Wednesday, July 23, 2014

Daily Crime Reports 23-07-2014

ದೈನಂದಿನ ಅಪರಾದ ವರದಿ.

ದಿನಾಂಕ 23.07.201408:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

3

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

1

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

4

ಮನುಷ್ಯ ಕಾಣೆ ಪ್ರಕರಣ

:

2

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-07-14 ರಂದು ಶಾಪ್.ಟಿ ಡೀಲ್ಸ್ ಎಂಬ ಸಂಸ್ಥೆಯಿಂದ ದಿವ್ಯಾಂಜಲಿ ಗುಪ್ತಾ ಎಂಬವರು ಪಿರ್ಯಾದುದಾರರಾದ ಶ್ರೀ ಸಂಗಮೇಶ್ವರ ಪೂಜಾರಿ ರವರಿಗೆ ಫೋನ್ ಮಾಡಿ 1,90,000/- ಬಹುಮಾನ ಗೆದ್ದಿದೆ, ಅದಕ್ಕೆ 50,000/- ತೆರಿಗೆ ಕಟ್ಟಬೇಕಾಗಿದೆ ಎಂದು ಹೇಳಿದ್ದು ಪಿರ್ಯಾದಿಯು ICICI Bank ಅವರ ಅಕೌಂಟ್ ನಂಬ್ರನಿಂದ HDFC Bank ಅಕೌಂಟ್ ನಂ. # 05572000004939 ಕ್ಕೆ ರೂ. 50,000/- ಅನ್ಲೈನ್ ಮೂಲಕ ಹಣ ವರ್ಗಾಯಿಸಿದ್ದು, ದಿನಾಂಕ 18-07-14 ರಂದು ಪುನಃ ಫೋನ್ ಮಾಡಿ ಬಹುಮಾನ ಪಡೆಯಬೇಕಾದರೆ ಮತ್ತೆ 1,90,000/- ಪಾವತಿಸಬೇಕೆಂದು ಹೇಳಿದ್ದಕ್ಕೆ online transaction ಮೂಲಕ ಹಣ ಪಾವತಿಸಿದ್ದು ಅನಂತರ ದಿನಾಂಕ 21-07-14 ರಂದು ಇನ್ನೋರ್ವ ಯುವರಾಜ ಎಂಬವರು ಕರೆಮಾಡಿ ಬಹುಮಾನ ಮೊತ್ತ ಜಾಸ್ತಿಯಾಗಿದೆ, 15 ಲಕ್ಷ ಗೆದ್ದಿದ್ದೀರಿ , ಪುನಃ 3 ಲಕ್ಷ ತೆರಿಗೆ ಹಣ ಪಾವತಿಸಬೇಕಾಗಿದೆ ಎಂದು ಹೇಳಿ ಒಟ್ಟು ರೂ. 2,40,000/- ರೂವನ್ನು ಆರೋಪಿಗಳು ಉದ್ದೇಶಪೂರ್ವಕವಾಗಿ ನಂಬಿಕೆಯನ್ನು ಹುಟ್ಟಿಸಿ ವಂಚಿಸಿ ಕಂಪ್ಯೂಟರ್ ತಂತ್ರಜ್ಞಾನದ ಮೂಲಕ ಮೋಸ ಮಾಡಿರುವುದಾಗಿದೆ.

 

2.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರು ಸುಮಾರು 2 ವರ್ಷದಿಂದ ಕಂಕನಾಡಿಯಲ್ಲಿರುವ ಶಾಲಿಮಾರ್  ಕಾಂಪ್ಲೆಕ್ಸ್ 3 ನೇ ಮಹಡಿಯಲ್ಲಿರುವ ಮೈಕ್ರೋಬೈಟ್ಸ್ ನ್ಲಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿರುವುದಾಗಿದೆ. ದಿನಾಂಕ 16-07-2014 ರಂದು ಪಿರ್ಯಾದಿಯವರು ಮದ್ಯಾಹ್ನ ಸಮಯ ಸುಮಾರು 1-00 ಗಂಟೆಗೆ ಅಂಗಡಿಯಲ್ಲಿರುವಾಗ್ಗೆ ಪಿರ್ಯಾದಿಯವರ ಮೊಬೈಲ್ ನಂಬ್ರಗೆ ಮೊಬೈಲ್ ನಂ 7204274287 ರಿಂದ ಒಂದು  ಫೋನ್ ಕರೆ ಬಂದಿದ್ದು, ಪಿರ್ಯಾದಿಯವರು ಕರೆಯನ್ನು ಸ್ವೀಕರಿಸಿ ಹಲೋ ಎಂದು ಹೇಳಿದಾಗ ಕರೆ ಮಾಡಿದ ವ್ಯಕ್ತಿಯು ಮಾತನಾಡದೇ ಇದ್ದಾಗ ಪಿರ್ಯಾದಿಯವರು ಕರೆಯನ್ನು ಕಟ್ ಮಾಡಿದ್ದು, ನಂತರ ಅದೆ ದಿನ ಸಂಜೆ 6-00 ಗಂಟೆಗೆ ಅದೇ ನಂಬರಿನಿಂದ ಕರೆ ಬಂದಿದ್ದು, ಸದ್ರಿ ವ್ಯಕ್ತಿಯು ಮಾತನಾಡದೇ ಇದ್ದು, ಅದೇ ದಿನ ಮೆಸೇಜ್ ಮತ್ತು ಕರೆ ಮಾಡಿದ್ದು, ನಂತರ ದಿನಾಂಕ 17-07-2014 ರಿಂದ ದಿನದವರೆಗೂ ಅಸಹ್ಯವಾದ ಪೀಡಿಸುವ ಸ್ವರೂಪದ ಕಿರುಕುಳ ಉಂಟು ಮಾಡುವ ಉದ್ದೇಶಕ್ಕಾಗಿ ತಪ್ಪು ದಾರಿಗೆ ಎಳೆದು ಮೋಸ ಮಾಡುವ ಉದ್ದೇಶದಿಂದ ಕರೆ ಮಾಡಿ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದುದ್ದಲ್ಲದೆ ಮೊಬೈಲ್ ಕರೆ ಮತ್ತು ಮೆಸೇಜ್ ಮಾಡದಿದ್ದರೆ ಜೀವ ಸಹಿತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುವುದಾಗಿದೆ.

 

3.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಅಕ್ರಮ್ ಹುಸೈನ್ ರವರು ಕಂಕನಾಡಿಯಲ್ಲಿರುವ ಶಾಲಿಮಾರ್ ಕಾಂಪ್ಲೆಕ್ಸ್ ನೆಲ ಮಹಡಿಯಲ್ಲಿರುವ ಜಿ-17 ಎವೆನ್ ರೋಸ್ ಎಂಬ ಸೆಲೂನ್ ಅಂಗಡಿಯಲ್ಲಿ ಸುಮಾರು 4 ವರ್ಷಗಳಿಂದ ಕ್ಷೌರ ವೃತ್ತಿಯನ್ನು ಮಾಡಿಕೊಂಡಿರುವುದಾಗಿದೆ. ದಿನಾಂಕ 22-07-2014 ರಂದು ಪಿರ್ಯಾದಿಯವರು ಕರೆ ಮಾಡುತ್ತಿದ್ದ ಮೊಬೈಲ್ ನಂಬರ್ 8904495250 ದಿಂದ ಪಿರ್ಯಾದಿಯವರ ಮೊಬೈಲ್ ನಂಬರ್ ಗೆ ಕರೆ ಮಾಡಿ ಕಂಕನಾಡಿ ಜಂಕ್ಷನ್ ಬಳಿ ಬರುವಂತೆ ತಿಳಿಸಿದ್ದು ಪಿರ್ಯಾದಿಯವರು ಸಮಯ ಸುಮಾರು ಬೆಳಿಗ್ಗೆ 10-00 ಗಂಟೆಗೆ ಸೆಲೂನ್ ಅಂಗಡಿಯಲ್ಲಿರುವಾಗ್ಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಅಂಗಡಿಯೊಳಗೆ ಬಂದು ನೀನು ಬಾರಿ ಮೆಸೇಜ್ ಮತ್ತು ಫೋನ್ ಕರೆ ಮಾಡುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿಯವರಿಗೆ ಕೈಯಿಂದ ತುಟಿ, ಕಣ್ಣು, ಕೈಗೆ ಹೊಡೆದು ಗಾಯಗೊಳಿಸಿರುವುದ್ದಲ್ಲದೆ, ಇನ್ನು ಮುಂದೆ ನಂಬರಿಗೆ ಮಸೇಜ್, ಕರೆ ಮಾಡಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲವೆಂದು ಬೆದರಿಕೆಯನ್ನು ಹಾಕಿರುವುದಾಗಿದೆ.

 

4.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ಕಿನ್ನಿಗೊಳಿ ಸಿಂಡಿಕೇಟ್ ಬ್ಯಾಂಕ್, ಕಿನ್ನಿಗೊಳಿ ಬ್ರ್ಯಾಂಚ್ ನ ಸೀನಿಯರ್ ಮ್ಯಾನೇಜರ್ ಆದ ಪಿರ್ಯಾದಿದಾರರಾದ ಶ್ರೀ ಟಿ.ಎಂ. ಜಯಕೃಷ್ಣನ್ ರವರ ಬ್ಯಾಂಕ್ ನಿಂದ ಆರೋಪಿ ಸುರೇಂದ್ರ ಆಚಾರ್ ಎಂಬಾತನು 26 ಬಳೆ , 4 ಚೈನ್ ಮತ್ತು 1 ರಿಂಗನ್ನು ಚಿನ್ನದ ಆಭರಣವೆಂದು ನಂಬಿಸಿ, ದಿನಾಂಕ 16-09-2013 ರಂದು ರೂ 4,00,000/- ಸಾಲ ಪಡೆದಿದ್ದು, ಸಮಯ ಬ್ಯಾಂಕಿನ ಸರಾಪ ರಾದ 2ನೇ ಆರೋಪಿ ತಿಮ್ಮಪ್ಪಯ್ಯ ಆಚಾರ್ ಸದ್ರಿ ಆಭರಣ ಅಸಲಿ ಎಂದು ಧೃಢಿಕರಿಸಿದ್ದು, ಎರಡೂ ಆರೋಪಿಗಳು ಸೇರಿ ನಂಬಿಕೆ ದ್ರೋಹ ಮಾಡಿ ಬ್ಯಾಂಕಿಗೆ ವಂಚಿಸಿರುತ್ತಾರೆ.

 

5.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀ ಪ್ರದೀಪ್ ಕುಮಾರ್ ರವರು ಮೇನೆಜರ್ ಆಗಿ ಕೆಲಸ ಮಾಡಿಕೊಂಡಿದ್ದ, ಪಡು ಪಣಂಬೂರು ಪೆಂಟ್ರೋಲ್ ಬಂಕ್ ನಲ್ಲಿ ಕೆಲಸಗಾಗರಿಗೆ ಉಪಯೋಗಕ್ಕೆ ಬಳಸುತ್ತಿದ್ದ ಕೆಎ 20 ಎಸ್ 5050ನೇ ಮೋಟಾರ್ ಸೈಕಲು ದಿನಾಂಕ 04.04.2014 ರಂದು ರಾತ್ರಿ 12.00 ಗಂಟೆಯಿಂದ ದಿನಾಂಕ 05.04.2014 ಬೆಳಗ್ಗಿನ ಜಾವ 08.00 ಗಂಟೆ ವೇಳೆಯ ಮಧ್ಯಾವದಿಯಲ್ಲಿ  ಕೆಎ 20 ಎಸ್ 5050ನೇ ಸುಮಾರು 15,000/- ರೂ ಬೆಲೆ ಬಾಳುವ ಮೋಟಾರ್  ಬೈಕನ್ನು  ಯಾರೋ ಕಳ್ಳರು ಕಳವು ಮಾಡಿರುದಾಗಿದೆ.

 

6.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-07-2014 ರಂದು ಸಮಯ 16.00 ಗಂಟೆಗೆ ಬೆಳುವಾಯಿ ಗ್ರಾಮ, ಆರೋಪಿ ನಾತು ಸಲ್ದಾನ ಎಂಬಾತನ  ಮನೆಯ ಬಳಿ ಆರೋಪಿ ನಾತು ಸಲ್ದಾನ ಪಿರ್ಯಾಧಿದಾರರಾದ ಶ್ರೀ ಫೆಲಿಕ್ಸ್ ಸಲ್ದಾನಾ ರವರ ಉದ್ದೇಶಿಸಿ, "ನನ್ನ ಅಣ್ಣ ಅಲೆಕ್ಸ್ ಸಲ್ದಾನಲ್ಲಿ ನನ್ನ ಕುರಿತು ಚಾಡಿ ಹೇಳುತ್ತೀಯ " ಎಂಬಿತ್ಯಾದಿಯಾಗಿ ಹೇಳಿ ಮರದ ಸಲಾಕೆಯಿಂದ ಫಿರ್ಯಾಧಿದಾರರ ತಲೆಗೆ ಹೊಡೆದು ಗಾಯ ಗೊಳಿಸಿದ್ದು ಫಿರ್ಯಾಧಿದಾರರು ಮಂಗಳೂರು ಫಾದರ್ ಮುಲಾರ್ಸ್ ಅಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.

 

7.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-07-2014 ರಂದು ಫಿರ್ಯಾಧಿದಾರರಾದ ಸೌಮ್ಯತಾ ರವರ ಬಾಬ್ತು ಆಳ್ವಾಸ್ ಅಸ್ಪತ್ರಯ ಪ್ಯೂಶಿಯ ಡಿಸ್ಯನ್ನ ಸ್ಟುಡಿಯೋ ಎಂಬ ಟ್ಯಲರಿಂಗ್ ಅಂಗಡಿಗೆ ಕೆಲಸಕ್ಕೆ ಬಂದಿದ್ದ ಉಮೇಶ್ ಪೂಜಾರಿ ಕೆಲಸ ಮಾಡಿಕೊಂಡಿದ್ದು ಆತನನ್ನು ನಂಬಿದ ಪಿರ್ಯಾಧಿದಾರರು ದಿನಾಂಕ 12-07-2014 ರಂದು ಸಲ್ಮಾನ್ ಎಂಬವರು ನೀಡಿದ ರೂ 1,00000 ಬೆಲೆಯ ಗಾಗ್ರಚೋಲಿ ಮತ್ತು ಗೌನ್ ಬಟ್ಟೆಯನ್ನು ಆರೋಪಿಗೆ ಹೋಲಿಯಲು ನೀಡಿ ರಾತ್ರಿ ಕೆಲಸ ನಿಮಿತ್ತ ಬೆಂಗಳೂರಿಗೆ ಹೋದವರ ದಿನಾಂಕ 14-07-2014 ರಂದು ಮರಳಿ ಬಂದವರು ಬೆಳ್ಳಗೆ 10.30 ಗಂಟೆ ಸಮಯಕ್ಕೆ ಅಂಗಡಿಗೆ ಹೋದಾಗ ಅಂಗಡಿಯ ಮೇಲಿದ್ದ ವರ್ಕಶಪ್ ಬೀಗ ತೆರಯದೇ ಇದ್ದುದನ್ನು ನೋಡಿ ತನ್ನಲ್ಲಿದ್ದ ಬೀಗದ ಕೀ ಮೂಲಕ ವರ್ಕಶಪ್ ತೆರದು ನೋಡಿದಾಗ ಆರೋಪಿಯು ಪಿರ್ಯಾಧಿದಾರರು ನಂಬಿಕೆಯಿಂದ ನೀಡಿದ್ದ ಮೇಲಿನ ಗಾಗ್ರ ಚೋಲಿಯೋಂದಿಗೆ ಕಾಣೆಯಾಗಿ ಪಿರ್ಯಾಧಿದಾರರಿಗೆ ನಂಬಿಕೆ ದ್ರೋಹ ಮಾಡಿರುತ್ತಾನೆ.  

 

8.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-07-2014 ರಂದು ರಾತ್ರಿ 19-30 ಗಂಟೆಗೆ ಫಿರ್ಯಾದುದಾರರಾದ ಶ್ರೀಮತಿ ವಿನೆತ್ ಲತಾ ಡಿ'ಸಿಲ್ವರವರ ಮಗನಾದ ಸಂತೋಷ್ ಕುಮಾರ್ ರವರು ಯಾರಲ್ಲೂ ಹೇಳದೆ ಮನೆಯಿಂದ ಹೊರಟು ಹೋಗಿರುತ್ತಾರೆ. ಈತನು ವರೆಗೆ ಮನೆಗೆ ಬಾರದೇ ಇದ್ದೂ ಎಲ್ಲಾ ಕಡೆ ಹುಡುಕಾಡಿದಲ್ಲಿ ವರೆಗೂ ಪತ್ತೆಯಾಗಿರುವುದಿಲ್ಲ.

 

9.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 21/07/2014 ರಂದು ಪಿರ್ಯಾದಿದಾರರಾದ ಶ್ರೀ ರಾಜು ಪೂಜಾರಿ ರವರು ತನ್ನ ಬಾಬ್ತು ಆಕ್ಟೀವಾ ಹೊಂಡಾ ನಂ. KA 19 EJ 9308 ರಲ್ಲಿ ಶಾಂತಿಗುಡ್ಡೆ ಕಡೆಯಿಂದ ಬಜಪೆ ಪೇಟೆ ಕಡೆಗೆ ಬರುತ್ತಿದ್ದಾಗ ಮಧ್ಯಾಹ್ನ ಸುಮಾರು 1.30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಬಜಪೆ ಗ್ರಾಮದ ಬಜಪೆ ಪೇಟೆಯ ಎಣ್ಣೆ ಮಿಲ್ಲಿನ ಹತ್ತಿರ ತಲುಪುವಾಗ ಎದುರಿನಿಂದ ಅಂದರೆ ಮಂಗಳೂರು ಕಡೆಯಿಂದ ಬಜಪೆ ಕಡೆಗೆ ಹೋಗುತ್ತಿದ್ದ ಸಿಫ್ಟ್ ಕಾರು ನಂಬ್ರ KA 19 MA 9631 ನೇದನ್ನು ಅದರ ಚಾಲಕ ಒಮ್ಮೆಲೇ ಮಧ್ಯ ರಸ್ತೆಯಲ್ಲಿ ನಿಲ್ಲಿಸಿ ಹಿಂದಿನಿಂದ ಬರುತ್ತಿರುವ ವಾಹನವನ್ನು ನೋಡದೇ ನಿರ್ಲಕ್ಷ್ಯತನದಿಂದ ಒಮ್ಮೆಲೇ ಕಾರಿನ ಎದುರಿನ ಬಾಗಿಲನ್ನು ತೆರೆದ ಸಮಯ ಪಿರ್ಯಾದಿದಾರರ ಎಡಕೈಯ ಮೊಣಗಂಟಿಗೆ ತಾಗಿ ಮೂಳೆ ಮುರಿತವಾಗಿದ್ದು, ಅವರು ರಸ್ತೆಗೆ ಬಿದ್ದರು. ಗಾಯಾಳುವನ್ನು ಅದೇ ಕಾರಿನಲ್ಲಿ ಬಜಪೆಯ ಗೋಪಿನಾಥ್ ಭಟ್ ರವರ ಕ್ಲಿನಿಕ್ ಗೆ ಕೊಂಡು ಹೋಗಿ ಅಲ್ಲಿ ನೋವಿನ ಇಂಜೆಕ್ಷನ್ ಕೊಟ್ಟು ನಂತರ ಅದೇ ಕಾರಿನಲ್ಲಿ ಮಂಗಳೂರು .ಜೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಬಗ್ಗೆ ದಾಖಲಿಸಿರುತ್ತಾರೆ.

 

10.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಪ್ರದೀಪ್ ರವರ ಪರಿಚಯದ ರಾಜು ಎಂಬವರು ದಿನಾಂಕ: 22/07/2014 ರಂದು 14.10 ಗಂಟೆ ಸಮಯಕ್ಕೆ ಮೋಟಾರು ಸೈಕಲ್ ನಂಬ್ರ KA 19 Y 2800 ನೇದ್ದನ್ನು ಚಲಾಯಿಸಿಕೊಂಡು ಹೋಗುತ್ತಾ ಮಂಗಳೂರು ತಾಲೂಕು ಬಡಗುಳಿಪಾಡಿ ಗ್ರಾಮದ ಗಂಜಿಮಠ ಸಮಾ ಗ್ಯಾರೇಜ್ ಎದುರು ತಲುಪಿದಾಗ ರಾಜು ರವರು ಅವರ ಎದುರಿನಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬಸ್ಸು ನಂಬ್ರ  KA 19 D 9119 ನೇದ್ದನ್ನು ಓವರ್ ಟೇಕ್ ಮಾಡಿ ಮುಂದೆ ಹೋಗುತ್ತಿದ್ದಾಗ ಬಸ್ಸಿನ ಚಾಲಕ ಬಸ್ಸನ್ನು ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಒಮ್ಮೆಲೇ ಬಲಕ್ಕೆ ಚಲಾಯಿಸಿದ ಪರಿಣಾಮ ಬಸ್ಸು ರಾಜು ರವರ ಬೈಕಿಗೆ ಡಿಕ್ಕಿ ಹೊಡೆದು ರಾಜುರವರು ರಸ್ತೆಯ ಮೇಲೆ ಬಿದ್ದು, ಬಸ್ಸಿನ ಹಿಂದಿನ ಬಲಬದಿಯ ಚಕ್ರವು ರಾಜುರವರ ತಲೆಯ ಮೇಲೆ ಹರಿದು ತೀವೃ ತರಹದ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ.

 

11.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 21-07-14 ರಂದು ಪಿರ್ಯಾದಿದಾರರಾದ ಶ್ರೀ ಪಿ. ಗೀರಿಶ್ ರವರ ಹೆಂಡತಿಯಾದ ಶ್ರೀಮತಿ ಪುಷ್ಪ(60) ರವರು ಮನೆಗೆ ಬೀಗ ಹಾಕಿ, ಆಕೆಯ ಮೊಬೈಲ್ ಫೋನ್ ಮನೆಯಲ್ಲೇ ಇಟ್ಟು ಎಲ್ಲಿಯೋ ಹೋಗಿದ್ದು ಅಕ್ಕಪಕ್ಕದವರಲ್ಲಿ ವಿಚಾರಿಸಿದಾಗ ಪಿರ್ಯಾದಿದಾರರ ಹೆಂಡತಿ ಸಂಜೆ ಸುಮಾರು 4-00 ಗಂಟೆ ಸಮಯಕ್ಕೆ ಮನೆಯಿಂದ ಹೋಗಿರುವುದಾಗಿ ತಿಳಿಸಿದ್ದು ಆಕೆಯ ಮೊಬೈಲ್ ಫೋನ್ ನನ್ನು ಪರಿಶೀಲಿಸಿದಾಗ ಸಂಜೆ 3-30 ಗಂಟೆಗೆ ಪಿರ್ಯಾದಿದಾರರ ತಂಗಿಗೆ ಕರೆ ಮಾಡಿ ತಾನು ಆಶ್ರಮಕ್ಕೆ ಇಲ್ಲವಾದರೆ ಎಲ್ಲದರೂ ಹೋಗಿ ಸಾಯುತ್ತೇನೆಂದು ಹೇಳಿದ್ದು ಸದ್ರಿಯವರು ತನಕ ಮನೆಗೆ ವಾಪಾಸು ಬಾರದೇ ಕಾಣೆಯಾಗಿರುತ್ತಾರೆ. ಕಾಣೆಯಾದ ಹೆಂಗಸಿನ ಚಹರೆ ಗುರುತು :ಎತ್ತರ: 4.5 ಅಡಿ, ಸಾಧಾರಣ ಶರೀರ, ಎಣ್ಣೆ ಕಪ್ಪು ಮೈಬಣ್ಣ, ಹಸಿರು ಬಣ್ಣದ ಸೀರೆ ಹಾಗೂ ರವಿಕೆ ಧರಿಸಿದ್ದು ಮಲಯಾಳಿ, ಕನ್ನಡ, ತುಳು ಭಾಷೆ ಬಲ್ಲವರಾಗಿತ್ತಾರೆ.

 

12.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಶಾಕೀರ್ ರವರು ಆಟೋ ರಿಕ್ಞಾ ಚಾಲಕರಾಗಿದ್ದು ದಿನಾಂಕ 21-07-2014 ರಂದು ರಮ್ಜಾನ್ಉಪವಾಸ ಬಿಡುವ ಸಮಯ ರಾತ್ರಿ 7-00 ಗಂಟೆಗೆ ಮನೆಗೆ ಬಂದು ಮನೆಯಲ್ಲಿದ್ದ ರಾತ್ರಿ ಸಮಯ 10-30 ಗಂಟೆಗೆ ಮನೆಯ ಬಾಗಿಲನ್ನು ಬಡಿಯುತ್ತಿರುವುದನ್ನು ಕೇಳಿ ಬಾಗಿಲು ತೆಗೆದಾಗ ಪರಿಚಯದ ಮೇಲಂಗಡಿಯ ಶಾಕೀರ್‌‌, ಸಮದ್‌‌ @ ಬೊಡ್ಡ ಸಮದ್‌‌ ಮತ್ತು ಧರ್ಮನಗರದ ಮುಕ್ತಾರ್‌‌ ಮತ್ತು ಪರಿಚಯ ಇಲ್ಲದ ಇತರರು ಮನೆಯ ಒಳಗೆ ಏಕಾಏಕಿ ಅಕ್ರಮ ಪ್ರವೇಶ ಮಾಡಿ ಶಫೀರ್ಆಲಿ ಎಲ್ಲಿ ಎಂದು ಹೇಳುತ್ತಾ ಆರೋಪಿಗಳು ಮನೆಯ ಒಳಗಡೆ ಬೆಡ್‌‌ರೊಂ ಕಡೆಗೆ ಹೊಗುತ್ತಿರುವಾಗ ತಡೆದ ಸಮಯ ಆರೋಪಿಗಳು ಕೈಯಿಂದ ಹಲ್ಲೆ ನಡೆಸಿದಾಗ  ತಡೆಯಲು ಬಂದ ಫಿರ್ಯಾದಿದಾರರ ತಂದೆ ರಫೀಕ್ತಾಯಿ ಮೈಮುನಾ ಹಾಗೂ ತಮ್ಮ ಶಫಿರ್ಆಲಿ ಗೆ ಆರೋಪಿಗಳೆಲ್ಲರೂ ಕೈಯಿಂದ ಹಲ್ಲೆ ನಡೆಸಿ ಕಾಲುಗಳಿಂದ ತುಳಿದು ಹಲ್ಲೆ ನಡೆಸಿರುತ್ತಾರೆ.

 

13.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-07-2014 ರಂದು ಯು.ಬಿ ಅಬ್ದುಲ್‌‌ ಸಲೀಂ ತಂದೆ: ಯು.ಬಿ ಅಬ್ದುಲ್ಲತೀಫ್ವಾಸ: ಅಜಧ್‌‌ನಗರ, ಉಳ್ಳಾಲ, ಮಂಗಳೂರು ಎಂಬುವವರು ಠಾಣೆಗೆ ಹಾಜರಾಗಿ ಲಿಖಿತ ದೂರೊಂದನ್ನು ನೀಡಿದ್ದು ಶರೀಫ್‌‌ @ ಸೂಜಿ ಶರೀಫ್ಪ್ರಾಯ: 46 ವರ್ಷ ತಂದೆ: ದಿ. ಮೂಸ ಕುಂಞ ವಾಸ: ಮೂಸಾ ಕಾಟೇಜ್‌‌, ಬಸ್ತಿಪಡ್ಪು, ಉಳ್ಳಾಲ ಗ್ರಾಮ ಮಂಗಳೂರು ಎಂಬಾತನು ಫಿರ್ಯಾದಿದಾರರಿಗೆ ಹಾಗೂ ಹಲವು ಜನಪ್ರತಿನಿಧಿಗಳಿಗೆ ಸಾರ್ವಜನಿಕ ರಸ್ತೆಯಲ್ಲಿ ನಿಂತು ಬೈಯುತ್ತಿರುವುದಲ್ಲದೇ, ಫಿರ್ಯಾದಿದಾರರ ಮನೆ ಹಾಗೂ ಗೇಟಿಗೆ ಕಲ್ಲು ಬಿಸಾಡಿ ಹಾನಿಗೊಳಿಸಿದ್ದು ಅಲ್ಲದೆ ಫಿರ್ಯಾದಿದಾರರಿಗೆ ಹಲ್ಲೆ ಮಾಡುವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಮಾನ್ಯ ನ್ಯಾಯಾಲಯದಲ್ಲಿ ಅನುಮತಿ ಪಡೆದು ಪ್ರಕರಣ ದಾಖಲಿಸಿರುವುದಾಗಿದೆ.

 

14.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರಿ ಶಿವಾನಂದ ಆಚಾರ್ಯ ರವರು ಗುರುಪುರ ಕೈಕಂಬದಲ್ಲಿ ಶ್ರೀ ವಜ್ರದೇಹಿ ಜ್ಯುವೆಲ್ಲರಿ ವರ್ಕ್ಸ್ ಎಂಬ ಅಂಗಡಿಯನ್ನು ನಡೆಸಿಕೊಂಡಿದ್ದು, ಸದ್ರಿ ಅಂಗಡಿಯ ವ್ಯವಹಾರದ ಬಗ್ಗೆ ಅವಶ್ಯವಿರುವ ಮಿಷನರಿ ಸಾಮಗ್ರಿಗಳನ್ನು ಆಪಾದಿತರಾದ ಹಸೀನಾ & ಪುಟ್ಟುಸ್ವಾಮಿ ರವರು ಸರಬರಾಜು ಮಾಡುವುದಾಗಿ ನಂಬಿಸಿದ್ದರಿಂದ ಪಿರ್ಯಾದಿದಾರರು ಆಪಾದಿತರ ಚಿಂತನ್ ಮಾರ್ಕೆಟಿಂಗ್ ಪ್ರೈ. ಲಿ. ಎಂಬ ಸಂಸ್ಥೆಯ ಕೊಟೇಶನನ್ನು ಪಡೆದುಕೊಂಡು ಅದನ್ನು ಗುರುಪುರ ಕೈಕಂಬದ ವಿಜಯ ಬ್ಯಾಂಕ್ ಶಾಖೆಗೆ ಇತರ ದಾಖಲಾತಿಗಳೊಂದಿಗೆ ನೀಡಿ ಸದ್ರಿ ಬ್ಯಾಂಕಿನಿಂದ ಮಂಜೂರಾದ ಸಾಲ ರೂ. 1900000 ವನ್ನು ವಿಜಯ ಬ್ಯಾಂಕಿನ ಡಿಡಿ ನಂಬ್ರ 143927 ಮತ್ತು 143926 ನೇದರ ಮುಖೇನ ದಿನಾಂಕ: 03.04.2014 ರಂದು ಪಂಪುವೆಲ್ ನಲ್ಲಿರುವ ಆಪಾದಿತರ ಸಂಸ್ಥೆಗೆ ಕೊಂಡೊಯ್ದು ಆಪಾದಿತರಿಗೆ ನೀಡಿದ್ದು, ಸದ್ರಿ ಡಿ.ಡಿಯನ್ನು ಪಡೆದುಕೊಂಡು ಆಪಾದಿತರು ಇದುವರೆಗೂ ಪಿರ್ಯಾದಿದಾರರಿಗೆ ಯಾವುದೇ ಮಿಷನರಿ - ಸಾಮಗ್ರಿಗಳನ್ನು ಸರಬರಾಜು ಮಾಡದೇ ಸಮಾನ ಉದ್ಧೇಶದಿಂದ ನಂಬಿಕೆ ದ್ರೋಹ ಹಾಗೂ ವಂಚನೆ ಮಾಡಿರುತ್ತಾರೆ.

No comments:

Post a Comment