Thursday, April 10, 2014

Daily Crime Reports 10-04-2014

ದೈನಂದಿನ ಅಪರಾದ ವರದಿ.

ದಿನಾಂಕ 10.04.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

1

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

2

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

7

ವಂಚನೆ ಪ್ರಕರಣ       

:

1

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಬರ್ಕೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀಮತಿ ನಿನಾ ಶೆಟ್ಟಿ ರವರಿಂದ ಹಾಗೂ ಅವರ ಪತಿಯವರಿಂದ ಸಾಲವಾಗಿ ರೂ 15  ಲಕ್ಷವನ್ನು  ಒಂದನೇ ಆರೋಪಿತರಾದ Y .M. ಬ್ರೈಟ್ ಎಂಬುವರು ದಿನಾಂಕ 06-10-2012 ರಂದು ಪಿರ್ಯಾದಿದಾರರ ಬಾಬ್ತು ಬೆಸೆಂಟ್ ಕಾಲೇಜಿನ ನೆಲ ಮಾಳಿಗೆಯಲ್ಲಿರುವ ಕಛೇರಿಯಲ್ಲಿ ಸಾಲವಾಗಿ ಪಡಕೊಂಡು ಸಾಲಕ್ಕೆ ಭದ್ರಿಕೆಯ ರೂಪದಲ್ಲಿ ಮೂರು ಚೆಕ್ಕುಗಳನ್ನು  ಹಾಗೂ ಆರೋಪಿತರ ಬಾಬ್ತು ಎರಡು ಲಾರಿಗಳನ್ನು ಪಿರ್ಯಾದಿದಾರರಿಗೆ ನೀಡಿದ ಸಾಲ ಮರುಪಾವತಿ ಮಾಡಲು ಸಾದ್ಯವಾಗದಿದ್ದಲ್ಲಿ ಭದ್ರಿಕೆಗೆ ನೀಡಿದ ಎರಡು ಲಾರಿಗಳನ್ನು ತಮ್ಮ ಹೆಸರಿಗೆ ವರ್ಗಾಹಿಸಿಕೊಳ್ಳುವಂತೆ ಸಂಭಂದಪಟ್ಟ ಕಾಗದ ಪತ್ರಗಳಿಗೆ ಸಹಿ ಮಾಡಿ ನೀಡಿದ್ದು ಹಾಗೂ ಬಗ್ಗೆ ಕರಾರು ಪತ್ರಗಳನ್ನು ಮಾಡಿಕೊಟ್ಟಿರುತ್ತಾರೆ. ಆದರೆ ಆರೋಪಿತರು ಪಿರ್ಯಾದಿದಾರರಿಗೆ ವಾಗ್ದಾನ ಮಾಡಿದಂತೆ ಸಾಲವನ್ನು ಮರುಪಾವತಿಸದೆ ಇದ್ದು ಒಪ್ಪಂದದಂತೆ ಲಾರಿಗಳನ್ನು ತಮ್ಮ ಹೆಸರಿಗೆ ನೋಂದಾಹಿಸಿಕೊಳ್ಳಲು ಪಿರ್ಯಾದಿದಾರರು ಕ್ರಮ ಕೈಗೊಂಡಾಗ ಲಾರಿಗಳನ್ನು ಬ್ಯಾಂಕಿನ ಸಾಲಕ್ಕೆ ಆರೋಪಿತರು  ಅಡಮಾನ ಮಾಡಿದ ವಿಚಾರ ತಿಳಿದು ಬಂದಿರುವದಾಗಿದೆ. ಅಲ್ಲದೆ ಭದ್ರಿಕೆಗೆ ನೀಡಿದ ಚೆಕ್ಕುಗಳನ್ನು ನಗಧಿಕರಿಸಲು ಕ್ರಮಕೈಗೊಂಡಾಗ ಅವುಗಳು ಹಣವಿಲ್ಲದ ಕಾರಣ ಅಮಾನ್ಯಗೊಂಡಿದ್ದು, ಆರೋಪಿತರು ಪಿರ್ಯಾದಿದಾರರಿಗೆ ಉದ್ದೇಶ ಪೂರಕವಾಗಿ ಮೋಸ ಮಾಡಿರುವದಾಗಿದೆ.

 

2.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08/04/2014 ರಂದು ಬೆಳಗ್ಗೆ 9:00 ಗಂಟೆಗೆ ಆಟೋ ರಿಕ್ಷಾ ನಂಬ್ರ KA-19-C-9274 ನ್ನು ಅದರ ಚಾಲಕ ವೆಲೆನ್ಸಿಯಾ ಕಡೆಯಿಂದ ಕಂಕನಾಡಿ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ವೆಲೆನ್ಸಿಯಾ SBM ATM ಎದುರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜೋಸೆಪ್ A K ಎಂಬುವರಿಗೆ ಡಿಕ್ಕಿ ಮಾಡಿದ ಪರಿಣಾಮ ರಸ್ತೆಗೆ ಬಿದ್ದು ಬಲಭುಜದ ತೋಳಿಗೆ ಗುದ್ದಿದ ನೋವು ಉಂಟಾಗಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ. ಆರೋಪಿ ರಿಕ್ಷಾ ಚಾಲಕ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸದೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡದೆ ರಿಕ್ಷಾದೊಂದಿಗೆ ಪರಾರಿಯಾಗಿರುತ್ತಾನೆ.

 

3.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03.04.2014 ರಂದು ಮದ್ಯಾಹ್ನ ಸುಮಾರು 1.30 ಗಂಟೆಗೆ ನ್ಯಾನೊ ಕಾರು ನಂಬ್ರ KA22-P-7594 ನ್ನು ಅದರ ಚಾಲಕ ನಂತೂರು ಕಡೆಯಿಂದ ಶಕ್ತಿನಗರ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗಿ ಅಳಕೆ ಅಂಗಡಿ ಎದುರು ಮುಂದಿನಿಂದ ಹೋಗುತ್ತಿದ್ದ ಮೋಟರ್ ಸೈಕಲ್ ನಂಬ್ರ KA19-EF-6326 ಕ್ಕೆ ಡಿಕ್ಕಿ ಮಾಡಿದ ಪರಿಣಾಮ ಮೋಟರ್ ಸೈಕಲ್ ಸವಾರ ರಸ್ತೆಗೆ  ಬಿದ್ದು ಕೈ ಕಾಲುಗಳಿಗೆ ಸಾದಾ ಸ್ವರೊಪದ ಗಾಯಗೊಂಡು ಕೊಲಾಸೊ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕೆತ್ಸೆ ಪಡೆದುಕೊಂಡಿರುತ್ತಾರೆ. ಕಾರು ಚಾಲಕ ಖರ್ಚು ಭರಿಸುತ್ತೇನೆಂದು ಹೇಳಿ ನಿರಾಕರಿಸಿರುತ್ತಾರೆ. ಗಾಯಾಳು ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕೆತ್ಸೆಯಲ್ಲಿರುತ್ತಾರೆ.

 

4.ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-04-2014 ರಂದು ಮಧ್ಯಾಹ್ನ 12:00 ಗಂಟೆಗೆ, ಪಿರ್ಯಾದಿದಾರರಾದ ಶ್ರೀ ಕೆ. ಮಹಮ್ಮದ್ ಅಶ್ರಫ್ರವರು ತನ್ನ ಸ್ನೇಹಿತ ಫಾರೂಕ್ನನ್ನು ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ-19-ಇಜೆ-6048 ನೇದರಲ್ಲಿ ಕುಳ್ಳಿರಿಸಿಕೊಂಡು ಕಿನ್ಯಾದಿಂದ ಮೆಲ್ಕಾರ್ ಕಡೆಗೆ ಹೋಗುತ್ತಿರುವಾಗ ಕುರ್ನಾಡು ಗ್ರಾಮದ ಮಿತ್ತಕೋಡಿ ತಲುಪುತ್ತಿದ್ದಂತೆ ಬೋಳಿಯಾರ್ ಕಡೆಯಿಂದ ಕಾಯರ್ಗೋಳಿ ಕಡೆಗೆ ಬರುತ್ತಿದ್ದ ಜೀಪು ನಂಬ್ರ ಕೆಎ-19-ಎಂ-6601ನೇದನ್ನು ಅದರ ಚಾಲಕ ಜೆರಾಲ್ಡ್ ಬ್ರಗ್ಸ್ ಎಂಬವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರ ಮೋಟಾರ್ ಸೈಕಲ್ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ಹಾಗೂ ಸಹಸವಾರ ಫಾರೂಕ್ರವರಿಗೆ ರಕ್ತಗಾಯವಾಗಿದ್ದು, ಅವರಿಬ್ಬರನ್ನೂ ಅಲ್ಲಿ ಸೇರಿದ ಸಾರ್ವಜನಿಕರು ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿರುತ್ತಾರೆ.

 

5.ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-04-2014 ರಂದು 11-30 ಗಂಟೆಗೆ ಮಂಗಳೂರು ನಗರದ ಅಳಕೆ ಭೋಜರಾವ್ ಲೇನ್ ಎಸ್.ಎಸ್. ಕಂಪೌಂಡ್ 1 ನೇ ಮಹಡಿಯಲ್ಲಿರುವ ಪಿರ್ಯಾದಿದಾರರಾದ ಕು. ಸಲೋನಿದಾಸ್ ರವರ ಮನೆಗೆ ಪಿರ್ಯಾದಿದಾರರಿಗೆ ಹಿಂದೆ ಪರಿಚಯವಾಗಿ ಸ್ನೇಹಿತರಾಗಿರುವ ಮುಂಬೈ ಮೂಲದ ಮಿಥಿಲೇಶ್ ಕಾಮತ್ ಎಂಬಾತನು ಪಿರ್ಯಾದಿದಾರರು ಮದುವೆ ಆಗಲು ಒಪ್ಪದೆ ಇದ್ದುದರಿಂದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ ದ್ವೇಷದಿಂದ ಪಿರ್ಯಾದಿದಾರರನ್ನು ಕೊಲೆ ಮಾಡುವ ಉದ್ದೇಶದಿಂದಲೇ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಮನೆಗೆ ಬಂದು ಆತನ ವಶದಲ್ಲಿದ್ದ ಚೂರಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿರುವುದಾಗಿದೆ.

 

6.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08.04.2014 ರಂದು ಬೆಳಿಗ್ಗೆ 09.00 ಗಂಟೆಯಿಂದ 17.30 ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾದಿದಾರರಾದ ಶ್ರೀ ರಾಹುಲ್ ಪ್ರಮೋದ್ ರವರು ಮೂಡಬಿದ್ರೆ ಪೇಟೆಯ ಮಸೀದಿ ರಸ್ತೆಯಲ್ಲಿರುವ ಆನಂದ ಶೆಟ್ಟಿಯವರ ಬಾಡಿಗೆ ರೂಮಿನ ಬೀಗವನ್ನು ಯಾರೋ ಕಳ್ಳರು ಮುರಿದು ಒಳಪ್ರವೇಶಿಸಿ ರೂಮ್ ನಲ್ಲಿ ಇರಿಸಿದ್ದ ಲ್ಯಾಪ್ ಟಾಪ್-2, ನೋಕಿಯಾ ಮೊಬೈಲ್-1, ಮತ್ತು ವಾಚ್-1 ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳುವಾದ ಸೊತ್ತುಗಳ ಅಂದಾಜು ಮೌಲ್ಯ ರೂ. 24,000/ ಆಗಬಹುದು.

 

7.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಕಂದಾವರ ಪಂಚಾಯತ್ ನಲ್ಲಿ ಉದ್ಯೋಗದಲ್ಲಿದ್ದು, ಬಳಿಕ ಅಮಾನತುಗೊಂಡ ಶ್ರೀಮತಿ ಸುರೇಖಾ, ಗಂಡ: ಜಯರಾಮ ಎಂಬವರು ಕಂದಾವರ ಪಂಚಾಯತ್ ಪಿಡಿಒ ರೋಹಿಣಿ ರವರು ನೀಡಿದ ಕಿರುಕುಳಕ್ಕೆ ಬೇಸತ್ತು ಪಿರ್ಯಾದಿದಾರರಾದ ಶ್ರೀ ವಿಜಯ ಪ್ರಸಾದ್ ರವರು ಕಾರ್ಯನಿರ್ವಾಕ ನಿರ್ದೇಶಕರಾಗಿರುವ "ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾ (ಹೆಚ್.ಆರ್.ಎಫ್..)" ಸಂಸ್ಥೆಗೆ ದೂರು ನೀಡಿದ ಹಿನ್ನಲೆಯಲ್ಲಿ ಸದ್ರಿ ಪಿಡಿಒ ರವರಿಗೆ ಪತ್ರ ವ್ಯವಹಾರವನ್ನು ಮಾಡಿದ್ದು, ಇದಕ್ಕಾಗಿ ಕಂದಾವರ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿಜಯ ಗೋಪಾಲ ಸುವರ್ಣ ರವರಲ್ಲಿ ದಿನಾಂಕ 08-04-2014 ರಂದು ಸಮಯ ಸುಮಾರು 15:17 ಗಂಟೆಗೆ ಪಿರ್ಯಾದಿದಾರರು ಮೊಬೈಲ್ ಮೂಲಕ ಮಾತನಾಡಿ ಕಛೇರಿಗೆ ಬರುವಂತೆ ತಿಳಿಸಿದ್ದು, ಅದಕ್ಕೆ ಶ್ರೀಮತಿ ವಿಜಯ ಗೋಪಾಲ ಸುವರ್ಣ ರವರು ಉಡಾಫೆಯಿಂದ ಮಾತನಾಡಿದ್ದು, ಪುನಃ ಪಿರ್ಯಾದಿದಾರರಿಗೆ ದೂರವಾಣಿ ಕರೆ ಮಾಡಿ " ವಿಷಯದಲ್ಲಿ ಮೂಗು ತೂರಿಸಲು ನೀನು ಯಾರು ? ಬಂದರೆ ಜಾಗ್ರತೆ !, ನಿನ್ನನ್ನು ಬಿಡುವುದಿಲ್ಲ, ನನ್ನಲ್ಲಿ ಬೇಕಾದಷ್ಟು ಜನರಿದ್ದಾರೆ" ಎಂದು ಎಕವಚನದಿಂದ ಮಾತಾಡಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ್ದು, ಬಗ್ಗೆ ಕಂದಾವರ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿಜಯ ಗೋಪಾಲ ಸುವರ್ಣ ರವರ ಮೇಲೆ ಸೂಕ್ತ ಕಾನೂನು ಕ್ರಮಕ್ಕಾಗಿ ದಿನಾಂಕ 08-04-2014 ರಂದು ಉತ್ತರ ಪೊಲೀಸ್ ಠಾಣೆಯಲ್ಲಿ ನೀಡಿದ ಪಿರ್ಯಾದಿಯಂತೆ ಠಾಣಾ ಎನ್.ಸಿ.ಆರ್. ನಂಬ್ರ 254/1ಪಿಎಸ್/ಪಿಟಿಎನ್/2014 ರಂತೆ ದಾಖಲಿದ್ದು, ಬಳಿಕ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಾಗಿರುವುದಾಗಿದೆ.

 

8.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 09-04-2014 ರಂದು ಬೆಳಿಗ್ಗೆ 09-00 ಗಂಟೆಗೆ ಬಜಪೆ ಠಾಣಾ ಸರಹದ್ದಿನ ಬಜಪೆ ಗ್ರಾಮದ ಪೊರ್ಕೋಡಿ ರಸ್ತೆಯಲ್ಲಿ ಅಂದರೆ ಬಜಪೆ ಕಡೆಯಿಂದ ಪೊರ್ಕೋಡಿ ಕಡೆಗೆ ಟಿಪ್ಪರ್ ಲಾರಿ ನಂ: ಕೆಎ 34- 5423 ಚಾಲಕ ರಾಕೇಶ್, ಪ್ರಾಯ: 26 ವರ್ಷ , ಈತನು ತನ್ನ ಬಾಬ್ತು ಟಿಪ್ಪರ್ ಲಾರಿಯನ್ನು ಬಜಪೆ ಕಡೆಯಿಂದ ಪೊರ್ಕೋಡಿ ಕಡೆಗೆ ಬಹಳ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋದ ಪರಿಣಾಮ ಇಳಿಜಾರಿನಲ್ಲಿ ಟಿಪ್ಪರ್ ಚಾಲಕನ ಹತೋಟಿ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಅಡಿ ಮೇಲಾಗಿ ಬಿದ್ದು, ಚಾಲಕ ರಾಕೇಶ್ ತಲೆಗೆ ಜರ್ಜರಿತ ಜಖಂ ಆಗಿ ಸ್ಥಳದಲ್ಲಿಯೇ ಮೃತನಾದುದಲ್ಲದೇ,  ಆತನೊಂದಿಗೆ ಟಿಪ್ಪರ್ ಲಾರಿಯಲ್ಲಿದ್ದ ಉಮೇಶ ಎಂಬವನು ತೀವ್ರ ಗಾಯಗೊಂಡಿದ್ದು, ಚಿಕಿತ್ಸೆಯ ಕುರಿತು ಮಂಗಳೂರು ಸರಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿದೆ.

 

9.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-04-2014 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಶರ್ಈನ ಮೋಯಿದೀನ್ ರವರು ಮಂಗಳೂರಿನ ನೇಶನಲ್ ಟ್ಯುಟೋರಿಯಲ್ ಕ್ಲಾಸಿಗೆ ಹೋಗಿ ವಾಪಾಸು ತನ್ನ ಮನೆಯಾದ ಮಂಜೇಶ್ವರ ಮೂಡಾಕ್ಕೆ ಹೋಗುವರೇ ತನ್ನ ಬಾಬ್ತು ಆಕ್ಟಿವಾ ಹೋಂಡ ನಂಬ್ರ KL-14-P-3126 ನೇದರಲ್ಲಿ ಪಿರ್ಯಾದಿದಾರರ ದೊಡ್ಡಪ್ಪನ ಮಗನಾದ ಇಸ್ಮಾಯಿಲ್ ತೊಫೆಲ್ ಎಂಬಾತನನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಮಂಗಳೂರಿನಿಂದ ಹೊರಟು ಉಚ್ಚಿಲ ಎಂಬಲ್ಲಿಗೆ ತಲುಪುವಾಗ ಸಮಯ ಸುಮಾರು ಮದ್ಯಾಹ್ನ 2:40 ಗಂಟೆಗೆ ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ GA-08-K-1710 ನೇ ನಂಬ್ರದ ಕಾರನ್ನು ಅದರ ಚಾಲಕನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರ ಬಲ ಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಆಕ್ಟಿವಾ ಹೋಂಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹಸವಾರರು ಬೈಕ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ಬಲ ಕಾಲಿನ ಪಾದಕ್ಕೆ ಹಾಗೂ ಬಲ ಕೈಯ ತೋಳು ಹಾಗೂ ಮಣಿಗಂಟಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ಸಹಸವಾರ ಇಸ್ಮಾಯಿಲ್ ತುಪೇಲ್ ಎಂಬಾತನಿಗೆ ಬಲ ಕಾಲಿನ ಪಾದಕ್ಕೆ ಹಾಗೂ ಬಲಕೈಯ ಮಣಿಗಂಟಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ಘಟನೆಗೆ ಕಾರಣವೇನೆಂದರೆ ಕಾರು ನಂಬ್ರ GA-08-K-1710 ನೇ ಕಾರಿನ ಚಾಲಕನ ಅತೀ ವೇಗ ಹಾಗು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಆಗಿರುತ್ತದೆ.

 

10.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಚೆಲುವರಾಜ್ ಪೊಲೀಸ್ ನಿರೀಕ್ಷಕರು ಮಂಗಳೂರು ಉತ್ತರ ಪೊಲೀಸ್ ಠಾಣೆ ಇವರಿಗೆ ಸುರತ್ಕಲ್ ಕಾನ ಎಂಬ ಪ್ರದೇಶದಲ್ಲಿ ಅಕ್ರಮವಾಗಿ ಡಾಂಬಾರನ್ನು ಸಂಗ್ರಹಿಸಿಟ್ಟಿದ್ದಾರೆ ಎಂಬುದಾಗಿ ಬಂದ ಖಚಿತ ಮಾಹಿತಿಯಂತೆ ಮಾನ್ಯ ಡಿಸಿಪಿ (ಅಪರಾಧ ಮತ್ತು ಸಂಚಾರ) ಮತ್ತು ಮಂಗಳೂರು ಕೇಂದ್ರ ಉಪ ವಿಭಾಗದ ಸಿ ಪಿ ಶ್ರೀ ಸದಾನಂದ ವರ್ಣಿಕರ್ ಸಿಬ್ಬಂದಿಯವರಾದ ಎಸ್ - ಯೋಗೀಶ್, ಪಿಸಿ 819 ಗಂಗಾಧರಯ್ಯ ಪಿಸಿ 479 ಪ್ರಕಾಶ್ ವಿ ನಾಯ್ಕ ಎಚ್ ಸಿ 1904 ವಿಶ್ವನಾಥ ಎಮ್ ಪಿಸಿ 391 ಜಯಪ್ರಕಾಶ್ ಪಿಸಿ 168 ಸುರೇಶ ಪೂಜಾರಿ ಇವರೊಂದಿಗೆ ದಿನಾಂಕ 08-04-2014 ರಂದು ರಾತ್ರಿ 23-15 ಗಂಟೆಗೆ ಕಾನ ಪ್ರದೇಶಕ್ಕೆ ಹೋಗಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಗೋದಾಮು ಪ್ರದೇಶಕ್ಕೆ ದಾಳಿ ನಡೆಸಿದ್ದು ದಾಸ್ತಾನು ಗೋಡಾನ್ ಹೊರಗಡೆ ರಸ್ತೆಯಲ್ಲಿ ಕೆಎ 19-ಡಿ-9244 ಮತ್ತು  ಕೆಎ 09-4269ನೇ ನೋಂದಣಿ ಸಂಖ್ಯೆ ಡಾಂಬಾರು ಟ್ಯಾಂಕರ್ ಲಾರಿ ಕೃತ್ಯಕ್ಕೆ ಉಪಯೋಗಿಸಿದ ಮೋಟಾರು ಸೈಕಲ್ ನಂಬ್ರ ಕೆಎ 19-ಇಸಿ-7837 ಮತ್ತು  ಕೆ 19-ಇಜಿ-3494 ಬಜಾಜ್ ಪಲ್ಸರ್  ಕೆಎ 19-ಎಮ್ ಜಿ-627 ರಿಟ್ಜ್ ಕಾರು, ಹಾಗೂ ಸ್ಥಳದಲ್ಲಿದ್ದ  ಆರೋಪಿಗಳಾದ ಜುಬೇರ್, ಅಬೂಬಕ್ಕರ್ ಸಿದ್ದಿಕ್ ಮತ್ತು ಜೆ ಅಬ್ದುಲ್ ಕರೀಂ ಎಂಬವರನ್ನು ವಶಕ್ಕೆ ಪಡೆದು ಗೋದಾಮನ್ನು ಪರಿಶೀಲಿಸಿದಲ್ಲಿ 204 ಡಾಂಬಾರು ತುಂಬಿದ ಬ್ಯಾರೆಲ್ ಗಳು, 90 ಖಾಲಿ ಬ್ಯಾರೆಲ್ ಗಳು,  ಬ್ಯಾರೆಲ್ ಗಳನ್ನು ಮುಚ್ಚಲು ಬಳಸುವ ಮುಚ್ಚಳ -50, ಒಂದು ಜೊತೆ ಗ್ಲೌಸ್, ನಗದು ಹಣ 23800/- ರೂ,  ಮೊಬೈಲ್-3 ಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು ಆಪಾದಿತರು ಅವರ ಮಾಲಕರಾದ ಹಿದಾಯತ್ ಮತ್ತು ಮೇನೆಜರ್ ಅಶ್ರಫ್ ರವರೊಂದಿಗೆ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಡಾಂಬಾರ್ ಬ್ಯಾರೆಲ್ ಗಳನ್ನು  ದಾಸ್ತಾನು ಇರಿಸಿ ಕಾನೂನು ಬಾಹಿರ ಚಟುವಟಿಕೆ ತೊಡಗಿಸಿಕೊಂಡಿರುವುದಾಗಿದೆ.

 

11.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 20.03.2014 ರಂದು ಬೆಳಿಗ್ಗೆ ಸುಮಾರು 7.00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಯಮುನಾ ರವರು ಅಂಬೇಡ್ಕರ್‌‌ ಕಾಲನಿ ದೇವಿನಗರ ಪಚ್ಚನಾಡಿ ಎಂಬಲ್ಲಿ ಮನೆಯಿಂದ ಕೆಲಸಕ್ಕೆ ಹೋಗಿ ಮಧ್ಯಾಹ್ನ ಸುಮಾರು 2.30 ಗಂಟೆಗೆ  ಮನೆಗೆ ಮರಳಿ ಬಂದಾಗ  ಮನೆಯ ಮುಂಭಾಗದ  ಬಾಗಿಲಿನ ಬೀಗವನ್ನು  ಮುರಿದುಕೊಂಡಿದ್ದು, ಹಿಂಬದಿಯ ಬಾಗಿಲು ತೆರೆದಿದ್ದು, ಪಿರ್ಯಾಧಿದಾರರು ಮನೆಯ ಒಳಗಡೆ ಹೋಗಿ ನೋಡಿದಾಗ  ಬೆಡ್ರೂಮ್ನಲ್ಲಿದ್ದ ಕಬ್ಬಿಣದ ಅಲ್ಮೇರಾದ ಬೀಗವನ್ನು ಕೂಡಾ ಮುರಿದುಕೊಂಡಿದ್ದು , ಅಲ್ಮೇರಾವನ್ನು  ಸರಿಯಾಗಿ ನೋಡಿದಾಗ  ಸೆಲ್ಫ್‌‌ನಲ್ಲಿ ಇರಿಸಿದ್ದ ನಗದು ಹಣ ರೂಪಾಯಿ 5700/- ಕಾಣೆಯಾಗಿರುವುದಾಗಿಯೂ ಪಿರ್ಯಾಧಿದಾರರು ಮನೆಯಲ್ಲಿ  ಇಲ್ಲದ ವೇಳೆ ಯಾರೋ ಕಳ್ಳರು ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿ ಬೆಡ್ರೂಮ್‌‌ನಲ್ಲಿದ್ದ ಕಬ್ಬಿಣದ ಕಪಾಟಿನಲ್ಲಿದ್ದ ನಗದು ಹಣ ರೂ 5700/- ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

 

12.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 08.04.2014 ರಂದು 17.45 ಗಂಟೆಗೆ ಮಂಗಳೂರು ತಾಲೂಕು ಕಂಕನಾಡಿ ಗ್ರಾಮದ ನಾಗೂರಿ ಎಂಬಲ್ಲಿ ಕೆಎ19ಸಿ5909 ನೇ ಬಸ್ಸನ್ನು ಅದರ ಚಾಲಕ ಬಿ.ಸಿ ರೋಡ್‌‌ನಿಂದ ಮಂಗಳೂರು ಕಡೆಗೆ ರಾಹೆ ರಸ್ತೆಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಯಲ್ಲಿ ಚಲಾಯಿಸಿಕೊಂಡು ಬಂದು ಮಂಗಳೂರು ಕಡೆಯಿಂದ ಪಿರ್ಯಾಧಿದಾರರಾದ ಶ್ರೀ ರಿಮ್ಸನ್ ರೆಬೆಲ್ಲೋ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ KA18X3656 ನಂಬ್ರದ ಮೋಟಾರ್‌‌ ಸೈಕಲ್‌‌ಗೆ ಡಿಕ್ಕಿಪಡಿಸಿ ಮುಂದಕ್ಕೆ ಚಲಿಸಿ ಮೋಟಾರ್‌‌ ಸೈಕಲ್‌‌ ಹಿಂದಿನಿಂದ ಬರುತ್ತಿದ್ದ  RJ20GA8983  ನೇ ನಂಬ್ರದ ಲಾರಿಗೆ ಡಿಕ್ಕಿಪಡಿಸಿದ ಪರಿಣಾಮ ಮೂರು ವಾಹನಗಳಿಗೆ ಜಖಂ ಉಂಟಾಗಿದ್ದು ಮೋಟಾರ್‌‌ ಸೈಕಲ್‌‌ ಸವಾರ ರಿಮ್‌‌ಸನ್‌‌ ರೆಬೆಲ್ಲೋ ರವರ ಬಲಕಾಲಿಗೆ, ಎಡಕಾಲಿನ ಮೊಣಗಂಟಿಗೆ , ಕೋಲುಕಾಲಿಗೆ ಮತ್ತು ಎಡಕೈ ಭುಜಕ್ಕೆ ತರಚಿದ ಗಾಯ ಹಾಗೂ ಸಹಸವಾರ ಅಜಿಂಕಿಯ  ಎಂಬವರಿಗೆ ಬಲಕಾಲಿನ ತೊಡೆಗೆ ಮತ್ತು ಮೊಣಗಂಟಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಗಾಯಾಳುಗಳು ಮಂಗಳೂರು ಫಾದರ್‌‌ ಮುಲ್ಲರ್ಸ್ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ.

 

13.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು ಕಂಕನಾಡಿ ಗ್ರಾಮದ ನಾಗೂರಿ ರೆಡ್‌‌ ಬಿಲ್ಡಿಂಗ್‌‌ ಬಳಿ ಇರುವ Pavithra complex ನಲ್ಲಿ ಪಿರ್ಯಾಧಿದಾರರಾದ ಶ್ರೀ ದಯಾಪ್ರಸಾದ್ ಶೆಟ್ಟಿ ರವರು Smart tech computer sales & services ಎಂಬ ಮಳಿಗೆಯನ್ನು ನಡೆಸುತ್ತಿದ್ದು ದಿನಾಂಕ: 08.04.2014 ರಂದು ರಾತ್ರಿ ಸುಮಾರು 2.30 ಗಂಟೆಗೆ KA25D2219 ನೇ ಲಾರಿಯನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಸದ್ರಿ ಅಂಗಡಿಯ ಮುಂಭಾಗಕ್ಕೆ ಡಿಕ್ಕಿಹೊಡೆದು ನಾಮಫಲಕಕ್ಕೆ ಮತ್ತು ಕಟ್ಟಡಕ್ಕೆ ಹಾನಿಗೊಳಿಸಿ ರೂ 50000/- ನಷ್ಟ ಉಂಟುಮಾಡಿರುತ್ತಾರೆ.

No comments:

Post a Comment