Sunday, May 26, 2013

Daily Crime Incidents For May 26, 2013

ಅಪಘಾತ ಪ್ರಕರಣ:

ಬಜಪೆ ಠಾಣೆ;

  • ದಿನಾಂಕ: 25-05-2013 ರಂದು  ಫಿರ್ಯಾದಿದಾರರು ತನ್ನ ತಂದೆ ಜಾನ್ ವಿಲಿಯಂ ರೇಗೋ ಮತ್ತು ತಾಯಿ ಲೂಯಿಜಾ ರೇಗೋ, ಹಾಗೂ ಚಿಕ್ಕಮ್ಮನ ಮಗನಾದ ವಿವೇಕ್ ಎಂಬವರು ಆಲ್ಟೋ ಕಾರು ನಂ: ಕೆಎ 19 ಪಿ 9322 ರಲ್ಲಿ ಮಂಗಳೂರು ಕಡೆಯಿಂದ ಬಜಪೆ ಕಡೆಗೆ ಬರುತ್ತಾ  ಜಾನ್ ವಿಲಿಯಂ ರೇಗೋ ರವರು ಕಾರನ್ನು ಚಲಾಯಿಸುತ್ತಿದ್ದು, ಕಾರು ಮಂಗಳೂರು ತಾಲೂಕಿನ, ಮಳವೂರು ಗ್ರಾಮದ , ಅಂತೋನಿ ಕಟ್ಟೆ ತಿರುವು ತಲುಪುತ್ತಿದ್ದಂತೇ ಸಂಜೆ ಸುಮಾರು 17-00 ಗಂಟೆ ಸಮಯಕ್ಕೆ ಎದುರಿನಿಂದ ಅಂದರೆ, ಬಜಪೆ ಕಡೆಯಿಂದ  ಟಿಪ್ಪರ್ ಲಾರಿ ನಂ: ಕೆಎ 19 ಡಿ  7659 ನ್ನು ಅದರ ಚಾಲಕರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡದಲ್ಲದೇ ಕಾರು ಚಾಲಕರಾದ ಜಾನ್ ವಿಲಿಯಂ ರೇಗೋ ರವರ ಕುತ್ತಿಗೆಗೆ ಮತ್ತು ಎಡ ಕೈಗೆ ಜಖಂ ಆಗಿದ್ದು, ಅಲ್ಲದೇ ತಾಯಿ ಲೂಯಿಜಾ ರೇಗೋರವರ ಎಡಕಾಲು ಜಖಂ ಆಗಿರುತ್ತದೆ. ಗಾಯಾಳುಗಳು ಚಿಕಿತ್ಸೆಯ ಕುರಿತು ಮಂಗಳೂರು ಎ.ಜೆ. ಅಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬುದಾಗಿ ಬ್ರಯಾನ್, 25 ವರ್ಷ, ತಂದೆ: ಜಾನ್ ವಿಲಿಯಂ ರೇಗೋ, ಸನ್ ವಿವ್, (ಮೆಗ್ದಲಿನ್), ಓಲ್ಡ್ ಕಾನ್ವೆಂಟ್ ರೋಡ್, ಬಜಪೆ ಗ್ರಾಮ ಮತ್ತು ಅಂಚೆ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 155/2013 ಕಲಂ:279, 338  ಐಪಿಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ:

ಪಣಂಬೂರು ಠಾಣೆ;

  • ದಿನಾಂಕ 25-05-2013 ರಂದು ರಾತ್ರಿ 7-00 ಗಂಟೆ ಸಮಯಕ್ಕೆ ಪಿರ್ಯಾದಿದಾರರ ತಂಗಿ ಬಬಿತ ಮತ್ತು ತಮ್ಮ ಕಿಶೋರ್ ಜೊತೆಯಲ್ಲಿ ಮನೆಯಲ್ಲಿ ಇರುವ ಸಮಯ ಆರೋಪಿಗಳಾದ ಕಮಲಾಕ್ಷ ರಾಜೇಶ್ ಮತ್ತು ಜಯಶ್ರೀ 3 ಜನರು ಸಮಾನ ಉದ್ದೇಶದಿಂದ ಪಿರ್ಯಾದಿಯ ಮನೆಯ ಸುತ್ತ ಮಳೆ ನೀರು ತಡೆಯಲು ಮರಳು ಹಾಕಿದ ಬಗ್ಗೆ ಪಿರ್ಯಾದಿಯ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಬೇವಸರ್ಿ ರಂಡೆಲೆ ನಮ್ಮ ದಾರಿಗೆ ಯಾಕೆ ಮರಳು ಹಾಕಿದ್ದೀರಿ ಎಂದು ಬೇಡದ ಮಾತುಗಳಿಂದ ಬೈದು ಆರೋಪಿ ಕಮಲಾಕ್ಷನು ಆತನ ಕೈಯಲ್ಲಿದ್ದ ಮರದ ಸೋಂಟೆಯಿಂದ ಪಿರ್ಯಾದಿಯ ತಲೆಗೆ ಕಿಶೋರ್ನ ಬಲ ಕೆನ್ನೆಗೆ ಮತು ಬಬಿತಳ ಕೈಗೆ ಹೊಡೆದು ಗಾಯಗೊಳಿಸಿರುವುದಲ್ಲದೆ. ಜನರು ಸೇರುವುದನ್ನು ಕಂಡು ಮುಂದಕ್ಕೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲವಾಗಿ ಬೆದರಿಕೆ ಒಡ್ಡಿದ್ದು ಗಾಯಗೊಂಡ ಪಿರ್ಯಾದಿ ಮತ್ತು ಬಬಿತ, ಕಿಶೋರ್ ಸುರತ್ಕಲ್ ಪದ್ಮಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಪಿಗಳ ವಿರುದ್ದ ಕಾನೂನು ಕೈಗೊಳ್ಳುವರೇ ಎಂಬುದಾಗಿ ರೇಣುಖ  32 ವರ್ಷ ಗಂಡ: ಮೊಹನ್ ರಾಜ್. ಸೇಸಪ್ಪ ಪೂಜಾರಿ ನಿವಾಸ. ಮೀನಕಳಿಯ ನವ ಜ್ಯೋತಿ ಸಂಘದ ಹತ್ತಿರ ಬೈಕಂಪಾಡಿ, ಮಂಗಳೂರು ರವರು ನೀಡಿದ ದೂರಿನಂತೆ ಪನಣಂಬೂರು ಠಾಣೆ ಅಪರಾದ ಕ್ರಮಾಂಕ 77/13 ಕಲಂ: 448 , 324, 354, 504, 506, ಜತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ವಿಶೇಷ ಹಾಗೂ ಸ್ಥಳೀಯ ಕಾನೂನು:

ಬಕರ್ೆ ಠಾಣೆ;

  • ದಿನಾಂಕ:25-05-2013 ರಂದು ಬಕರ್ೆ ಠಾಣಾ ವ್ಯಾಪ್ತಿಯ ಹಿಂದುಸ್ತಾನ್ ಲಿವರ್ ಫ್ಯಾಕ್ಟರಿಯ್ ಎದುರುಭಾಗದಿಂದಾಗಿ ಹೋಗುವ ಬೊಕ್ಕಪಟ್ಟಣ ಕಡವಿನ ಬಳಿ ಪೊದೆಗಿಡಗಳ ಮಧ್ಯೆ ಖಾಲಿ ಜಾಗದಲ್ಲಿ 5 ರಿಂದ 6 ಜನರು  ಸೇರಿಕೊಂಡು ಜುಗಾರಿ ಆಡುತ್ತಿದ್ದಾರೆ ಎಂದು ದೊರೆತ ಖಚಿತ ವರ್ತಮಾನದ ಮೇರೆಗೆ ಪಿರ್ಯಾದಿದಾರರ ಠಾಣಾ ಸಿಬ್ಬಂದಿಗಳನ್ನು ಹಾಗೂ ಪಂಚರನ್ನು ಕರೆದುಕೊಂಡು ಇಲಾಖಾ ಜೀಪಿನಲ್ಲಿ ಸಂಜೆ 15-30 ಗಂಟೆಗೆ ಮಾಹಿತಿ ದೊರೆತ ಸ್ಥಳವಾದ ಬೊಕ್ಕಪಟ್ಟಣ ಕಡವಿನ ಸಮೀಪ ತಲುಪಿ ನೋಡಲಾಗಿ ಕಡವಿನ ಬಳಿ ಪೊದೆಗಿಡಗಳ ಮಧ್ಯೆ ಖಾಲಿ ಜಾಗದಲ್ಲಿ ಅರೋಪಿಗಳಾದ ಕೆ.ವಿ ವಿನಾಯಕ (44), ಪ್ರವೀಣ್ ಶೆಟ್ಟಿ (45) , ಹರೀಶ್ ಪೂಜಾರಿ(28) , ಸಂತೋಷ್ (30) ವೃತ್ತಾಕಾರವಾಗಿ ಕುಳಿತು ನೆಲದ ಮೇಲೆ ಬೈರಾಸ್ ಹಾಸಿ ಹಣವನ್ನು ಪಣವಾಗಿ ಇಟ್ಟುಕೊಂಡು ಇಸ್ಟೀಟು ಎಲೆಗಳಿಂದ ಉಲಾಯಿ ಪಿದಾಯಿ ಎಂದು ಹೇಳುತ್ತಾ ಜುಗಾರಿ ಆಟವಾಡುವುದು ಕಂಡುಬಂತು. ಸದ್ರಿ ಅರೋಪಿತರನ್ನು ವಶಕ್ಕೆ ಪಡೆದು ಹೆಸರು ವಿಳಾಸವನ್ನು ವಿಚಾರಿಸಿ ದಸ್ತಗಿರಿ ಮಾಡಿ ಆಟಕ್ಕೆ ಬಳಸಿದ ಸೊತ್ತುಗಳಾದ ನೀಲಿ ಕಂದು ಬಣ್ಣದ ಬೈರಾಸ್ೆ -1 ಇಸ್ಪೀಟ್ ಎಲೆಗಳು -44 ಮತ್ತು ರೂ 1470/-ನ್ನು ಪಂಚರ ಸಮಕ್ಷಮ ಸ್ವಾಧೀನ ಪಡಿಸಿಕೊಂಡು  ನಂತರ ಸೊತ್ತು ಸಮೇತ ಠಾಣೆಗೆ ಬಂದಿರುತ್ತೇನೆ ಎಂಬುದಾಗಿ ಬಾಬು ಬಂಗೇರ ಸಹಾಯಕ ಉಪ ನಿರೀಕ್ಷಕರು ಬಕರ್ೆ ಪೊಲೀಸ್ ಠಾಣೆ ಮಂಗಳೂರು ರವರು ನೀಡಿದ ದೂರಿನಂತೆ ಬಕರ್ೆ ಠಾಣೆ ಅಪರಾದ ಕ್ರಮಾಂಕ 73/2013 ಕಲಂ 87 ಕೆಪಿ ಆಕ್ಟ್ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಗಂಡಸು ಕಾಣೆ ಪ್ರಕರಣ:

ದಕ್ಷಿಣ ಠಾಣೆ;

  • ದಿನಾಂಕ 19-05-13 ರಂದು ಫಿಯರ್ಾದುದಾರರಾದ ಶ್ರೀಮತಿ ಕಮಲ ರವರ ಗಂಡನಾದ ಶಾಂತಪ್ಪ, ಪ್ರಾಯ: 55 ವರ್ಷ, ರವರು ಶ್ವಾಸಕೋಶದ ಖಾಯಿಲೆಯಿಂದ ಬಳಲುತ್ತಿದ್ದು, ಇವರನ್ನು ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಅರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ದಿನಾಂಕ 22-05-13 ರಂದು ಸಂಜೆ  5-30 ಗಂಟೆಗೆ ಇವರ ಆರೈಕೆ ನೋಡಿಕೊಳ್ಳುತ್ತಿದ್ದ ಶ್ರೀಮತಿ ಕಮಲರವರು ಶೌಚಲಯಕ್ಕೆ ಹೋಗಿ ವಾಪಸು ಬರುವಾಗ ಮಂಚದ ಮೇಲೆ ಮಲಗಿದ್ದ ತನ್ನ ಗಂಡನಾದ ಶಾಂತಪ್ಪ ರವರು ಕಾಣೆಯಾಗಿರುತ್ತಾರೆ. ಈ ಬಗ್ಗೆ ಸಂಬಂದಿಕರ ಮನೆಗಳಲ್ಲಿ ಹಾಗೂ ಇತರ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಆದುದರಿಂದ ಕಾಣೆಯಾದ ಶಾಂತಪ್ಪ  ರವರನ್ನು ಪತ್ತೆ ಮಾಡಿಕೊಡುವಂತೆ ನೀಡಿದ ಫಿರ್ಯಾದಿಯ ಸಾರಾಂಶವಾಗಿದೆ ಎಂಬುದಾಗಿ ಶ್ರೀಮತಿ ಕಮಲಾ (48) ಗಂಡ ಶಾಂತಪ್ಪ  ವಾಸ: ಉವರ್ಿನ್ ಖಾನ್ ಎಸ್ಟೇಟ್, ಮೂಡಿಗೆರೆ, ಚಿಕ್ಕಮಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣಾ ಅಪರಾದ ಕ್ರಮಾಂಕ  138/2013 ಕಲಂ ಗಂಡಸು ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

1 comment:

  1. Dear sir, today evening I had parked my car in ideal complex, opp to sharavu Ganapathy temple. My car was hit by another car. Since I have a train to catch I couldn't wait there for the other vehicle owner to come. Kindly guide as to what is my duty in this incident.

    ReplyDelete