Wednesday, July 9, 2014

Daily Crime Reports 09-07-2014

ದೈನಂದಿನ ಅಪರಾದ ವರದಿ.

ದಿನಾಂಕ 09.07.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

1

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

1

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀಮತಿ ಬಸಮ್ಮರವರ ಮಗನಾದ ಮಂಜುನಾಥನು ದಿನಾಂಕ 01-07-2014 ರಂದು ಅಮೀನಗಡದಿಂದ ಪಿರ್ಯಾದಿದಾರರು ವಾಸ್ತವ್ಯವಿರುವ ಮಂಗಳೂರಿನ  ಪ್ರಗತಿ ಸರ್ವಿಸ್ ಸ್ಟೇಶನ್  ಹತ್ತಿರವಿರುವ ಮನೆಗೆ ಬಂದಿದ್ದು ದಿನಾಂಕ 02-07-2014 ರಂದು ವಾಪಾಸು ರಾತ್ರಿ 09-00 ಗಂಟೆಗೆ ಊರಾದ ಅಮೀನಗಡಕ್ಕೆ  ಕೆ ಎಸ್ ಆರ ಟಿ ಸಿ ಬಸ್ ನಲ್ಲಿ ಹೊರಟಿದ್ದು ಆದರೆ ಮಗ ಮಂಜುನಾಥ ಊರಿಗೂ ಹೋಗದೇ ವಾಪಾಸು ಮನೆಗೂ ಬಾರದೇ ಕಾಣೆಯಾಗಿರುತ್ತಾನೆ.

 

2.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-07-2014 ರಂದು ಮಂಗಳೂರು ತಾಲೂಕು ಕಾರ್ನಾಡು ಗ್ರಾಮದ ಕಾರ್ನಾಡು ಎಂಬಲ್ಲಿ ಸಾರ್ವಜನಿಕರಿಂದ ಮಟ್ಕಾ ಆಟದ ಹಣ ಸಂಗ್ರಹಿಸುತ್ತಿದ್ದಾರೆ ಎಂಬ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಮುಲ್ಕಿ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ರಾಮಚಂದ್ರ ನಾಯಕ್ ರವರು ಸಿಬ್ಬಂದಿಗಳೊಂದಿಗೆ 18.00 ಗಂಟೆಗೆ ಕಾರ್ನಾಡು ಗ್ರಾಮದ ದುರ್ಗಾ ಇಲೆಕ್ಟ್ರಿಕಲ್ ಎಂಬ ಅಂಗಡಿ ಬಳಿ ಬರುತ್ತಿದ್ದ ಸಮಯ ಅಲ್ಲಿ ಕೆಲವು ಜನರು ಸೇರಿದ್ದು ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿದ್ದು ಜೀಪನ್ನು ಕಂಡು ಅಲ್ಲಿದ್ದ ಸಾರ್ವಜನಿಕರು ಓಡಿಹೋಗಿದ್ದು ಸಿಬ್ಬಂದಿಗಳ ಸಹಾಯದಿಂದ ಚೀಟಿ ಬರೆಯುತ್ತಿದ್ದ ಭಾಸ್ಕರ ಶೆಟ್ಟಿಗಾರ್ (45) ತಂದೆ: ಪೂವಪ್ಪ ಶೆಟ್ಟಿಗಾರ್ ಎಂಬಾತನನ್ನು ಪ್ರಶ್ನಿಸಿ ಮಟ್ಕಾ ಜೂಜಾಟಕ್ಕೆ ಹಣವನ್ನು ಸಾರ್ವಜನಿಕರಿಂದ ಸಂಗ್ರಹಿಸುತ್ತಿರುವುದಾಗಿ ತಿಳಿಸಿದ್ದು ಈತನು ಮಟ್ಕಾ ಹಣವನ್ನು ಸಂಗ್ರಹಿಸಿ ಉಡುಪಿಯ ಲಿಯೋ ಎಂಬಾತನಿಗೆ ನೀಡುತ್ತಿರುವುದಾಗಿಯೂ ತಿಳಿಸಿದ್ದು ಆತನ ವಶದಲ್ಲಿದ್ದ ಮಟ್ಕಾ ಜೂಜಾಟಕ್ಕೆ ಬಳಸಿದ ಹಣ ರೂ 820/- ಮಟ್ಕಾ ಚೀಟಿ, ಪೆನ್ನು  ಮತ್ತು ಮಟ್ಕಾ ಬರೆಯಲು ಉಪಯೋಗಿಸಿದ 2 ಮೊಬೈಲ್ ಪೊನ್ ಗಳನ್ನು ಪಂಚರ ಸಮಕ್ಷಮ ಮಹಜರು ಮೂಲಕ ಸ್ವಾದೀನಪಡಿಸಿಕೊಂಡು ಅರೊಪಿಯನ್ನು ದಸ್ತಗಿರಿ ಮಾಡಿ ಕ್ರಮ ಕೈಗೊಂಡಿರುವುದಾಗಿದೆ.

 

3.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 08.07.2014 ರಂದು ಬೆಳಿಗ್ಗೆ ಸುಮಾರು 11 ಗಂಟೆಗೆ ಮಂಗಳೂರು ನಗರ ಅಡ್ಯಾರ್‌‌ ಗ್ರಾಮದ  ಪುಂಚಮೆ ಕೆಳಗಿನ ಕೆರೆ ಎಂಬಲ್ಲಿ ಮಣ್ಣು ರಸ್ತೆಯಲ್ಲಿ ಪಿರ್ಯಾದಿದಾರಳಾದ ಪ್ರಾಯ ಸುಮಾರು 60 ವರ್ಷ ವಯಸ್ಸಿನ ಶ್ರೀಮತಿ.ಸೀತಮ್ಮ ಎಂಬವರು ತಮ್ಮ ಮನೆಯಾದ  ಅಡ್ಯಾರ್‌‌ ಹೊಳೆ ಬದಿ ಕಡೆಗೆ  ನಡೆದುಕೊಂಡು ಹೋಗುತ್ತಿದ್ದಂತೆ ಹಿಂದಿನಿಂದ ಅಪರಿಚಿತ ಯುವಕನೊಬ್ಬ ಪಿರ್ಯಾದಿದಾರಳ ಮುಂದೆ ಬಂದು ಆಕೆಯು ಕುತ್ತಿಗೆಯಲ್ಲಿ ಧರಿಸಿಕೊಂಡಿದ್ದ ಚಿನ್ನದ ಗುಂಡುಗಳಿರುವ ಸುಮಾರು 28 ಗ್ರಾಂ ತೂಕದ ಕೊತ್ತಂಬರಿ ಸರವನ್ನು ಎಳೆದುಕೊಂಡು ಹೋಗುವುದನ್ನು ಪಿರ್ಯಾದಿದಾರರು ತಿರುಗಿ ನೋಡಿದಾಗ ಸ್ವಲ್ಪ ದೂರದಲ್ಲಿ ಮೋಟಾರ್‌‌ ಬೈಕ್ಒಂದರಲ್ಲಿ ಸವಾರರೊಬ್ಬರು ಅಡ್ಡ ನಿಲ್ಲಿಸಿದ್ದ ಮೋಟಾರ್‌‌ ಬೈಕ್‌‌ನಲ್ಲಿ ಕುಳಿತುಕೊಂಡು ಪರಾರಿಯಾಗಿರುವುದಾಗಿಯೂ  ಪಿರ್ಯಾದಿದಾರರ ಕುತ್ತಿಗೆಯಿಂದ ಅಪರಿಚಿತ ಯುವಕರು ಸುಲಿಗೆ ಮಾಡಿಕೊಂಡು ಹೋಗಿದ್ದ ಬಂಗಾರದ ಕೊತ್ತಂಬರಿ ಸರದ ಅಂದಾಜು ಮೌಲ್ಯ ಸುಮಾರು 60000/- ಆಗಬಹುದು.

 

4.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 08.07.2014 ರಂದು ಜಪ್ಪಿನಮೊಗರು ಕಡೆಕಾರ್‌‌  ಕಂಬಳ ನಡೆಯುವ  ಸ್ಥಳದಲ್ಲಿ ಇದ್ದ  ಮೆಸ್ಕಾಂ ಇಲಾಖೆಗೆ ಸಂಬಂಧಪಟ್ಟ ವಿದ್ಯುತ್‌‌ ಕಂಬಕ್ಕೆ ಕೆಎ-07-3618 ನೇ  407 ಟೆಂಪೋವನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ವಿದ್ಯುತ್‌‌‌ ಕಂಬವು ತುಂಡಾಗಿ ಬೆಂಡಾಗಿರುತ್ತದೆ.

No comments:

Post a Comment