Wednesday, May 1, 2013

Daily Crime crime Incidents For May 01, 2013


ಕಳವು ಪ್ರಕರಣ:

ಉಳ್ಳಾಲ ಠಾಣೆ;


  • ದಿನಾಂಕ. 29.04.2013 ರಂದು ಸಂಜೆ 6.30 ಗಂಟೆಯಿಂದ ದಿ. 30.04.2013 ರಂದು ಬೆಳಿಗ್ಗೆ 5-40 ಗಂಟೆಯ ಮದ್ಯೆ ಮಂಗಳೂರು ತಾಲೂಕು ಮುನ್ನೂರು ಗ್ರಾಮದ ಕುತ್ತಾರ್ ಪದವು ಲೋಬೋ ಕಂಪೌಂಡ್ ಎಂಬಲ್ಲಿನ ಫಿರ್ಯಾದಿದಾರರ ವಾಸದ ಮನೆಯ ಹಿಂಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ಯಾರೋ ಕಳ್ಳರು ತೆರೆದು ಮನೆಯ ಒಳಗೆ ಪ್ರವೇಶಿಸಿ ಆ ಮನೆಯ ಬೆಡ್ರೂಮಿನಲ್ಲಿ ಇರಿಸಿದ್ದ ಕೀಯ ಮೂಲಕ ಗೋದ್ರೆಜ್ ಕಪಾಟನ್ನು ತೆರೆದು ಅದರ ಒಳಗೆ ಲಾಕರ್ ನಲ್ಲಿದ್ದ ನಗದು ಹಣ ರೂ/-5,50,000 ಮತ್ತು ಇನ್ನೊಂದು ಲಾಕರ್ನಲ್ಲಿದ್ದ 70 ಗ್ರಾಂ ತೂಕದ ಚಿನ್ನಾಭರಣಗಳು (ಅಂದಾಜು ಮೌಲ್ಯ ರೂ. 1,50,000/-)ನ್ನು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ಮೆಲ್ಕಂ ಲೋಬೋ (26) ತಂದೆ: ಡೊನಾಲ್ಡ್ ಲೋಬೋ, ಲೋಬೋ ಕಂಪೌಂಡ್, ಮನೆ ನಂಬ್ರ 3-243-1, ಕುತ್ತರ್ ಪದವು, ಮುನ್ನೂರು ಗ್ರಾಮ, ಮಂಗಳೂರು ತಾಲ್ಲೂಕು ರವರು ನೀಡಿದ ದೂರಿನಂತೆ ಉಳ್ಳಾಲ ಠಾಣೆ ಅಪರಾದ ಕ್ರಮಾಂಕ 173/2013 ಕಲಂ 457, 380 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



  • ದಿನಾಂಕ. 29.04.2013 ರಂದು ರಾತ್ರಿ 11.15 ಗಂಟೆಯಿಂದ 30.04.2013 ರಂದು 6.30 ಗಂಟೆಯ ಮದ್ಯೆ ಮಂಗಳೂರು ತಾಲೂಕು ಮುನ್ನೂರು ಗ್ರಾಮದ ಕುತ್ತಾರ್ ಪದವು ಆದರ್ಶ ಕಂಪೌಂಡ್ ಕೊಹಿನೂರ್ ಮನೆ ಎಂಬಲ್ಲಿನ ಫಿರ್ಯಾದಿದಾರರ ವಾಸದ ಮನೆಯ ಹಿಂಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ಯಾರೋ ಕಳ್ಳರು ತೆರೆದು ಮನೆಯ ಒಳಗೆ ಪ್ರವೇಶಿಸಿ ಆ ಮನೆಯ ಬೆಡ್ರೂಮಿನಲ್ಲಿ ಇರಿಸಿದ್ದ ಗೋದ್ರೆಜ್ ಕಪಾಟನ್ನು ತೆರೆದು ಅದರ ಒಳಗೆ ಇದ್ದ ನಗದು ಹಣ ರೂ/-3,000 ಮತ್ತು 56 ಗ್ರಾಂ ತೂಕದ ಚಿನ್ನಾಭರಣಗಳು (ಅಂದಾಜು ಮೌಲ್ಯ ರೂ. 1,10,000/-)ನ್ನು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ರಾಜೇಶ್ ಕುಮಾರ್ (28) ತಂದೆ: ಎಸ್.ರಾಧಾಕೃಷ್ಣ ನಾಯರ್, ಜಯಲಾಯಂ, ಟಿಸಿ 19/2202, ವಟವಿಲ್ಲಾ, ತಿರುಮಲಾ ಅಂಚೆ, ಟ್ರಿವೆಂಡ್ರಮ್, ಕೇರಳ ರವರು ನೀಡಿದ ದೂರಿನಂತೆ ಉಳ್ಳಾಲ ಠಾಣೆ ಅಪರಾದ ಕ್ರಮಾಂಕ 174/2013 ಕಲಂ 457, 380 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ:

ಸುರತ್ಕಲ್ ಠಾಣೆ;


  • ದಿನಾಂಕ 30-04-13 ರಂದು ಅವರ ಕೆಲಸದ ಬಗ್ಗೆ ಮೂಲ್ಕಿಯಿಂದ ಮಂಗಳೂರಿಗೆ ರಾ.ಹೆ 66 ರಲ್ಲಿ ಅವರ ಕಾರಿನಲ್ಲಿ ಹೋಗುತ್ತಿದ್ದು ಅವರು ಸುರತ್ಕಲ್ ಗ್ರಾಮದ ಮುಕ್ಕ ಎಂಬಲ್ಲಿಗೆ ಬೆಳಿಗ್ಗೆ 11-30 ಗಂಟೆಗೆ ತಲುಪಿದಾಗ ಅಲ್ಲಿನ ವ್ಹೇ-ಬ್ರಿಡ್ಜ್ನ ಬಳಿ ಕೆಎ-04-ಎ-5277 ನೇ  ಗ್ಯಾಸ್ ಟ್ಯಾಂಕರನ್ನು ಅದರ ಚಾಲಕ ನವೀನ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಮಂಗಳೂರು ಕಡೆಗೆ ಹೋಗುತ್ತಾ ಯಾವುದೇ ಸೂಚನೆ ನೀಡದೇ ಟ್ಯಾಂಕರನ್ನು ಬಲಕ್ಕೆ ವ್ಹೇ ಬ್ರಿಡ್ಜ್ ಕಡೆಗೆ ತಿರುಗಿಸಿದ್ದು ಆ ಸಮಯ ಟ್ಯಾಂಕರ್ನ ಹಿಂಬದಿಯಿಂದಾಗಿ ರಸ್ತೆಯ ಬಲಬದಿಯಲ್ಲಿ ಹೋಗುತ್ತಿದ್ದ ಮೋಟಾರ್ ಸೈಕಲ್ ನಂಬ್ರ ಕೆಎ-47-ಕೆ-7187 ನೇದಕ್ಕೆ ಡಿಕ್ಕಿಯಾಗಿ ಮೋಟಾರ್ ಸೈಕಲ್ಲಿನಲ್ಲಿದ್ದ ಇಬ್ಬರೂ ಸವಾರರು ಟ್ಯಾಂಕರ್ನ ಹಿಂಬಾಗದ ಟಯರ್ಗೆ ಸಿಲುಕಿಕೊಂಡು ಮೋಟಾರ್ ಸೈಕಲ್ ಸವಾರ ಉಮರ್ ಅಮಾಷ್ ರವರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಅಲ್ಲದೇ ಸಹಸವಾರ ಮಹಮ್ಮದ್ ಹಾವುಲ್ ಎಂಬವರಿಗೆ ಎದೆಗೆ ಕೈಗೆ ಗಾಯವಾಗಿದ್ದು ಅವರನ್ನು ಕೂಡಲೇ ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ ಹಾಗೂ ಮೃತಪಟ್ಟ ಉಮರ್ ಅಮಾಷ್ರ ಮೃತದೇಹವನ್ನು ಸುರತ್ಕಲ್ ಆಸ್ಪತ್ರೆಗೆ ಸಾಗಿಸಿರುತ್ತಾರೆ ಎಂಬುದಾಗಿ ಹಷರ್ಿತ್ ಪ್ರಾಯ ಃ  24 ವರ್ಷ ತಂದೆ: ಸಂಜೀವ ಪೂಜಾರಿ ವಾಸಃ ಕೆರೆಕಾಡು ಹೌಸ್ ಕೆಂಚನಕೆರೆ ಪೋಸ್ಟ್ ಮೂಲ್ಕಿ ಮಂಗಳೂರು ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 120/2013 ಕಲಂ: 279-337-304ಎ ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕಕೈಗೊಳ್ಳಲಾಗಿದೆ.


ಬಜಪೆ ಠಾಣೆ;


  • ದಿನಾಂಕ: 30-04-2013 ರಂದು 10.30 ಗಂಟೆಗೆ ಫಿರ್ಯಾದಿದಾರರು ತನ್ನ ಅಜ್ಜಿಯೊಂದಿಗೆ ಬಜಪೆ ಚಚರ್್ಗೆ ಬಂದು ಕಾರ್ಯಕ್ರಮ ಮುಗಿಸಿ ವಾಪಾಸು ಮನೆಗೆ ಹೋಗಲು ಬಜಪೆ ಚಚರ್್ ಬಳಿಯಿರುವ ಬಸ್ ಸ್ಟಾಂಡ್ಗೆ ನಡೆದುಕೊಂಡು ಬರುತ್ತಿದ್ದಂತೇ, ಕಟೀಲು ಕಡೆಯಿಂದ ಬಸ್ಸು ನಂ: ಕೆಎ 19 ಸಿ 5001 ನೇದ್ದನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶ್ರೀಮತಿ ರೋಜಿಯವರಿಗೆ ಗಾಯಗಳಾಗಿದ್ದು, ಚಿಕಿತ್ಸೆಯ ಕುರಿತು ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬುದಾಗಿ ್ರೇಮ್ ರಸ್ಕಿಂಞ, ಪ್ರಾಯ; 20 ವರ್ಷ, ತಂದೆ: ಜೆರಾಲ್ಡ್ ರಸ್ಕಿಂಞ, ವಾಸ: ಪೊಂಪೈ, ಕೈಕಂಬ, ಕಂದಾವರ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 128/2013 ಕಲಂ: 279, 337 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ:

ಬಜಪೆ ಠಾಣೆ;

  • ದಿನಾಂಕ: 2604-2013 ರಂದು 20-00 ಗಂಟೆ ಸಮಯಕ್ಕೆ ಫಿರ್ಯಾದಿದಾರರ ಗಂಡ ಪೀಟರ್ ಪಿಂಟೋ, 54 ರ್ಷ, ಎಂಬವರು ತನ್ನ ಮಗಳು ರೇಷ್ಮಾ ಪಿಂಟೋರವರ ಮನೆಗೆ ಬೆಂಗಳೂರಿಗೆ ಹೋಗುತ್ತೇನೆಂದು ಮನೆಯಿಂದ ಬಸ್ಸಿನಲ್ಲಿ ಹೋಗುವರೇ ಗುರುಪುರ ಕೈಕಂಬಕರಕೆ ಎಂದು ಹೋದವರು ನಂತರ 2-3 ದಿನ ಳೆದರೂ ಬೆಂಗಳೂರಿಗೆ ತಲುಪಿದ ಬಗ್ಗೆ ಮಾಹಿತಿ ಇಲ್ಲದ್ದರಿಂದ ಸಂಬಂಧಿಕರಲ್ಲಿ ವಿಚಾರಿಸಿದರೂ ಈ ತನಕ ಪತ್ತೆಯಾಗಿರುವುದಿಲ್ಲ ಎಂಬುದಾಗಿ ಐರಿನ್ ಪಿಂಟೋ, 52 ವರ್ಷ, ತಂದೆ: ಪೀಟರ್ ಪಿಂಟೋ, ವಾಸ: ಬೋರುಗುಡ್ಡೆ ಮನೆ, ಕಂದಾವರ ಬೈಲು, ಕಂದಾವರ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 127/2013 ಕಲಂ: ಗಂಡಸು ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದ.

No comments:

Post a Comment