಾದ ಶ್ರೀ ಮಝಾರ್ ರವರು ಮಂಗಳೂರು ನಗರದ ಪಾಂಡೇಶ್ವರದ ರೋಸಾರಿಯೊ ಕಾಲೇಜಿನ ಗೇಟಿನ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ಪರಿಚಯದ ಕಂದುಕ ವಾಸಿ ಮೇಹರೂಪ್ ಎಂಬುವರು ಒಮ್ಮೆಲೆ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಬ್ಯಾರಿ ಬಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರಲ್ಲಿ "ನೀನು ನಿಮ್ಮ ಕಾರು ಗುದ್ದಿದ ವಿಚಾರವನ್ನು ನಿನ್ನ  ತಾಯಿಯಲ್ಲಿ ಹೇಳಿದಕ್ಕೆ ನೀನು ನನಗೆ ಬೆದರಿಕೆ  ಹಾಕುತ್ತಿಯ" ಎಂಬುದಾಗಿ ಬೈದು ಒಮ್ಮೆಲೆ ಪಿರ್ಯಾದಿದಾರರ ತಲೆಯ ಎಡಭಾಗಕ್ಕೆ ಆರೋಪಿಯು ಬಲವಾಗಿ ಹೊಡೆದಿದ್ದು, ಇದರಿಂದ ಪಿರ್ಯಾದಿದಾರರಿಗೆ ಜಜ್ಜಿದ ಗಾಯವಾಗಿರುತ್ತದೆ. ವೇಳೆಗೆ ಪಿರ್ಯಾದಿದಾರರು ಹೆದರಿ ಜೋರಾಗಿ ಬೋಬ್ಬೆ ಹಾಕಿದಾಗ ಆರೋಪಿಯು ಪಿರ್ಯಾದಿದಾರರನ್ನು ಉದ್ದೇಶಿಸಿ ಬ್ಯಾರಿ ಬಾಷೆಯಲ್ಲಿ ಜೀವ ಬೆದರಿಕೆ ನೀಡಿ ಬಳಿಕ ಅಲ್ಲಿಂದ ಆರೋಪಿಯು ಕಪ್ಪು ಬಣ್ಣದ ಬೀಟ ಕಾರಿನಲ್ಲಿ ಪರಾರಿಯಾಗಿರುವುದಾಗಿದೆ. ಗಡಿ ಬಿಡಿಯಿಂದ ಪಿರ್ಯಾದಿದಾರರು ಗಾಡಿ ನಂಬ್ರ ನೋಡಿರುವುದಿಲ್ಲ . ಪಿರ್ಯಾದಿದಾರರ ಮನೆಯ ಕಾರು ಗುದ್ದಿದ ವಿಚಾರವನ್ನು ಆರೋಪಿಯು ಪಿರ್ಯಾದಿದಾರರ ತಾಯಿಯಲ್ಲಿ ಹೇಳಿದ್ದು, ಇದೆ ವಿಚಾರದಲ್ಲಿ ಪಿರ್ಯಾದಿದಾರರಿಗೆ ಪಿರ್ಯಾದಿದಾರರ ತಾಯಿಯು ಬೈದಿದ್ದು, ಇದರಿಂದ ಬೇಸರಗೊಂಡ ಪಿರ್ಯಾದಿದಾರರು ವಿಚಾರದ ಬಗ್ಗೆ ಆರೋಪಿಯಲ್ಲಿ ವಿಚಾರಿಸಿದ್ದು, ಇದೇ ವಿಚಾರವನ್ನು ನೆಪವಾಗಿ ಇಟ್ಟುಕೊಂಡು ಕೃತ್ಯ ಎಸಗಿರುವುದಾಗಿದೆ.

No comments:

Post a Comment