Wednesday, July 16, 2014

Daily Crime Reports 16-07-2014

ದೈನಂದಿನ ಅಪರಾದ ವರದಿ.

ದಿನಾಂಕ 16.07.201410:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

1

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಹೆಚ್. ಸದಾನಂದ ಶೆಟ್ಟಿ ರವರ ಮಗ ಪ್ರಧಾನ್ ಶೆಟ್ಟಿ ಪ್ರಾಯ 29 ವರ್ಷ ಎಂಬವರು ದಿನಾಂಕ 10-07-2014 ರಂದು ಬೆಳಿಗ್ಗೆ 07-00 ಗಂಟೆಗೆ ಪಿರ್ಯಾದುದಾರರ -10 ಮೆಟಾಲಿಕ್ ಗ್ರೇ ಬಣ್ಣದ ಕೆಎ-09-ಎಮ್ -1528 ಕಾರನ್ನು ತೆಗೆದುಕೊಂಡು ಹೋದವರು ವರೆಗೂ ಮನೆಗೆ ಬಾರದೇ, ಹಾಗೂ ಅವರ ಎರಡೂ ಫೋನ್ ಗಳು ಬಂದಾಗಿದ್ದು ಕಾಣೆಯಾಗಿರುತ್ತಾರೆ.

 

2.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15.07.2014 ರಂದು ಫಿರ್ಯಾದಿದಾರರಾದ ಶ್ರೀ ಸತೀಶ್ ಆಚಾರ್ಯ ರವರು ತನ್ನ ಬಾಬ್ತು ಮೋಟಾರ್ಸೈಕಲ್ಕೆಎ-18ಹೆಚ್‌-7384 ನೇಯದರಲ್ಲಿ ತನ್ನ ಮನೆಯಿಂದ ಅಸೈಗೊಳಿಗೆ ಹೋಗುವರೇ ನ್ಯೂಪಡಪು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಬೆಳಿಗ್ಗೆ ಸುಮಾರು 08:00 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಕೊಣಾಜೆ ಗ್ರಾಮದ ರೋಚರ್ಗೇಟ್ಎಂಬಲ್ಲಿ ತಲುಪುತ್ತಿದ್ದಂತೆಯೇ ಎದುರಿನಿಂದ ಮಾರುತಿ ಓಮ್ನಿ ಕಾರ್ನಂಬ್ರ ಕೆಎ-19ಎಮಸಿ-2387 ನೇಯದನ್ನು ಅದರ ಚಾಲಕ ಶ್ರೀಕಾಂತ್ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಾಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರ್ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಕೆಳಗೆ ಎಸೆಯಲ್ಪಟ್ಟು ಫಿರ್ಯಾದಿದಾರರ ಬಲಕೈಗೆ ಮೂಳೆ ಮುರಿತದ ಗಾಯ ಹಾಗೂ ಎಡಕಾಲಿನ ಪಾದಕ್ಕೆ, ಮುಖಕ್ಕೆ ರಕ್ತಗಾಯವಾಗಿದ್ದು, ಗಾಯಾಳು ಫಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

3.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಮಧು ಆಚಾರ್ಯ ರವರು ಕಳೆದ ಡಿಸೆಂಬರ್ ತಿಂಗಳ 1 ನೇ ವಾರದಲ್ಲಿ ಸಂಬಂಧಿಕರ ಮನೆಗೆ ಹೋಗುವಾಗ ತನ್ನ ಮಗಳಿಗೆ ಹಾಕಿದ ಬಂಗಾರವನ್ನು ಪೆಟ್ಟಿಗೆಯಲ್ಲಿಟ್ಟು ಮನೆಯ ಕಾರಿನ ಕೀ ಇಡುವ ಬಳಿಯ  ಶೋಕೇಶ್ ನಲ್ಲಿಟ್ಟಿದ್ದು, ನಂತರ ಪೆಟ್ಟಿಗೆಯಿಂದ ಬಂಗಾರವನ್ನು ತೆಗೆಯದೆ. ದಿನಾಂಕ 15-07-2014 ರಂದು ಬೆಳಿಗ್ಗೆ 07:30 ವೇಳೆ ಪಿರ್ಯಾದಿದಾರರು ತನ್ನ ಹೆಂಡತಿ ಸ್ಮಿತಾ ಎಂ ಆಚಾರ್ಯ ಹಾಗೂ ಮಗಳು ಅಂಬಿಕಾ ಎಂ ಆಚಾರ್ಯ ಎಂಬವರೊಂದಿಗೆ ಪಡಬಿದ್ರೆ ಗಣಪತಿ ದೇವಸ್ಥಾನಕ್ಕೆಂದು ಹೊರಟಿದ್ದ ಸಮಯ ಮಗಳಿಗೆ ಬಂಗಾರ ಹಾಕುವರೇ ಬಂಗಾರ ಹಾಕುವ ಪೆಟ್ಟಿಗೆಯನ್ನು ತೆರದು ನೋಡಿದಾಗ ಪೆಟ್ಟಿಗೆಯಲ್ಲಿ ಇಟ್ಟಿದ್ದ 1) ಸುಮಾರು 12 ಗ್ರಾಂ ತೂಕದ ಬಂಗಾರದ ನೆಕ್ಲೇಸ್ -1 , ಇದರ ಅಂದಾಜು ಮೌಲ್ಯ ರೂ 36,000.00/- 2) ಸುಮಾರು 24 ಗ್ರಾಂ ತೂಕದ ಬಂಗಾರದ ಮುಷ್ಠಿ ಹವಳದ ಚೈನ್ -1, ಇದರ ಅಂದಾಜು ಮೌಲ್ಯ ರೂ 72.000.00/- 3) ಸುಮಾರು 14 ಗ್ರಾಂ ತೂಕದ ಅಗಲದ ಡಿಸೈನ್ ಬಂಗಾರದ ಬಳೆ -2 , ಇದರ ಅಂದಾಜು ಮೌಲ್ಯ ರೂ 42.000.00/-  4) ಸುಮಾರು 8 ಗ್ರಾಂ ತೂಕದ ಲಕ್ಷ್ಮೀ ಡಿಸೈನ್ ಬಂಗಾರದ ಕಿವಿಯೊಲೆ -1 ಜೊತೆ, ಇದರ ಅಂದಾಜು ಮೌಲ್ಯ ರೂ  24.000.00/- 5) ಸುಮಾರು 4 ಗ್ರಾಂ ತೂಕದ ಬಂಗಾರದ ಹರಳಿನ ಕೈ ಉಂಗುರ -1, ಇದರ ಅಂದಾಜು ಮೌಲ್ಯ ರೂ 12.000.00/- 6) ಸುಮಾರು 12 ಗ್ರಾಂ ತೂಕದ ಹರಳಿನ ನೆಕ್ಲೇಸ್-1 ಇದರ ಅಂದಾಜು ಮೌಲ್ಯ ರೂ 36,0000/- ಬಂಗಾರದ ಆಭರಣಗಳು ಕಳವಾಗಿದ್ದು , ಕಳವಾದ ಬಂಗಾರದ ಆಭರಣಗಳ ಒಟ್ಟು ತೂಕ – 74 ಗ್ರಾಂ ಆಗಿದ್ದು, ಇದರ ಅಂದಾಜು ಮೌಲ್ಯ ರೂ 2,22000/-  ಆಗಿರುತ್ತದೆ.  ಬಗ್ಗೆ ಪಿರ್ಯಾದಿದಾರರ ಕಾರು ಚಾಲಕ ಕೆಲಸದ ವಿಶ್ವಾಸ್ ಮೇಲೆ ಸಂಶಯವಿರುವುದಾಗಿದೆ.

 

4.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮೂಡಬಿದ್ರೆ ತಾಲೂಕು ಕಲ್ಲಮುಡ್ಕೂರು ಗ್ರಾಮದ ಕಲ್ಲಮುಂಡ್ಕೂರು ಪೇಟೆಯಲ್ಲಿ ಪಿರ್ಯಾದಿದಾರರಾದ ಶ್ರೀ ಯೋಗೀಶ್ ಆಚಾರ್ಯ ರವರು "ನ್ಯೂ ಸೌರಭ"  ಎಂಬ ಜ್ಯುವೆಲರಿ ಅಂಗಡಿ  ಹೊಂದಿದ್ದು, ದಿನಾಂಕ: 15.07.2014 ರಂದು 06.00 ಗಂಟೆಗೆ ಪಿರ್ಯಾದಿದಾರರ ಅಂಗಡಿಯ ಮೇಲೆ ಇರುವ ಜಿಮ್ ಗೆ ಬಂದಂತಹ ಹುಡುಗರು ಪಿರ್ಯಾದಿದಾರರಿಗೆ  ದೂರವಾಣಿ ಕರೆ ಮಾಡಿ ಅಂಗಡಿಯ ಶೆಟರ್ ಬಾಗಿಲು ತೆರೆದಿರುವುದಾಗಿ ತಿಳಿಸಿದಂತೆ ಕೂಡಲೇ ಬಂದು ನೋಡಲಾಗಿ ಅಂಗಡಿಯ ಶೆಟರ್  ಬಾಗಿಲಿನ ಸೆಂಟರ್ ಲಾಕ್ ನ್ನು ಯಾವುದೋ ಸಾಧನದಿಂದ ಮುರಿದು, ಅರ್ಧ ತೆರೆದಿದ್ದು, ಒಳಗೆ ಹೋಗಿ ನೋಡಲಾಗಿ ಅಂಗಡಿ ಶೋಕೇಸ್ ನಲ್ಲಿದ್ದ  ಬೆಳ್ಳಿಯ ಚೆಂಬು, ಕೈಬಳೆ, ಕಾಲುಚೈನ್ , ಕಾಲುಂಗುರ , ಬೆಳ್ಳಿಯ ಮೂರ್ತಿ ಇತ್ಯಾದಿ ಬೆಳ್ಳಿ ಆಭರಣಗಳು  ಕಳವಾಗಿರುವುದು ಕಂಡುಬಂದಿದ್ದು,  ದಿನಾಂಕ: 14.07.2014 ರಂದು 20.00 ಗಂಟೆಯಿಂದ 15.07.2014 ರಂದು 09.00 ಗಂಟೆಯ ಮಧ್ಯಾವಧಿಯಲ್ಲಿ  ಯಾರೋ ಕಳ್ಳರು ಕಳವು ಮಾಡಿದ್ದಾಗಿದ್ದು,  ಕಳವಾದ ಬೆಳ್ಳಿಯ ಆಭರಣಗಳ ಮೌಲ್ಯ ಅಂದಾಜು ರೂ. 24.000/- ಆಗಬಹುದು.

 

5.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-07-2014 ರಂದು 11-30 ಗಂಟೆಯಿಂದ 12-15 ಗಂಟೆಯ ಮದ್ಯೆ  ಅವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಅತ್ತಾವರದಲ್ಲಿರುವ ಪ್ರಶಾಂತ್ ವೈನ್ ಶಾಫ್ ಎದುರುಗಡೆ ಕೀ ಸಹಿತ ಪಾರ್ಕ್ ಮಾಡಿದ್ದ, ಪಿರ್ಯಾದಿದಾರರಾದ ಶ್ರೀ ಸಮೀತ್ ಪ್ರಸಾದ್ ರವರ ಆರ್. ಸಿ. ಮಾಲಕತ್ವದ 2009ನೇ ಮೊಡಲ್ ನೀಲಿ ಬಣ್ಣದ ಅಂದಾಜು ರೂಪಾಯಿ 20000/- ಬೆಲೆ ಬಾಳುವ KA 19 Y 5688ನೇ ನೊಂದಣಿ ಸಂಖ್ಯೆಯ ಹೀರೊ ಹೊಂಡಾ  ಕಂಪನಿಯ ಪ್ಯಾಶನ್ ಪ್ಲಸ್ ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ದ್ಚಿಚಕ್ರ ವಾಹನವನ್ನು ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಅಲ್ಲದೇ ಪಿರ್ಯಾದಿದಾರರು ಘಟನೆ ನಡೆದ ನಂತರ ಅಗತ್ಯ ಕೆಲಸ ಕಾರ್ಯದ ನಿಮಿತ್ತ ಬೆಂಗಳೂರಿಗೆ ಹೋಗಿದ್ದು ವಾಪಾಸು ಮಂಗಳೂರಿಗೆ ಬಂದು ಪಿರ್ಯಾದಿ ನೀಡಿರುವುದಾಗಿದೆ.

 

6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-07-2014 ರಂದು ರಾತ್ರಿ ಸುಮಾರು 8-20 ಗಂಟೆ ಸಮಯಕ್ಕೆ ಪಿರ್ಯಾದುದಾರರಾದ ಶ್ರೀ ದೇವದಾಸ್ ಕೊಲ್ಯ ರವರು ಮಂಗಳೂರು ತಾಲೂಕು, ಕೋಟೆಕಾರು ಗ್ರಾಮದ ಅಡ್ಕ  ಬಸ್ಸು ನಿಲ್ದಾಣ ಬಳಿ ರಾ.ಹೆ. ಹೆದ್ದಾರಿ 66 ರಲ್ಲಿ ತನ್ನ ಬಾಬ್ತು ಮೋಟಾರು ಸೈಕಲ್ನಲ್ಲಿ ಬರುತ್ತಿದ್ದಂತೆ, ಕಾಸರಗೋಡು ಕಡೆಯಿಂದ ಮಂಗಳೂರು ಕಡೆಗೆ ಕೇರಳ ರಾಜ್ಯದ ಕೆಎಸ್ಆರ್ಟಿಸಿ ಬಸ್ಸು ನಂಬ್ರ ಕೆಎಲ್‌ 15 A 16 ನೇದ್ದನ್ನು ಅದರ ಚಾಲಕ ಅತೀವೇಗ ಹಾಗು ತೀರಾ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗೋಪಾಲ ಎಂಬವರಿಗೆ ಡಿಕ್ಕಿ ಹೊಡೆದಿರುತ್ತಾನೆ. ಅಪಘಾತದಿಂದ ತೀವ್ರ ಗಾಯಗೊಂಡು ಗೋಪಾಲರವರನ್ನು ಚಿಕಿತ್ಸೆಯ ಬಗ್ಗೆ ಅದೇ ಬಸ್ಸಿನಲ್ಲಿ ಕರೆದುಕೊಂಡು ಹೋಗಿರುತ್ತಾರೆ. ಮಂಗಳೂರು ವೆನ್ಲಾಕ್ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಗೋಪಾಲರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ.

 

7.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-07-2014 ರಂದು ಪಿರ್ಯಾದುದಾರರಾದ ಶ್ರೀ ಸೀತಾರಾಮ ರವರು ಸೋಮೇಶ್ವರ ದೇವಸ್ಥಾನಕ್ಕೆ ಬಂದವರು ವಾಪಾಸು ಮನೆಗೆ ಹೋಗುವರೇ ತನ್ನ ಬಾಬ್ತು KA 19 EJ 0061 ನೇ ಮೋಟಾರು ಸೈಕಲ್ನಲ್ಲಿ ಸವಾರಿ ಮಾಡಿಕೊಂಡು ರಾ.ಹೆ. 66 ಕೊಲ್ಯ ಮುಕಾಂಬಿಕಾ ಇಂಜಿನಿಯರಿಂಗ್ವರ್ಕ್ಸ್ ಬಳಿ ಬೆಳಿಗ್ಗೆ 07-00 ಗಂಟೆಗೆ ತಲುಪಿ, ತನ್ನ ಬೈಕಿನ ಇಂಡಿಕೇಟರ್‌‌ ಹಾಕಿ ಮಲಯಾಳಿ ಚಾಮುಂಡೇಶ್ವರ ದೇಸ್ಥಾನ ರಸ್ತೆ ಕಡೆಗೆ ಹೋಗುವರೇ ಬೈಕ್ನ್ನು ನಿಲ್ಲಿಸಿದ್ದ ಸಮಯ ಹಿಂದಿನಿಂದ KA 19 Y 3044 ನೇ ಮೋಟಾರು ಸೈಕಲ್‌‌ನ್ನು ಅದರ ಸವಾರ ಅತೀವೇಗ ಹಾಗು ತೀರಾ ನಿರ್ಲಕ್ಷ್ಯತನದಿಂದ ಸವಾರಿಮಾಡಿಕೊಂಡು ಬಂದು ಪಿರ್ಯಾದುದಾರರ ಬೈಕಿಗೆ ಡಿಕ್ಕಿ ಹೊಡೆದಿರುತ್ತಾನೆ. ಅಪಘಾತದಿಂದ ಪಿರ್ಯಾದುದಾರರು ಬೈಕ್ಸಮೇತ ರಸ್ತೆಗೆ ಬಿದ್ದು ಅವರ ತಲೆಯ ಎಡಬದಿಗೆ ರಕ್ತ ಗಾಯ, ಬಲ ಭುಜಕ್ಕೆ ಮೂಳೆ ಮುರಿತದ ಗಾಯವಾಗಿರುತ್ತದೆ. ಗಾಯಾಗೊಂಡ ಪಿರ್ಯಾದುದಾರರು ತೊಕ್ಕೊಟ್ಟು ನೇತಾಜಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಯುನಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡಿರುವುದಾಗಿದೆ.

No comments:

Post a Comment