Friday, April 18, 2014

Daily Crime Reports 17-04-2014

ದೈನಂದಿನ ಅಪರಾದ ವರದಿ.

ದಿನಾಂಕ 17.04.201408:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮುಲ್ಕಿಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ    15.04.2014 ರಂದು   ಫಿರ್ಯಾದಿದಾರರಾದ  ಶ್ರೀ ಪಕ್ರುದ್ದೀನ್ ರಿಯಾಜ್  ಎಂಬವರು  ತನ್ನ ದೊಡ್ಟಪ್ಪನ  ಬಾಬ್ತು ಕಾರು ಕೆಎ 19 ಎಮ್  ಸಿ  6035ನೇ  ಇಕೋ ಕಾರಿನಲ್ಲಿ  ಮೂಡಬಿದ್ರೆ  ಕಡೆಗೆ  ತನ್ನ ದೊಡ್ಡಪ್ಪ  ಬಾಪುಂಜಿ  ಅವರ  ಮಗಳು  ಜುಬೈದಾ ಮತ್ತು ಮೊಮ್ಮಕ್ಕಳಾದ   ಮಹಮದ್  ಶಹರಾನ್  ,  ಶೇಖ್  ಇಸ್ಮಾಯಿಲ್ ಜಾಸಿರ್  ಜೊತೆ  ಕಾರಿನಲ್ಲಿ   ತೆರಳಿ  ಸಮಯ ಸುಮಾರು ಸಂಜೆ 4.15 ರ ವೇಳೆಗೆ  ಮಂಗಳೂರು ತಾಲೂಕು ಐಕಳ  ಗ್ರಾಮದ   ಐಕಳ  ಬಸ್ಸು ನಿಲ್ದಾಣದ  ತಲುಪುವಾಗ್ಗೆ ಎದುರುಕಡೆಯಿಂದ ಅಂದರೆ ಕಿನ್ನಿಗೋಳಿ ಕಡೆಯಿಂದ   ಮೂಡಬಿದ್ರೆ  ಕಡೆಗೆ   ರಾಜ್ಯ ಹೆದ್ದಾರಿಯಲ್ಲಿ  ಕೆಎ 19  ಬಿ   7287ನೇ   ಆರೋಪಿ ಟಿಪ್ಪರ್ ಲಾರಿ ಚಾಲಕ ಮೋಹನ್ ಎಂಬಾತನು ಅತೀ ವೇಗ   ಮತ್ತು ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು   ಎದುರುಗಡೆಯಿಂದ   ಫಿರ್ಯಾದಿದಾರರು ಚಲಾಯಿಸಿಕೊಂಡು ಬರುತ್ತಿದ್ದ   ಕೆಎ 19 ಎಮ್  ಸಿ  6035ನೇ  ಕಾರಿಗೆ  ಢಿಕ್ಕಿ ಪಡಿಸಿದ  ಪರಿಣಾಮ   ಕಾರಿನಲ್ಲಿದ್ದ  ಫಿರ್ಯಾದಿದಾರರ ಎದೆಗೆ   ಬಲಕಾಲಿನ  ಮೊಣಗಂಟಿಗೆ  ಬಲಕೈ ಗೆ  ಗುದ್ದಿದ  ನೋವುಂಟಾಗಿದ್ದು   ಬಾಪುಞ ರವರಿಗೆ   ತಲೆಗೆ  ಹಣೆಗೆ  ಎಡಕೈ  ಬೆರಳಿಗೆ  ರಕ್ತಗಾಯ ಎದೆಗೆ  ಗುದ್ದಿದ ನೋವುಂಟಾಗಿದ್ದು  ಉಳಿದ  ಜುಬೈದಾ  ಮಹಮದ್ ಶಹರಾನ್  ಶೇಖ್  ಇಸ್ಮಾಯಿಲ್   ಜಾಸಿರ್  ಗೆ  ಸಣ್ಣ  ಪುಟ್ಟ   ಗುದ್ದಿದ  ಗಾಯವಾಗಿದ್ದು ಕಿನ್ನಿಗೋಳಿ ಕನ್ಸೆಟ್ಟಾ  ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆದುಕೊಂಡಿದ್ದು ಈ ಪೈಕಿ   ಫಿರ್ಯಾದಿದಾರರಾದ  ಫಕ್ರುದ್ದೀನ್  ರಿಯಾಜ್  ಮತ್ತು ಬಾಪುಞ ರವರು   ಹೆಚ್ಚಿನ ಚಿಕಿತ್ಸೆ  ಬಗ್ಗೆ  ಮಂಗಳೂರು ಯುನಿಟಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.

 

2.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ಸುಕೇಶ್ ಕುಮಾರ್ ರವರು ಸುವರ್ಣ ನ್ಯೂಸ್ 24X7ರ ಮಂಗಳೂರು ವಿಭಾಗದ ಸುದ್ದಿ ವರದಿಗಾರರಾಗಿರುತ್ತಾರೆ. ಹಿಂದುತ್ವ ಡಾಟ್ ಕಾಂ ಎಂಬ ಹೆಸರಿನಲ್ಲಿ ಸಂಘಟನೆ ಹಾಗೂ ಕೆಲವು ವ್ಯಕ್ತಿಗಳು ಫಿರ್ಯಾದುದಾರರ ಕುರಿತು ಕೀಳು ಮಟ್ಟದ ಹೀನಾಯವಾದ ಆಕ್ಷೇಪಾರ್ಹ ಮಾನಹಾನಿಕರ ಫೋಟೋ ಹಾಗೂ ಬರಹಗಳನ್ನು ಫೇಸ್ ಬುಕ್ ಜಾಲತಾಣ ಹಾಗೂ ವಾಟ್ಸ್ ಆಪ್ ನಲ್ಲಿ ಪ್ರಕಟಿಸಿದ್ದು, ಫಿರ್ಯಾದುದಾರರ ಹಾಗೂ ಸಂಸ್ಥೆಯ ಗೌರವ ಹಾಗೂ ಘನತೆಗೆ ಕುಂದುಂಟು ಮಾಡಿದ್ದು, ಇದಕ್ಕೆ ಸಂಬಂದಿಸಿ ಕೆಲವರು ತನ್ನನ್ನು ಮುಗಿಸುವ, ಅದಕ್ಕೆ ಪ್ರೇರೇಪಣೆ ನೀಡುವ ಉದ್ರೇಕಕಾರಿ ಹಾಗೂ ಜೀವಬೆದರಿಕೆ ಒಡ್ಡಿರುತ್ತಾರೆ ಎಂಬುದಾಗಿ ಪಿರ್ಯಾದಿ ನೀಡಿರುವುದಾಗಿದೆ.

 

3.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 16-04-2014 ರಂದು ಪಿರ್ಯಾದಿದಾರರಾದ ಶ್ರೀ ವಿನ್ಸೆಂಟ್ ಕರ್ಡೊಜಾ ರವರು ಮನೆಯಿಂದ ತನ್ನ ಬೊಲೆರೋ ವಾಹನ ನಂ: ಕೆಎ 19 ಎಂ ಡಿ5138  ನೇದರಲ್ಲಿ ಹೋಗುತ್ತಿದ್ದವನು ಮಂಗಳೂರು ತಾಲೂಕು, ಮೂಳೂರು ಗ್ರಾಮದ, ಗುರುಪುರ ಜಂಕ್ಷನ್ ಬಳಿ ವಾಹನ ಸಂಚಾರಕ್ಕೆ ತಡೆಯುಂಟಾದುದ್ದನ್ನು ಗಮನಿಸಿ ತನ್ನಿಂದ ಮುಂದೆ ಹೋಗುತ್ತಿದ್ದ ಮೋಟಾರು ಸೈಕಲ್ ಸವಾರರು ತನ್ನ ಯುಕೆ 08 ಎನ್  7308 ನಂಬ್ರದ ಮೋಟಾರು ಸೈಕಲನ್ನು ನಿಲ್ಲಿಸಿದರುಅದನ್ನು ಕಂಡು ಅವರ ಹಿಂದೆ ಪಿರ್ಯಾದಿದಾರರು ವಾಹನವನ್ನು ನಿಲ್ಲಿಸಿದ್ದು, ಅದೇ ಸಮಯಕ್ಕೆ ಅಂದರೆ 15-30 ಗಂಟೆಗೆ ಹಿಂದಿನಿಂದ ಅಂದರೆ, ಕೈಕಂಬ ಕಡೆಯಿಂದ  ಕೆಎ 21   3395 ನಂಬ್ರದ ಟಿಪ್ಪರನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಪಿರ್ಯಾದಿದಾರರ ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ವಾಹನದ ಬಂಪರ್ ಗೆ ಡಿಕ್ಕಿ ಹೊಡೆದು, ಮುಂದಕ್ಕೆ ಹೋಗಿ ಮುಂದೆ ನಿಂತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಅದರ ಪರಿಣಾಮ  ಬೈಕಿನಲ್ಲಿದ್ದ ಬೈಕ್ ಸವಾರ ಒಂದು ಮಹಿಳೆ ಮತ್ತು ಮಗು ರಸ್ತೆಯ ಮೇಲೆ ಬಿದ್ದಿದ್ದು, ಮಗು ಹಾಗೂ ಮಹಿಳೆಯ ಮೇಲೆ ಟಿಪ್ಪರ್ ಲಾರಿ ಹರಿದು ಮುಂದಕ್ಕೆ ಹೋಗಿ ರಸ್ತೆಯ ಬದಿಯಲ್ಲಿ ನಿಂತಿದ್ದ ತರುಣನೊಬ್ಬನಿಗೂ ಡಿಕ್ಕಿ ಹೊಡೆದು, ಆತನ ಮೇಲೆಯೂ ಹರಿದು ಹೋಯಿತುಇದರಿಂದಾಗಿ, ಮಗು ಹರ್ಷಿತ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಬೈಕ್ ನಲ್ಲಿದ್ದ ಮಹಿಳೆ ಜಸ್ವಿಂದರ್ ಕೌರ್ ಹಾಗೂ ರಸ್ತೆ ಬದಿಯಲ್ಲಿ ನಿಂತಿದ್ದ ತರುಣ ತೀವ್ರ ತರದ ಗಾಯಗೊಂಡದ್ದಲ್ಲದೇ ಬೈಕ್ ಸವಾರ ದೀಪಕ್ ರವರಿಗೂ ಗಾಯಗಳಾಗಿದ್ದವುಅವರುಗಳನ್ನು ಚಿಕಿತ್ಸೆಯ ಬಗ್ಗೆ ಅಲ್ಲಿದ್ದವರು ಮಂಗಳೂರು ಕಡೆಗೆ ಕರೆದುಕೊಂಡು ಹೋಗಿದ್ದು, ಅವರ ಪೈಕಿ ರಸ್ತೆ ಬದಿಯಲ್ಲಿ ನಿಂತಿದ್ದ ತರುಣನು ಮೃತಪಟ್ಟಿದ್ದು, ಬೈಕಿನಲ್ಲಿದ್ದ ಮಹಿಳೆ ಜಸ್ವಿಂದರ್ ಕೌರ್ ಹಾಗೂ ಬೈಕ ಸವಾರ ದೀಪಕ್ ಎ.ಜೆ. ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯಲ್ಲಿರುವುದಾಗಿದೆ.

 

4.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಆರ್.ಎಸ್. ಜಾಕೀರ್ ರವರ ಮೊಬೈಲ್ ದ ವಾಟ್ಸಪ್ ತಂತ್ರಾಂಶಕ್ಕೆ ಜಯಕಿರಣ ದಿನಪತ್ರಿಕೆಯಲ್ಲಿ ದಿನಾಂಕ: 16-04-2014 ರಂದು ಪ್ರಕಟವಾದಂತೆ ಮುಸ್ಲಿಮರ ಬೆಂಬಲ ನನಗೆ ಅಗತ್ಯವಿಲ್ಲ ಪೂಜಾರಿ ಎಂಬ ತಲೆ ಬರಹದ ಅಡಿಯಲ್ಲಿ  ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ಬಿ. ಜನಾರ್ಧನ ಪೂಜಾರಿಯವರ ಭಾವಚಿತ್ರದೊಂದಿಗೆ ಮಾಹಿತಿಗಳನ್ನು ಕಳುಹಿಸಿಕೊಟ್ಟಿದ್ದು ಇಂದಿನ ಮೂಲ ಜಯಕಿರನ ಪತ್ರಿಕೆಯಲ್ಲಿ ಇಂತಹ ಪ್ರಕಟಣೆಗಳು ಯಾವುದೂ ಬಾರದಿದ್ದು, ಇದನ್ನು ಲೋಕಸಭಾ ಚುನಾವಣೆಯಲ್ಲಿ ಸುಳ್ಳು ವದಂತಿಗಳನ್ನು ಹರಡಿಸಿ ಮುಸ್ಲಿಂ ಭಾಂದವರ ಮತಗಳು ಬೀಳದಂತೆ ಮಾಡುವ ದುರುದ್ದೇಶದಿಂದ ಎಲೆಕ್ಟ್ರಾನಿಕ್ಸ್ ತಂತ್ರಾಂಶದ ಮೂಲಕ ಮೊಬೈಲ್ ಹೊಂದಿದ ವ್ಯಕ್ತಿಯು ಈ ಮಾಹಿತಿಯನ್ನು ನನ್ನಂತೆ ಹಲವು ಜನರಿಗೆ ಹರಡಿಸಿರುವುದಾಗಿದೆ.

No comments:

Post a Comment