Monday, July 7, 2014

Daily Crime Reports 07-07-2014

ದೈನಂದಿನ ಅಪರಾದ ವರದಿ.

ದಿನಾಂಕ 07.07.201407:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

2

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಜೇಮ್ಸ್ ಮ್ಯಾಥ್ಯೂವ್ ರವರ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ-14-ಎಕ್ಸ್-3333 ನೇದನ್ನು ಪಿರ್ಯಾದಿದಾರರ ಸ್ನೇಹಿತರಾದ ಲಿನ್ಸ್ಮನ್ ತೋಮಸ್ ಎಂಬವರು ದಿನಾಂಕ 05-07-2014 ರಂದು ರಾತ್ರಿ 12:00 ಗಂಟೆಗೆ ಮಂಗಳೂರು ತಾಲೂಕು ಬೆಳ್ಮ ಗ್ರಾಮದ ದೇರಳಕಟ್ಟೆಯ ವೆಸ್ಟ್ ಗೇಟ್ ಅವೆನ್ಯೂ ಎದುರುಗಡೆ ಪಾರ್ಕ್ ಮಾಡಿದ್ದು, ದಿನಾಂಕ 06-07-2014 ರಂದು ಬೆಳಿಗ್ಗೆ 05:00 ಗಂಟೆಗೆ ನೋಡಿದಾಗ ಕಾಣದೇ ಇದ್ದು, ಬಳಿಕ ಪಿರ್ಯಾದಿದಾರರಿಗೆ ವಿಷಯವನ್ನು ತಿಳಿಸಿ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಸದ್ರಿ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರ್ ಸೈಕಲ್ ಅಂದಾಜು ಬೆಲೆ ರೂ 25,000/- ಆಗಬಹುದು.

 

2.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ವಿಜಯ ಕುಮಾರ್ ಅಮೀನ್ ರವರು ಬೈಕಂಪಾಡಿ ಕೈಗಾರಿಕ ಪ್ರದೇಶದಲ್ಲಿ ಗೋಪಾಲ ಎಂಬವರ ಬಾಬ್ತು ನಿರ್ಮಾಣ ಹಂತದಲ್ಲಿರುವ ಇಂಟರ್ ಲಾಕ್ ಕಂಪನಿಯ ಕಾಮಗಾರಿಗಾಗಿ ಸದ್ರಿ ಸ್ಥಳದಲ್ಲಿರುವ ಶೆಡ್ಡಿನಲ್ಲಿ ತಂದಿರಿಸಿದ್ದ  ಕಾಂಕ್ರೀಟ್ ಗಾಗಿ ಬಳಸುವ 300 ಕಬ್ಬಿಣದ ಶೀಟುಗಳ ಪೈಕಿ ಅಂದಾಜು ಮೌಲ್ಯ 54000/- ರೂಪಾಯಿ  ಬೆಲೆ ಬಾಳುವ 54 ಕಬ್ಬಿಣದ ಶೀಟುಗಳನ್ನು ದಿನಾಂಕ 03-07-2014 ರಾತ್ರಿ 8-00 ಗಂಟೆಯಿಂದ ದಿನಾಂಕ 04-07-2014 ಬೆಳಿಗ್ಗೆ 08-00 ಗಂಟೆಯ ಮಧ್ಯೆ ಯಾರೋ ಕಳ್ಳರು ಶೆಡ್ಡಿನ ಬಾಗಿಲಿನ ಬೀಗವನ್ನು ಮುರಿದು ಒಳಹೊಕ್ಕಿ ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

3.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-07-14 ರಂದು 16.00 ಗಂಟೆ ಸಮಯಕ್ಕೆ ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಅನಂತ ಪದ್ಮನಾಭರವರು ಗಸ್ತಿನಲ್ಲಿದ್ದಾಗ ಮೂಡಬಿದ್ರೆ ಠಾಣಾ ಸರಹದ್ದಿನ ಮಾರ್ಪಾಡಿ  ಗ್ರಾಮದ ಕಡದಬೆಟ್ಟು ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನ ಸೇರಿ ಹಣವನ್ನು ಪಣವಾಗಿಟ್ಟು ಉಲಾಯಿ-ಪಿದಾಯಿ ಎಂಬ ಜೂಜಾಟ ಆಡುತ್ತಿದ್ದಾರೆಂದು ಮಾಹಿತಿ ಸಿಕ್ಕಿದ ಮೇರೆಗೆ 16.30 ಗಂಟೆ ಸಮಯಕ್ಕೆ ಸದ್ರಿ ಜೂಜಾಟದ ಸ್ಥಳಕ್ಕೆ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಇಸ್ಪೀಟ್ ಆಟವನ್ನು ಆಡಿದ ವಿಠಲ, ನಾಗೇಶ್, ಸುರೇಂದ್ರ, ಹಮದ್, ಆಸೀಫ್, ಅಣ್ಣು ಎಂಬ 6 ಜನರನ್ನು ದಸ್ತಗಿರಿ ಮಾಡಿ ಅವರು ಜುಗಾರಿ ಆಟಕ್ಕೆ ಉಪಯೋಗಿಸಿದ ರೂ. 2390/- ಹಾಗೂ ಇಸ್ಪೀಟ್ ಎಲೆ ಮತ್ತು ಟಾರ್ಪಾಲನ್ನು ಸ್ವಾಧೀನಪಡಿಸಿದ್ದಾಗಿದೆ.   

 

4.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಸಚ್ಚಿದಾನಂದ ಆಳ್ವ ರವರ ತಮ್ಮ ಭಾಸ್ಕರ ಆಳ್ವ, ಪ್ರಾಯ: 38 ವರ್ಷ ಇವರು ಬಜಪೆ ವಿಮಾನ ನಿಲ್ದಾಣದಲ್ಲಿ ಕೆಲಸ ಮುಗಿಸಿ, ದಿನಾಂಕ: 06-07-2014 ರಂದು ಬೆಳಿಗ್ಗೆ ಸುಮಾರು 6-00 ಗಂಟೆಗೆ  ಗಂಜಿಮಠ-ಮಾರ್ಗದಂಗಡಿ ಡಾಮಾರು ರಸ್ತೆಯಲ್ಲಿ ತನ್ನ ಮನೆಯ ಕಡೆಗೆ ಮೋಟಾರು ಸೈಕಲ್ ನಂ: ಕೆಎ 19 ಆರ್ 1677 ನೇದ್ದನ್ನು  ಮಂಗಳೂರು ತಾಲೂಕಿನ, ಮೊಗರು ಗ್ರಾಮದ, ನಾರ್ಲಪದವು, ಆಳ್ವಾಸ್ ಮೈದಾನದ ಬಳಿ ವಿಪರೀತ ಮಳೆ ಬರುತ್ತಿದ್ದ ಸಮಯ ದುಡುಕುತನದಿಂದ  ಚಲಾಯಿಸಿಕೊಂಡು ಹೋದ ಪರಿಣಾಮ, ರಸ್ತೆಯಲ್ಲಿದ್ದ ದನಕ್ಕೆ ಮೋಟಾರು ಸೈಕಲ್ ಡಿಕ್ಕಿ ಹೊಡೆದು, ಅಥವಾ ಮೋಟಾರು ಸೈಕಲ್ ಸ್ಕಿಡ್ ಆಗಿ ರಸ್ತೆಗೆ ಬಿದ್ದು, ಭಾಸ್ಕರ ಆಳ್ವರ ರವರ ತಲೆಯ ಎಡಭಾಗಕ್ಕೆ, ಎಡದವಡೆಗೆ, ಎಡಭುಜಕ್ಕೆ  ಬಲಕೈಯ ಅಂಗೈಯ ಹಿಂಭಾಗಕ್ಕೆ ಜಖಂ ಆಗಿ ಸ್ಥಳದಲ್ಲಿ ಮೃತಪಟ್ಟಿರುವುದಾಗಿದೆ.

 

5.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು ಸುರತ್ಕಲ್  ಗ್ರಾಮದ ತಡಂಬೈಲ್ ಗರುಡ ಬಾರ್ ಬಳಿ ಪಿರ್ಯಾದಿದಾರರಾದ ಶ್ರೀಮತಿ ನಳಿನಿ ಪ್ರಾಯ 60 ವರ್ಷ ರವರ ಬಾಬ್ತು ಇರುವ ಗೂಡಂಗಡಿಗೆ ದಿನಾಂಕ 05/06-07-2014 ರಾತ್ರಿ 2-00 ಗಂಟೆ ಸಮಯಕ್ಕೆ 3 ಜನ ಆರೋಪಿಗಳು ಗೂಡಂಗಡಿಯ ಬೀಗ ಮುರಿದು ಒಳಗೆ ಪ್ರವೇಶಿಸಿ ಕಳ್ಳತನಕ್ಕೆ ಪ್ರಯತ್ನ ಮಾಡಿರುವವರನ್ನು ಸಾರ್ವುಜನಿಕರು ಹಿಡಿದು ಠಾಣೆಗೆ ಒಪ್ಪಿಸಿದ್ದು ನಂತರ ಬೆಳಿಗ್ಗಿನ ಜಾವ ಬಗ್ಗೆ ವಿಷಯ ತಿಳಿದ ಗೂಡಂಗಡಿ ಮಾಲಿಕಳಾದ ಪಿರ್ಯಾದಿದಾರರು ಪಿರ್ಯಾದು ನೀಡಿರುವುದಾಗಿದೆ.

 

6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಶಶಿದೀಪ್ ರವರು ಮತ್ತು ಅವರ ಅಕ್ಕ ಶ್ರೀಮತಿ ಅಮಿತಾ ಮತ್ತು ಅವಳ ಗಂಡ ಹನುಮಾನ್ಎಂಬವರೊಂದಿಗೆ ದಿನಾಂಕ 05-07-2014 ರಂದು ಕುಲಶೇಖರ ಕೈಕಂಬದಲ್ಲಿರುವ ಸಂತೆ ಮಾರ್ಕೆಟಿಗೆ ತರಕಾರಿ ಮತ್ತು ಇತರ ಸಾಮಾಗ್ರಿಗಳನ್ನು ಖರೀದಿಸಲು ಬಂದವರು, ಸಮಾಗ್ರಿಗಳನ್ನು ಖರೀದಿಸಿಕೊಂಡು ಮನೆಗೆ ಹೋಗುವರೇ ಕೈಕಂಬದಿಂದ ರೂಟ್ನಂಬ್ರ 4ಸಿ ನಂಬ್ರದ ಕೆಎ 19 ಎಬಿ 3335 ಬಸ್ಸಿನಲ್ಲಿ ಕುಳಿತುಕೊಂಡು ತಮ್ಮ ಮನೆಯಾದ ಕುಲಶೇಖರ ಡೈರಿ ಕಡೆಗೆ ಹೊರಟಿದ್ದು, ರಾತ್ರಿ ಸುಮಾರು 8-15 ಗಂಟೆಯ ವೇಳೆಗೆ ಕುಲಶೇಖರ ಡೈರಿ ಬಸ್ಸ್ಟಾಪ್ಹತ್ತಿರ ತಲುಪುತ್ತಿದ್ದಂತೆ, ಪಿರ್ಯಾದಿದಾರರ ಭಾವನಾದ ಹನುಮಾನ್ರವರು ಬಸ್ಸ್ನಿಂದ ಇಳಿಯುವರೇ ಬಸ್ಸಿನೊಳಗಡೆ ಎದ್ದು ನಿಂತುಕೊಂಡಾಗ ಅತೀವೇಗವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ ಬಸ್ಸನ್ನು ಅದರ ಚಾಲಕನು ರಸ್ತೆ ಬದಿಯಲ್ಲಿ ಒಬ್ಬಾತನು ಬಸ್ಸು ನಿಲ್ಲಿಸುವಂತೆ ಕೈತೋರಿಸಿದ್ದರಿಂದ  ಒಮ್ಮೆಲೇ ನಿರ್ಲಕ್ಷತನದಿಂದ ಬಸ್ಸಿಗೆ ಬ್ರೇಕ್ಹಾಕಿದ್ದರಿಂದ ಹನುಮಾನ್ರವರು ಆಯ ತಪ್ಪಿ ರಸ್ತೆಗೆ ಎಸೆಯಲ್ಪಟ್ಟಿದ್ದರಿಂದ ಅವರ ತಲೆಗೆ ಮತ್ತು ಮುಖಕ್ಕೆ ಗಂಭೀರ ಗಾಯವಾಗಿ ಮಾತನಾಡುತ್ತಿರಲಿಲ್ಲ. ಅವರನ್ನು ಪಿರ್ಯಾದಿದಾರರು ಮತ್ತು ಇತರರು ಮಂಗಳೂರಿನ ಪಾದರ್ಮುಲ್ಲರ್ಸ್ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿದ್ದು , ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 06-07-2014 ರಂದು ಬೆಳಿಗ್ಗೆ  7-10 ಗಂಟೆಗೆ ಮೃತಪಟ್ಟಿರುತ್ತಾರೆ. ಅಪಘಾತಕ್ಕೆ  ಕೆಎ 19 ಎಬಿ 3335 ನೇ ಬಸ್ಸಿನ ಚಾಲಕನಾದ ಶಾಫಿ ಎಂಬಾತನು ಬಸ್ಸನ್ನು ಅತೀ ವೇಗವಾಗಿ ಚಲಾಯಿಸಿ ನಿರ್ಲಕ್ಷ್ಯತನದಿಂದ ಒಮ್ಮೆಲೇ ಬ್ರೇಕ್ಹಾಕಿದ್ದೇ ಕಾರಣವಾಗಿರುತ್ತದೆ.

No comments:

Post a Comment