Wednesday, April 9, 2014

Daily Crime Reports 09-04-2014

ದೈನಂದಿನ ಅಪರಾದ ವರದಿ.

ದಿನಾಂಕ 09.04.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

1

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ  

:

1

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

1

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06/04/2014 ರಂದು 14:00 ಗಂಟೆಗೆ ಟವೇರಾ ಕಾರು ನಂಬ್ರ KL-14-H-2626 ನ್ನು ಅದರ ಚಾಲಕ ರಾಕೇಶ ಎಂಬಾತನು ಕಂಕನಾಡಿ ಹಳೆ ರಸ್ತೆಯಿಂದ ಹೈಲೆಂಡ್ ಆಸ್ಪತ್ರೆ ಜಂಕ್ಷನ್ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಕಂಕನಾಡಿ ಸರ್ಕಲ್ ತಲುಪುವಾಗ ಕರಾವಳಿ ವೃತ್ತದ ಕಡೆಯಿಂದ ವೆಲೆನ್ಸಿಯಾ ಕಡೆಗೆ ಹೋಗುತ್ತಿದ್ದ ಸ್ಕೂಟರ್ ನಂಬ್ರ KA-19-EJ-2500 ಕ್ಕೆ ಡಿಕ್ಕಿ ಮಾಡಿದ ಪರಿಣಾಮ ಸವಾರ  ಪುರುಷೋತ್ತಮ ರವರ  ಎಡಕಾಲಿಗೆ ಗಂಭೀರ ಸ್ವರೂಪದ ಗಾಯ ಉಂಟಾಗಿ ಯುನಿಟಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ ಆರೋಪಿ ರಾಕೇಶ ಗಾಯಾಳುವಿನ ಖರ್ಚು ಭರಿಸುತ್ತೆನೆ ಎಂದು ತಿಳಿಸಿ ನಂತರ ನಿರಾಕರಿಸಿರುತ್ತಾನೆ.

 

2.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07.04.2014 ರಂದು ರಾತ್ರಿಯಿಂದ 08-04-2014 08:00 ಗಂಟೆಯ ಮಧ್ಯಾವಧಿಯಲ್ಲಿ ಮಾರ್ಪಾಡಿ ಗ್ರಾಮದ ಅರಮನೆ ಬಾಗಿಲು ಎಂಬಲ್ಲಿರುವ "ಲೊನಿಲ್ಲಾ" ಎಂಬ ಅಪಾರ್ಟ್ಮೆಂಟ್ ನ ಒಂದನೇ ಮಹಡಿಗೆ ಹಿಂಬದಿಯ ಶೀಟ್ ಔಟ್ ಮೂಲಕ ಒಳಗೆ ಪ್ರವೇಶಿಸಿದ ಯಾರೋ ಕಳ್ಳರು ಒಳಗಡೆ ಇರಿಸಿದ್ದ, ಸುಮಾರು 24,000/ ರೂ ಬೆಲೆಬಾಳುವ ಸಿಮೆಂಟ್ ಶೀಟ್ ಗೆ ಅಳವಡಿಸುವ ಕಬ್ಬಿಣದ ಕ್ಲಾಂಪ್, ಕೇಬಲ್ ವಯರ್, ಮತ್ತು ಪೈಪ್ ಫಿಟ್ಟಿಂಗ್ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿಯೂ, ಸದ್ರಿ ಅಪಾರ್ಟ್ಮೆಂಟ್ ನಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿದ್ದ, ಕಲ್ಲಮುಂಡ್ಕೂರಿನ ಸುರೇಶ, ಮತ್ತು ಆತನ ಜೊತೆಯಲ್ಲಿದ್ದ ಜಯಂತ ಹಾಗೂ ಇವರಿಬ್ಬರ ಸಹಚರರಾದ ಸುರೇಶ ಮತ್ತು ಅಶೋಕ ಎಂಬವರುಗಳು ಕಳವು ಮಾಡಿರಬಹುದೆಂದು ಸಂಶಯ ಇದ್ದು, ಕಳುವಾದ ಸೊತ್ತುಗಳ ಅಂದಾಜು ಮೌಲ್ಯ 24,000/ ರೂ ಆಗಬಹುದು.

 

3.ಕಾವೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾಧುದಾರರಾದ ಶ್ರೀ ಮಾಧವ ಶೆಣೈ ರವರು ದಿನಾಂಕ 08-04-2014 ರಂದು ಮನೆಯ ಬಳಿಯಲ್ಲಿದ್ದಾಗ ಬೆಳಿಗ್ಗೆ 09-20 ಗಂಟೆಗೆ ಆರೋಪಿ ಕೆ. ಜೇಮ್ಸ್ ರವರು ಫಿರ್ಯಾಧುದಾರರನ್ನು ಕೊಲ್ಲುವ ಉದ್ದೇಶದಿಂದ ಏಕಾಎಕಿ ಕಲ್ಲಿನಿಂದ ಹೊಡೆದು ಚರಂಡಿಗೆ ಹಾಕಿರುವುದರಿಂದ ಫಿರ್ಯಾಧುದಾರರ ದೇಹದ ಭಾಗಗಳಿಗೆ ಗಾಯಗಳಾಗಿದ್ದು, ದ್ವೇಷ ಸಾಧನೆಗೋಸ್ಕರ ಆರೋಪಿಯು ಈ ಕೃತ್ಯ ನಡೆಸಿರುತ್ತಾನೆ.

 

4.ಕಾವೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-04-2014 ರಂದು ಫಿರ್ಯಾಧುದಾರರಾದ ಶ್ರೀ ಜೇಮ್ಸ್ ರವರು ಮನೆಯಿಂದಹೊರಗಡೆ ಬರುತ್ತಿದ್ದಾಗ ಬೆಳಿಗ್ಗೆ 09-00 ಗಂಟೆಗೆ ನೆರೆಯ ಮಾಧವ ಶೆಣೈರವರು ಫಿರ್ಯಾಧುದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು, ನೀನು ಕೇಸನ್ನು ಬಾರಿ ಕೋರ್ಟಿಗೆ ಹಾಕುತ್ತಿಯಾ? ಎಂದು ಹೇಳಿ ಕೈಯಿಂದ ಫಿರ್ಯಾಧುದಾರರ ಕೆನ್ನೆಗೆ, ಎದೆಗೆ ಹೊಡೆದಿದ್ದು, ಆರೋಪಿಯ ಕೃತ್ಯದಿಂದ ಫಿರ್ಯಾಧುದಾರರ ಅಂಗಿಯ ಬಟನ್ ಕಳಚಿರುತ್ತದೆ. ಬನಿಯನ್ ಹರಿದಿರುತ್ತದೆ. ಹಾಗೂ ಕನ್ನಡಕ ಕೂಡಾ ಜಖಂ ಆಗಿದ್ದು, ಫಿರ್ಯಾಧುದಾರರ ಪತ್ನಿಯು ಅಲ್ಲಿಗೆ ಬಂದಾಗ ಆರೋಪಿಯು ಜೀವ ಬೆದರಿಕೆ ಹಾಕಿ ಅಲ್ಲಿಂದ ಓಡಿ ಹೋಗಿರುತ್ತಾರೆ. 

 

5.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಬಿ. ಶ್ರೀನಿವಾಸ್ ಬಾಳಿಗಾ ರವರು ಸುಮಾರು 20 ವರ್ಷದಿಂದ ಮಂಗಳೂರಿನ ಜೆ.ಎಂ ರಸ್ತೆಯಲ್ಲಿರುವ  ಗಂಗಾಧರ ಪೈ ರವರ ಹೊಗೆ ಸೊಪ್ಪು ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಸದ್ರಿ  ಅಂಗಡಿಯನ್ನು ಬೆಳಿಗ್ಗೆ 8-00 ಗಂಟೆಗೆ ಪ್ರಾರಂಭವಾಗಿ ಸಂಜೆ 06-15 ಗಂಟೆಗೆ ಬಂದ್ ಮಾಡುತ್ತಿದ್ದು, ದಿನಾಂಕ 08-04-2014 ರಂದು ಬೆಳಿಗ್ಗೆ ಸುಮಾರು 08-30 ಗಂಟೆಗೆ ಪಿರ್ಯಾದಿದಾರರು ಮತ್ತು ಎ. ಗಂಗಾಧರ ಪೈ ರವರು ಅಂಗಡಿಗೆ ಬಂದು ಅಂಗಡಿಯ ಬೀಗ ತೆಗೆದು ವ್ಯಾಪಾರ ಪ್ರಾರಂಭಿಸುತ್ತಾ ಗಂಗಾಧರ ರವರು ಮನೆಗೆ ಹೋಗಿ ಬರುತ್ತೇನೆಂದು ಹೋಗಿ ಅವರಲ್ಲಿದ್ದ ಹಣದ ಕಪ್ಪು ಬಣ್ಣದ ಬ್ಯಾಗನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಪಿರ್ಯಾದಿದಾರರಲ್ಲಿ ಕೊಟ್ಟು ಇದರಲ್ಲಿ 1,25,000/- ಹಣವಿದೆ . ಇದನ್ನು ನಿಮ್ಮ ಬಳಿ ಇರಲಿ ಎಂದು ಹೇಳಿ ಹೋಗಿದ್ದು, ಆ ಬ್ಯಾಗನ್ನು ಅಲ್ಲಿಯೇ ಪಕ್ಕ ಗೋಡೆಯ ಬಳಿ ನೇತು ಹಾಕಿದ್ದು, ಸಮಯ ಸುಮಾರು 09-00 ಗಂಟೆಗೆ ಸುಮಾರು 35-40 ವರ್ಷ ಪ್ರಾಯದ ಇಬ್ಬರು ವ್ಯಕ್ತಿಗಳು ಬಂದು ಪಿರ್ಯಾದಿದಾರರಲ್ಲಿ ಹೊಗೆ ಸೊಪ್ಪು ವ್ಯಾಪಾರದ ವ್ಯವಹಾರಗಳ ಬಗ್ಗೆ ಮಾತನಾಡಿ "ನಾವು ಬಿಸಿರೋಡಿನವರು ಕೃಷ್ಣಪ್ಪ ರವರ ಅಂಗಡಿಗೆ ಹೊಗೆ ಸೊಪ್ಪು ಬೇಕಾಗಿದೆಕೆ.ಜಿ ಗೆ ಎಷ್ಟು? ಎಂದು ವ್ಯವಹಾರ ಮಾತಾಡಿ ನಂತರ ನಮಗೆ 15 ಕೆ.ಜಿ ಹೊಗೆ ಸೊಪ್ಪು ಬೇಕಾಗಿದೆ" ಎಂದು ಹೇಳಿ ಒಳಗೆ ಬಂದು ಹೊಗೆ ಸೊಪ್ಪು ಕಟ್ಟಿನ ಬಳಿ ಪಿರ್ಯಾದಿದಾರರಲ್ಲಿ ಮಾತನಾಡಿ "10 ಕೆ.ಜಿ ಮತ್ತು 05 ಕೆ.ಜಿ ಪ್ರತ್ಯೇಕ ಕಟ್ಟು ಕಟ್ಟಿ ನಾವು ಬಳಿಯಲ್ಲಿ ನಮ್ಮದೇ ರಿಕ್ಷಾ ಇದೆ. ಅಷ್ಟರೊಳಗೆ ರೆಡಿ ಮಾಡಿ ಇಡಿ" ಎಂದು ಹೇಳಿ ಹೊರಟು ಹೋಗಿದ್ದು, ನಂತರ ಪಿರ್ಯಾದಿದಾರರು ಹೊಗೆ ಸೊಪ್ಪು ರೆಡಿ ಮಾಡುವ ಕೆಲಸದಲ್ಲಿ ಮಗ್ನ ನಾಗಿದ್ದು, ಸ್ವಲ್ಪ ಸಮಯ ಬಿಟ್ಟು ಅಂಗಡಿ ಬಳಿ ನೋಡಿದಾಗ ವ್ಯಾಪಾರಕ್ಕೆ ಬಂದ ಇಬ್ಬರು ಹೊರಟು ಹೋಗಿದ್ದು, ಗೋಡೆಯ ಕಡೆ ನೋಡಿದಾಗ  ಆ ಜಾಗದಲ್ಲಿ ಹಣದ  ಬ್ಯಾಗ್ಇಲ್ಲದೇ, ಕೂಡಲೇ ಅಸುಪಾಸಿನಲ್ಲಿ ಬಂದ ಗ್ರಾಹಕರನ್ನು ಹುಡುಕಿದಾಗ ಅವರು ಎಲ್ಲಿಯೂ ಪತ್ತೆಯಾಗದೇ ಇದ್ದು, ಈ ವಿಚಾರವನ್ನು ಕೂಡಲೇ ಗಂಗಾಧರರವರಿಗೆ ತಿಳಿಸಿರುತ್ತಾರೆ. ವ್ಯಾಪಾರಕ್ಕೆ ಬಂದ ಅಪರಿಚಿತ ಇಬ್ಬರು ವ್ಯಾಪಾರದ ನೆಪದಲ್ಲಿ ರೂಪಾಯಿ 1,25,000/- ಹಣದ ಬ್ಯಾಗನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

6.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಪದ್ಮ ಗೌಡ (60 ವರ್ಷ) ಎಂಬವರು ಬೈಸಿಕಲ್ ನಲ್ಲಿ ತನ್ನ ಮನೆಯಿಂದ ಗಂಜಿಮಠಕ್ಕೆ ರಸ್ತೆಯ ಎಡಬದಿಯಲ್ಲಿ ಸವಾರಿ ಮಾಡಿಕೊಂಡು ಬರುತ್ತಾ, ಮಂಗಳೂರು ತಾಲೂಕಿನ, ಬಡಗುಳಿಪಾಡಿ ಗ್ರಾಮದ ಮಳಲಿ ಕ್ರಾಸ್ ಗೆ 5-00 ಗಂಟೆಗೆ ತಲುಪಿದಾಗ, ಅವರ ಹಿಂದಿನಿಂದ ಅಂದರೆ, ಗಂಜಿಮಠ ಕಡೆಯಿಂದ , ಕೈಕಂಬದ ಕಡೆಗೆ ಮೋಟಾರು ಸೈಕಲ್ ನಂ: ಕೆಎ 19 ಇಹೆಚ್ 476 ನ್ನು ಅದರ ಸವಾರ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂಧು ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರ ಎಡಕಾಲಿನ ಕೋಲು ಕಾಲಿಗೆ ಮೂಳೆ ಮುರಿತವುಂಟಾಗಿದ್ದು, ಚಿಕಿತ್ಸೆಯ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

 

7.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಮರಿಯಮ್ಮ ರವರು ಎರಡು ದಿನಗಳ ಹಿಂದೆ ತೊಕ್ಕಟ್ಟುನಲ್ಲಿರುವ ಅವರ ಮಗಳ ಮನೆಗೆ ಬಂದು ದಿನಾಂಕ 08-04-2014 ರಂದು ಬೆಳಿಗ್ಗೆ ತನ್ನ ಮನೆಯಾದ ವಳಬೈಲ್ ತೋಟಕ್ಕೆ ಹೋಗಲೆಂದು ಒಳಪೇಟೆಯಿಂದಾಗಿ ತೊಕ್ಕಟ್ಟು ಜಂಕ್ಷನ್ಗೆ ಬಂದು ರಸ್ತೆ ಬದಿಯಲ್ಲಿ ನಿಂತುಕೊಂಡಿರುವಾಗ ಸಮಯ ಸುಮಾರು 08:30 ಗಂಟೆಗೆ ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ಓರ್ವ ಬೈಕಿನ ಚಾಲಕನು ತನ್ನ ಬಾಬ್ತು ಬೈಕ್ ನಂಬ್ರ KA-19-W-3318 ನೇದನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು, ಎಡ ಕಾಲಿನ ಮೊಣಗಂಟಿನ ಬಳಿ ಗುದ್ದಿದ ಗಾಯ ಹಾಗೂ ಎಡ ಹಣೆಯ ಬಳಿ ರಕ್ತ ಬರುವ ಗಾಯವಾಗಿರುತ್ತದೆ. ಬೈಕಿನ ಚಾಲಕನ ಹೆಸರು ತಿಳಿಯಲಾಗಿ ಪ್ರದೀಪ್ ರಾವ್ ಎಂಬುದಾಗಿ ತಿಳಿಯಿತು. ಈ ಅಪಘಾತಕ್ಕೆ KA-19-W-3318 ನೇ ನಂಬ್ರದ ಬೈಕಿನ ಸವಾರ ಪ್ರದೀಪ್ ರಾವ್ ರವರು ತನ್ನ ಬಾಬ್ತು ಬೈಕನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದೇ ಕಾರಣವಾಗಿರುತ್ತದೆ.

 

8.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ಕೇಶವ ರವರು ಮಾನ್ಯ ದ.. ಜಿಲ್ಲಾಧಿಕಾರಿಯವರ ಆದೇಶ ನಂಬ್ರ ELN/(1)CR571/2013-2014/C.No.121176/91  ದಿನಾಂಕ 08-04-2014 ರಂತೆ ಚುನಾವಣಾ ಕರ್ತವ್ಯ ನಿಮಿತ್ತ ತಲಪಾಡಿ ಚೆಕ್ಪೋಸ್ಟ್ನಲ್ಲಿ ಪೊಲೀಸ್ಸಿಬ್ಬಂದಿಯವರೊಂದಿಗೆ ವಾಹನ ತಪಾಸಣೆ ನಡೆಸುತ್ತಿರುವ ಸಮಯ ವಾಹನ ನಂಬ್ರ KL-14-N-9510 ಮಾಂಡೋವಿ ರಿಟ್ಸ್ ಕಾರಿನಲ್ಲಿ ಚುನಾವಣಾಧಿಕಾರಿಗಳ ಅನುಮತಿ ಇಲ್ಲದೆ ಆಮ್ ಆದ್ಮಿ ಪಾರ್ಟಿಯ ಚುನಾವಣಾ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದುದ್ದನ್ನು ವಶಪಡಿಸಿಕೊಂಡು ಪಿರ್ಯಾದಿಯನ್ನು ನೀಡಿದ್ದನ್ನು ಪ್ರ ವ ವರದಿಯನ್ನು ದಾಖಲಿಸುವರೇ ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು, ಮಾನ್ಯ ನ್ಯಾಯಾಲಯದ ಆದೇಶದಂತೆ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.

No comments:

Post a Comment