Friday, April 25, 2014

Daily Crime Reports 25-04-2014

ದೈನಂದಿನ ಅಪರಾದ ವರದಿ.

ದಿನಾಂಕ 25.04.201409:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

3

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

1

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-04-2014 ರಂದು ಪಿರ್ಯಾದಿದಾರರಾದ ಶ್ರೀ ರಮೇಶ್ ಆಚಾರ್ಯ ರವರು ಗೋಪಾಲ ಆಚಾರಿ ರವರ ಮೋಟಾರ ಸೈಕಲ್ ನಂ.ಕೆಎ–20-ಎಲ್-4528 ರಲ್ಲಿ ಸಹ ಸವಾರರಾಗಿ ಉಡುಪಿಯಿಂದ ಪೆರಿಂಜೆಗೆ ಬಂದು ಉಪನಯನ ಕಾರ್ಯಕ್ರಮ ಮುಗಿಸಿ ಮರಳಿ ಉಡುಪಿಗೆ ಹೋಗುತ್ತಾ ಮಧ್ಯಾಹ್ನ  3.30 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಮಾರ್ಪಾಡಿ ಗ್ರಾಮದ ಅಲಂಗಾರಿಗೆ ತಲುಪುವಾಗ ಮೋಟಾರ್ ಸೈಕಲ್ ಚಲಾಯಿಸುತ್ತಿದ್ದ ಗೋಪಾಲ ಆಚಾರಿ ಯವರು ಎದೆನೋವು ಎಂದು ಹೇಳಿದಾಗ ಪಿರ್ಯಾದಿದಾರರು ಬೈಕನ್ನು ನಿಲ್ಲಿಸುವಂತೆ ಸೂಚಿಸಿದಾಗ ಗೋಪಾಲ ಆಚಾರಿಯವರು ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಮೋಟಾರ್ ಸೈಕಲ್ ಸ್ಕೀಡ್ ಆಗಿ ಕೆಳಕ್ಕೆ ಬಿದ್ದು ಗಾಯಗೊಂಡ ಗೋಪಾಲ ಆಚಾರಿಯವರನ್ನು ಚಿಕಿತ್ಸೆ ಬಗ್ಗೆ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತ ಪಟ್ಟಿರುವುದಾಗಿದೆ.

 

2.ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-04-2014 ರಿಂದ 24-04-2014 ಮಧ್ಯೆ ಪಿರ್ಯಾದಿದಾರರಾದ ಶ್ರೀ ವಾಯ್.ಬಿ. ರವೀಂದ್ರನ್ ರವರ ಬಾಬ್ತು ವಾಸದ ಮನೆಯ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿಟ್ಟಿದ್ದ  2011 ನೇ ಮಾಡಲಿನ ನಸು ನೀಲಿ ಬಣ್ಣದ, ಚಾಸಿಸ್ ನಂಬ್ರ 8259456, ಹಾಗೂ ಇಂಜಿನ್ ನಂಬ್ರ 1370463, KA-19ED-1580  ನೇ ಹೊಂಡಾ ಆಕ್ಟೀವಾ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ದ್ವಿಚಕ್ರ ವಾಹನದ ಅಂದಾಜು ಮೌಲ್ಯ 31757 ಆಗಬಹುದು.

 

3.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-04-2014 ರಂದು ಪಿರ್ಯಾದಿದಾರರಾದ ಶ್ರೀ ಶಂಕರ ಶೆಟ್ಟಿ ಬಿ. ರವರು ಜೇಸನ್ಎಂಬ ಬಸ್ಸಿನಲ್ಲಿ ಮೂಡಬಿದ್ರೆಯಿಂದ ಕಿನ್ನಿಗೋಳಿಗೆ ಪ್ರಯಾಣಿಸುತ್ತಾ ಸಂಜೆ 5-15 ಗಂಟೆ ಸಮಯಕ್ಕೆ ಪುತ್ತಿಗೆ ಗ್ರಾಮದ ವಿದ್ಯಾಗಿರಿ ಬಸ್ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಬಸ್ಸಿಗೆ ಹತ್ತಲು ಬಂದಾಗ ಅವರಿಗೆ ದಾರಿ ಮಾಡಿ ಕೊಡುವ ಸಲುವಾಗಿ ಬಸ್ಸಿನಿಂದ ಇಳಿದು ಬಳಿಕ ಎದುರು ಬಾಗಿಲಲ್ಲಿ ಹತ್ತುವಾಗ ಹಿಂದಿನ ಬಾಗಿಲಿಂದ ಹತ್ತುವಂತೆ ಕಂಡಕ್ಟರ್ಹೇಳಿದ್ದನ್ನು ಪ್ರಶ್ನಿಸಿದಾಗ ಬಸ್ಸಿನಿಂದ ಇಳಿದ ಕಂಡಕ್ಟರ್ಮತ್ತು ಕ್ಲೀನರ್ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಕೈಯಿಂದ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ದೂಡಿರುವುದಾಗಿದೆ.

 

4.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಕುಮಾರ ರವರು ಪರಿಶಿಷ್ಟ ಜಾತಿಯ ಮುಂಡಾಳ ಪಂಗಡಕ್ಕೆ ಸೇರಿದವರಾಗಿದ್ದು, ಹಿಂದೆ ಮ್ಯಾಕ್ಷಿ ಪಿಂಟೋ ಎಂಬಾತನ ಕಲ್ಲಿನ ಕೋರೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸಮಯ ತನ್ನ ಕೈಗೆ  ಕಲ್ಲು ಕಟ್ಟಿಂಗ್  ಮಾಡುವ ಮೆಷಿನ್ ಬೆಲ್ಟ್ ತಾಗಿ  ಎರಡು ಬೆರಳು  ಜಖಂಗೊಂಡಿದ್ದು, ಬಗ್ಗೆ ಪರಿಹಾರವನ್ನು ಕೊಡದೇ ಇದ್ದುದರಿಂದ ತಾನು ಅಲ್ಲಿಗೆ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದು, ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ ನಂತರ ಪದೇ ಪದೇ ತನ್ನನ್ನು ಕೆಲಸಕ್ಕೆ ಬರುವಂತೆ ಒತ್ತಾಯಿಸುತ್ತಿದ್ದ ಮ್ಯಾಕ್ಷಿ ಪಿಂಟೋ ದಿನಾಂಕ: 20-04-2014 ರಂದು ಸಂಜೆ 6-30 ಗಂಟೆಗೆ ಬಲಾತ್ಕಾರವಾಗಿ ತಮ್ಮ ಮನೆಗೆ ನುಗ್ಗಿ ತನ್ನನ್ನು ಧರಧರನೆ ಮನೆಯಿಂದ ಹೊರಗೆಳೆದು ತಂದು ಆತನ ಕಾರಿನಲ್ಲಿ ಕುಳ್ಳಿರಿಸಿದ್ದಲ್ಲದೇ ಜಾತಿ ನಿಂದನೆ ಮಾಡಿ ಮುಂದಕ್ಕೆ ನೀನು ಕೆಲಸಕ್ಕೆ ಬಾರದಿದ್ದಲ್ಲಿ ಬಿಡುವುದಿಲ್ಲ ಎಂಬಂತೆ ಬೆದರಿಸಿ ಅವಾಚ್ಯವಾಗಿ ಬೈದು, ಕಬ್ಬಿಣದ ರಾಡ್ ನಿಂದ ಎದೆಗೆ ಹೊಡೆದು ಜಖಂಗೊಳಿಸಿದ್ದಾಗಿದೆ.

 

5.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 24/04/2014 ರಂದು ಫಿರ್ಯಾದಿದಾರರಾದ ಶ್ರೀ ಶರತ್ ಸಾಲಿಯಾನ್ ರವರು ತನ್ನ ಸ್ನೇಹಿತ ಹರ್ಷಿತ್ ಎಂಬವರ ಬಾಬ್ತು ಕೆಎ-19-.ಎಫ್-6060 ನೇದರಲ್ಲಿ ಸಹ ಸವಾರನಾಗಿ ತನ್ನ ಮನೆಯ ಕಡೆಗೆ ಹೋಗುತ್ತಿರುವಾಗ ಆರೋಪಿಗಳಾದ ಅಶ್ವತ್ಥ್  ಮತ್ತು  ಶಿವ  ಮತ್ತು ಗುರುತು ಪರಿಚಯವಿಲ್ಲದ 5 ಮಂದಿಯೊಂದಿಗೆ  ತಕ್ಷೀರು  ಮಾಡುವ  ಸಮಾನ ಉದ್ದೇಶದಿಂದ  ಅಕ್ರಮಕೂಟ ಸೇರಿಕೊಂಡು ಇನ್ನೋವಾ ಕಾರು  ನಂ. ಕೆಎ 19  ಬಿ  9223  ರಲ್ಲಿ ಹಿಂಬಾಲಿಸಿಕೊಂಡು ಬಂದು ಮಂಗಳೂರು  ತಾಲೂಕಿನ,  ಪೆರ್ಮುದೆ ಗ್ರಾಮದ, ಪೆರ್ಮುದೆ  ಎಂಬಲ್ಲಿ   ಫಿರ್ಯಾದಿದಾರರ ಮೋಟಾರು ಸೈಕಲನ್ನು   ತಡೆದು  ನಿಲ್ಲಿಸಿ  ಮೋಟಾರು  ಸೈಕಲ್   ಕೀಯನ್ನು ಎಳೆದು  ತೆಗೆದು  ಫಿರ್ಯಾದಿ ಶರತ್  ಮತ್ತು ಹರ್ಷಿತ್  ರವರಿಗೆ  ಕೈಯಿಂದ ಮತ್ತು  ಮರದ ಸೋಂಟೆಯಿಂದ ಹೊಡೆದು ಹಲ್ಲೆ ಮಾಡಿದ್ದಲ್ಲದೇ  ನೀವು  ನಮ್ಮ  ವಿರುದ್ಧ ಬಾರೀ  ದೂರು  ಕೊಡುತ್ತೀರಾ, ನಿಮ್ಮಲ್ಲಿ    ಒಬ್ಬನನ್ನು  ತೆಗೆಯುತ್ತೇವೆ,  ನಮ್ಮ  ತಂಟೆಗೆ  ಬಂದರೆ ಜಾಗ್ರತೆ , ಎಂದು ಅವಾಚ್ಯವಾಗಿ ಬೈದು, ಜೀವ  ಬೆದರಿಕೆ ಹಾಕಿ, ಇವತ್ತಿಗೆ ಇಷ್ಟು ಸಾಕು ಮುಂದೆ ನೋಡುವಾ ಎಂದು  ಹೇಳಿ  ಅವರು ಬಂದ ಇನ್ನೋವಾ ಕಾರಿನಲ್ಲಿ ವಾಪಾಸು ಹೋಗಿರುವುದಾಗಿದೆ.    ಹಲ್ಲೆಗೆ  ದಿನಾಂಕ: 26-01-2014  ರಂದು ಕೊಡೆತ್ತೂರು ಕೋರ್ದಬ್ಗು ದೈವದ ಜಾತ್ರೆಯಲ್ಲಿ  ನಡೆದ ತಕರಾರು  ಮತ್ತು  ದಿನಾಂಕ: 22-04-2014 ರಂದು  ಕಟೀಲಿನಲ್ಲಿ ಫಿರ್ಯಾದಿದಾರರಿಗೆ ಹಲ್ಲೆ ಮಾಡಿದ ವಿಚಾರದಲ್ಲಿ ಠಾಣೆಗೆ  ದೂರು   ನೀಡಲು   ಬಂದಿರುವುದೇ  ಕಾರಣವಾಗಿರುತ್ತದೆ.

 

6.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ಸೆಲ್ವರಾಜ್ ರವರು ಹಾರ್ಡವೇರ್ಸಾಫ್ಟವೇರ್‌‌ ಕೆಲಸ ಮಾಡುತ್ತಿದ್ದು, ದಿನಾಂಕ 23-04-2014 ರಂದು ತೊಕ್ಕೋಟು ಒಳಪೇಟೆ ಬಳಿ ಇರುವ ಮಾರಿಯಮ್ಮ ದೇವಸ್ಥಾನದ ವಾರ್ಷಿಕ ಜಾತ್ರೆಗೆ ಸುಮಾರು 10-30 ಗಂಟೆ ಸಮಯಕ್ಕೆ ಫಿರ್ಯಾದುದಾರರು ತಮ್ಮ ಸ್ನೇಹಿತ ದಿನೇಶ್‌‌ ಬಾಬ್ತು ಓಮ್ನಿ ಕಾರ್‌‌ ನಂಬ್ರ ಕೆಎ 19 ಎಂಬಿ 6574 ನೇದರಲ್ಲಿ ಹೊಗಿ ನಂತರ ಜಾತ್ರೆ ಮುಗಿದು ಸ್ನೇಹಿತರಾದ ಉಮೇಶ್‌, ಕನಕರಾಜ್‌‌, ಶಿವಪ್ಪ ಹಾಗೂ ಇನ್ನಿತರ ಫಿರ್ಯಾದುದಾರರ ಜಾತಿ ಬಾಂಧವರು ಒಟ್ಟಾಗಿ ಸೇರಿಕೊಂಡು ಒಳಪೇಟೆಯ ಕೃಷ್ಣ ಬಾರ್‌‌ಗೆ ಊಟ ಮಾಡಲು ಹೋಗಿ ಸಮಯ ಊಟದ ಜೊತೆಗೆ ಎಲ್ಲರೂ ಕಿಂಗ್ಫಿಶರ್‌‌‌ ಬಿಯರ್‌‌ ಸೇವಿಸಿದ್ದು ನಂತರ ಒಳಗೊಳಗೆ ಮಾತುಕತೆಯಾಗುತ್ತಿದ್ದಾಗ ಫಿರ್ಯಾದುದಾರರು ಹಾಗೂ ಉಮೇಶ್‌, ಕನಕರಾಜ್‌‌ ರೊಂದಿಗೆ ಪ್ರೆಂಡ್ಶಿಪ್‌‌ ವಿಚಾರದಲ್ಲಿ ಜೋರಾಗಿ ಮಾತಾಡಿದ್ದು, ಮಾತಿನ ನಡುವೆ ಕೋಪಗೊಂಡ ಉಮೇಶ್, ಕನಕರಾಜ್‌‌ರವರು ಬಿಯರ್‌‌ ಬಾಟಲಿಯಿಂದ ಹೋಟೆಲ್ ಹೊರಭಾಗದ ರಸ್ತೆಬದಿಯಲ್ಲಿ ಸಮಯ ಸುಮಾರು ರಾತ್ರಿ 11:30 ಗಂಟೆಗೆ ಹೊರಟು ನಿಂತಿದ್ದ ಫಿರ್ಯಾದುದಾರರ ತಲೆಗೆ ಬಾಟಲಿಯಿಂದ ಜೋರಾಗಿ ಹೊಡೆದು " ನನ್ನ ಫ್ರೆಂಡ್ಶಿಪ್ನಿನಗೆ ಬೇಡವಾ" ಎಂಬಿತ್ಯಾದಿಯಾಗಿ ಅವಾಚ್ಯ ಶಬ್ದಗಳಿಂದ ಬೈದು ಅವರಿಬ್ಬರು ಬಿಯರ್ಬಾಟಲಿಯಿಂದ ಫಿರ್ಯಾದುದಾರರಿಗೆ ಹೊಡೆದುದಾಗಿದೆ. ನಂತರ ತಪ್ಪಿಸಿಕೊಳ್ಳುವರೇ ಓಮ್ನಿ ಕಾರ್ನಲ್ಲಿ ಕುಳಿತು ಇಂಟರ್ಲಾಕ್ಮಾಡಿದಾಗ್ಯೂ ಮಾರುತಿ ಮತ್ತಿ ಇತರರು ಓಮ್ನಿ ಗಾಡಿಗೆ ಕಲ್ಲಿನಿಂದ ಹೊಡೆದು ಸಂಪೂರ್ಣ ಜಖಂಗೊಳಿಸಿರುತ್ತಾರೆ. ಫಿರ್ಯಾದುದಾರರು ಜೋರಾಗಿ ಬೊಬ್ಬೆ ಹೊಡೆಯುತ್ತಿರುವಾಗ ಜನರು ಹತ್ತಿರ ಬರುವುದನ್ನು ನೋಡಿದ ಅವರೆಲ್ಲರು ಅಲ್ಲಿಂದ ಓಡಿ ಹೋಗಿರುತ್ತಾರೆ. ಘಟನೆಯಿಂದ ಫಿರ್ಯಾದುದಾರರ ತಲೆಗೆ ರಕ್ತಗಾಯವಾಗಿದ್ದು ಎದೆಗೆ ಗುದ್ದಿದ ನೋವಾಗಿರುತ್ತದೆ, ನಂತರ ಅಲ್ಲಿ ಸೇರಿದ ಜನರು ಫಿರ್ಯಾದುದಾರರನ್ನು ತೊಕ್ಕೋಟು ನೇತಾಜಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ.

 

7.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-03-2014 ರಂದು ರಾತ್ರಿ 08-00 ಗಂಟೆಗೆ ಪಿರ್ಯಾದುದಾರರಾದ ಶ್ರೀ ಜಗದೀಶ್ ಆಚಾರ್ಯ ರವರು ಮುಲ್ಕಿ ಕೊಲಕ್ಕಾಡು ಶ್ರೀ ಕಾಳಿಕಾಂಭ ದೇವಾಸ್ಥಾನದ ವರ್ಷಾವಧಿ ಉತ್ಸವ ನೋಡಲು ಸ್ನೇಹಿತ ರವೀಂದ್ರರವರ ಬಾಬ್ತು ಕೆಎ-19-ಎಮ್‌-5210 ನೇ ಮಾರುತಿ 800 ಕಾರನ್ನು ತಮ್ಮ(ಸಹೋದರ) ಸುಬ್ರಮಣ್ಯ ರವರೊಂದಿಗೆ ತೆಗೆದುಕೊಂಡು ಹೋಗಿದ್ದು ದಿನಾಂಕ 19-03-2014 ರಂದು ರಾತ್ರಿ 01-30 ಗಂಟೆಗೆ ಉತ್ಸವ ಮುಗಿದಿದ್ದು ಪಿರ್ಯಾದುದಾರರು ಮುಲ್ಕಿಯಿಂದ ಬೆಳ್ಮದ ತಮ್ಮ ಮನೆಗೆ ಸದ್ರಿ ಕಾರಿನಲ್ಲಿ ತಮ್ಮ ಸುಬ್ರಮಣ್ಯ ಚಾಲಕನಾಗಿ ಮತ್ತು ಪಿರ್ಯಾದುದಾರರು ಚಾಲಕನ ಬದಿಯ ಸೀಟಿನಲ್ಲಿ ಕುಳಿತುಕೊಂಡು ಹೊರಟಿದ್ದು, ದಿನಾಂಕ 19-03-2014 ರಂದು ಬೆಳಗ್ಗೆ 04-00 ಗಂಟೆಗೆ ತೊಕ್ಕೊಟ್ಟುನಿಂದ ಕೋಣಾಜೆ ಕಡೆಗೆ ಹೋಗುವ ರಸ್ತೆಯಲ್ಲಿ ಕಾರನ್ನು ಪಿರ್ಯಾದುದಾರರ ತಮ್ಮ ಸುಬ್ರಮಣ್ಯನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ತೊಕ್ಕೊಟ್ಟು ವಿನಮ್ರ ಬಾರ್ ಎದುರು ಎಡಗಡೆ ರಸ್ತೆಯ ಬದಿಯಲ್ಲಿರುವ ಮರವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರಿಗೆ ಸೊಂಟದ ಎಡ ಬದಿಗೆ ಮೂಳೆಮೂರಿತದ ಗಾಯ ಉಂಟಾಗಿರುತ್ತದೆ  ಮತ್ತು ಕಾರಿನ ಚಾಲಕ ಸುಬ್ರಮಣ್ಯರವರಿಗೆ ಸಣ್ಣಪುಟ್ಟ ಗುದ್ದಿದ ನೋವಾಗಿರುತ್ತದೆ ಅಪಘಾತದಿಂದ ಸದ್ರಿ ಕಾರು ಜಖಂಗೋಂಡಿದ್ದು ನಂತರ ಫಾದರ್  ಮುಲ್ಲರು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡು ಚಿಕಿತ್ಸೆ ಪಡೆದುಕೊಂಡು ದಿನಾಂಕ 10-04-2014 ರಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತೇನೆ ಸದ್ರಿ ಅಪಘಾತದ ವಿಚಾರದಲ್ಲಿ ಇದುವರೆಗೆ ಪ್ರಕರಣ  ದಾಖಲಾಗದೇ ಇದ್ದುದರಿಂದ ಹಾಗೂ ಅದೇ ದಿನ ಪ್ರಕರಣ ದಾಖಲಿಸುವ ಬಗ್ಗೆ ಪಿರ್ಯಾದುದಾರರಿಗೆ ಕಾನೂನು ಅರಿವು ಇಲ್ಲದೆ ಇದ್ದುದರಿಂದ ತಡವಾಗಿ ದಿನಾಂಕ 24-04-2014 ರಂದು ದೂರು ನೀಡಿರುವುದಾಗಿದೆ

 

8.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23.01.2013 ರಂದು ಪಿರ್ಯಾದಿದಾರರಾದ ಶ್ರೀಮತಿ ಹರ್ಷಿತಾ ರವರಿಗೆ ಪ್ರಕಾಶ್‌‌ಚಂದ್ರ ಎಂಬವರೊಂದಿಗೆ ಮದುವೆಯಾಗಿದ್ದು ಮದುವೆಯ ನಂತರ ಪಿರ್ಯಾಧಿದಾರರು ಗಂಡನ ಜೊತೆ ಗಂಡನ ಮನೆಯಲ್ಲಿ ವಾಸಿಸುತ್ತಿದ್ದರು. ಮದುವೆಯ ಸಮಯದಲ್ಲಿ ಪಿರ್ಯಾಧಿದಾರರ ತಂದೆಯು 2 ಲಕ್ಷ ರೂಪಾಯಿ ಹಾಗೂ 25 ಪವನ್‌‌ ಚಿನ್ನವನ್ನು ವರದಕ್ಷಿಣೆಯಾಗಿ ಕೊಡುತ್ತೇನೆಂದು ಒಪ್ಪಿಕೊಂಡಿದ್ದು ಮದುವೆಯ ಸಮಯ 1 ಲಕ್ಷ ರೂಪಾಯಿ ಹಾಗೂ 20 ಪವನ್‌‌ ಚಿನ್ನವನ್ನು ನೀಡಿ ಬಾಕಿ ಹಣ ಹಾಗೂ ಚಿನ್ನಕ್ಕೆ ಸ್ವಲ್ಪ ಕಾಲಾವಕಾಶವನ್ನು ಕೇಳಿದ್ದರು, ಮದುವೆಯ ಒಂದು ತಿಂಗಳ ನಂತರ ಪಿರ್ಯಾಧಿದಾರರ ಗಂಡ ಸಣ್ಣ ಸಣ್ಣ ವಿಷಯಗಳಿಗೆ ಜಗಳ ತೆಗೆದು ದೈಹಿಕ ಹಿಂಸೆ ನೀಡುತ್ತಿದ್ದು ಪಿರ್ಯಧಿದಾರರ ಅತ್ತೆ ಸರಸ್ವತಿ ನಾದಿನಿ ಪ್ರತಿಮ ಹಾಗೂ ಮೈದುನ ಪ್ರಶಾಂತ್‌‌ ಎಂಬವರು ಸೇರಿ ಪಿರ್ಯಾಧಿದಾರರಿಗೆ ನೀನು ತಕ್ಷಣ ಮನೆ ಬಿಟ್ಟು ಹೋಗಬೇಕು ಇಲ್ಲವಾದರೆ ಕೊಲ್ಲುವುದಾಗಿ  ಜೀವ ಬೆದರಿಕೆ ಹಾಕಿ, ಬಾಕಿ ಇರುವ ಹಣ ಹಾಗೂ ಚಿನ್ನವನ್ನು  ಕೂಡಲೇ ತರಬೇಕೆಂದು ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ನೀಡಿ 22.04.2014 ರಂದು ಬೆ: 11.00 ಗಂಟೆಗೆ ಮನೆಯಿಂದ ಹೊರಗೆ ಹಾಕಿದ್ದು, ಈ ವೇಳೆ ಪಿರ್ಯಾದಿದಾರರಿಗೆ ಸೇರಿದ ಬೆಲೆಬಾಳುವ ಬಟ್ಟೆಬರೆ ಹಾಗೂ ಚಿನ್ನಾಭರಣಗಳನ್ನು ಪಿರ್ಯಾಧಿದಾರರಿಗೆ ಕೊಡದೆ ಅಕ್ರಮವಾಗಿ  ಬೀಗ ಹಾಕಿ ಇಟ್ಟಿರುವುದಾಗಿದೆ.

No comments:

Post a Comment