Monday, July 28, 2014

Daily Crime Reports 28-07-2014

ದೈನಂದಿನ ಅಪರಾದ ವರದಿ.

ದಿನಾಂಕ 28.07.201416:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

1

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು  ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 27-07-2014 ರಂದು ಸಂಜೆ ಸುಮಾರು 6-50 ಗಂಟೆ ಸಮಯಕ್ಕೆ ಮಂಗಳೂರು ನಗರದ ಕಂಕನಾಡಿ ವೆಲೆನ್ಸಿಯಾ ಫಾತಿಮಾ ರಿಟ್ರಿಟ್ ಹೌಸ್ ಬಳಿ ಅತ್ತಾವರದಿಂದ ಕಂಕನಾಡಿ ಕಡೆಗೆ ಹಾದುಹೋಗುವ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಕೆಎ-20-5842 ನಂಬ್ರದ ಟೆಂಪೋವನ್ನು ಅದರ ಚಾಲಕ ಅತ್ತಾವರ ಕಡೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರಾದ ಶ್ರೀ ಮೈಕಲ್ ಕ್ಯಾಸ್ಟಲಿನೋ ರವರ ತಮ್ಮ ಪೀಟರ್ ಕ್ಯಾಸ್ತಲಿನೋ ಎಂಬವರು ಕಂಕನಾಡಿ ಕಡೆಯಿಂದ ಚಲಾಯಿಸಿಕೊಂಡು ಬರುತ್ತಿದ್ದ  ಕೆಎ-19-ಯು-2048 ನಂಬ್ರದ ಆಕ್ಟೀವಾ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿದ  ಪರಿಣಾಮ ಪೀಟರ್ ಕ್ಯಾಸ್ತಲಿನೋ ರವರ  ತಲೆಗೆ ಗುದ್ದಿದ ಗಂಭೀರ ಗಾಯ ಹಾಗೂ ಬಲಕಾಲಿಗೆ ಮೂಳೆ ಮುರಿತದ ಗಾಯವಾಗಿ ಮಂಗಳೂರು ನಗರದ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ.

 

2.ಮಂಗಳೂರು  ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 26-07-2014 ರಂದು ಸಂಜೆ ಸುಮಾರು 6-00 ಗಂಟೆ ಸಮಯಕ್ಕೆ ಮಂಗಳೂರು ನಗರದ ಪಂಪ್‌‌ವೆಲ್ ಕರ್ನಾಟಕ ಬ್ಯಾಂಕ್ ಎದುರು ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಕೆಎ-19-.ಎಲ್-2148 ನಂಬ್ರದ ಯಮಹಾ FZ ಮೋಟಾರು ಸೈಕಲ್ ನ್ನು ಅದರ ಸವಾರ ಅಕ್ಷಯ್ ಎಂಬಾತನು ನಂತೂರು ಕಡೆಯಿಂದ ಪಂಪ್ವೆಲ್ಕಡೆಗೆ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರಾದ ಶ್ರೀ ಸತೀಶ್ಚಂದ್ರ ಎಂ. ರವರು ಸಹಸವಾರರಾಗಿ  ಕುಳಿತು ಪ್ರಯಾಣಿಸುತ್ತಿದ್ದ ರಾಮ್‌‌ಪ್ರಸಾದ್ ರವರು ಸವಾರಿಮಾಡುತ್ತಿದ್ದ ಕೆಎ-19-ಆರ್-5382 ನೇ ನಂಬ್ರದ ದ್ವಿಚಕ್ರವಾಹನಕ್ಕೆ ಢಿಕ್ಕಿಪಡಿಸಿದ ಪರಿಣಾಮ ಪಿರ್ಯಾದುದಾರರ ಕಾಲಿಗೆ ಗುದ್ದಿದ ಗಾಯ ಹಾಗೂ ರಾಮಪ್ರಸಾದ್ ರವರ ಎಡಕಾಲು ಮತ್ತು ಎಡಕೈಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ಆರೋಪಿ ಕೆಎ-19-.ಎಲ್-2148 ನಂಬ್ರದ ಯಮಹಾ FZ ಮೋಟಾರು ಸೈಕಲ್ ಸವಾರ ಅಕ್ಷಯ್ ಮತ್ತು ಅದರ ಸಹಸವಾರನಿಗೂ ಸಾಮಾನ್ಯ ಸ್ವರೂಪದ ಗಾಯವಾಗಿರುತ್ತದೆ.

 

3.ಕಾವೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ದಿನೇಶ್ ರವರು ಕೆಎ 19 ಡಿ 5256 ನಂಬ್ರದ 3 ಬಿ ರೂಟ್ ಸಿಟಿ ಬಸ್ಸಿನ ಚಾಲಕರಾಗಿದ್ದು, ದಿನಾಂಕ 27-07-2014 ರಂದು ಸಂಜೆ 6.50 ಗಂಟೆ ಸಮಯಕ್ಕೆ ಪಿರ್ಯಧಿದಾರರು ಮೂಡುಶೆಡ್ಡೆಗೆ ಬಂದು ಪ್ರಯಾಣಿಕರನ್ನು ಕೂರಿಸಿಕೊಂಡು ವಾಪಾಸು ಹೊರಡುತ್ತಿದ್ದಾಗ ಮೂಡುಶೆಡ್ಡೆ ಪಂಚಾಯತ್ ಕಛೇರಿ ಸಮೀಪ ಅರೋಪಿ ಭಾಗ್ಯನಾಥನ್ ಎಂಬವರು ಪಿರ್ಯಾಧಿದಾರರು ಚಲಾಯಿಸುತ್ತಿದ್ದ ಬಸ್ಸಿಗೆ ಅಡ್ಡ ನಿಂತು ತನ್ನ ಕೈಯಲ್ಲಿದ್ದ ಕಲ್ಲುಗಳಿಂದ ಬಸ್ಸಿನ ಎದುರಿನ ಗ್ಲಾಸಿಗೆ ಹೊಡೆದುದರಿಂದ ಬಸ್ಸಿನ ಎದುರಿನ ಗ್ಲಾಸ್ ಸಂಪೂರ್ಣ ಪುಡಿಯಾಗಿರುವುದಲ್ಲದೇ, ಪಿರ್ಯಾಧಿದಾರರು ಅರೋಪಿಯಲ್ಲಿ ಯಾಕೆ ಕಲ್ಲು ಹೊಡೆದದ್ದು ಎಂದು ಕೇಳಿದಕ್ಕೆ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ನೀನು ಬಗ್ಗೆ ಮಾತನಾಡಿದರೆ ನಿನ್ನನ್ನು ಇಲ್ಲಿಯೇ ಮುಗಿಸುತ್ತೇನೆ ಎಂಬುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಬಸ್ಸಿನ ಗ್ಲಾಸಿಗೆ ಕಲ್ಲು ಹೊಡೆದಿರುವುದರಿಂದ ಸುಮಾರು 12,000/- ರೂ ನಷ್ಟ ಉಂಟಾಗಿರುತ್ತದೆ. ಆರೋಪಿಯು ಸದ್ರಿ ಬಸ್ಸಿಗಿಂತ ಮೊದಲು ಬಂದ ಅದೇ ಕಂಪೆನಿಯ ಇನ್ನೊಂದು ಬಸ್ಸಿನಲ್ಲಿ ಟಿಕೇಟ್ ಹಣ ನೀಡದೇ ಗಲಾಟೆ ಮಾಡಿದುದರಿಂದ ಸದ್ರಿ ಬಸ್ಸಿನ ಕಂಡೆಕ್ಟರ್ ಆತನನ್ನು ಬಸ್ಸಿನಿಂದ ಕೆಳಗೆ ಇಳಿಸಿರುವುದೇ  ಕಾರಣವಾಗಿರುತ್ತದೆ.

 

4.ಮಂಗಳೂರು  ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 27-07-2014ರಂದು ಪಿರ್ಯಾದಿದಾರರಾದ ಶ್ರೀ ಕ್ಲಿಂಟ್ ಥೋಮಸ್ ರವರು ಬೆಳಿಗ್ಗೆ ಸಮಯ ಸುಮಾರು 07-45 ಗಂಟೆಗೆ ಚರ್ಚ್ ಗೆ ಹೋಗಿದ್ದು, ಸದ್ರಿ ಸಮಯ ಪಿರ್ಯಾದಿದಾರರ ಸ್ನೇಹಿತರು ಮನೆಯಲ್ಲಿ ಮಲಗಿದ್ದರಿಂದ ಬಾಗಿಲಿಗೆ ಬೀಗವನ್ನು ಹಾಕಿರುವುದಿಲ್ಲ. ನಂತರ ಪಿರ್ಯಾದಿದಾರರು ವಾಪಾಸು ಸಮಯ ಸುಮಾರು 09-30 ಗಂಟೆಗೆ ಚರ್ಚ್ ನಿಂದ ವಾಪಾಸಾಗಿ ಮನೆಗೆ ಬಂದು ನೋಡಲಾಗಿ ಪಿರ್ಯಾದಿದಾರರ ಬಾಬ್ತು ಮನೆಯ ಹಾಲ್ ನಲ್ಲಿ ಇರಿಸಿದ್ದ ಸೋನಿ ಕಂಪನಿಯ ಕಪ್ಪು ಬಣ್ಣದ ಅಂದಾಜು 29,500/- ರೂ ಬೆಲೆ ಬಾಳುವ ಲ್ಯಾಪ್ ಟಾಪ್ ಕಾಣದೇ ಇದ್ದು, ತನ್ನ ಸ್ನೇಹಿತರಲ್ಲಿ ವಿಚಾರಿಸಿ ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

5.ಮಂಗಳೂರು  ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-07-2014 18-30 ಗಂಟೆಯಿಂದ ದಿನಾಂಕ 27-07-2014 18-30 ಗಂಟೆಯ ಮಧ್ಯೆ ಮಂಗಳೂರು ನಗರದ ಎಸ್.ಸಿ.ಎಸ್ ಆಸ್ಪತ್ರೆಯ ಎದುರುಗಡೆ ಇರುವ 'EXCELSIOR' ಎಂಬ ಹೆಸರಿನ ಪಿರ್ಯಾದಿದಾರರಾದ ಶ್ರೀ ಎ.ಜೆ.ಪಿ. ರೆಗೋ ರವರ ಸಂಬಂಧಿ ಶ್ರೀಮತಿ. ಜೇನ್ ಪಿಂಟೋ ಎಂಬವರ ವಾಸದ ಮನೆಯ ಎದುರಿನ ಕಿಟಕಿ ಗಾಜನ್ನು ಒಡೆದು ಕಿಟಕಿಯ ಕಬ್ಬಿಣದ ಗ್ರಿಲ್ ಗಳನ್ನು ಕತ್ತರಿಸಿ ಮೂಲಕ ಒಳಪ್ರವೇಶಿಸಿದ ಯಾರೋ ಕಳ್ಳರು ಮನೆಯಲ್ಲೆಲ್ಲಾ ಬೆಲೆ ಬಾಳುವ ಸೊತ್ತುಗಳಿಗಾಗಿ ಜಾಲಾಡಿ ಸದ್ರಿ ಮನೆಯ ಬೆಡ್ ರೂಮಿನ ಟೇಬಲ್ ನಲ್ಲಿರಿಸಿದ್ದ ಸುಮಾರು 23,500/- ರೂ ಬೆಲೆ ಬಾಳುವ HITACHI ಕಂಪನಿಯ ಲ್ಯಾಪ್ ಟಾಪ್ ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಸದ್ರಿ ಮನೆಯ ಮಾಲೀಕರು ಲಂಡನ್ ಗೆ ತೆರಳಿರುವುದರಿಂದ  ಮನೆಯಲ್ಲಿ ಯಾವೆಲ್ಲಾ ವಸ್ತುಗಳು ಕಳವಾಗಿವೆ ಎಂಬುದರ ಬಗ್ಗೆ ನಿಖರವಾಗಿ ಪಿರ್ಯಾದಿದಾರರಿಗೆ ತಿಳಿದಿರುವುದಿಲ್ಲ.

 

6.ಮಂಗಳೂರು  ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 27.07.2014 ರಂದು ಮಧ್ಯಾಹ್ನ 3.35 ಗಂಟೆ ವೇಳೇಗೆ ಪಿರ್ಯಾದಿದಾರರಾದ ಶ್ರೀ ಸುರೇಶ್ ರವರ ಅತ್ತೇ ನಾಗಮ್ಮ @ ವಿಮಲ ಎಂಬವರು ಸೊಪ್ಪು ಕಡಿಯಲೆಂದು ತಮ್ಮ ಮನೆಯ ಎದುರುಗಡೆಯ ಗುಡ್ಡೆ ಸ್ಥಳಕ್ಕೆ ಹೋದ ಸಮಯದಲ್ಲಿ ಕಾಂತಪ್ಪ ಪೂಜಾರಿಯವರ ಅಂಗಡಿ ಬಳಿಯ ಟ್ರಾನ್ಸ್‌‌ಫಾರ್ಮರ್‌‌ನಿಂದ ಪಿರ್ಯಾಧಿದಾರರ ಮನೆಯ ವಿದ್ಯುತ್‌‌ ಸಂಪರ್ಕಕ್ಕೆಂದು ಮೆಸ್ಕಾಂ ಇಲಾಖೆಯವರು ಅಳವಡಿಸಿದ್ದ ವಿದ್ಯುತ್‌‌ ವಯರ್‌‌ ತುಂಡಾಗಿ ನಾಗಮ್ಮ ರವರ ಮೇಲೆ ಬಿದ್ದುದರಿಂದ  ತೀವ್ರ ವಿದ್ಯುತ್‌‌ ಶಾಕ್‌‌ ತಗಲಿ ಸದ್ರಿಯವರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಸದ್ರಿ ವಿದ್ಯುತ್‌‌‌ ವಯರ್‌‌ ಸಡಿಲಗೊಂಡಿರುವುದರಿಂದ ಇದನ್ನು ಸರಿಪಡಿಸುವಂತೆಯೂ ಇಲ್ಲದಿದ್ದರೆ ಮಳೆಗಾಲದಲ್ಲಿ ಸದ್ರಿ ವಯರ್‌‌ ತುಂಡಾಗಿ  ಕೆಳಗೆ ಬಿದ್ದು  ಜನ ಜಾನುವಾರುಗಳಿಗೆ ಅಪಾಯ ಉಂಟಾಗುವ ಸಂಭವ ಇದೆ ಎಂದು ಮೆಸ್ಕಾಂ ಜೆ. ರವರಿಗೆ ತಿಳಿಸಿದ್ದರೂ ಅವರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯತನ ತೋರಿದ್ದರಿಂದಲೇ ಅವಗಢ ಸಂಬವಿಸಿದ್ದಾಗಿರುತ್ತದೆ.

No comments:

Post a Comment