Friday, May 3, 2013

Daily Crime Incidents for May 03, 2013


ಹಲ್ಲೆ ಪ್ರಕರಣ

ಬಜಪೆ ಠಾಣೆ


  • ದಿನಾಂಕ: 02-05-2013 ರಂದು 17-15 ಗಂಟೆ ಸಮಯಕ್ಕೆ ತೆಂಕ ಎಡಪದವು ಗ್ರಾಮದ ಉಲ್ಲಾಸ್ಬಾರ್ನ ಬಳಿಯಲ್ಲಿರುವ ಹೊಟೇಲ್ ಒಂದರಲ್ಲಿ ಚಹಾ ಕುಡಿಯುತ್ತಿರುವ ಸಮಯ ಅಲ್ಲಿಗೆ ಬಂದ ಆರೋಪಿಯು ಫಿರ್ಯಾದಿದಾರರಾದ ಸುಧಾಕರ, 26 ವರ್ಷ, ತಂದೆ: ಪದ್ಮನಾಭ ಗೌಡ, ವಾಸ: ಕುದ್ರೆ ಬೆಟ್ಟು ಮನೆ, ಬಡಗ ಎಡಪದವು ಗ್ರಾಮ, ಮಂಗಳೂರು ತಾಲೂಕು ರವರನ್ನು ಉದ್ದೇಶಿಸಿ,  ಈ ಬಾರಿ ರಾಪನಾ? ಬಾರೀ ರೌಡಿಸಂ ಮಲ್ಪುವನಾ? ನಿನನ್ ದೆಪ್ಪಂದೆ ಬುಡಯೆ  ಎಂದು ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ್ದಲ್ಲದೇ ಫಿರ್ಯಾದಿದಾರರು ಅಲ್ಲಿಂದ ಎದ್ದು, ಹೊರಟಾಗ, ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಕುತ್ತಿಗೆಯನ್ನು ಹಿಡಿದು, ಕೈಯಿಂದ ಕೆನ್ನೆಗೆ ಹೊಡೆದು ದೂಡಿ ಹಾಕಿ ನೋವುಂಟು ಮಾಡಿರುವುದಾಗಿದೆ.  ಈ ಬಗ್ಗೆ ಫಿರ್ಯಾದಿದಾರರು ಮೂಡಬಿದ್ರಿ ಸಮುದಾಯ ಕೇಂದ್ರದಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ.  ಈ ಕೃತ್ಯಕ್ಕೆ ಕಾರಣವೇನೆಂದರೆ, ಆರೋಪಿಯು ಫಿರ್ಯಾದಿದಾರರನ್ನು ಈ ಹಿಂದೆಯೂ ಛೇಡಿಸಿ ಮಾತನಾಡುತ್ತಿದ್ದು, ಈ ದಿನವೂ ಅದೇ ರೀತಿ ಛೇಡಿಸಿ ಈ ಹಲ್ಲೆ ಮಾಡಿರುವುದಾಗಿದೆ ಎಂಬುದಾಗಿ ಸುಧಾಕರ್ ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ: 132/2013 ಕಲಂ: 341. 04, 323, 506 ಐಪಿಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಕಳವು ಪ್ರಕರಣ


  • ದಿನಾಂಕ: 01/02-05-2013 ರಂದು 01-00 ಗಂಟೆ ಸಮಯಕ್ಕೆ ಮಂಗಳುರು ತಾಲೂಕಿನ , ಬಜಪೆ ಗ್ರಾಮದ, ತಾರಿಕಂಬಳ ಎಂಬಲ್ಲಿ ಫಿರ್ಯಾದಿದಾರರಾದ ಬಿ. ಮಹವ್ಮ್ಮದ್ ಆಲಿ, ಪ್ರಾಯ: 43 ವರ್ಷ, ತಂದೆ: ಬಿ. ಹಮ್ಮಬ್ಬ, ವಾಸ: ಬ್ಶೆತುಲ್ ಸಿಯಾಮ ಮನೆ, ತಾರಿಕಂಬಳ, ಬಜಪೆ ಗ್ರಾಮ ಮತ್ತು ಅಂಚೆ, ಮಂಗಳೂರು ತಾಲೂಕು ರವರು ತನ್ನ ಮನೆಯಲ್ಲಿ ರಾತ್ರಿ  ಬಾಗಿಲು ಹಾಕಿ ಮಲಗಿದ್ದ ಸಮಯ ಮನೆಯ ಹಿಂಬಾಗಿಲನ್ನು ಯಾರೋ ಒಡೆಯುವ ಶಬ್ದ ಕೇಳಿ ಫಿರ್ಯಾದಿದಾರರು ಪೊಲೀಸ್ ಕಂಟ್ರೋಲ್ ರೂಮ್ಗೆ ಫೋನ್ ಮಾಡಿದಾಗ, ಶಬ್ದ ಕೇಳಿ ಬಾಗಿಲು ಒಡೆಯುತ್ತಿದ್ದವರು ಓಡಿ ಹೋಗಿದ್ದು, ಫಿರ್ಯಾದಿದಾರರು ಮನೆಯ ಹಿಂಬಾಗಿಲನ್ನು ತೆರದು, ಹೊರಗೆ ಬಂದು ನೋಡಿದಾಗ, ಯಾರೋ ಕಳ್ಳರು ಮನೆಯ ಹಿಂಬಾಗಿಲ ಬೀಗವನ್ನು ಮುರಿಯಲು ಪ್ರಯತ್ನಿಸಿದ್ದಲ್ಲದೇ,  ಎದುರಿನ ಬಾಗಿಲನ್ನೂ ತೆರೆಯದಂತೆ ಸಿಟ್ಓಟ್ಗೆ ಹಗ್ಗದಿಂದ ಬಿಗಿದು ಕಟ್ಟಿದ್ದು, ಯಾರೋ ಕಳ್ಳರು ಫಿರ್ಯಾದಿದಾರರ ಮನೆಗೆ ನುಗ್ಗಿ ಕಳ್ಳತನ ಮಾಡಲು ಪ್ರಯತ್ನಿಸಿರುತ್ತಾರೆ ಎಂಬುದಾಗಿ ಬಿ. ಮಹವ್ಮ್ಮದ್ ಆಲಿ, ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ:131/2013 ಕಲಂ: 457, 380, 511 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



  • ದಿನಾಂಕ: 01-05-2013 ರಂದು ಸಂಜೆ ಸಮಯ ಫಿರ್ಯಾದಿದಾರರಾದ ಹಮ್ಭಿದ್ ಮಹವ್ಮ್ಮದ್ ಅಬ್ಬಾಸ್, ಪ್ರಾಯ: 50 ವರ್ಷ, ತಂದೆ: ದಿ: ದಿ:ಅಬ್ಬಾಸ್, ವಾಸ: ಬ್ಶೆತುಲ್ ಅಮೀನ್ ಮನೆ, ಹಳೇ ವಿಮಾನ ನಿಲಾಣ ರಸ್ತೆ, ಬಜಪೆ ಗ್ರಾಮ ಮತ್ತು ಅಂಚೆ, ಮಂಗಳೂರು ತಾಲೂಕು ರವರು ತನ್ನ ಸಂಸಾರದೊಂದಿಗೆ ಮನೆಗೆ ಬೀಗ ಹಾಕಿ ಕಾಟಿಪಳ್ಳಕ್ಕೆ ಹೋಗಿದ್ದು, ದಿನಾಂಕ: 02-05-2013 ರಂದು ಬೆಳಿಗ್ಗೆ 10-30 ಗಂಟೆ ಸಮಯಕ್ಕೆ ವಾಪಾಸು ಬಂದು ನೋಡಿದಾಗ, ಫಿರ್ಯಾದಿದಾರರ ಮನೆಯ ಎದುರಿನ ಬಾಗಿಲಿನ ಬೀಗವನ್ನು ಮುರಿದ ಯಾರೋ ಕಳ್ಳರು ಮನೆಯ ಒಳ ಪ್ರವೇಶಿಸಿ ಮನೆಯ ಸಾಮಾಗ್ರಿಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದಲ್ಲೇ 5000/- ರೂ. ನಗದು ಹಣ ಮತ್ತು ಸುಮಾರು 5000/- ರೂ ಮೌಲ್ಯದ ಎರಡು ವಾಚುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ಹಮ್ಭಿದ್ ಮಹವ್ಮ್ಮದ್ ಅಬ್ಬಾಸ್ ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ: 130/2013 ಕಲಂ: 457, 380 ಐಪಿಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ


  • ದಿನಾಂಕ: 01-05-2013 ರಂದು ಫಿರ್ಯಾದಿದಾರರಾದ ಸಚಿನ್ ಎಲ್.ಎಂ., 26 ವರ್ಷ, ತಂದೆ: ಸೈಮನ್ ಫೆನರ್ಾಂಡಿಸ್ ವಾಸ: ಹಿಂಕ್ರುಟ್ಟ್ ಹೌಸ್, ವಾಲ್ಪಾಡಿ ಅಂಚೆ, ಮೂಡಬಿದ್ರಿ, ಮಂಗಳೂರು ತಾಲೂಕು ರವರು ತನ್ನ ಬಾಬ್ತು ಮೋಟಾರು ಸೈಕಲ್ ನಂ: ಕೆಎ 19 ಇಎಫ್ 1495 ರಕ್ಕು ಮೂಡಬಿದ್ರಿಯಿಚಿದ ಮಳಲಿ ನಾರ್ಲಪದವು ಕಡೆಗೆ ಹೊರಟು ಸಂಜೆ ಸುಮಾರು 4-00 ಗಂಟೆಗೆ ಮಂಗಳೂರು ತಾಲೂಕು ಬಡಗುಳಿಪಾಡಿ ಗ್ರಾಮದ ಗಂಜಿಮಠ ಕೈಗಾರಿಕಾಭಿವೃದ್ದಿ ಪ್ರದೇಶ ತಲುಪುತ್ತಿದ್ದಂತೇ ಎದುರಿನಿಂದ ಬರುತ್ತಿದ್ದ ಪಿಕ್ ಅಪ್ ವಾಹನ ನಂ: ಕೆಎ 19 ಸಿ 2604 ನೇದ್ದನ್ಮ್ನ ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವ್ಯದೇ ಮುನ್ಸೂಚನೆ ನೀಡದೇ ಒಮ್ಮಲೇ ರಸ್ತೆಯ ಬಲಬದಿಗೆ ತಿರುಗಿಸಿದ ಪರಿಣಾಮ ಫಿರ್ಯಾದಿದಾರರ ಮೋಟಾರು ಸೈಕಲ್ಗೆ ಡಿಕ್ಕಿ ಹೊಡೆದು ಫಿರ್ಯಾದಿದಾರರು ರಸ್ತೆಗೆ ಬಿದ್ದು, ಅವರ ಎಡ ಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು, ಅವರನ್ಮ್ನ ಚಿಕಿತ್ಸೆಯ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬುದಾಗಿ ಸಚಿನ್ ಎಲ್.ಎಂ ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ: 129/2013 ಕಲಂ: 279,338 ಐಪಿಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ

ಪಣಂಬೂರು ಠಾಣೆ


  • ದಿನಾಂಕಃ 02-05-2013 ರಂದು ,ಮಧ್ಯಾಹ್ನ  2-30 ಗಂಟೆ ಸಮಯಕ್ಕೆ ಎನ್ ಎಮ್ ಪಿ ಟಿ ಬತರ್್ ನಂಬ್ರ 7 ರಲ್ಲಿ ಟಿಎನ್-47/4329 ನೇ ಟ್ರೈಲರ್ ಲಾರಿಯಲ್ಲಿ ಲಾರಿಯ ಹೋಸ್ ಪೈಪು ಎಳೆಯುತ್ತಿರುವ ಸಮಯ ಅದರ ಚಾಲಕ ಕುಮಾರ್ ಒಮ್ಮೆಲೆ ಆಕಸ್ಮಿಕವಾಗಿ ಲಾರಿಯಿಂಧ ಬತರ್್ ನಂಬ್ರ 4 ರ ಸಿಮೆಂಟ್ ಧರೆಗೆ ಎಸೆಯಲ್ಪಟ್ಟು ತಲೆಗೆ ಉಂಟಾದ ಗಂಭೀರ ಗಾಯಗೊಂಡವರನ್ನು ಎ.ಜೆ ಆಸ್ಪತ್ರೆಗೆ ದಾಖಲಿಸಿದಲ್ಲಿ ಚಿಕಿತ್ಸೆ ಪಲಕಾರಿಯಾದಗದೇ ಈ ದಿನ ಸಂಜೆ 6-30 ಗಂಟೆಗೆ ಮೃತ ಪಟ್ಟಿರುವುದಾಗಿದೆ ಎಂಬುದಾಗಿ ಲತೀಶ್ (26)ನ ತಂದೆ ಃ ಗಣೇಶ್ ದೇವಾಡಿಗ ವಾಸ ಃ ಚಿತ್ರ ನಿವಾಸ್ ಮುಕ್ಕ, ಸುರತ್ಕಲ್. ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಪಣಂಬೂರು ಠಾಣಾ ಯು.ಡಿ.ಆರ್ ನಂಬ್ರ ಃ 08/2013, ಕಲಂ ಃ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


No comments:

Post a Comment