Saturday, July 19, 2014

Daily Crime Reports 19-07-2014

ದೈನಂದಿನ ಅಪರಾದ ವರದಿ.

ದಿನಾಂಕ 19.07.201411:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

4

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 18.07.2014 ರಂದು 17.45 ಗಂಟೆ ಸಮಯ ಪಿರ್ಯಾದಿದಾರರಾದ ಶ್ರೀ ಕೆ.ಎಸ್. ಉಸ್ಮಾನ್ ರವರು ಮೋಟಾರು ಸೈಕಲ್  ಕೆಎ.19.ಈಬಿ 2205ರಲ್ಲಿ ಅವರ ಅಣ್ಣ ಕೆ ಎಸ್ ಹಸೆನ್ ಹಾಗೂ ಅಣ್ಣನ ಮೊಮ್ಮಗಳು ಫಾತಿಮಾ ಸೀಫಾಳೊಂದಿಗೆ ಹೋಂಡಾ ಅಕ್ಟೀವಾ ನಂಬ್ರ ಕೆಎ.19 ಈಎಫ್ 2352ರಲ್ಲಿ  ಮುಕ್ಕಾ ಕಡೆಯಿಂದ  ಮನೆ ಕಡೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೋಗುತ್ತಾ ಪಿರ್ಯಾದಿದಾರರ ಅಣ್ಣ ತನ್ನ  ಆಕ್ಟೀವಾ ಹೋಂಡಾವನ್ನು ತೆರೆದ ರಸ್ತೆ ಡಿವೈಡರಿನಲ್ಲಿ ಬಲಕ್ಕೆ ತಿರುಗಿಸಲು ನಿಂತಿರುವಾಗ್ಯೆ  ಮಾರುತಿ ಓಮ್ನಿ ಕಾರು ಕೆಎ.19. ಎಂಡಿ. 8436ನೇದನ್ನು ಅದರ ಚಾಲಕ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಅಣ್ಣ ಹಸೆನ್ ರವರ ಹೋಂಡಾ ಅಕ್ಟೀವಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಣ್ಣ ಹಾಗೂ ಮೊಮ್ಮಗಳಿಗೆ  ಗಾಯವಾಗಿದ್ದು ಗಂಭೀರ ಗಾಯಗೊಂಡ ಪಿರ್ಯಾದಿಯ ಅಣ್ಣ  ಚಿಕಿತ್ಸೆ ಫಲಕಾರಿಯಾಗದೆ ಜೆ ಆಸ್ಪತ್ರೆಯಲ್ಲಿ ರಾತ್ರಿ 10.10 ಗಂಟೆಗೆ ಮೃತಪಟ್ಟಿದ್ದು, ಅಣ್ಣನ ಮೊಮ್ಮಗಳು ಫಾತಿಮಾ ಸೀಫಾಳು ರಕ್ತಗಾಯದಿಂದ ಒಳ ರೋಗಿಯಾಗಿ ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.

 

2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 18.07.2014 ರಂದು ಪಿರ್ಯಾದಿದಾರರಾದ ಶ್ರೀ ಅಖೀಬ್ ರವರು ತನ್ನ ಗೆಳೆಯರಾದ  ಗಜಾನನ ಭಟ್ ಮತ್ತು ಅಭಿಮನ್ಯು ಪೂಂಜಾರವರ ಜೊತೆ  ಅಭಿಮನ್ಯ ಪೂಂಜಾರಿಗೆ ಸಂಬಂದಿಸಿದ ಕಾರು ನಂಬ್ರ ಕೆಎ. 19.ಎಂಬಿ. 2318ನೇಯದರಲ್ಲಿ  ಪ್ರಯಾಣಿಸುತ್ತಾ ಕಾರನ್ನು ಅಭಿಮನ್ಯು ಪೂಂಜಾರು ನಗರದ ಸಾರ್ವಜನಿಕ ಕಾಂಕ್ರೀಟು ರಸ್ತೆಯಾದ  ಕೆ ಎಸ್ ಆರ್ ರಸ್ತೆಯಿಂದ  ನವಭಾರತ್ ರಸ್ತೆ ಕಡೆಗೆ ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು  ಬಂದ ಪರಿಣಾಮ ಕಾರಿನ ನಿಯಂತ್ರಣ ತಪ್ಪಿ ರಾತ್ರಿ 22.30 ಗಂಟೆಗೆ  ಕೊಡಿಯಾಲ ಬೈಲ್  ಬಿಷಪ್ ಹೌಸ್ ಎದುರು  ಇರುವ  ರಸ್ತೆ ಡಿವೈಡರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತ್ತಿದ್ದ ಪಿರ್ಯಾದಿದಾರರಿಗೆ ಕಾರಿನ ಎಡ ಬಾಗಿಲಿನ ಗಾಜು ಹೊಡೆದು ಹಣೆಗೆ ಸಾಮಾನ್ಯ ತರಹದ ರಕ್ತಗಾಯವಾಗಿರುವುದಲ್ಲದೆ ಕಾರು ಜಖಂಗೊಂಡಿರುತ್ತದೆ.

 

3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17/07/2014 ರಂದು ಫಿರ್ಯಾದುದಾರರಾದ ಶ್ರೀ ಶೇಖರ್ ಗಟ್ಟಿ, ಹೆಚ್.ಸಿ. 1850, ಬರ್ಕೆ ಪೊಲೀಸ್ ಠಾಣೆ ರವರು ಕರ್ತವ್ಯ ಮುಗಿಸಿ ಉಳ್ಳಾಲದಲ್ಲಿರುವ ತನ್ನ ಮನೆಗೆ KA19-K-2169 ಮೋಟರ್ ಸೈಕಲ್ ನಲ್ಲಿ  ಎನ್.ಹೆಚ್.ರಸ್ತೆಯಲ್ಲಿ ಹೋಗುತ್ತಾ ರಾತ್ರಿ ಸುಮಾರು 21.30 ಗಂಟೆಗೆ ಮಂಗಳೂರು ನಗರದ ಪಂಪ್ ವೆಲ್ ಸರ್ಕಲ್ ಬಳಿಯ ಕರ್ನಾಟಕ ಬ್ಯಾಂಕಿನ ಎದುರು ತಲುಪಿದಾಗ KA19-D-9243  ನಂಬ್ರದ ತ್ರಿ ಚಕ್ರದ ರಿಕ್ಷಾಟೆಂಪೊ ವನ್ನು ಅದರ ಚಾಲಕ ಪಂಪ್ ವೆಲ್ ಕಡೆಯಿಂದ ನಂತೂರು ಕಡೆಗೆ ಎನ್.ಹೆಚ್.ರಸ್ತೆಯಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ರಸ್ತೆಯ ತೀರ ಬಲಬದಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರ ಮೋಟರ್ ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಹಣೆಗೆ ಗುದ್ದಿದ ಗಾಯ ,ಕೆನ್ನೆಗೆ ಮತ್ತು ತುಟಿಗೆ ತರಚಿದ ಗಾಯ, ಎಡ ಕೈ ಭುಜಕ್ಕೆ  ಮತ್ತು ಬೆನ್ನಿಗೆ ಗುದ್ದಿದ ಗಾಯ, ಎಡಕಾಲಿನ ಹೆಬ್ಬೆರಳು ಮತ್ತು ಬಲಕಾಲಿನ ಪಾದಕ್ಕೆ ತರಚಿದ ಗಾಯ ಹಾಗೂ ಬಲಕೈ ಬೆರಳು ಮತ್ತು ತಟ್ಟಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ಗಾಯಾಳು ಕೊಡಿಯಾಲ್ ಬೈಲ್ ಯೆನಪೋಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಾಲಾಗಿ ಚಿಕಿತ್ಸೆಯಲ್ಲಿರುತ್ತಾರೆ.

 

4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-07-2014 ರಂದು ರಾತ್ರಿ 7:15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಸಣ್ಣ ಶೇಕುಂಞ ರವರು ಮಂಗಳೂರು ತಾಲೂಕು ಬೋಳಿಯಾರ್ ಗ್ರಾಮದ ಜುಮ್ಮಾ ಮಸೀದಿಯಲ್ಲಿ ನಮಾಜ್ಮುಗಿಸಿ ಮನೆಗೆ ಹೋಗುವರೇ ರಸ್ತೆಯ ತೀರಾ ಎಡ ಬದಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ಕಾಯರ್ಗೋಳಿ ಕಡೆಯಿಂದ ಬೋಳಿಯಾರು ಕಡೆಗೆ ಮೋಟಾರ್ ಸೈಕಲ್ ನಂಬ್ರ ಕೆಎ-12-ಹೆಚ್-2395ನೇದನ್ನು ಅದರ ಸವಾರ ಅಣ್ಣಪ್ಪ ಎಂಬವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರಿಗೆ ಢಿಕ್ಕಿ ಹೊಡೆದು, ಪಿರ್ಯಾದಿದಾರರು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ತುಟಿಗೆ, ಎಡಕಣ್ಣಿನ ಕೆಳಗೆ ರಕ್ತ ಗಾಯವಾಗಿದ್ದು, ಸೊಂಟದ ಎಡ ಬದಿಗೆ ಗುದ್ದಿದ ನೋವಾಗಿರುತ್ತದೆ.

 

5.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ರಂಜಿತ್, ಎಪಿಸಿ 271, ನಗರ ಸಶಸ್ತ್ರ ಮೀಸಲು ಪಡೆ, ಮಂಗಳೂರು ನಗರ ರವರು ದಿನಾಂಕ 27-03-2007 ರಂದು ಜಿಲ್ಲಾ/ನಗರ ಸಶಸ್ತ್ರ ಮೀಸಲು ಪಡೆಯಲ್ಲಿ ಕರ್ತವ್ಯಕ್ಕೆ ನೇಮಕಗೊಂಡು ಕರ್ತವ್ಯದಲ್ಲಿದ್ದು, ದಿನಾಂಕ 26-06-2014 ರಿಂದ ಕರ್ತವ್ಯಕ್ಕೆ ನೇಮಿಸಿದಂತೆ .. ಜಿಲ್ಲೆಯ ಮಾನ್ಯ ಜಿಲ್ಲಾ  ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರ ಅಂಗರಕ್ಷಕ ಕರ್ತವ್ಯ ನಿರ್ವಹಿಸಿದಂತೆ ಅಂದಿನಿಂದ ಮಾನ್ಯ ನ್ಯಾಯಾಧೀಶರು ಕೆಲವು ನ್ಯಾಯಾಲಯದಲ್ಲಿ ಕರ್ತವ್ಯದ ಬಗ್ಗೆ ಸೂಚನೆಗಳನ್ನು ನೀಡಿದಂತೆ ನಿರ್ವಹಿಸುತ್ತಿದ್ದು, ದಿನಾಂಕ 18-07-2014 ರಂದು ಬೆಳಿಗ್ಗೆ ಸುಮಾರು 11:30 ಗಂಟೆಗೆ ವಿಚಾರಣಾಧೀನ ಕೈದಿಗಳಾದ ಗುರುಪ್ರಸಾದ್, ಭವಾನಿ ಶಂಕರ ಹಾಗೂ ಇತರ ನಾಲ್ಕು ಜನರು ಮಾನ್ಯ ಜಿಲ್ಲಾ  ಹಾಗೂ ಸತ್ರ ನ್ಯಾಯಾಲಯಕ್ಕೆ ಉಡುಪಿ ಪೊಲೀಸರ ಬೆಂಗಾವಲಿನಲ್ಲಿ ಬಂದಿದ್ದು, ಮಾನ್ಯ ನ್ಯಾಯಾಧೀಶರು ಕುಳಿತುಕೊಳ್ಳುವಲ್ಲಿನ ಬಲ ಬದಿಗೆ ಕಾಣಿಸುವಂತ ಸ್ಥಳದಲ್ಲಿ ಕುಳಿತುಕೊಂಡಿದ್ದು, ಮಾನ್ಯ ನ್ಯಾಯಾಧೀಶರು ತಿಳಿಸಿದಂತೆ ಕೂಡಲೇ ಪಿರ್ಯಾದಿದಾರರು ಸದ್ರಿ ವಿಚಾರಣಾಧೀನ ಕೈದಿಗಳಿಗೆ ಅಲ್ಲಿ ಕುಳಿತುಕೊಳ್ಳದಂತೆ ಸೂಚಿಸಿದ್ದು, ಅದಕ್ಕೆ ವಿಚಾರಣಾಧೀನ ಕೈದಿಗಳಾದ ಗುರುಪ್ರಸಾದ್, ಭವಾನಿ ಶಂಕರ ಹಾಗೂ ಇತರ ನಾಲ್ಕು ಜನರು "ನಾವು ಇಲ್ಲಿಯೇ ಕುಳಿತುಕೊಳ್ಳುತ್ತೇವೆ, ನೀನು ಯಾರು, ನಮ್ಮನ್ನು ತಡೆಯಲು, ನೀನು ಹೇಗೆ ತಡೆಯುತ್ತೀಯಾ" ಎಂದು ಗದರಿಸಿದ್ದು, ಅದಕ್ಕೆ ಪಿರ್ಯಾದಿದಾರರು "ನ್ಯಾಯಾಧೀಶರು ಇಲ್ಲಿ ಯಾರು ಕುಳಿತುಕೊಳ್ಳಲು ಬಿಡದಂತೆ ನನಗೆ ಸೂಚಿಸಿದ್ದು, ನೀವು ಇಲ್ಲಿಂದ ಎದ್ದು ಬೇರೆ ಖಾಲಿ ಇರುವ ಸ್ಥಳದಲ್ಲಿ ಕುಳಿತುಕೊಳ್ಳಿ" ಎಂದು ಹೇಳಿದಾಗ, ತಕ್ಷಣ ವಿಚಾರಣಾಧೀನ ಕೈದಿಗಳಾದ ಗುರುಪ್ರಸಾದ್, ಭವಾನಿ ಶಂಕರ ರವರು ಸಮವಸ್ತ್ರದಲ್ಲಿ ಕರ್ತವ್ಯದಲ್ಲಿದ್ದ ಕರ್ತವ್ಯ ನಿರ್ವಹಿಸುತ್ತಿದ್ದ ಪಿರ್ಯಾದಿದಾರರಿಗೆ ಕೈಯಿಂದ ದೂಡಿ, ಕಾಲಿನಿಂದ ಪಿರ್ಯಾದಿದಾರರ ಕಾಲು ಮತ್ತು ತೊಡೆಗೆ ಒದ್ದು, ಸಮವಸ್ತ್ರವನ್ನು ಹಿಡಿದು ಎಳೆದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದು, ಇದಕ್ಕೆ ಪಿರ್ಯಾದಿದಾರರು ವಿರೋಧ ವ್ಯಕ್ತಪಡಿಸಿದ್ದು, ಆಗ ವಿಚಾರಣಾಧೀನ ಕೈದಿಗಳಾದ ಗುರುಪ್ರಸಾದ್, ಭವಾನಿ ಶಂಕರ ಹಾಗೂ ಇತರ ನಾಲ್ಕು ಜನರು ಗುರಾಯಿಸಿ ನೋಡಿ "ನಮ್ಮನ್ನು ತಡೆಯುತ್ತೀಯಾ, ನಾವು ಜೈಲಿನಿಂದ ಹೊರಗೆ ಬಂದ ಮೇಲೆ ನಿನ್ನನ್ನು ಸಾಯಿಸದೇ ಬಿಡುವುದಿಲ್ಲ" ಎಂದು ಜೀವ ಬೆದರಿಕೆ ಹಾಕಿದ್ದು, ಸಮಯ ವಿಚಾರಣಾಧೀನ ಕೈದಿಗಳಾದ ಗುರುಪ್ರಸಾದ್, ಭವಾನಿ ಶಂಕರ ಹಾಗೂ ಇತರ ನಾಲ್ಕು ಜನರನ್ನು ಬೆಂಗಾವಲು ಕರ್ತವ್ಯದಲ್ಲಿದ್ದ ಉಡುಪಿ ಪೊಲೀಸರು, ನ್ಯಾಯಾಲಯದ ಆಡರ್ಲಿ, ನ್ಯಾಯಾಲಯ ಕರ್ತವ್ಯದ ಪೊಲೀಸರು ಹಾಗೂ ಇನ್ನಿತರ ಜನರು ಇದ್ದು, ಪಿರ್ಯಾದಿದಾರರಿಗೆ ಇನ್ನಷ್ಟು ಹಲ್ಲೆ ನಡೆಯದಂತೆ ತಡೆದಿರುತ್ತಾರೆ.

No comments:

Post a Comment