Wednesday, July 2, 2014

More than 9 Cattle Theft Cases Detected : 3 Arrested

ದಿನಾಂಕ 18-6-2014 ರಂದು ಬಜಪೆ ಠಾಣಾ ಸರಹದ್ದಿನ ಕಿಲೆಂಜಾರು ಗ್ರಾಮದ  ಕಟ್ಟೆಮಾರ್‌ ಮನೆ ಎಂಬಲ್ಲಿ ರಾತ್ರಿ ವೇಳೆ ಪುನೀತ್‌‌ ಕುಮಾರ್‌ ಎಂಬವರ ಹಟ್ಟಿಗೆ ಯಾರೋ ಕಳ್ಳರು ಅಕ್ರಮ ಪ್ರವೇಶ ಮಾಡಿ  ಹಟ್ಟಿಯಲ್ಲಿದ್ದ  4 ದನಗಳನ್ನು ಕಳವು ಮಾಡಿಕೊಂಡು ಹೋದ ಬಗ್ಗೆ  ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆ ಕೈಗೊಂಡು ಆರೋಪಿ ಉಮ್ಮರ್‌ ಫಾರೂಕ್‌ ಎಂಬಾತನನ್ನು    ದಿನಾಂಕ: 01-07-2014 ಬಂಧಿಸಿ ವಿಚಾರಣೆಗೊಳಪಡಿಸಿದಾಗ ಉಮ್ಮರ್‌ ಫಾರೂಕ್‌ ಜೊತೆ ನಿಸಾರ್‌ ಮತ್ತು ಮಹಮ್ಮದ್‌ ಆಶ್ಪಕ್‌@ ಬಡವರ ಬಂದು ಎಂಬವರು ಇದ್ದ ಬಗ್ಗೆ ತಿಳಿದು ಬಂದಂತೆ ಸದ್ರಿರವರುಗಳನ್ನು ಈ ದಿನ   ತಾ:02-07-2014 ರಂದು  ಜೋಕಟ್ಟೆಯಿಂದ ದಸ್ತಗಿರಿ ಮಾಡಿ ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಿಸಿದ್ದು ಅವರುಗಳು ದನ ಕಳ್ಳತನ ಮಾಡಿಕೊಂಡಿರುವುದನ್ನು ಒಪ್ಪಿಕೊಂಡಿರುತ್ತಾರೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ 2 ಟಾಟಾ ಸುಮೋ ವಾಹನ ಮತ್ತು ಒಂದು ಆಲ್ಟೋ ಕಾರನ್ನು ವಶಕ್ಕೆ ಪಡೆಯಲಾಗಿರುತ್ತದೆ.

ಸದ್ರಿ ದಸ್ತಗಿರಿಯಾದ 3 ಜನ ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದು ವಿಚಾರಣೆಯ ವೇಳೆ ಅವರುಗಳು  ಬಜಪೆ ಠಾಣಾ ಸರಹದ್ದು ಹಾಗೂ ಕಾರ್ಕಳ, ವೇಣೂರು, ಉಪ್ಪಿನಂಗಡಿ, ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಸುಳ್ಯ ಠಾಣಾ ಸರಹದ್ದುಗಳಲ್ಲಿ  ಹಾಗೂ ಇತರ ಕಡೆಗಳಲ್ಲಿ ದನ ಕಳ್ಳತನ ಮಾಡಿರುವುದು ಮತ್ತು ಈ ಬಗ್ಗೆ ಆಯಾಯ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವುದು  ತಿಳಿದು ಬಂದಿರುತ್ತದೆ. ಅಲ್ಲದೆ ಈ ದನಕಳ್ಳರ ಗುಂಪು ಮಾರಕಾಯುಧಗಳನ್ನು ಹೊಂದಿ ರಾತ್ರಿ ವೇಳೆಯಲ್ಲಿ ದನದ ಹಟ್ಟಿಗಳಿಗೆ ನುಗ್ಗಿ ದನಗಳನ್ನು ಅಮಾನವೀಯ ರೀತಿಯಲ್ಲಿ ಟಾಟಾ ಸುಮೋ ಮತ್ತು ಇತರ ವಾಹನಗಳಲ್ಲಿ ತುಂಬಿಕೊಂಡು ಹೋಗುವವರೆಂಬುದಾಗಿ ತಿಳಿದುಬಂದಿರುತ್ತದೆ. ಅಲ್ಲದೆ ಕಳೆದ ವರ್ಷ ಭಾರಿ ಪ್ರತಿಭಟನೆಗೆ ಕಾರಣವಾಗಿದ್ದ ಮುಚ್ಚೂರು ಗ್ರಾಮದ ದನಗಳ್ಳತನ ಪ್ರಕರಣವನ್ನು ಇದೇ ಆರೋಪಿಗಳು ಎಸಗಿರುವುದು ಬೆಳಕಿಗೆ ಬಂದಿರುತ್ತದೆ.

ಈ ಪ್ರಕರಣದಲ್ಲಿ ಉಮ್ಮರ್‌ ಫಾರೂಕ್‌, ನಿಸಾರ್‌, ಮಹಮದ್‌ ಅಶ್ಪಕ್‌@ ಬಡವರ ಬಂಧು  ಎಂಬ ಆರೋಪಿಗಳನ್ನು ದಸ್ತಗಿರಿ ಮಾಡಿದ್ದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ. ಪ್ರಕರಣದಲ್ಲಿ ದಸ್ತಗಿರಿಯಾದ ಉಮ್ಮರ್‌ ಫಾರೂಕ್‌ ಮತ್ತು  ಶಾಂತಿಗುಡ್ಡೆಯ ದಾವೂದ್‌‌ ಪ್ರಮುಖ ರೂವಾರಿಗಳಾರುತ್ತಾರೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ದಾವೂದ್‌, ಮುನ್ನ, ಅಜರ್‌, ಬೆಂಗರೆಯ ಕೆಬೀರ್‌ ಮತ್ತು ಗಂಟೆ ರಿಯಾಜ್‌  ಎಂಬವರುಗಳು ತಲೆಮರೆಸಿಕೊಂಡಿದ್ದು ಇವರುಗಳ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಲ್ಲಿ ಪೊಲೀಸ್ ಇಲಾಖೆಯಿಂದ ಸೂಕ್ತ ಬಹುಮಾನ ನೀಡಲಾಗುವುದು.

ಪ್ರಕರಣದ ತನಿಖೆಗೆ ಪೊಲೀಸ್ ಆಯುಕ್ತರಾದ ಶ್ರೀ ಆರ್‌‌. ಹಿತೇಂದ್ರ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಪ್ರಕರಣದ ಪತ್ತೆಗೆ  ಉಪ ಪೊಲೀಸ್ ಆಯುಕ್ತರುಗಳಾದ ಡಾ| ಕೆ.ವಿ ಜಗದೀಶ್‌‌, ಶ್ರೀ. ಎನ್ ವಿಷ್ಣುವರ್ದನ್, ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಎಸ್‌. ರವಿಕುಮಾರ್‌‌, ಪಿ.ಐ ಶ್ರೀ ನರಸಿಂಹ ಮೂರ್ತಿ, ಪಿ.ಎಸ್‌‌.ಐ ಶ್ರೀ  ಪೂವಪ್ಪ  ಎ.ಎಸ್‌.ಐ ಶ್ರೀ ಸೀತಾರಾಮ್‌ ಮತ್ತು ಪೊಲೀಸ್ ಸಿಬ್ಬಂದಿಯವರಾದ  ಶ್ರೀ ಸುರೇಶ್‌‌, ಶ್ರೀ ರಾಜೇಶ್, ಶ್ರೀ ಜಯಾನಂದ, ಶ್ರೀ ಶಶಿಧರ, ಶ್ರೀ ಯೊಗೀಶ್‌, ಶ್ರೀ ಗಿರಿಯಪ್ಪ, ಶ್ರೀ ಅಬುಸಾಲ, ಶ್ರೀ ಹರೀಶ್, ಶ್ರೀ ಮೋಹಿತ್‌‌, ವಿಶ್ವನಾಥ್‌, ಮ.ಪಿ.ಸಿ ಶ್ರೀಮತಿ ಲಾವಣಿ ರವರು ಶ್ರಮಿಸಿರುತ್ತಾರೆ.

No comments:

Post a Comment