Monday, April 14, 2014

Daily Crime Reports 12-04-2014

ದೈನಂದಿನ ಅಪರಾದ ವರದಿ.

ದಿನಾಂಕ 12.04.201411:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

4

ವಂಚನೆ ಪ್ರಕರಣ        

:

1

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10/04/2014 ರಂದು  ಮದ್ಯಾಹ್ನ ಸುಮಾರು 12:30 ಗಂಟೆಗೆ ಕಾರು ನಂಬ್ರ KA-19-MB-4350 ನ್ನು ಅದರ ಚಾಲಕಿ ಹಂಪನಕಟ್ಟೆ ಕಡೆಯಿಂದ ಆವೇರಿ ಜಂಕ್ಷನ್ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಮಂಗಳೂರು ಬೈಕರ್ಸ್  ಶೊರೂಮ್ ಎದುರು ರಸ್ತೆ ಬದಿ ನಡೆದುಕೊಂಢು ಹೋಗುತ್ತಿದ್ದ ಶ್ರೀ ಗೋಪಾಲ ಎಂಬುವರಿಗೆ ಡಿಕ್ಕಿ ಮಾಡಿದ ಪರಿಣಾಮ ಗೋಪಾಲ ರಸ್ತೆಗೆ ಬಿದ್ದು ಬಲತೊಡೆಗೆ ಗಂಭಿರ ಸ್ವರೂಪದ ಗಾಯ ಮತ್ತು ತಲೆಗೆ ರಕ್ತ ಗಾಯಗೊಂಡು ವೇನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ.ಕಾರು ಚಾಲಕಿ ಅಪಘಾತ ಸ್ಥಳದಿಂದ ಕಾರಿನೊಂದಿಗೆ ಪರಾರಿಯಾಗಿರುತ್ತಾರೆ. 

 

2.ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-04-2014 ರಂದು ರಾತ್ರಿ 8:00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಅಬ್ದುಲ್ ಲತೀಫ್ರವರು ಅವರ ಮಗಳು ಬೀಪಾತುಮ್ಮ ಸರ್ವೀನಾ, ತಂಗಿ ಜುಬೈದಾ, ಆಕೆಯ ಮಗ ಸಲ್ಮಾನ್ ರವರೊಂದಿಗೆ ಅಂಬ್ಲಮೊಗರುವಿನಿಂದ ಮುಡಿಪು ಕಡೆಗೆ ಆಟೋರಿಕ್ಷಾ ನಂಬ್ರ ಕೆಎ-19-ಸಿ-1490 ನೇದರಲ್ಲಿ ಹೋಗುತ್ತಿರುವಾಗ ಬಂಟ್ವಾಳ ತಾಲೂಕು ಪಜೀರು ಗ್ರಾಮದ ಕಂಬ್ಲಪದವು ಇನ್ಫೋಸಿಸ್ ಬಳಿ ತಲುಪುತ್ತಿದ್ದಂತೆ ರಿಕ್ಷಾ ಚಾಲಕ ಬಶೀರ್ ಎಂಬಾತನು ಸದ್ರಿ ಆಟೋರಿಕ್ಷಾವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ರಿಕ್ಷಾವು ಪಲ್ಟಿಯಾಗಿ ಬಿದ್ದು, ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿದಾರರಿಗೆ ಹಾಗೂ ಇತರರಿಗೆ ರಕ್ತಗಾಯವಾಗಿದ್ದು, ಅಲ್ಲಿ ಸೇರಿದ ಸಾರ್ವಜನಿಕರು ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

 

3.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05-04-2014 ರಂದು ಫಿರ್ಯಾದುದಾರರು ಮುಖ್ಯ ಪ್ರಬಂದಕರಾಗಿ ಕಾರ್ಯ ನಿರ್ವಹಿಸುತ್ತಿರುವ ಮಂಗಳೂರು ನಗರದ ಬಂದರು ರಸ್ತೆಯಲ್ಲಿರುವ ಎಸ್.ಬಿ.ಐ ಬ್ಯಾಂಕ್ ಶಾಖೆಗೆ ಬೆಂಗಳೂರು ಯಲಹಂಕದ ಬ್ಯಾಂಕ್ ಆಫ್ ಬರೋಡಾ ಎಂಬ ಬ್ಯಾಂಕ್ ನಿಂದ ಶಿವಮೊಗ್ಗ ಎಸ್.ಬಿ.ಐ ಬ್ಯಾಂಕ್ ಶಾಖೆಯಲ್ಲಿ ಬ್ಯಾಂಕ್ ಖಾತೆ ನಂಬ್ರ 10624112816 ಶಾಂತಲಾ ಸ್ಪಿಯರೋಕಾಸ್ಟ್ (ಪ್ರೈ)ಲಿ. ಚೆಕ್ ನಂಬ್ರ 211698 ರೂ..7,30,000-00  ದಿನಾಂಕ: 22-03-2014 ಅನುಜ್ ಉಮಾಶಂಕರ್ ವರ್ಮಾ ಎಂಬವರ ಹೆಸರಿನ ಚೆಕ್ಕನ್ನು ಪರಿಶೀಲನೆ ಮಾಡಿ ನಗದೀಕರಣ ಮಾಡುವ ಬಗ್ಗೆ ಕ್ಲೀಯರಿಂಗ್ ಕೇಳಿದ ಪ್ರಕಾರ ಫಿರ್ಯಾದಿದಾರರಾದ ಶ್ರೀ ಗೋಕುಲ್ ದಾಸ್ ಶೆಣೈ ರವರು ಆನ್ ಲೈನ್ ಮೂಲಕ ಸದ್ರಿ ಚೆಕ್ ಮತ್ತು ಅದರಲ್ಲಿ ಕಂಡುಬರುವ ಶಾಂತಲಾ ಸ್ಪಿಯರೋಕಾಸ್ಟ್ (ಪ್ರೈ)ಲಿ ಸಹಿಯನ್ನು ಪರಿಶೀಲನೆ ಮಾಡಿ ಬಳಿಕ (ತೀರುವಳಿ ಬಗ್ಗೆ) ಕ್ಲಿಯರಿಂಗ್ ಮಾಡಲು ಬ್ಯಾಂಕ್ ಆಫ್ ಬರೋಡ ಯಲಹಂಕ ಶಾಖೆಗೆ ಹಣ ಒದಗಿಸಿದ ಪ್ರಕಾರ ಸದ್ರಿ ಮೊಬಲಗು ಮೇಲಿನ ಚೆಕ್ ನಲ್ಲಿ ನಮೂದಿಸಿದ ಅನುಜ್ ಉಮಾಶಂಕರ್ ವರ್ಮಾ ಎಂಬ ವ್ಯಕ್ತಿ ಹೊಂದಿದ್ದ ಬ್ಯಾಂಕ್ ಆಫ್ ಬರೋಡ ಥಾಣೆ ಶಾಖೆಯ ಬ್ಯಾಂಕ್ ಖಾತೆ ನಂಬ್ರ04100100016143 ನೇದಕ್ಕೆ ಬ್ಯಾಂಕ್ ಆಫ್ ಬರೋಡ ಯಲಹಂಕ ಶಾಖೆಯ ಮುಖಾಂತರ ಜಮಾ ಆಗಿರುವುದಾಗಿಅದೇ ದಿನ ಶಿವಮೊಗ್ಗದ ಎಸ್.ಬಿ..ಶಾಖೆಯಲ್ಲಿನ ಖಾತೆ ದಾರರಾದ ಶಾಂತಲಾ ಸ್ಪಿಯರೋಕಾಸ್ಟ್ (ಪ್ರೈ)ಲಿ ನ ಅಕೌಂಟ್ ಮ್ಯಾನೇಜರ್ ರವರು ಈ ಮಾಹಿತಿ ತಿಳಿದು ಶಿವಮೊಗ್ಗ ಬ್ಯಾಂಕ್ ಶಾಖೆಗೆ ಹೋಗಿ ಚೆಕ್ ಗೆ ಸಂಬಂಧಪಟ್ಟಂತೆ ವಿಚಾರ ಮಾಡಿದಾಗ ಸದ್ರಿ ಶಾಂತಲಾ ಸ್ಪಿಯರೋಕಾಸ್ಟ್ (ಪ್ರೈ)ಲಿನವರು ಶಿವಮೊಗ್ಗ ಬ್ಯಾಂಕ್ ಶಾಖೆಯಿಂದ ನೀಡಿದ ಮೇಲೆ ಹೇಳಿದ ಚೆಕ್ ನಂಬ್ರ 211698 ನ್ನು ಯಾರಿಗೂ ಕೊಟ್ಟಿಲ್ಲ ಎಂದು, ಯಾರೋ ಸದ್ರಿ ಚೆಕ್ ನ್ನು ನಕಲಿಯಾಗಿ ಸೃಷ್ಟಿಸಿ ರೂ.7,30,000-00 ನ್ನು ತಮ್ಮ ಬ್ಯಾಂಕ್ ಖಾತೆಯಿಂದ ಬ್ಯಾಂಕ್ ಆಫ್ ಬರೋಡ ಯಲಹಂಕ ಶಾಖೆ ಮುಖಾಂತರ ಅನುಜ್ ಉಮಾಶಂಕರ್ ವರ್ಮಾ ಎಂಬ ವ್ಯಕ್ತಿ ನಕಲಿ ಚೆಕ್ ನ್ನು ಸೃಷ್ಟಿಸಿ ಅದು ನಕಲಿ ದಾಖಲೆ  ಎಂದು ತಿಳಿದು ಬ್ಯಾಂಕ್ ಆಫ್ ಬರೋಡಾ, ಯಲಹಂಕ ಶಾಖೆಗೆ ನಗಧೀಕರಣಕ್ಕೆ ಹಾಕಿ ತನ್ನ ಬ್ಯಾಂಕ್ ಖಾತೆಗೆ ಹಣ ಜಮಾ ಗೊಳಿಸುವಂತೆ ಮಾಡಿ ಹಣವನ್ನು ಲಪಟಾಯಿಸಿ ತಮಗೆ ಮತ್ತು ಬ್ಯಾಂಕ್ ಗೆ ಮೋಸ ಮಾಡಿದ್ದಾಗಿದೆ ಎಂದು ತಿಳಿದು ಬಂದಿರುತ್ತದೆ.

 

4.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-03-2014 ರಂದು 21-30  ಗಂಟೆಯಿಂದ ದಿನಾಂಕ 10-04-2014 ರಂದು   ಸಂಜೆ 8-00 ಗಂಟೆಯ ಮಧ್ಯಂತರದಲ್ಲಿ ಯಾರೋ ಕಳ್ಳರು ಫಿರ್ಯಾದುದಾರರಾದ ಶ್ರೀ ಮೊಹಮ್ಮದ್ ಫಯಾಜ್ ರವರ ಆರ್.ಸಿ ಮಾಲಕತ್ವದ 2006 ನೇ ಮಾಡೆಲ್ ನ ಕಪ್ಪು ಬಣ್ಣದ KA 19 V 9032 ನೇ ನೋಂದಣಿ ಸಂಖ್ಯೆಯ ಅಂದಾಜು ರೂ 14,000/- ಬೆಲೆ ಬಾಳುವ TVS STAR CITY ದ್ವಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

5.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11-04-2014 ರಂದು 22-00 ಗಂಟೆಗೆ ಮಂಗಳೂರು ತಾಲೂಕು, ಪೆರ್ಮನ್ನೂರು ಗ್ರಾಮದ ಕೆರೆಬೈಲು , ಕೊರಗಜ್ಜನ ಕಟ್ಟೆಯ ಮೇಲ್ಗಡೆ ಸಾರ್ವಜನಿಕ ರಸ್ತೆ ಬದಿಯಲ್ಲಿ ಪಿರ್ಯಾದುದಾರರಾದ ವಿಘ್ನೇಶ್ ರಾವ್ ರವರು ತನ್ನ ಸ್ನೇಹಿತರಾದ ಮಹಮ್ಮದ್ಶರೀಫ್‌, ಪ್ರತೀಕ್ಷ, ನೌಶಾದ್‌, ತೌಶೀಫ್‌, ಎಂಬವರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗೆ ಆರೋಪಿಗಳಾದ ಪವಿ @ ಪ್ರವಿತ್ರ, ಪುಷ್ಪರಾಜ್‌, ಪ್ರಿತೇಶ್‌, ಪ್ರದೀಫ್‌, ದೇವದಾಸ್ಮೊದಲಾದವರು ಸೇರಿಕೊಂಡು ಪ್ರತೀಕ್ಷ್ಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆಯುತ್ತಿದ್ದಾಗ ಪಿರ್ಯಾದುದಾರರು ಹೊಡೆಯದಂತೆ ತಡೆಯಲು ಹೋದಾಗ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿಗೆ ಕೈಯಿಂದ ಹೊಡೆದು, ಕಾಲಿನಿಂದ ತುಳಿದು, ಕೈಯಲ್ಲಿದ್ದ ರೀಪಿನಿಂದ ಹೊಟ್ಟೆಗೆ ಕಾಲಿಗೆ ಹೊಡೆದರು. ಪಿರ್ಯಾದಿಯ ಬೊಬ್ಬೆ ಕೇಳಿ ಜನರು ಸೇರುವುದನ್ನು ಕಂಡ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಪಿರ್ಯಾದುದಾರರು  ತೊಕ್ಕೊಟ್ಟು ನೇತಾಜಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡು ಚಿಕಿತ್ಸೆಯಲ್ಲಿರುತ್ತಾರೆ.

 

6.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 11.04.2014 ರಂದು ಬೆಳಿಗ್ಗೆ 8.30 ಗಂಟೆಗೆ ಪಿರ್ಯಾಧಿದಾರರಾದ ಶ್ರೀ ತಾರನಾಥ್ ರವರು ಮತ್ತು ಅವರ ಮಗಳು ಚೈತ್ರಾ ಕೆಎ-19-ಎಂಬಿಒ-1611 ನೇ ಇಂಡಿಕಾ ಕಾರಿನಲ್ಲಿ ಮನೆಯಿಂದ ಹೊರಟು ಮಂಗಳೂರು ಕಡೆಗೆ ಬರುತ್ತಾ ರಾಹೆ 66 ರಲ್ಲಿ ಜಪ್ಪಿನಮೊಗರು ಯೆನಪೋಯ ಸ್ಕೂಲ್‌‌  ಬಳಿ ತಲುಪಿದಾಗ ಮುಂದುಗಡೆಯಿಂದ ಅಂದರೆ ಮಂಗಳೂರು ಕಡೆಯಿಂದ KSRTC ಬಸ್ಸು ನಂಬ್ರ: KL15-9959 ನೇದನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರು ಚಲಾಯಿಸುತ್ತಿದ್ದು ಕಾರಿನ ಬಲಭಾಗಕ್ಕೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾಧಿದಾರರ ಹಣೆಯ ಭಾಗಕ್ಕೆ ಹಾಗೂ ಅವರ ಮಗಳ ತಲೆಯ ಬಲಭಾಗದ ಹಣೆಗೆ  ತೀವ್ರತರದ ಗುದ್ದಿದ ಗಾಯವಾಗಿ  ಚಿಕಿತ್ಸೆ ಬಗ್ಗೆ ದೇರಳಕಟ್ಟೆ K.S ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.

 

7.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 10.04.2014 ರಂದು 13.45 ಗಂಟೆಗೆ ಪಿರ್ಯಾಧಿದಾರರಾದ ಶ್ರೀ ರಾಜೀವ್ ಅಲ್ಮೆಂಕಾರ್ ರವರು ತನ್ನ ಬಾಬ್ತು ಕೆಎ-19-ಇಸಿ-2047  ಮೋಟಾರ್‌‌ ಸೈಕಲನ್ನು ಚಲಾಯಿಸಿಕೊಂಡು  ಯೆಯ್ಯಾಡಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಾ  ರಾಮ ಭಜನಾ ಮಂದಿರದ ಎದುರುಗಡೆ ತಲುಪುತ್ತಿದ್ದಂತೆ  ಬೋಂದೆಲ್‌‌ ಕಡೆಯಿಂದ ಮಂಗಳೂರು ಕಡೆಗೆ  ಆರೋಪಿ ಕೆಎ19ಇಇ3597 ನೇ ಮೋಟಾರ್‌‌ ಸೈಕಲನ್ನು ಅದರ ಸವಾರ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಪಿರ್ಯಾಧಿದಾರರ ಮೋಟಾರ್‌‌ ಸೈಕಲ್ಗೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾಧಿದಾರರುಮೋಟಾರ್‌‌ ಸೈಕಲ್ಸಮೇತ ರಸ್ತೆಗೆ ಬಿದ್ದು ಅವರ ಕೋಲುಕಾಲು, ಪಾದದ ಸಂದಿಗೆ, ಗುದ್ದಿ ಜಖಂ ಆಗಿ ಸೊಂಟಕ್ಕೆ ತರಚಿದ ಗಾಯ ಉಂಟಾಗಿರುತ್ತದೆ,  ಅಲ್ಲದೇ ಮೂಳೆ ಮುರಿತದ ಗಾಯವಾಗಿರುತ್ತದೆ.

No comments:

Post a Comment