Thursday, April 3, 2014

Mulki Muder Case Traced : 2 Arrested

            ದಿನಾಂಕ 01-04-2014 ರಂದು ಮದ್ಯಾಹ್ನ ಸುಮಾರು 14.30 ಗಹಂಟೆಯ ಸಮಯಕ್ಕೆ ವಿದ್ಯಾನಂದ ಆರ್ ಸುವರ್ಣ ಪ್ರಾಯ 48 ವರ್ಷ ತಂದೆ: ದಿ.ರಾಜು ಸುವರ್ಣ ವಾಸ: ಕೆಂದೊಟ್ಟು ಪದವು ಬೋಳ ಗ್ರಾಮ ಬೋಳಕೋಡಿ ಅಂಚೆ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಎಂಬವರು ಠಾಣೆಗೆ ಬಂದು ನೀಡಿದ ಲಿಖಿತ ಪಿರ್ಯಾಧಿಯನ್ನು ಸ್ವೀಕರಿಸಿದ್ದು ಸದ್ರಿ ಪಿರ್ಯಾಧಿಯ ಸಾರಾಂಶವೇನೆಂಧರೆ, ದಿನಾಂಕ  01.04.2014 ರಂದು  ಬೆಳಗ್ಗಿನ ಜಾವ 4.45 ರ ವೇಳೆಗೆ  ಆರೋಪಿ  ರಂಗ @ ಗವಿರಂಗ @ ಹರೀಶ್ (22)   ಎಂಬಾತನು  ತನ್ನ  ಟಾಟಾ ಸುಮೋವನ್ನು ಮಂಗಳೂರು ತಾಲೂಕು ಪಾವಂಜೆ  ಗ್ರಾಮದ  ಪಾವಂಜೆ ಸೇತುವೆಯ ಬಳಿ  ಅವಿನಾಶ್ ಎಂಬಾತನನ್ನು  ಕೊಂದು  ಹಾಕಲು ಅವಿನಾಶನು  ಸವಾರಿ ಮಾಡಿಕೊಂಡು ಹೋಗುತ್ತಿದ್ದ  ಮೋಟಾರ್ ಸೈಕಲ್   KA 19 EH 7744  ನೇದಕ್ಕೆ ಢಿಕ್ಕಿ ಪಡಿಸಿದ್ದು ಅವಿನಾಶನಿಗೆ  ಆಗಿರುವ  ತೀವ್ರ ತರಹದ ಜಖಂನಿಂದ  ಮೃತಪಟ್ಟಿರುವುದಾಗಿದೆ.

         ಪ್ರಕರಣದಲ್ಲಿ ಅರೋಪಿಗಳ  ಪತ್ತೆಯ ಬಗ್ಗೆ  ಸಿಬ್ಬಂದಿಗಳೊಂದಿಗೆ  ಖಚಿತ ವರ್ತಮಾನದಂತೆ  ಮಂಗಳೂರು ಮಂಗಳಾದೇವಿ ದೇವಸ್ಥಾನದ ಬಳಿ ಅರೊಪಿ ಹರೀಶನನ್ನು 09.15 ರ ವೇಳೆಗೆ ವಶಕ್ಕೆ ತೆಗೆದುಕೊಂಡು ಆತನನ್ನು ವಿಚಾರಿಸಿಕೊಂಡಲ್ಲಿ ತಕ್ಷೀರಿನ ಬಗ್ಗೆ ತಪ್ಪೊಪ್ಪಿಕೊಂಡವನನ್ನು ಕೂಲಂಕುಶವಾಗಿ ವಿಚಾರಿಸಿ ಅರೋಪಿ ರಂಗ @ ಗವಿರಂಗ @ ಹರೀಶ್ (22) ಈತನು ಮೃತ ಅವಿನಾಶ್ ಈ ಮೊದಲು ಸುಷ್ಮಾ ಪ್ರೆಸಿಲ್ಲಾ ಳನ್ನು ಪ್ರೀತಿಸುತ್ತಿದ್ದು ಇತ್ತಿಚಿಗೆ ಕೆಲವು ಸಮಯದಿಂದ ತಾನು ಮತ್ತು ಪ್ರೆಸಿಲ್ಲಾ ಪ್ರೀತಿಸುತ್ತಿದ್ದು ಪ್ರೆಸಿಲ್ಲಾಳಿಗೆ ಆತನು ತೊಂದರೆಕೊಡುತ್ತಿದ್ದುದ್ದಲ್ಲದೇ ದಿನಾಂಕ 31-03-2014 ರಂದು ಪ್ರೆಸಿಲ್ಲಾಳು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಹೋಗಿ ಅವಿನಾಶನು ಗಲಾಟೆ ಮಾಡಿದ್ದು ಇದರಿಂದ ಕೆಲಸ ಕಳೆದುಕೊಳ್ಳಲು ಅವಿನಾಶ್ ಕಾರಣಕರ್ತನಾಗಿರುವುದರಿಂದ ತನಗೆ ಇಷ್ಟ ಇಲ್ಲದಿದ್ದರೂ ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿ ಹಿಂಸಿಸುತ್ತಿದ್ದುದರಿದ ಮತ್ತು ಅವಿನಾಶನು ತನ್ನನ್ನು ನೋಡಲು ದಿನಾಂಕ 1-04-2014 ರ ಬೆಳ್ಳಿಗ್ಗೆ ಮುಕ್ಕ ಚಕ್ ಪೋಸ್ಟ್ ಬಳಿ ಕಾಯುವುದಾಗಿ ತಿಳಿಸಿದ್ದು ಆ ವೇಳೆಗೆ ಅಲ್ಲಿಗೆ ಬರುವ ಅವಿನಾಶ್ ನನ್ನು ಮುಗಿಸಬೇಕೆಂದು ನನ್ನಲ್ಲಿ ಸುಷ್ಮಾ ತಿಳಿಸಿದಂತೆ ತಾನು ನಿನ್ನ ದಿನ ದಿನಾಂಕ 01-04-2014 ರಂದು ಬೆಳಿಗ್ಗಿನ ಜಾವ 4.45 ರ ವೇಳೆಗೆ ಕೊಲ್ಲುವ ಇರಾದೆಯಿಂದ ಕಾದು ಈ ಕೃತ್ಯಮಾಡಿದ್ದಾಗಿ ತಿಳಿಸಿರುತ್ತಾನೆ. ಹಾಗೂ ಮಹಿಳಾ ಪೊಲೀಸು ಸಿಬ್ಬಂದಿಯವರೊಂದಿಗೆ ಸುಷ್ಮಾಳ ಮನೆಯಾದ ಪಡುಬೈಲು ಎಂಬಲ್ಲಿಗೆ ಹೋದಾಗ ಅಲ್ಲಿಯೇ ಮನೆಯ ಬಳಿ ಇದ್ದ ಸುಷ್ಮಾ ಪ್ರೆಸಿಲ್ಲಾಳನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿಕೊಂಡಲ್ಲಿ ತಕ್ಷೀರು ನಡೆಸಿದ  ಬಗ್ಗೆ  ಒಪ್ಪಿಕೊಂಡಿದ್ದು ಆರೋಪಿಗಳಿಂದ  ಕೃತ್ಯದ ಸಮಯ  ಬಳಸಿದ  ಟಾಟಾ ಸುಮೋ ಕೆ.ಎ-19-ಬಿ-2939 ನೇದನ್ನು ಹಾಗೂ   ಮೊಬೈಲ್ ಫೋನನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು  ಮಾನ್ಯ  ನ್ಯಾಯಾಲಯವು ನ್ಯಾಯಾಂಗ  ಬಂಧನ ವಿಧಿಸಿರುತ್ತದೆ.

             ಪ್ರಕರಣದ ಆರೋಪಿ ಹಾಗೂ ಸೊತ್ತಿನ  ಪತ್ತೆಯ ಬಗ್ಗೆ  ಮಾನ್ಯ  ಪೊಲೀಸು ಆಯುಕ್ತರಾದ  ಆರ್. ಹಿತೇಂದ್ರರವರ  ಆದೇಶದಂತೆ  ,ಉಪ ಪೊಲೀಸು ಆಯುಕ್ತರು( ಕಾ & ಸು) ಶ್ರೀ ಡಾ.ಕೆ.ವಿ ಜಗದೀಶ್ , ಶ್ರೀ ವಿಷ್ಣುವರ್ಧನ್ ,ಉಪ ಪೊಲೀಸು ಆಯುಕ್ತರು( ಅಪರಾಧ ಮತ್ತು ಸಂಚಾರ ವಿಭಾಗ)ಮತ್ತು ಪಣಂಬೂರು  ಉಪವಿಭಾಗದ  ಸಹಾಯಕ  ಪೊಲೀಸು ಆಯುಕ್ತರಾದ  ಶ್ರೀ ರವಿಕುಮಾರ್  ಎಸ್ ರವರ ಮಾರ್ಗದರ್ಶನದಲ್ಲಿ  ,ಆರೋಪಿ ಪತ್ತೆಗೆ  ಹಾಗೂ  ಸೊತ್ತುಗಳ ಸ್ವಾಧೀನತೆಗೆ  ಮುಲ್ಕಿ ಠಾಣೆಯ  ಪೊಲೀಸು ನಿರೀಕ್ಷಕ ರಾಮಚಂದ್ರ ನಾಯಕ್ ರವರೊಂದಿಗೆ  ಠಾಣಾ  ಸಿಬ್ಬಂದಿಗಳಾದ  ಎ.ಎಸ್.ಐ ವಾಮನ್ ಸಾಲಿಯಾನ್  ಹೆಚ್.ಸಿ 1376 ಉಮೇಶ್  ಹೆಚ್.ಸಿ 2011  ವಿಜಯ ಕಾಂಚನ್  ,ಹೆಚ್.ಸಿ 1902 ಧರ್ಮೇಂದ್ರ, ಪಿಸಿ 2146 ಹರಿಶೇಖರ್  ಮಪಿಸಿ 782  ಗೀತಾ  ರವರು ಸಹಕರಿಸಿರುತ್ತಾರೆ.

No comments:

Post a Comment