Friday, May 31, 2013

Daily Crime Incidents For May 31, 2013

ವಿಶೇಷ ಹಾಗೂ ಸ್ಥಳೀಯ ಪ್ರಕರಣ:

ಮಂಗಳೂರು ಉತ್ತರ ಠಾಣೆ;


  • ದಿನಾಂಕ 30-05-2013 ರಂದು 15:00 ಗಂಟೆಗೆ ಫಿಯರ್ಾದಿದಾರರಾದ ಸ್ಟ್ಯಾನಿ ಅಲ್ವಾರಿಸ್ ರವರು ತನ್ನ ಬಾಬ್ತು ಕಾರು ನಂಬ್ರ ಕೆಎ-19-ಎಂಸಿ-4060 ನೇಯದ್ದನ್ನು ಮಂಗಳೂರು ಕೆ.ಎಸ್. ರಸ್ತೆಯಲ್ಲಿರುವ ಮಿಸ್ಚೀಫ್ ಮಾಲ್ನ ಕಾರು ಪಾಕರ್ಿಂಗ್ ಸ್ಥಳದಲ್ಲಿ ಪಾಕರ್್ ಮಾಡಿ, ಮಾಲ್ಗೆ ಹೋಗಿದ್ದು, ಸುಮಾರು 17:00 ಗಂಟೆಗೆ ವಾಪಾಸ್ಸು ಬರುವಾಗ, ಅಲ್ಲಿ ಕರ್ತವ್ಯದಲ್ಲಿದ್ದ ಸೆಕ್ಯೂರಿಟಿ ಗಾಡರ್್ ರವಿ ಎಂಬವರು ಕಾರಿನ ನಾಲ್ಕೂ ಚಕ್ರಗಳಿಗೆ ಮೊಳೆಗಳನ್ನು ಹೊಡೆದಿದ್ದು, ಈ ಬಗ್ಗೆ ಸೆಕ್ಯೂರಿಟಿ ಗಾಡರ್್ ರವಿಯವರಲ್ಲಿ ವಿಚಾರಿದಾಗ, ಪಿರ್ಯಾದಿದಾರರನ್ನುದ್ದೇಶಿಸಿ ಬೇವಸರ್ಿ, ನಿನಗೆ ಇಲ್ಲಿ ಗಾಡಿ ನಿಲ್ಲಸಲು ಯಾರು ಹೇಳಿದ್ದು, ನಾನು ಹಾಗೇಯೇ ಮಾಡುವುದು, ನಿನಗೆ ತಾಕತ್ತಿದ್ದರೆ ಮಾಡುವುದನ್ನು ಮಾಡು ಎಂಬುದಾಗಿ ಅವಾಚ್ಯ ಶಬ್ದಗಳಿಂದ ಹೊರಟು ಹೋಗಿದ್ದು, ಈ ಬಗ್ಗೆ ಬೇರೆ ಸೆಕ್ಯೂರಿಟಿ ಗಾಡರ್್ ರವರಲ್ಲಿ ವಿಚಾರಿಸಿದಾಗ ಆರೋಪಿತರ ಹೆಸರು ಸೆಕ್ಯೂರಿಟಿ ಗಾಡರ್್ ರವಿ ಎಂಬುದಾಗಿ ತಿಳಿಸಿದ್ದು, ಪಿರ್ಯಾದಿದಾರರ ಕಾರಿಗೆ ಸುಮಾರು ರೂ. 20,000/- ನಷ್ಟವುಂಟು ಮಾಡಿದ ಸೆಕ್ಯೂರಿಟಿ ಗಾಡರ್್ ಯವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಪಿರ್ಯಾದಿ  ಎಂಬುದಾಗಿ ಸ್ಟ್ಯಾನಿ ಅಲ್ವಾರಿಸ್, ತಂದೆ: ವೇಲೆರಿಯನ್ ಅಲ್ವಾರಿಸ್, ವಾಸ: ಪಚ್ಚನಾಡಿ, ಬೊಂದೇಲ್, ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಠಾಣೆ ಅಪರಾದ ಕ್ರಮಾಂಕ 120/2013 ಕಲಂ 504, 427 ಐಪಿಸಿ ಮತ್ತು ಕಲಂ 2(ಎ) ಕೆಪಿಡಿಎಲ್ಪಿ ಆ್ಯಕ್ಟ್ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ನಿರ್ಲಕ್ಷತನದಿಂದ ಗಾಯ:

ಮಂಗಳೂರು ಉತ್ತರ ಠಾಣೆ;

  • ದಿನಾಂಕ 30-05-2013 ರಂದು 15:30 ಗಂಟೆಗೆ ಫಿಯರ್ಾದಿದಾರರಾದ ಶ್ರೀಮತಿ ಶಶಿಕಲಾ ರವರ ಗಂಡವನವರಾದ ಮದನ್ ಮೂಲ್ಯ ರವರು ಕೆಎ-19-ಎಎ-9955 ನೇ ನಂಬ್ರದ ಲಾರಿಯಲ್ಲಿ ಲೋಡಿಂಗ್ ಕೆಲಸ ಮಾಡಿಕೊಂಡಿದ್ದು, ಸದ್ರಿ ಲಾರಿಯಲ್ಲಿ ಕುಶಾಲ್ ಕುಮಾರ್ ಎಂಬವರು ಚಾಲಕರಾಗಿದ್ದು, ಮಂಗಳೂರು ಬಂದರು ಜೆ.ಎಂ. ರಸ್ತೆಯಲ್ಲಿರುವ ರಾಬಿಯಾ (ಹೋಲ್ಸೇಲ್) ಅಕ್ಕಿ ಅಂಗಡಿಯ ಬಳಿ ಅಕ್ಕಿಯನ್ನು ಲೋಡ್ ಮಾಡುವಂತೆ ಚಾಲಕ ಕುಶಾಲ್ ಕುಮಾರ್ ರವರು ತಿಳಿಸಿದ ಮೇರೆಗೆ ಪಿರ್ಯಾದಿದಾರರ ಗಂಡನವರಾದ ಮದನ್ ಮೂಲ್ಯ ರವರು ಲಾರಿಗೆ ಅಕ್ಕಿ ಮೂಟೆಗಳನ್ನು ಲೋಡಿಂಗ್ ಮಾಡುತ್ತಿರುವ ಸಮಯ ಅಟ್ಟಿ ಮಾಡಿದ ಅಕ್ಕಿ ಮೂಟೆಗಳು ಜ್ಯಾರಿ ಕೆಳಗೆ ಬಿದ್ದು, ಅದರೊಂದಿಗೆ ಪಿರ್ಯಾದಿದಾರರ ಗಂಡ ಮದನ್ ಮೂಲ್ಯ ರವರು ಕೂಡಾ ಕೆಳಗೆ ಬಿದ್ದು, ಮದನ್ ಮೂಲ್ಯ ರವರ ಬಲಕೈಯ ಅಂಗೈಯ ಬೆರಳುಗಳಿಗೆ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಸಿಟಿ ಆಸ್ಪತ್ರೆಗೆ ದಾಖಲಿಸಿದ ಬಗ್ಗೆ ಲಾರಿ ಚಾಲಕ ಕುಶಾಲ್ ಕುಮಾರ್ ರವರು ಪಿರ್ಯಾದಿದಾರರಿಗೆ ಸಮಯ ಸುಮಾರು 15:45 ಗಂಟೆಗೆ ತಿಳಿಸಿದ್ದು, ಅದರಂತೆ ಪಿರ್ಯಾದಿದಾರರು ಮಂಗಳೂರು ಸಿಟಿ ಆಸ್ಪತ್ರೆಗೆ ಬಂದು ನೋಡಲಾಗಿ ಮದನ್ ಮೂಲ್ಯ ರವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದು, ಮದನ್ ಮೂಲ್ಯ ರವರ ಬಲಕೈಯ ಅಂಗೈ ಹಾಗೂ ಬೆರಳುಗಳಿಗೆ ತೀವ್ರ ತರಹದ ಗಾಯಗಳಾಗಿದ್ದು, ಅಕ್ಕಿ ಲೋಡಿಂಗ್ ಸಮಯ ಲಾರಿಯ ಚಾಲಕರರಾದ ಕುಶಾಲ್ ಕುಮಾರ್ ಮತ್ತು ಮಾಲಕರು ಯಾವುದೇ ಮುಂಜಾಗರೂಕತೆ ವಹಿಸದೇ ಮತ್ತು ಸುರಕ್ಷತೆಯನ್ನು ನೋಡಿಕೊಳ್ಳದೇ ಪಿರ್ಯಾದಿದಾರರ ಗಂಡನವರಾದ ಮದನ್ ಮೂಲ್ಯ ರವರನ್ನು ಏಕಾಎಕಿ ಅಕ್ಕಿ ಮೂಟೆಯನ್ನು ಲೋಡ್ ಮಾಡಿಸಲು ಲಾರಿಯಲ್ಲಿ ಹತ್ತಿಸಿ ಈ ಘಟನೆಗೆ ಕಾರಣರಾಗಿದ್ದು, ಅವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಪಿರ್ಯಾದಿ ಎಂಬುದಾಗಿ ಶಶಿಕಲಾ, ಪ್ರಾಯ 33 ವರ್ಷ, ಗಂಡ: ಮದನ್ ಮೂಲ್ಯ, ವಾಸ: ಕುಂಬಳೆ ನಾಯ್ಕಬ್, ಲಕ್ಷ್ಮೀ ನಿಲಯ, ಎಡನಾಡು ಅಂಚೆ, ಕಾಸರಗೋಡು ಜಿಲ್ಲೆ, ಕೇರಳಾ ರಾಜ್ಯ ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಠಾಣೆ ಅಪರಾದ ಕ್ರಮಾಂಕ 121/2013 ಕಲಂ 338 ಜೊತೆಗೆ 34 ಭಾದಂಸಂ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:

Post a Comment