Tuesday, May 28, 2013

Daily Crime Incidents For May 28, 2013


ಅಪಘಾತ ಪ್ರಕರಣ:

ಸಂಚಾರ ಪೊರ್ವ ಠಾಣೆ;

  • ದಿನಾಂಕ: 27-05-2013 ರಂದು ಸಮಯ ಸುಮಾರು 12.00 ಗಂಟೆಗೆೆ ಪಿರ್ಯಾದುದಾರರು ಸ್ಕೂಟರ್ ನಂಬ್ರ ಏಂ-19 ಘಿ- 1984 ರಲ್ಲಿ ಲೋಕೇಶ್ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಕರಾವಳಿ ಸರ್ಕಲ್ ಕಡೆಯಿಂದ ಶಾಂತಿ ನಿಲಯ ಕಡೆಗೆ ಕಲ್ಪನಾ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ವಾಸ್ಲೇನ್ ಜಂಕ್ಷನ್ ದಾಟುತ್ತಿದ್ದ ಸಮಯ ಕಾಂಚನ ಮೋಟಾರ್ಸ್ ಕಡೆಯಿಂದ ಟಾಟಾ ಏಸ್ ಟೆಂಪೊ ನಂಬ್ರ  ಏಂ-19 ಅ- 6679 ನ್ನು ಅದರ  ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಲೋಕೇಶ್ರವರ ಬಲಕಾಲಿಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ಮತ್ತು ಲೊಕೇಶ್ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದುದಾರರ  ಬಲಭುಜಕ್ಕೆ, ಎಡಕಾಲಿಗೆ ಮತ್ತು ಎಡಕೈಗೆ ಗುದ್ದಿದ ಗಾಯವಾಗಿ ಯುನಿಟಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಸಹಸವಾರರಾಗಿದ್ದ ಲೋಕೇಶ್ರವರ ಬಲಕಾಲಿಗೆ ತೀವೃ ಸ್ವರೂಪದ ಗುದ್ದಿದ ಗಾಯವಾಗಿ ಯುನಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಯೋಗೀಶ್(38) ತಂದೆ: ವಿಶ್ವನಾಥ ಶೆಟ್ಟಿ. ವಾಸ: 37, ಉಮಿಕಾನ ಮೈದಾನ, ಕುಲಶೇಖರ ಮಂಗಳೂರು ರವರು ನೀಡಿದ ದೂರಿನಂತೆ  ಸಂಚಾರ ಪೋರ್ವ ಠಾಣೆ ಅಪರಾದ ಕ್ರಮಾಂಕ 93/13  ಕಲಂ- 279337 ,338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ:

ಉರ್ವ ಠಾಣೆ;

  • ದಿನಾಂಕ 24.05.2013 ರಂದು 10.00 ಗಂಟೆಗೆ ಮಂಗಳೂರು ನಗರದ ಕೋಡಿಕಲ್‌ ಬಿ 1 ನೇ ಕ್ರಾಸ್‌ ರಸ್ತೆಯಲ್ಲಿರುವ ಪಿರ್ಯದಿದಾರರ ಅಣ್ಣನಾದ ಸುನೀಲ್‌ ಪಿಂಟೋರವರಿಗೆ ಸೇರಿದ ಜಾಗದ ಸಮತಟ್ಟು ಕೆಲಸ ಮಾಡುತ್ತಿದ್ದ ಸಮಯದಲ್ಲಿ ಆರೋಪಿತರಾದ ಹೆರಾಲ್ಡ್‌ ಕ್ರಾಸ್ತ ಮತ್ತಿತರರು ಪಿರ್ಯಾದಿದಾರರ ಜಾಗಕ್ಕೆ ಬಂದು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಉಳಿದ ಆರೋಫಿಗಳೆಲ್ಲರೂ ಸೇರಿ ಪಿರ್ಯಾದಿಗೆ ಕೈಗಳಿಂದ ಹಲ್ಲೆ ನಡೆಸಿದ್ದು ಆ ಸಮಯ ಆರೋಪಿತಗಳಾದ  ಹೆರಾಲ್ಡ್‌ ಕ್ರಾಸ್ತಾ, ಲಿಂಡಾ ಕ್ರಾಸ್ತಾ, ಎವನ್ ಕ್ರಾಸ್ತಾ, ಜೇಸಿಂತಾ ಕ್ರಾಸ್ತಾ, ಹ್ಯಾಡ್ಲಿ ನೀಕ್ಸನ್  ಸಣ್ಣ ಚೂರಿಯಿಂದ ಪಿರ್ಯಾದಿದರರ ಎರಡು ಕೈಗಳಿಗೆ ಹಾಗೂ ಹೊಟ್ಟೆಗೆ ಗೀರಿ ಹಲ್ಲೆ ನಡೆಸಿದ್ದು ತಡೆಯಲು ಬಂದ ಮೆಲ್ವನ್‌ ಪಿಂಟೋ ರವರಿಗೂ ಚೂರಿಯಿಂದ ಗೀರಿದ್ದು , ಆರೋಪಿತರುಗಳೆಲ್ಲರೂ ಸೇರಿ ಪಿರ್ಯಾದಿಯನ್ನು ಜೀವ ಸಹಿತ ಬದುಕಲು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದು, ಗಾಯಗೊಂಡ ಪಿರ್ಯಾದಿದಾರರನ್ನು ಮತ್ತು ಮೆಲ್ವಿನ್‌ ಪಿಂಟೋರವರನ್ನು ಪಿರ್ಯಾದಿರವರ ತಂದೆಯವರು ಆಸ್ಪತ್ರೆಗೆ ದಾಖಲಿಸಿದ್ದು, ಹೆರಾಲ್ಡ್‌ ಕ್ರಾಸ್ತರವರು ದೂರು ನೀಡಿದ್ದು ಅದರ ಆಧಾರದಲ್ಲಿ ಪ್ರಕರಣ ಧಾಖಲಾಗಿದ್ದು , ಮಾನ್ಯ ನ್ಯಾಯಾಲಯದಿಂದ ಜಾಮೀನು ಪಡೆದು ಬರುವರೇ ತಡವಾಗಿರುತ್ತದೆ. ಎಂಬುದಾಗಿ ಅನಿಲ್ ಫಿಂಟೋ (42) ವಾಸ: ಅಶೋಕ ನಗರ ಮಂಗಳೂರು ರವರು ನೀಡಿದ ದೂರಿನಂತೆ ಉರ್ವ ಠಾಣೆ ಅಪರಾದ ಕ್ರಮಾಂಕ 41/2013 ಕಲಂ 341, 323, 324, 504, 506 R/W 34 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:

Post a Comment