Saturday, July 19, 2014

Daily Crime Reports 18-07-2014

ದೈನಂದಿನ ಅಪರಾದ ವರದಿ.

ದಿನಾಂಕ 18.07.201407:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

1

ರಸ್ತೆ ಅಪಘಾತ  ಪ್ರಕರಣ

:

0

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಧನಂಜಯ ರವರು ಹಲವಾರು ವರ್ಷಗಳಿಂದ ಕಟ್ಟಡ ನಿರ್ಮಾಣ ಕೆಲಸ ನಿರ್ವಹಿಸುತ್ತಿದ್ದು, ಕೆಲ ಸಮಯದ ಹಿಂದೆ ಹರೀಶ್ ತೋಳಾರ್ ಎಂಬಾತನ ಪರಿಚಯವಾಗಿ ಆತನಿಗೆ ಫಿರ್ಯಾದಿಯು ತನ್ನ ಮೊಬೈಲ್ ಗಳನ್ನು ನೀಡಿದ್ದು ನಂತರದ ಸಮಯದಲ್ಲಿ ಹರೀಶ್ ತೋಳಾರ್ ಆತನ ಮೊಬೈಲ್ ನಂಬ್ರ 9164690615ನೇ ದಿಂದ ಕರೆ ಮಾಡಿ ಹಫ್ತಾ ಹಣ ನೀಡುವಂತೆ ಬೆದರಿಕೆ ಒಡ್ಡಿದ್ದು ಪಿರ್ಯಾದಿಯು ಹಣವನ್ನು ಕೊಡಲು ಸಾಧ್ಯವಿಲ್ಲವೆಂದು ತಿಳಿಸಿರುವುದರಿಂದ ದಿನಾಂಕ 14/07/2014 ರಂದು ಫಿರ್ಯಾದಿಯು ಕೊಡಿಯಾಲುಬೈಲು ವಕೀಲ ಹರೀಶ್ ರವರ ಕಛೇರಿಗೆ ಹೋಗಿ  ಮಾತನಾಡಿ ವಾಪಾಸ್ಸು ಕೆಳಗೆ ಬಂದ ಸಮಯ ಸುಮಾರು ಬೆಳಿಗ್ಗೆ 11.00 ಗಂಟೆಗೆ  ಫೆಜಾರೋ ಕಾರ್ ನಂಬರ್ KA.19 MD 5409 ರಲ್ಲಿ ಬಂದ ಹರೀಶ್ ತೋಳಾರ್ ಮತ್ತು ನಾಗೇಶ್ ನು ಫಿರ್ಯಾದಿಯನ್ನು ಬಲಾತ್ಕಾರವಾಗಿ ಅಪಹರಿಸಿ ಸರ್ಕ್ಯೂಟ್ ಹೌಸ್ ಕಂಪೌಂಡ್ ನಲ್ಲಿರುವ ಘಜಲಿ ರೆಸ್ಟೋರೆಂಟ್ ಬಳಿಗೆ ಬೆಳಿಗ್ಗೆ 11.30 ಗಂಟೆಗೆ ಕರೆದುಕೊಂಡು ಬಂದು ಹಣಕ್ಕಾಗಿ ಒತ್ತಾಯಿಸಿ ಹಲ್ಲೆ ನಡೆಸಿರುವುದಲ್ಲದೇ ಹರೀಶ್ ತೋಳಾರ್ ನು ತಲವಾರನ್ನು ತೋರಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿ ಸಮಯ ನಾಗೇಶನು  ದೊಣ್ಣೆಯಿಂದ ಬೆನ್ನಿಗೆ ಹೊಡೆದಿರುವುದಲ್ಲದೇ ಹರೀಶ್ ತೋಳಾರ್ ನು ಕೆಲವು ಕಾಗದ ಪತ್ರಗಳಿಗೆ ಮತ್ತು 2 ಬ್ಯಾಂಕ್ ಚೆಕ್ ಸ್ಲಿಪ್ ಗಳಿಗೆ ಸಹಿ ತೆಗೆದುಕೊಂಡಿರುತ್ತಾನೆ. ಸಮಯ ಫಿರ್ಯಾದಿಯು ಭಯದಿಂದ ತನ್ನ ಸ್ನೇಹಿತ ಕಿರಣ್ ಮೊಬೈಲ್ ಗೆ ಕರೆ ಮಾಡಿ ವಿಚಾರ ತಿಳಿಸಿದ್ದು,ಸ್ನೇಹಿತ ಸದ್ರಿ ಸ್ಥಳಕ್ಕೆ ಬಂದಾಗ ಆರೋಪಿತರು ಅದೇ ಕಾರಿನಲ್ಲಿ ಪರಾರಿಯಾಗಿದ್ದು,ನಂತರದ ಸಮಯದಲ್ಲಿ ಕೂಡ ಆರೋಪಿತರು ಫೋನ್ ಮಾಡಿ ಹಣಕ್ಕಾಗಿ ಒತ್ತಾಯಿಸಿರುತ್ತಾರೆ.

 

2.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-07-2014 ರಂದು 18-30 ಗಂಟೆಯಿಂದ ದಿನಾಂಕ 07-07-2014ರಂದು 22-00 ಗಂಟೆಯ ಮಧ್ಯೆ ಮಂಗಳೂರು ನಗರದ ಡೆಕ್ಕನ್ ಕಾರ್ನರ್ ಅಪಾರ್ಟಮೆಂಟಿನ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿಟ್ಟಿದ್ದ ಚಾಸೀಸ್ ನಂಬ್ರ:MBLHA10AHAGJ4775, ಇಂಜಿನ್ ನಂಬ್ರ:HA10EDAGJ45986 KA 19 EB 8777ನೇ ನೋಂದಣಿ ಸಂಖ್ಯೆಯ ಅಂದಾಜು ಮೌಲ್ಯ ರೂ. 27,000/- ಬೆಲೆ ಬಾಳುವ ಕಪ್ಪು ಮತ್ತು ಕೆಂಪು ಬಣ್ಣದಿಂದ ಕೂಡಿದ ಹೀರೋ ಹೋಂಡಾ ಪ್ಯಾಶನ್ ಪ್ರೋ ದ್ವಿ-ಚಕ್ರ ವಾಹನವನ್ನು  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಸದ್ರಿ ದ್ವಿ-ಚಕ್ರ ವಾಹನವನ್ನು ಪಿರ್ಯಾದಿದಾರರಾದ ಶ್ರೀ ಮ್ಯಾಥ್ಯೂವ್ ಡಿಸಿಲ್ವ ರವರು ಕಳವಾದ ದಿನದಿಂದ ಇಲ್ಲಿಯವರೆಗೆ ಮಂಗಳೂರು ನಗರ ಹಾಗೂ ಸುತ್ತಮುತ್ತ ಹುಡುಕಾಡಿದಲ್ಲಿ ಇಲ್ಲಿಯವರೆಗೆ ಪತ್ತೆಯಾಗಿರುವುದಿಲ್ಲ.

 

3.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 17-07-14 ರಂದು ಬೆಳಿಗ್ಗೆ 05-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಬ್ರಿಜೇಶ್ ಕುಮಾರ್ ಸಿಂಗ್ ರವರ ಕಾರ್ಗೋಗೇಟ್ ಎದುರಿನಲ್ಲಿರುವ ಕಛೇರಿ ರೂಮಿಗೆ ಸುಮಾರು 25-30 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬ ಮುಸುಕು ಧರಿಸಿ ಬಂದು ಕಛೇರಿಯೊಳಗೆ ಅಕ್ರಮ ಪ್ರವೇಶ ಮಾಡಿ ಆತನ ಕೈಯಲ್ಲಿದ್ದ ಬಟ್ಟೆ ಸುತ್ತಿದ ಒಂದು ವಸ್ತುವನ್ನು ಪಿರ್ಯಾದಿದಾರರ ಕುತ್ತಿಗೆಗೆ ಹಿಡಿದು ಹಣ ಕೊಡುವಂತೆ ಹೇಳಿದ್ದು ಪಿರ್ಯಾದಿದಾರರು ಹೆದರಿ ಡ್ರಾವರ್ ಬೀಗ ತೆಗೆದು ಅದರಲ್ಲಿದ್ದ ರೂ. 30,000/- ನಗದಿನ ಕಟ್ಟನ್ನು ಸದ್ರಿ ವ್ಯಕ್ತಿಗೆ ನೀಡಿದ್ದು ಅಲ್ಲದೇ ಬೊಬ್ಬೆ ಹಾಕಬೇಡ, ಒಂದು ವಾರದಲ್ಲಿ ಇಲ್ಲಿಂದ ಹೋಗಬೇಕು, ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು ನಂತರ ವ್ಯಕ್ತಿಯು ಆತನ ಜೊತೆ ಬಂದಿದ್ದ ಇನ್ನೊಬ್ಬ ವ್ಯಕ್ತಿಯೊಂದಿಗೆ ಹೋಗಿರುವುದಾಗಿದೆ.

 

4.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ವಿಜಯಾ ರವರು ಹೊಂದಿರುವ ವಾಮಂಜೂರಿನಲ್ಲಿರುವ ತಮ್ಮ ಸ್ಥಿರಾಸ್ತಿಯನ್ನು ಮಾರಾಟ ಮಾಡಿ 1ನೇ ಜಗನ್ನಾಥ್ ಮತ್ತು 2ನೇ ಶ್ರೀಮತಿ ರತ್ನಾವತಿ ಎಂಬ ಆರೋಪಿಗಳು ಕೋರಿಕೊಂಡಂತೆ ರೂ. 2,10,000-00 ಹಣವನ್ನು ನೀಡಿದ್ದು, ಬಗ್ಗೆ ದಿನಾಂಕ. 22-3-2010 ಹಾಗೂ 5-8-2013 ರಲ್ಲಿ ಒಪ್ಪಂದ ಪತ್ರ ಮಾಡಿರುತ್ತಾರೆ.  1ನೇ ಆರೋಪಿಯು ಫಿರ್ಯಾದಿದಾರರಿಗೆ ಮನೆ ಕಟ್ಟಿಸಿ ಕೊಡುವವರೆಗೆ ಅವರು ವಾಸಿಸುವ ಬಾಡಿಗೆ ಮನೆಯ ಬಾಡಿಗೆ ಹಣವನ್ನು ನೀಡುವುದಾಗಿ ಭರವಸೆ ನೀಡಿದ್ದು, ಆದರೆ ಬಾಡಿಗೆ ಹಣವನ್ನು 1ನೇ ಆರೋಪಿಯು ನೀಡಿರುವುದಿಲ್ಲ. 1 ಮತ್ತು 2ನೇ ಆರೋಪಿತರು ತಮ್ಮ ಸ್ಥಿರಾಸ್ತಿಯನ್ನು ಚಂದ್ರಶೇಖರ್ ಉಚ್ಚಿಲ್ ರವರಿಗೆ ಮಾರಾಟ ಮಾಡುತ್ತಿರುವ ವಿಷಯ ತಿಳಿದು ಫಿರ್ಯಾದಿದಾರರು ತಮಗೆ ಸಲ್ಲಬೇಕಾದ ಹಣವನ್ನು ವಾಪಾಸು ಕೊಡಬೇಕೆಂದು ಕೇಳಿಕೊಂಡಾಗ 1 ರಿಂದ 5ನೇ ಆರೋಪಿಗಳಾದ ಜಗನ್ನಾಥ್, ಶ್ರೀಮತಿ ರತ್ನಾವತಿ, ಶ್ರೀಮತಿ ಗೀತಾ ಹರೀಶ್ ಸುವರ್ಣ, ಚಂದ್ರಹಾಸ, ಗಣೇಶ್ ರವರುಗಳು ಸದ್ರಿ ಹಣವನ್ನು ಚಂದ್ರಶೇಖರ್ ಉಚ್ಚಿಲ್ರವರಿಂದ ಪಡೆದುಕೊಳ್ಳುವಂತೆ ತಿಳಿಸಿರುತ್ತಾರೆ. ಆದರೆ ಚಂದ್ರಶೇಖರ್ ಉಚ್ಚಿಲ್ ರವರು 1 ಮತ್ತು 2ನೇ ಆರೋಪಿಗಳಿಗೆ ಸಂಪೂರ್ಣ ಹಣವನ್ನು ಸಂದಾಯ ಮಾಡಿರುವುದಾಗಿ ತಿಳಿಸಿರುತ್ತಾರೆ. ದಿನಾಂಕ. 6-7-2014 ರಂದು ಬೆಳಿಗ್ಗೆ 9-00 ಗಂಟೆಗೆ ಫಿರ್ಯಾದಿದಾರರು ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ಕಾಫಿಕಾಡು ಗಾಂಧಿನಗರ ಎಂಬಲ್ಲಿರುವ ಆರೋಪಿಗಳ ಮನೆಗೆ ಹೋಗಿ ನೀಡಿದ ಹಣವನ್ನು ವಾಪಾಸು ಕೇಳಿದಾಗ ಆರೋಪಿಗಳು ಫಿರ್ಯಾದಿದಾರರನ್ನು ಉದ್ದೇಶಿಸಿ "ಮನೆ ಬಾಗಿಲಿಗೆ ಬರುತ್ತೀಯ, ಇನ್ನೊಮ್ಮೆ ಮನೆ ಬಾಗಿಲಿಗೆ ಬಂದರೆ ನಿನ್ನನ್ನು ಕೊಂದು ಹಾಕುವುದಾಗಿ ಬೆದರಿಕೆ ಒಡ್ಡಿದಲ್ಲದೆ, ಅಶ್ಲೀಲವಾಗಿ ಅವಮಾನ ಮಾಡಿ, ಜಾತಿ ನಿಂದನೆ ಮಾಡಿರುತ್ತಾರೆ. ಅಲ್ಲದೆ ಇನ್ನೊಮ್ಮೆ ಮನೆ ಬಾಗಿಲಿಗೆ ಬಂದರೆ ನಿನ್ನನ್ನು ಕೊಂದು ನಾಯಿಗಳಿಗೆ ಹಾಕಿ ನಿನ್ನ ಹೆಸರಿಲ್ಲದಂತೆ ಮಾಡುತ್ತೇವೆ ಎಂದು ಕೊಲೆ ಬೆದರಿಕೆ ಹಾಕಿರುತ್ತಾರೆ.

No comments:

Post a Comment