Monday, April 21, 2014

Daily Crime Reports 20-04-2014

ದೈನಂದಿನ ಅಪರಾದ ವರದಿ.

ದಿನಾಂಕ 20.04.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

2

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

4

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

2

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19/04/2014ರಂದು 16:20 ಗಂಟೆಗೆ ಮಂಗಳೂರು ಸಂಚಾರ ಪೂರ್ವ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರು ಅಮ್ಮು ಪೂಜಾರಿಯವರು ಕಂಕನಾಡಿ ಕರಾವಳಿ ವೃತ್ತದ ಮದ್ಯೆ ಕರ್ತವ್ಯದಲ್ಲಿರುವಾಗ ಗಣೇಶ್ ಮೆಡಿಕಲ್ಸ್ ಎದುರು ಕಾರ್ ನಂಬ್ರ KA-19-MA-1258 ನ್ನು ಅದರ ಚಾಲಕ ರಸ್ತೆಯಲ್ಲಿ ನಿಲ್ಲಿಸಿ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದ್ದು ಕರ್ತವ್ಯದಲ್ಲಿದ್ದ ಸಹಾಯಕ ಪೊಲೀಸ್ ಉಪನಿರೀಕ್ಷಕರು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದದ್ದನ್ನು ತಿಳಿಸಿ ಕಾರನ್ನು ಸ್ಥಳದಿಂದ ತೆಗೆಯುವಂತೆ ಹೇಳಿದಾಗ ಕಾರನ್ನು ತೆಗೆಯುದಿಲ್ಲ, ಕೇಸು ಹಾಕುವುದಾದರೆ ಹಾಕಿ ಎಂದು ಹೇಳಿ ಅಸಭ್ಯ ರೀತಿಯಿಂದ ವರ್ತಿಸಿದ್ದು ಸಹಾಯಕ ಪೊಲೀಸ್ ಉಪನಿರೀಕ್ಷಕರು ಕೇಸು ದಾಖಲಿಸಲು ಕಾರಿನ ಬಳಿ ಬಂದಾಗ ಕಾರಿನ ಚಾಲಕರು ದುಡುಕು ಹಾಗೂ ನಿರ್ಲಕ್ಷತನದಿಂದ ಅತೀ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾಗಿದೆ.

 

2.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  19.4.2014  ರಂದು  ಫಿರ್ಯಾದಿದಾರರಾದ  ಶ್ರೀ ಚಂದ್ರಶೇಖರ ರವರು ತನ್ನ ಬಾಬ್ತು  ಆಟೋ ರಿಕ್ಷಾ ಕೆಎ  19 ಡಿ  8639ನೇದರಲ್ಲಿ  ಬಾಡಿಗೆಗೆಂದು   ಹಳೆಯಂಗಡಿಯಿಂದ  ಕಾರ್ನಾಡಿಗೆ ಬಂದು  ಕಾರ್ನಾಡಿನಿಂದ  ವಾಪಾಸು ತೆರಳುವಾಗ್ಗೆ   ಬೆಳಿಗ್ಗೆ  ಸಮಯ ಸುಮಾರು  6.00   ಗಂಟೆಗೆ   ಕಾರ್ನಾಡು ಬೈಪಾಸು   ಎನ್ ಹೆಚ್  66 ರಲ್ಲಿ   ಮಂಗಳೂರು ಕಡೆಯಿಂದ  ಕೆಂಪು ಬಣ್ಣದ  ಪ್ರಗತಿ ಹೆಸರಿನ ಬಸ್ಸು  ಕೆಎ 20 ಸಿ 8538   ಮುಲ್ಕಿ ಕಡೆಗೆ  ಬರುತ್ತಿದ್ದು   ಉಡುಪಿ ಕಡೆಯಿಂದ ಮಂಗಳೂರು ಕಡೆಗೆ  NWKRTC  ಸಂಸ್ಥೆಯ  ಸ್ಲೀಪರ್  ಕೋಚ್  ಬಸ್ಸು  ನಂಬರ್  ಕೆಎ 25 ಎಫ್. 3119  ನೇದರ ಚಾಲಕ ಆರೋಪಿ ಆನಂದ ಕುಲಕರ್ಣಿ ಎಂಬಾತನು ಅತೀ ವೇಗ  ಮತ್ತು ಅಜಾಗರೂಕತೆಯಿಂದ  ರಸ್ತೆಯ ತೀರಾ ಬಲಕ್ಕೆ ಚಲಿಸಿ ಮುಂಭಾಗದಿಂದ ಬರುತ್ತಿದ್ದ ಪ್ರಗತಿ ಬಸ್ಸಿನ  ಬಲಭಾಗಕ್ಕೆ ಢಿಕ್ಕಿಯುಂಟುಮಾಡಿದ  ಪರಿಣಾಮ ಎರಡು ಬಸ್ಸಿನ  ಬಲಭಾಗವು ಮುಂಭಾಗವು ಜಖಂಗೊಂಡಿದ್ದು ಅಪಘಾತದ  ಪರಿಣಾಮ   NWKRTC   ಬಸ್ಸಿನ ಚಾಲಕ ಆನಂದ  ಕುಲಕರ್ಣಿ  ಈತನು  ಸ್ಥಳದಲ್ಲಿ  ಮೃತಪಟ್ಟಿದ್ದು, ಈತನ  ಬಲಕಾಲಿನ  ಮೂಳೆಮುರಿತದ ಗಾಯವಾಗಿದ್ದು  ಪ್ರಗತಿ ಬಸ್ಸಿನ ಚಾಲಕ ಶಮಿ ಎಂಬಾತನಿಗೆ ತೀವ್ರ ತರಹದ  ಗಾಯವಾಗಿದ್ದು ಹಾಗೂ ಸದ್ರಿ ಬಸ್ಸಿನಲ್ಲಿದ್ದ ಶಿವರಾಮ್ ಗೌಡ, ಸುರೇಶ, ಜಯಸಾಲ್ಯಾನ್ ಎಂಬವರಿಗೆ ರಕ್ತಗಾಯವಾಗಿರುತ್ತದೆ. ಹಾಗೂ  NWKRTC  ಬಸ್ಸಿನಲ್ಲಿದ್ದ   ಕಂಡೆಕ್ಟರ್  ಚಂದ್ರಪ್ಪ  ಎಂಬವರಿಗೆ  ಕಾಲಿನ  ಮೂಳೆ  ಮೂರಿತದ   ರಕ್ತಗಾಯವಾಗಿದ್ದು  ಸಂದೇಶ  ಯೆಯ್ಯಾಡಿ, ಮಹಾಲಕ್ಷ್ಮೀ ಭಟ್ , ಮಂಜುನಾಥ ಭಟ್,  ಸೀತಾ ನಾರಾಯಣ  ಭಟ್  ,ಕಾರ್ತೀಕ್   ನಾಯರ್   ಅನಂತ,  ರಾಜಶೇಖರ  ಗೌಡ ರಮೇಶ  ಕುಮಾರ್  ಹಾಗೂ ಮತ್ತಿತ್ತರಿಗೆ  ಗಾಯವಾಗಿರುತ್ತದೆ.  ಗಾಯಗೊಂಡರವರನ್ನು ಚಿಕಿತ್ಸೆ  ಬಗ್ಗೆ ಮುಕ್ಕ ಶ್ರೀನಿವಾಸ  ಮತ್ತು ಮಂಗಳೂರು ಎಜೆ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿದೆ.

 

3.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19/04/2014 ರಂದು ಪಿರ್ಯಾದಿದಾರರಾದ ಶ್ರೀ ಅಬ್ದುಲ್ ವಹೀದ್ ರವರ ಬಾಬ್ತು ಕಾರು ನಂಬ್ರ ಕೆ, 19 ಪಿ/4734 ನೇಯದನ್ನು ಅದರ ಚಾಲಕ ಸುಲೇಮಾನ್ ರವರು ಉಡುಪಿ ಕಡೆಯಿಂದ ಬಜಪೆ ವಿಮಾನ ನಿಲ್ದಾಣದ ಕಡೆಗೆ ರಾ-ಹೆ 66 ರಲ್ಲಿ ಕಾರನ್ನು ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಪಣಂಬೂರು ಗ್ರಾಮದ ಕುದುರೆಮುಖ ಜಂಕ್ಷನ ಬಳಿ ಸಮಯ ಸುಮಾರು 05-45 ವೇಳೆಗೆ ಕಾರನ್ನು ಅತೀ ವೇಗ ದಿಂದ ಚಲಾಯಿಸಿದ ಪರಿಣಾಮ ಕಾರು ಚಾಲಕನ ಹತ್ತೋಟಿ ತಪ್ಪಿ ಸದ್ರಿ ಕಾರು ಕೂಳೂರು ಸೇತುವೆಯ ಬಲ ಬದಿಯಲ್ಲಿ ಇರುವ ಆಳವಾದ ನದಿಯ ದಡಕ್ಕೆ ಬಿದ್ದ ಪರಿಣಾಮ ಚಾಲಕ ಸುಲೇಮಾನ್ ರವರಿಗೆ ತೀವ್ರ ಸ್ವರೂಪದ ರಕ್ತಗಾಯವಾಗಿದಲ್ಲದೆ ಕಾರು ಸಂಪೊರ್ಣ ಜಖಂಗೊಂಡಿರುತ್ತದೆ.

 

4.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಹನುಮಂತ್ ಕಾಮತ್ ರವರು ಬಂದರಿನ ಜೆ.ಎಂ.ರಸ್ತೆಯಲ್ಲಿರುವ ವೆಂಕಟೇಶ್ ಆಂಡ್ ವೆಂಕಟೇಶ್ ಅಂಗಡಿಯ ಮಾಲಕರಾಗಿದ್ದು, ಎಂದಿನಂತೆ ದಿನಾಂಕ 18-04-2014 ರಂದು ಸಂಜೆ 7 ಗಂಟೆಗೆ ವ್ಯಾಪಾರವನ್ನು ಮುಗಿಸಿ ಅಂಗಡಿಯನ್ನು ಬಂದ್ ಮಾಡಿ ಹೋಗಿದ್ದು, ದಿನಾಂಕ 19-04-2014 ರಂದಯ ಬೆಳಿಗ್ಗೆ 10 ಗಂಟೆಗೆ ಅಂಗಡಿ ಬಾಗಿಲು ತೆರೆದಾಗ ಅಂಗಡಿಯಲ್ಲಿದ್ದ ಹಾರ್ಡ್ ವೇರ್ ಸಾಮಾನು ಚೆಲ್ಲಾಪಿಲ್ಲಿಯಾಗಿದ್ದು, ನೋಡಿದಾಗ ಮಹಡಿಯ ಬಾಗಿಲು ತೆರೆದಿದ್ದು, ಮೇಲೆ ನೋಡಿದಾಗ ಅಂಗಡಿಯ ಮಾಡಿನ ಹಂಚನ್ನು ಯಾರೋ ಕಳ್ಳರು ಬಲಾತ್ಕಾರದಿಂದ ತೆರೆದು ಅದರ ಮುಖಾಂತರ ಒಳ ಬಂದು ಕ್ಯಾಶ್ ಡ್ರಾವರಿನಲ್ಲಿದ್ದ ಸುಮಾರು ರೂ, 400/- ನ್ನು ಕಳವು ಮಾಡಿದ್ದಲ್ಲದೆ ರಾಕ್ ನಲ್ಲಿಟ್ಟಿದ್ದ ಸುಮಾರು 56 ಕೆಜಿಯಷ್ಠು ತಾಮ್ರದ ತಂತಿಯನ್ನು ಕಳವು ಮಾಡಿದ್ದಾಗಿರುತ್ತದೆ. ಕಳವಾದ ತಾಮ್ರದ ತಂತಿಯ ಒಟ್ಟು ಅಂದಾಜು ಮೌಲ್ಯ ರೂ 24,000/- ಆಗಬಹುದು. ದಿನಾಂಕ 18-04-2014 ಸಂಜೆ 7 ಗಂಟೆಯಿಂದ ದಿನಾಂಕ 19-04-2014 ಬೆಳಿಗ್ಗೆ 10 ಗಂಟೆ ಮಧ್ಯೆ ಯಾರೋ ಕಳ್ಳರು ಅಂಗಡಿಯ ಒಳ ಪ್ರವೇಶಿಸಿ ಕಳವು ಮಾಡಿದ್ದಾಗಿದ್ದು, ಕಳವಾದ ಸೊತ್ತಿನ ಒಟ್ಟು ಅಂದಾಜು ಮೌಲ್ಯ ರೂ 24400/- ಆಗಬಹುದು.

 

5.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಮಸೂದ್ ರವರ ಅಣ್ಣ ಮಹಮ್ಮದ್ ಖಾಲಿದ್ ಪ್ರಾಯ 33 ವರ್ಷ  ಎಂಬುವರು ದಿನಾಂಕ 17/04/2014 ರಂದು  ಸಂಜೆ 05-30 ಗಂಟೆಗೆ  ದುಬೈ ದೇಶಕ್ಕೆ ಹೋಗುವರೇ  ಉಡುಪಿ ಜಿಲ್ಲೆಯ ಸಾಸ್ತಾನದಿಂದ ಹೂರಟು ಬಜಪೆ ವಿಮಾನ ನಿಲ್ದಾಣಕ್ಕೆ ಬಂದಾಗ ಸಂಜೆ 07-20 ಗಂಟೆಗೆ  ದುಬೈಗೆ ಹೋಗಬೇಕಾದ ಏರ್ ಇಂಡಿಯಾ ವಿಮಾನವು ಕಾರಣಾಂತರದಿಂದ  ರದ್ದಾದ ಕಾರಣ ಸದ್ರಿ ವಿಮಾನ ಸಿಬ್ಬಂದಿಗಳು ವಿಮಾನದಲ್ಲಿ ಪ್ರಯಾಣಿಸ ಬೇಕಾದ ಪ್ರಯಾಣಿಕರಿಗೆ  ಮಂಗಳೂರಿನಲ್ಲಿ ಉಳಕೂಳ್ಳುವ ವ್ಯವಸ್ಥೆ ಮಾಡಿ ದಿನಾಂಕ 18/04/2014 ರಂದು ಬೆಳಗ್ಗೆ  08-00 ಗಂಟೆಗೆ ಬಜಪೆ ವಿಮಾನ ನಿಲ್ದಾಣಕ್ಕೆ  ಅವರ ಬಸ್ಸಿನಲ್ಲಿ  ಪ್ರಯಾಣಿಕರನ್ನು ತಂದಿಳಿಸಿದ್ದು  ಪೈಕಿ  ಮಹಮ್ಮದ್ ಖಾಲಿದ್ ರವರು  ವಿಮಾನ ನಿಲ್ದಾಣದಲ್ಲಿ ಇಳಿದವರು  ದುಬೈ ದೇಶಕ್ಕೆ ಹೋಗದೆ ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿರುತ್ತಾರೆ.

 

6.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-4-2014 ರಂದು ಬೆಳಿಗ್ಗೆ 11-00 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ಉಳ್ಳಾಲ ಬಸ್ಸು ನಿಲ್ದಾಣದ ಬಳಿ ಫಿರ್ಯಾದಿದಾರರಾದ ಶ್ರೀಮತಿ ನಬೀಸಾ ರವರು ನಡೆದುಕೊಂಡು ಹೋಗುತ್ತಿರುವ ಸಮಯದಲ್ಲಿ ಆರೋಪಿಯು ಕೆಎ-19-ಡಿ-4905 ನೇ ಬಸ್ಸನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಒಮ್ಮೆಲೇ ಹಿಂದಕ್ಕೆ ಚಲಾಯಿಸಿ ಫಿರ್ಯಾದಿದಾರರಿಗೆ ಢಿಕ್ಕಿ ಉಂಟು ಮಾಡಿದ ಪರಿಣಾಮ ಫಿರ್ಯಾದಿದಾರರು ರಸ್ತೆ ಬದಿಗೆ ಬಿದ್ದು ಪರಿಣಾಮ ಫಿರ್ಯಾದಿದಾರರ ಬಲ ಕಾಲಿನ ಸೊಂಟಕ್ಕೆ ಗಂಭೀರ ಸ್ವರೂಪದ ಮೂಳೆ ಮುರಿತದ ಗಾಯ ಉಂಟಾಗಿರುತ್ತದೆ. ಗಾಯಗೊಂಡ ಫಿರ್ಯಾದಿದಾರರನ್ನು ಅಲ್ಲಿ ಸೇರಿದವರು ಚಿಕಿತ್ಸೆಯ ಬಗ್ಗೆ ತೊಕ್ಕೊಟು ನೇತಾಜಿ ಎಲ್ಲಪ್ಪ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋದಲ್ಲಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ.

 

7.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ದಯಾನಂದ ಶೆಟ್ಟಿ ರವರು ಕೆಲಸ ನಿರ್ವಹಿಸುವ ಲಕ್ಷ್ಯ ಬಿಲ್ಡರ್ಸ್ನವರ ಬಾಬ್ತು ಮಂಗಳೂರು ತಾಲೂಕು, ಮುನ್ನೂರು ಗ್ರಾಮದ ಕುತ್ತಾರು ಎಂಬಲ್ಲಿ ನಿರ್ಮಾಣ ಹಂತದ ಅರ್ಪಾಟ್‌‌ಮೆಂಟ್ಗೆ ಯಾರೋ ಕಳ್ಳರು ಬಾಗಿಲಿನ ಬೀಗಳನ್ನು ದಿನಾಂಕ 18-04-2014 ರಂದು 18-00 ಗಂಟೆಯಿಂದ ದಿನಾಂಕ 19-04-2014 ಬೆಳಿಗ್ಗೆ 09-30 ಗಂಟೆಯ ಮಧ್ಯೆ ಮುರಿದು ಒಳಪ್ರವೇಶಿಸಿ ಬಾತ್ರೂಮ್ಗಳಿಗೆ ಅಳವಡಿಸಿದ ಸಿಪಿ ಪಿಟ್ಟಿಂಗ್ಗಳಾದ ಮಿಕ್ಸ್ಸೆಟ್‌, ಶವರ್ಟ್ಯಾಫ್‌, ವಾಷ್ಬೇಸಿನ್‌, ಕನೆಕ್ಸನ್ಪೈಪ್ಇತ್ಯಾದಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಸ್ವತ್ತಿನ ಅಂದಾಜು ಮೌಲ್ಯ ರೂಪಾಯಿ 24000/- ಆಗಬಹುದು.

 

8.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ವಿಖ್ಯಾತ್ ರವರ ತಂದೆ ವರುಣ್ ರವರು ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದು, ಈಗ್ಗೆ ಸುಮಾರು 4 ತಿಂಗಳಿಂದ ದಯಾನಂದ್ ಎಂಬುವರ ಅಧೀನದಲ್ಲಿ ಕೋಟಿಮುರ ಎಂಬಲ್ಲಿ Providence Builders Developers  ಎಂಬುವರು ನಿರ್ಮಿಸುತ್ತಿರುವ 'ದಶಾ' ಎಂಬ ಅಪಾರ್ಟ್ ಮೆಂಟ್ ನಲ್ಲಿ ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದು, ದಿನಾಂಕ 18-04-2014 ರಂದು ರಂದು ಪಿರ್ಯಾದಿದಾರರ ತಂದೆಯವರು ಬೆಳಿಗ್ಗೆ 8-00 ಗಂಟೆಗೆ ಕೆಲಸದ ಬಗ್ಗೆ ಕೋಟಿಮುರಕ್ಕೆ  ಹೋಗಿದ್ದು, 3ನೇ ಮಹಡಿಯಲ್ಲಿ ಬಾರ್ ಬೆಂಡಿಂಗ್ ಕೆಲಸ ಮಾಡಿಕೊಂಡಿರುವಾಗ್ಗೆ ಸಂಜೆ 5-15 ಗಂಟೆ ವೇಳೆಗೆ ಸದ್ರಿ ಬಿಲ್ಡಿಂಗ್ ದಕ್ಷಿಣ ಬದಿಯಲ್ಲಿ ಸುಮಾರು 30 ಅಡಿ ಮೇಲಿನಿಂದ ಕೆಳಗಡೆ ನೆಲಕ್ಕೆ ಬಿದ್ದುದರಿಂದ ತಲೆಗೆ ತೀವೃ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಗಿ, ಪಿರ್ಯಾದಿದಾರರ ತಂದೆಯವರು ಕೆಲಸ ಮಾಡುತ್ತಿದ್ದ ನಿರ್ಮಾಣ ಹಂತದಲ್ಲಿರುವ ದಿಶಾ ಅಪಾರ್ಟ್ ಮೆಂಟ್ ಬಿಲ್ಷಿಂಗನ 2 ಬೇಸ್ ಮೆಂಟ್ ಫ್ಲೋರ್ ನಂತರ ಗ್ರೌಂಡ್ 1ನೇ ಮತ್ತು 2ನೇ ಫ್ಲೋರ್ ಸ್ಲ್ಯಾಬ್ ಆಗಿ 3ನೇ ಫ್ಲೋರ್ ಪಿಲ್ಲರ್ ನಿರ್ಮಾಣ ಹಂತದಲ್ಲಿರುತ್ತದೆ.  ಅಪಾರ್ಟ್ ಮಂಟ್ ನಲ್ಲಿ ಫ್ಲೋರನ್ನು ಒಂದರ ಮೇಲೊಂದರಂತೆ ಕಟ್ಟುತ್ತಿದ್ದರೂ ಸುತ್ತಲೂ ಇದುವರೆಗೂ ಯಾವುದೇ ತಡೆಗೋಡೆಯನ್ನು ನಿರ್ಮಿಸದೇ ಇದ್ದು, ಕೆಲಸದವರು ಸುಮಾರು 30 ಅಡಿಗಳಿಗಿಂತಲೂ ಎತ್ತರದಲ್ಲಿ ಕೆಲಸ ಮಾಡುವ ವೇಳೆ ಕೆಳಗಡೆ ಬಿದ್ದರೆ ಪ್ರಾಣಾಪಾಯವಾಗುವ ಸಾಧ್ಯತೆ ಇದೆ ಎಂದು ತಿಳಿದಿದ್ದರೂ ಯಾವುದೇ ತಡೆಗೋಡೆಯನ್ನು ನಿರ್ಮಿಸದೇ ಮತ್ತು ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳದೇ ಕೆಲಸಗಾರರಿಂದ ಕೆಲಸ ಮಾಡಿಸುತ್ತಿದ್ದ ಕಾರಣದಿಂದಲೇ ಮೃತಪಟ್ಟಿದ್ದಾಗಿದೆ.  ಯಾವುದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೇ ಪಿರ್ಯಾದಿದಾರರ ತಂದೆಯವರಿಂದ ಕೆಲಸ ಮಾಡಿಸಿ ಅವರ ಮರಣಕ್ಕೆ ಕಾರಣರಾದ ಕಂಟ್ರಾಕ್ಟರ್ ದಯಾನಂದ, Providence Builders Developers ಇಂಜಿನಿಯರ್ ರವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಪಿರ್ಯಾದಿ ನೀಡಿರುವುದಾಗಿದೆ.

 

9.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಹೇಮಂತ್ ಶೆಟ್ಟಿ ರವರ  ದೊಡ್ಡಮ್ಮನ  ಮಗ  ಭಾಸ್ಕರ್ಎಂಬವರು  ದಿನಾಂಕ  18.04.201 ರಂದು  ಬೆಳಿಗ್ಗೆ 8:30  ಗಂಟೆಗೆ ಜಪ್ಪಿನಮೊಗರು ಎಂಬಲ್ಲಿಂದ ದೇರಳಕಟ್ಟೆಗೆ ಕೆಲಸಕ್ಕೆ ಹೋಗುತ್ತೇನೆ ಎಂದು  ಹೇಳಿ ಹೋದವರು  ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿರುವುದಾಗಿದೆ. ಕಾಣೆಯಾದ ಭಾಸ್ಕರ ಶೆಟ್ಟಿ ಚಹರೆ ವಿವರ : ದುಂಡು ಮುಖ. ಕಂದು ಮೈಬಣ್ಣ, ಹೋಗುವಾದ ನೀಲಿ ಬಣ್ಣದ ಲೈನ್ಇರುವ ಟೀ  ಶರ್ಟ್‌, ಹಾಗೂ ನೀಲಿ  ಬಣ್ಣದ ಜೀನ್ಸ್  ಧರಿಸಿರುತ್ತಾರೆ. ತುಳು,  ಕನ್ನಡ, ಹಿಂದಿ, ತೆಲುಗು  ಬಾಷೆ  ಮಾತನಾಡುತ್ತಾರೆ 5'3 ಅಡಿ  ಎತ್ತರ  ಇರುತ್ತಾರೆ.

No comments:

Post a Comment