Tuesday, April 1, 2014

Daily Crime Reports 01-04-2014

ದೈನಂದಿನ ಅಪರಾದ ವರದಿ.

ದಿನಾಂಕ 01.04.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

3

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ       

:

1

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಬರ್ಕೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-03-2014 ರಂದು ಸಂಜೆ ಸುಮಾರು 19:30 ಗಂಟೆಗೆ  ಪಿರ್ಯಾದಿದಾರರಾದ ಶ್ರೀ ಸಂಜೀವ್ ರವರ  ತಂದೆ ಅರ್ಜುನ (60) ಎಂಬುವರು  ಮದ್ಯ ಖರೀದಿಸಿ ತರುವರೇ  ಮನೆಯಿಂದ ಹೊದವರು  ನಂತರ ವಾಪಸ್ಸು  ಮನೆಗೆ ಬಾರದೆ ಇದ್ದು ಸದ್ರಿಯವರನ್ನು ಪಿರ್ಯಾದಿದರರು ತನ್ನ  ಸಂಬಂಧಿಕರ  ಮನೆ ಹಾಗೂ  ಇತರ ಕಡೆಗಳಲ್ಲಿ ಹುಡುಕಾಡಿದಲ್ಲಿ ಎಲ್ಲಿಯೂ  ಪತ್ತೆಯಾಗದೆ ಕಾಣೆಯಾಗಿರುತ್ತಾರೆ.

 

2.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ನಾಸೀರ್ ಹುಸೈನ್ ರವರು ಕೇಂದ್ರ ಮಾರುಕಟ್ಟೆಯಲ್ಲಿ ಹಣ್ಣು ಹಂಪಲು ವ್ಯಾಪಾರದ ಕೆಲಸ ಮಾಡಿಕೊಂಡಿದ್ದು, ಅವರ ಬಳಿ ಎರಡು ಖಾಸಗಿ ಕಾರುಗಳಿದ್ದು, ಅದರಲ್ಲಿ ಒಂದನ್ನು ತನ್ನ ಸ್ವಂತ ಕೆಲಸಕ್ಕೆ ಉಪಯೋಗಿಸುತ್ತಿದ್ದು, ಇನ್ನೊಂದು ಕಾರು ನಂಬ್ರ ಕೆಎ 04, ಎಮ್ಇ 5191 (ಸ್ಕಾರ್ಫಿಯೋ) ವನ್ನು  ತನ್ನ ಸ್ನೇಹಿತನಾದ ಸಂತೋಷ ತಂದೆ: ಪೂವಪ್ಪ ಎಂಬವರ ಮುಖಾಂತರ ತಿಂಗಳಿಗೆ 35,000/- ರೂಪಾಯಿ ಬಾಡಿಗೆ ಯಂತೆ ಹಾಗೂ ಸಂತೋಷನಿಗೆ ನೋಡಿ ಪರಿಚಯ ವಿರುವ ಗಿರೀಶ್ ರೈ, ಕೋಸ್ಮಸ್  ರಸ್ತೆ ಕದ್ರಿ ಮಂಗಳೂರು ಎಂಬಾತನಿಗೆ 02-12-2013 ರಂದು ಬಾಡಿಗೆಗೆಂದು ಮಂಗಳೂರು ನಗರದ ಸೆಂಟ್ರಲ್ ಮಾರ್ಕೇಟ್ ನಲ್ಲಿರುವ  ತನ್ನ ಅಂಗಡಿಯಿಂದ ತೆಗೆದುಕೊಂಡು ಹೋಗಿರುತ್ತಾರೆ. ಆದರೆ 4 ತಿಂಗಳು ಕಳೆದರು, ತನಕ ಮಾತು ಕೊಟ್ಟಂತೆ ಬಾಡಿಗೆಯನ್ನಾಗಲಿ, ಕಾರನ್ನಾಗಲಿ ವಾಪಾಸು ತಂದು ಕೊಟ್ಟಿರುವುದಿಲ್ಲ. ಅಲ್ಲದೇ  ಮೊಬೈಲ್ ದೂರವಾಣಿಯಲ್ಲಿ ಮಾತನಾಡಿದಾಗ ಇಂದು ಕೊಡುತ್ತೇನೆ, ನಾಳೆ ಕೊಡುತ್ತೇನೆ ಎಂಬುದಾಗಿ ಹೇಳುತ್ತಾ ಕಾಲ ಕಳೆಯುತ್ತಿದ್ದು, ಇದರಿಂದ ತಿಂಗಳಿಗೆ 35,000/- ರೂ ಬಾಡಿಗೆ ಕೊಡುವುದಾಗಿ ನಂಬಿಸಿ, ಬಾಡಿಗೆಯನ್ನಾಗಲಿ, ಫಿರ್ಯಾದಿದಾರರ ಕಾರನ್ನಾಗಲಿ ವಾಪಾಸು ಕೊಡದೇ, ಮೋಸ ಮಾಡಿರುತ್ತಾರೆ.

 

3.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:30-03-2014 ರಂದು ಮಧ್ಯಾಹ್ನ 14-00 ಗಂಟೆಗೆ ಮಂಗಳೂರು ತಾಲೂಕಿನ, ಬಜಪೆ ಗ್ರಾಮದ ಭಟ್ರಕೆರೆ ಎಂಬಲ್ಲಿ ಬಜಪೆ-ಕಟೀಲು ಡಾಮಾರು ರಸ್ತೆಯಲ್ಲಿ ಬಜಪೆ ಕಡೆಯಿಂದ ಕಟೀಲು ಕಡೆಗೆ ಫಿರ್ಯಾದಿದಾರರಾದ ಶ್ರೀ ಸಿರಾಜ್ ರವರು ಮೋಟಾರು ಸೈಕಲ್ ನಂ: ಕೆಎ 19 ಇಹೆಚ್ 9221 ನೇದರ ಹಿಂದೆ ಕುಳಿತು ಕಟೀಲು ಕಡೆಗೆ ಹೋಗುತ್ತಿದ್ದಾಗ, ಅವರ ಎದುರುಗಡೆಯಿಂದ ವೇಗನರ್ ಕಾರು ನಂ: ಕೆಎ 19 ಎಂಬಿ 6391 ನೇದರ ಚಾಲಕ ತನ್ನ ಬಾಬ್ತು ಕಾರನ್ನು ಬಹಳ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಚಿಕ್ಕಪ್ಪ ಇಕ್ಬಾಲ್ ರವರು ಚಲಾಯಿಸುತ್ತಿದ್ದ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಮತ್ತು ಅವರ ಚಿಕ್ಕಪ್ಪ ರಸ್ತೆಗೆ ಬಿದ್ದು, ಫಿರ್ಯಾದಿದಾರರ ಕುತ್ತಿಗೆಯ ಹಿಂಬದಿಗೆ, ಎರಡೂ ಭುಜಗಳಿಗೆ , ಎಡಕಾಲಿನ ಹೆಬ್ಬೆರಳಿಗೆ  ತೀವ್ರ ತರದ ಗಾಯಗಳಾಗಿದ್ದು, ಚಿಕಿತ್ಸೆಯ ಕುರಿತು ಮಂಗಳೂರು ಕೆ.ಎಂ.ಸಿ. ಆಸ್ಪತ್ತೆಯಲ್ಲಿ ದಾಖಲಾಗಿರುತ್ತಾರೆ.

 

4.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಜಿ.ಸಂತೋಷ್ ಕುಮಾರ್ , ಸೆಕ್ಟರ್ ಮ್ಯಾಜಿಸ್ಟ್ರೇಟ್ , 202/3 ಉತ್ತರ, ಮಂಗಳೂರು ಇವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 30-03-2014 ರಂದು ಸಂಜೆ 3-00 ಗಂಟೆಯಿಂದ 5-00 ಗಂಟೆಯವರೆಗೆ ಮಂಗಳೂರು ತಾಲೂಕಿನ ಬಜಪೆ ಪೊಲೀಸ್ ಠಾಣಾ ಸರಹದ್ದಾದ ಎಡಪದವಿನಿಂದ , ಕೈಕಂಬ, ಗುರುಪುರದ ವರೆಗೆ ಬಿ.ಜೆ.ಪಿ ವತಿಯಿಂದ ಪಾದಯಾತ್ರೆ ಮತ್ತು ಪ್ರಚಾರ ಭಾಷಣ ಇದ್ದು, ಪಾದಯಾತ್ರೆಯಲ್ಲಿ ಪಾಲ್ಗೊಂಡ ಬಿ.ಜೆ.ಪಿ. ಕಾರ್ಯಕರ್ತರು ಟೀಶರ್ಟ್ ನಲ್ಲಿ ನರೇಂದ್ರ ಮೋದಿಯವರ ಭಾವಚಿತ್ರ ಹಾಗೂ ಟೋಪಿ ಮತ್ತು ಶಾಲುಗಳಲ್ಲಿ  ಪಕ್ಷದ ಚಿಹ್ನೆ ಮುದ್ರಿಸಿ, ಪ್ರದರ್ಶಿಸಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ತಕ್ಷೀರು ಎಸಗಿರುತ್ತಾರೆ.

 

5.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 17.03.2014 ರಂದು ಪಿರ್ಯಾದಿದಾರರಾದ ಶ್ರೀ ಜನಾರ್ಧನ ಮೊಯಿಲಿ ರವರು  ರಂದು  ವಾಮಂಜೂರು   ಜಂಕ್ಷನ್ಬಳಿ  ನಿಂತುಕೊಂಡಿದ್ದ ಸಮಯ ಸುಮಾರು 10:30 ಗಂಟೆಗೆ ಪಿರ್ಯಾದಿದಾರರಿಗೆ ಪರಿಚಯವಿರುವ ಸದಾಶಿವ ಶೆಟ್ಟಿ  ಎಂಬವರು  ಬಂದು ನನಗೆ ಕೊಡಲಿರುವ ಹಣ ಕೊಡು  ಎಂದು  ಕೇಳಿದಾಗ ಪಿರ್ಯಾದಿದಾರರು  ಈಗ ನನ್ನಲ್ಲಿ  ಹಣ ಇಲ್ಲ ಎಂದು  ಹೇಳಿದಾಗ, ಸದಾಶಿವ ಶೆಟ್ಟಿ  ಎಂಬವರು  ಈಗಲೇ  ನನಗೆ ಹಣ ಬೇಕು ಎಂದು  ಹೇಳಿ  ಅಲ್ಲಿಯೇ  ಹತ್ತಿರದಲ್ಲಿರುವ  ಮರದ ಸೋಂಟೆಯಿಂದ ತಲೆಗೆ ಹಲ್ಲೆ ಮಾಡಿದ್ದು , ನಂತರ ಪಿರ್ಯಾದಿದಾರರ  ಅಣ್ಣ  ವೆನ್ಲಾಕ್ಆಸ್ಪತ್ರೆಗೆ ಕರೆದುಕೊಂಡು  ಹೋಗಿ ಚಿಕಿತ್ಸೆಗೆ ದಾಖಲಿಸಿದ್ದಾಗಿದೆ.

 

6.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 30.03.2014 ರಂದು ರಾತ್ರಿ 10.00 ಗಂಟೆಗೆ ಪಿರ್ಯಾಧಿದಾರರಾದ ಶ್ರೀ ಮಿತ್ರದಾಸ್ ರವರು ಕಂಕನಾಡಿ ಪಕ್ಕಲಡ್ಕ  ಬಜಾಲ್‌‌ ಎಂಬಲ್ಲಿ ತನ್ನ ಮನೆಯ  ಎದುರು ಅಂಗಡಿಯಲ್ಲಿ   ನಿಂತು ಸಾಮಾನು ಪಡೆಯುತ್ತಿದ್ದ ಸಮಯ ಆರೋಪಿಗಳಾದ ಜಗದೀಶ್‌‌, ಭರತೇಶ್‌‌, ಚರಣ್‌‌ ಮತ್ತು ಇನ್ನೊಬ್ಬ  ಎರಡು ಬೈಕ್‌‌ನಲ್ಲಿ ಪಿರ್ಯಾಧಿದಾರರ ಬಳಿ ಬಂದು  ನಿನ್ನಲ್ಲಿ ಮಾತನಾಡಲಿಕ್ಕಿದೆ ಎಂದು ಹೇಳಿ ಆರೋಪಿ ಜಗದೀಶ್‌‌ ಎಂಬಾತನು  ಬೈಕ್ನಲ್ಲಿ ಪಿರ್ಯಾದಿದಾರರನ್ನು  ಕುಳ್ಳಿರಿಸಿಕೊಂಡು  ಇನ್ನೊಂದು ಬೈಕ್ನಲ್ಲಿ ಇತರ ಮೂರು ಮಂದಿ ಕುಳಿತುಕೊಂಡು  ಪಿರ್ಯಾದಿದಾರರನ್ನು  ಎಕ್ಕೂರು ಮೈದಾನಕ್ಕೆ ಕರೆದುಕೊಂಡು ಹೋಗಿ  ಅಲ್ಲಿ ಬೈಕ್ನ್ನು ನಿಲ್ಲಿಸಿ ಎಲ್ಲಾ ಆರೋಪಿಗಳು ಸೇರಿ  ಅವಾಚ್ಯ ಶಬ್ದಗಳಿಂದ ಬೈದು, ಫೈಜ್‌‌ ಮತ್ತು ಅನ್ವರ್‌‌ ಎಲ್ಲಿದ್ದಾರೆಂದು ಹೇಳು ಇಲ್ಲದಿದ್ದರೆ  ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ  ಎಂದು ಜೀವಬೆದರಿಕೆ ಹಾಕಿ ಕೈಯಿಂದ ಹೊಡೆದು ಕಾಲಿನಿಂದ ತುಳಿದು ಹಲ್ಲೆ ನಡೆಸಿರುವುದಾಗಿದೆ.

 

7.ಕಾವೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು ಪಡುಕೋಡಿ ಗ್ರಾಮದ ಉರುಂದಾಡಿ ಗುಡ್ಡೆ ಭಜನಾ ಮಂದಿರದ ಬಳಿ  ಪಿರ್ಯಾದುದಾರರಾದ ಶ್ರೀ ತಮ್ಶಿರ್ ರು ದಿನಾಂಕ  28-03-2014 ರಂದು ಸಂಜೆ 04-00 ಗಂಟೆ ಸಮಯ ತನ್ನ ಬಾಬ್ತು ಕೆಎ-51-3612ನೇಯ ಲಾರಿಯನ್ನು ಚಲಾಯಿಸಿಕೊಂಡು  ಬರುತ್ತಿದ್ದು ರಸ್ತೆಗೆ ಡಾಮರಿಕರಣ ನಡೆಯುತ್ತಿದ್ದುದರಿಂದ ಲಾರಿಯನ್ನು ನಿಲ್ಲಿಸಿದ್ದು ಆಗ ಹಿಂದಿನಿಂದ ಮೋಟಾರ್ ಸೈಕಲಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು  'ಗಾಡಿ ದಾಯೆ ಮೂಲ್ ಉಂತ್ತಾಯಿನಿ, ತಿರ್ತ್ ಜಪ್ಪು' ಎಂದು ಹೇಳಿ, ಕೈಯಿಂದ ಹೊಡೆದು ಅವರಲ್ಲಿ ಒಬ್ಬಾತನು ಕಲ್ಲಿನಿಂದ ಪಿರ್ಯಾದುದಾರರ ತಲೆಗೆ ಹೊಡೆದು ಗಾಯಗೊಳಿಸಿರುವುದಲ್ಲದೇ , ಲಾರಿಯ ಗ್ಲಾಸ್ ಗೆ  ಕಲ್ಲು ಹೊಡೆದು ಪುಡಿ ಮಾಡಿದಲ್ಲದೇ ಲಾರಿಯ ಸೇಫ್ ಗೆ ಕಲ್ಲಿನಿಂದ ಜಜ್ಜಿ ಜಖಂಗೊಳಿಸಿದ್ದು,ಇದರಿಂದ ಸುಮಾರು 10,000 ರೂ ನಷ್ಟವುಂಟು ಮಾಡಿರುತ್ತಾರೆ.

 

8.ಕಾವೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಕಾಂತ್ ಪಿ ಜೋಗ್ ಎಂಬವರು ದಿನಾಂಕ 30-03-2014ರಂದು ಮನೆಯಿಂದ ಕೊಂಚಾಡಿಗೆ ಹಾಲು ತರುವರೇ ಕೊಂಚಾಡಿ ದೇರೆಬೈಲು ಮಹಾಕಾಳಿ ದೇವಸ್ಥಾನದ ಬಳಿಯಲ್ಲಿ ರಸ್ತೆಯ ಅಂಚಿನಲ್ಲಿ ನಿಂತು ರಸ್ತೆ ದಾಟುವರೇ ಸಂಜೆ 06-30 ಗಂಟೆಗೆ ಮೋಟಾರ್ ಸೈಕಲ್ ನಂಬ್ರ ಕೆಎ 19-ಇಎಫ್-5855ನೇದನ್ನು ಅದರ ಸವಾರನು ಅತೀವೇಗ ಮತ್ತು ಅಜಾಗರೂಕತೆಯಿಂದ ಕುಂಟಿಕಾನ ಕಡೆಯಿಂದ ಕಾವೂರು ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದು, ರಸ್ತೆಯ ಅಂಚಿನಲ್ಲಿ ನಿಂತಿದ್ದ ಪಿರ್ಯಾದುದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು ಬಲ ಹಣೆಯ ಬಳಿ, ಕೆನ್ನೆಯ ಬಳಿ, ತುಟಿ ಬಳಿ ರಕ್ತಗಾಯವಾಗಿ .ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.

 

9.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಮಾನ್ ಸಿಂಗ್ ಸಿಸೋಡಿಯಾ (46) ತಂದೆ. ಚೋಕೆ ಸಿಂಗ್. ವಾಸ. ಮನೆ.ನಂಬ್ರ 254, ಲಕ್ಷೀನಗರ ಜನ್ಮ ಭೂಮಿ, ಲಿಂಕ್ ರೋಡ್ ಕೃಷ್ಣ ನಗರ ಪೋಸ್ಟ್ ಮಥುರಾ ಉತ್ತರಪ್ರದೇಶ ಎಂಬವರು  ತಾರಕ ಇಂಜಿನಿಯರಿಂಗ್ ರವರ ಕಂಪನಿಯ ಅರುಣ್ ಕುಮಾರ್  ರವರ ಜೊತೆಗೆ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದವರು. ದಿನಾಂಕ 31-03-2014 ರಂದು  ಕಂಪೆನಿಯ ಕಡೆಯಿಂದ ಎಸ್..ಜೆಡ್ ಓವರ್ ಬ್ರಿಡ್ಜ್ ಪೈಪ್ ಲೈನ್ ಸ್ಟ್ರಕ್ಚರ್ ಕೆಲಸ ನಡೆಯುವ ಪಣಂಬೂರು ಕೆ...ಸಿ.ಎಲ್. ಸರ್ಕಲ್ ಹತ್ತಿರ ಇತರ 10 ಜನ ಕೆಲಸಗಾರರು ಕೆಲಸ ಮಾಡುತ್ತಿದ್ದರು. ಸಮಯ ಸುಮಾರು ಸಂಜೆ 5-00 ಗಂಟೆಗೆ ಕೆ...ಸಿ.ಎಲ್ ಬಸ್ಸು ಸ್ಟಾಪ್ ಹೊರಗೆ ನಿಂತು ಕೆಲಸ ಮಾಡುತ್ತಿದ್ದವರನ್ನು ನೋಡಿಕೊಳ್ಳುತ್ತಿದ್ದರು. ಸಮಯ 17-00 ಗಂಟೆಗೆ ಕೂಳೂರು ಕಡೆಯಿಂದ ಲಾರಿಯೊಂದನ್ನು ಅದರ ಚಾಲಕ ಅತೀವೇಗ ಅಜಾಗರೂಕತೆಯಿಂದ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕಂಪನಿಯ ಕೆಲಸ ನಡೆಯುತ್ತಿದ್ದ ಎನ್.ಹೆಚ್.66 ಬದಿಯ ಕಡೆಗೆ ಬಂದು ಒಮ್ಮೆಲೇ ಬ್ರೇಕ್ ಹಾಕಿದ ಆಗ ಲಾರಿ ಅವನ ನಿಯಂತ್ರಣ ತಪ್ಪಿ ಬಸ್ಸು ಸ್ಟಾಪ್ ಬದಿಗೆ ಉರುಳಿ ಬಿತ್ತು. ಸಮಯ ಅಲ್ಲೇ ಪಕ್ಕದಲ್ಲಿದ್ದು ಪಿರ್ಯಾದಿದಾರರು ದೂರ ಓಡುವ ವೇಳೆಯಲ್ಲಿ ಲಾರಿಯು ಉರುಳಿ ಬಿದ್ದಾಗ ಅದರಲ್ಲಿದ್ದ ಪ್ಲೈವುಡ್ ಲೋಡ್ ಬಿಚ್ಚಿ ಕೆಳಗೆ ಬಿದ್ದಿದ್ದು ಅದರಲ್ಲಿ ಕೆಲವು ಪ್ಲೈವುಡ್ ನನ್ನ ಎಡಕಾಲಿನ ಕೋಲುಕಾಲಿಗೆ ಮೂಳೆ ಮುರಿತದ ಗಾಯ, ಎಡ ಕೆನ್ನೆಯ ಮೇಲೆ ತರಚಿದ ಚರ್ಮ ತೂತಾದ ಗಾಯಗಳಾಗಿರುತ್ತದೆ. ಹಾಗೂ ಕೆ...ಸಿ.ಎಲ್. ಬಸ್ಸು ಸ್ಟಾಪ್ ಬಳಿ ಬಂದು ನಿಂತಿದ್ದ ಒಬ್ಬರು ಗಂಡಸು ಹಾಗೂ ಮಹಿಳೆ ಲಾರಿಯಿಂದ ಬಿದ್ದ ಪ್ಲೈವುಡ್ ಲೋಡ್ ಅಡಿಗೆ ಸಿಲುಕಿಹಾಕಿಕೊಂಡಿದ್ದರು. ಅದಲ್ಲದೇ ಅಲ್ಲಿ ಇದ್ದ ಇಬ್ಬರು ಯುವಕರ ಪೈಕಿ ಒಬ್ಬನಿಗೆ ಕೂಡಾ ಪ್ಲೈವುಡ್ ಬಿದ್ದು ತಲೆಗೆ ಗಾಯಗಳಾಗಿರುತ್ತದೆ. ಪಿರ್ಯಾದಿದಾರರನ್ನು ಅಲ್ಲಿ ಸೇರಿದ್ದವರು ಎಬ್ಬಿಸಿರುತ್ತಾರೆ. ಆಗ ಲಾರಿಯ ನಂಬ್ರವನ್ನು ಪಿರ್ಯಾದಿದಾರರು ಸರಿಯಾಗಿ ನೋಡಿದ್ದು ಕೆಎಲ್ 48--6401 ಈಚರ್ ಲಾರಿ ಆಗಿತ್ತು. ಅದರ ಲೋಡ್ ಅಡಿಗೆ ಬಿದ್ದಿದ್ದ ಮಹಿಳೆ ಮತ್ತು ಗಂಡಸನ್ನು ಅಲ್ಲೇ ಸೇರಿದ್ದ ಜನರು ತೆಗೆಯಲು ಪ್ರಯತ್ನಿಸುತ್ತಿದ್ದರು. ಲೋಡ್ ಅಡಿಗೆ ಬಿದ್ದಿದ್ದ ಅವರ ದೇಹಗಳ ಭಾಗಗಳು, ತಲೆಯ ಭಾಗ ಹೊರಗಡೆಬಂದು ಜಜ್ಜಿ ಅಪ್ಪಚ್ಚಿಯಾಗಿ ದೂರಕ್ಕೆ ದೇಹದ ಭಾಗದ ತುಂಡುಗಳು ಎಸೆಯಲ್ಪಟ್ಟು  ಮೃತಪಟ್ಟಿದ್ದರು. ಹಾಗೂ ಸ್ಥಳದಲ್ಲಿ ಪ್ಲೈವುಡ್ ತಲೆಗೆ ಬಿದ್ದು ಗಾಯಗಳಾಗಿದ್ದ ಯುವಕನ್ನು ಕೂಡಾ ಸೇರಿದ್ದ ಜನರು ಎತ್ತಿ ಪಿರ್ಯಾದಿದಾರರನ್ನು ಹಾಗೂ ಮೃತದೇಹಗಳನ್ನು ಸ್ಥಳದಿಂದ ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಿರುತ್ತಾರೆ. ಪಿರ್ಯಾದಿದಾರರನ್ನು ಎಜೆ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಿರುತ್ತಾರೆ. ಅಪಘಾತದಿಂದ ಮೃತಪಟ್ಟವರುಗಳು ನಾಗಪ್ಪ ಮತ್ತು ಅವರ ಹೆಂಡತಿ ಕಸ್ತೂರಿ ಬಾಯಿ ಹಾಗೂ ತಲೆಗೆ ತ್ರೀವ್ರ ಗಾಯವಾಗಿದ್ದವರು ಪಕ್ರುದ್ದೀನ್ ಎಂಬುದಾಗಿರುತ್ತದೆ. ಈ ಘಟನೆಯು ರಾ.ಹೆ.66 ಕುದ್ರೆಮುಖ ಜಂಕ್ಷನ್ ಬಸ್ಸು ಸ್ಟಾಪ್ ಹತ್ತಿರ ಕೂಳೂರುನಿಂದ ಸುರತ್ಕಲ್ ಕಡೆಗೆ ಹೋಗುವ ರಾ.ಹೆ66 ಏಕ ಮುಖ ರಸ್ತೆಯಲ್ಲಿ ಆಗಿರುತ್ತದೆ. ಅಪಘಾತ ಗೊಳಿಸಿದ ಲಾರಿಯ ಚಾಲಕ ಮತ್ತು ಕ್ಲೀನರ್ ಗೆ ಕೂಡಾ ಗಾಯಗಳಾಗಿರುತ್ತದೆ. ಲಾರಿ ಚಾಲಕನ ಹೆಸರು ಸನ್ನಿ ಎಂಬುದಾಗಿರುತ್ತದೆ.

    

No comments:

Post a Comment