Saturday, May 11, 2013

Daily Crime Incidents For May 11, 2013


ವಾಹನ ಕಳವು ಪ್ರಕರಣ:

ಕಾವೂರು ಠಾಣೆ;

  • ಪಿರ್ಯಾದುದಾರರು ಮೆನೇಜರ್ ಆಗಿ ಕೆಲಸ ನಿರ್ವಹಿಸುತ್ತಿರುವ ಮಂಗಳೂರು ಕುಂಟಿಕಾನದ ಭಾರತ್ ಅಟೋಕಾರ್ ಲಿ ಕಂಪೆನಿಯಲ್ಲಿ ದಿನಾಂಕ 03-05-2013 ರಂದು ಮದ್ಯಾಹ್ನ 3-50 ಗಂಟೆಗೆ ಜೀಸ್ ಜಾರ್ಜ್ ಎಂಬವರ ಕಾರನ್ನು ಉಪಯೋಗಿಸುತ್ತಿದ್ದ ಜಿತಿನ್ ಎಂಬವರ ಗೆಳೆಯ ಮಥಾಯಿ ಎಂಬವರು ಕಂಪೆನಿಗೆಜಖಂಗೊಂಡ ಕಾರು ನಂಬ್ರ: ಕೆ.ಎಲ್-42-ಸಿ-1325 ನ್ನು ರಿಪೇರಿಗೆ ತಂದು ಪಾರ್ಕಿಂಗ್ ಸ್ಥಳದಲ್ಲಿ ಇಟ್ಟು ಕಂಪೆನಿಯವರಿಗೆ ತಿಳಿಸಿ ನಂತರ ಈ ಕಂಪೆನಿಯ ಮಧುಕಿರಣ್ ರವರು ಕಾರಿಗೆ ಲಾಕ್ ಮಾಡಿ ಕೀ ಯನ್ನು ಕೀ ಬೋರ್ಡ್ ನಲ್ಲಿ ಇಟ್ಟಿರುತ್ತಾರೆ. ದಿನಾಂಕ 04-05-2013 ರಂದು ಕಾರನ್ನು ರಿಪೇರಿ ಮಾಡುವರೇ ಜಿತಿನ್ ಎಂಬವರ ಜೊತೆಯಲ್ಲಿ ಕಾರು ನೋಡಲು ಹೋದಾಗ ಕಾರು ಸದ್ರಿ ಜಾಗದಲ್ಲಿ ಇಲ್ಲದೇ ಇರುವುದನ್ನು ಕಂಡು  ಕಂಪೆನಿಯ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ದಿನಾಂಕ 03-05-2013 ರಂದು ಸಂಜೆ ಸುಮಾರು 4-36 ಗಂಟೆಗೆ ಯಾರೋ ಅಪರಿಚಿತ ಇಬ್ಬರು ವ್ಯಕ್ತಿಗಳು ಯಾವುದೋ ಕೀ ಯನ್ನು ಉಪಯೋಗಿಸಿ ಕಾರನ್ನು ಕಳವು ಮಾಡಿರುವುದಾಗಿದೆ. ಎಂಬುದಾಗಿ ರಾಜಾರಾಮ್ ಕಾರಂತ (39) ವಾಸ: ಅಶೋಕ ನಗರ ಮಂಗಳೂರು ರವರು ನೀಡಿದ ದೂರಿನಂತೆ ಕಾವೂರು ಠಾಣೆ ಅಪರಾದ ಕ್ರಮಾಂಕ 101/2013 ಕಲಂ  379 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ:

ಮೂಡಬಿದ್ರೆ ಠಾಣೆ;

  • ಪಿರ್ಯಾದಿದಾರರು ಕೆಎ 41 – 4325 ಕಾಂಕ್ರೀಟ್‌ ಮಿಕ್ಸರ್‌ ಲಾರಿಯಲ್ಲಿ ಕ್ಲೀನರ್‌ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ  09-05-2013 ರಂದು ಬೈಕಂಪಾಡಿ ಕೈಗಾರಿಕ ಪ್ರದೇಶದಿಂದ ಕಾಂಕ್ರೀಟ್‌ ಸಿಮೆಂಟ್‌ನ್ನು ಲೋಡ್‌ ಮಾಡಿಕೊಂಡು ಇರುವೈಲ್‌‌ಗೆ ಹೋಗುತ್ತಿರುವ ಸಮಯ ರಾತ್ರಿ ಸುಮಾರು 24-00 ಗಂಟೆಗೆ ಲಾರಿಯ ಚಾಲಕ ರಾಜು ಮಾರ್ತೊ ಎಂಬವರು ಲಾರಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹೊಸಬೆಟ್ಟು ಗ್ರಾಮದ ಕೊಪ್ಪಳ ತಿರುವು ಎಂಬಲ್ಲಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ಲಾರಿ ಮಗುಚಿ ಬಿದ್ದ ಪರಿಣಾಮ ಪಿರ್ಯಾದಿಯ ಬಲ ಕೈ ಮೊಣಗಂಟಿನ ಬಳಿ ತೀವ್ರ ತರಹದ ಗಾಯ ಮತ್ತು ಬಲ ಕಣ್ಣಿನ ಬಳಿ ಗುದ್ದಿದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ಪಿಂಟೋ ಮಾರ್ತೊ (22) ತಂದೆ : ಹಗನ್‌ ಮಾರ್ತೊ, ವಾಸ : ಆರ್‌ಡಿಸಿ ಕಾಂಕ್ರೀಟ್‌ ಇಂಡಿಯಾ ಪ್ರೆವೆಟ್‌ ಲಿಮಿಟೆಡ್‌, ಪ್ಲಾಟ್‌ ನಂ 27, ಬೈಕಂಪಾಡಿ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣೆ ಅಪರಾದ ಕ್ರಮಾಂಕ 98/2013 ಕಲಂ : 279, 338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಬಜಪೆ ಠಾಣೆ;


  • ದಿನಂಕ: 10-05-2013 ರಂದು 08-35 ಗಂಟೆ ಸಮಯಕ್ಕೆ ಆರೋಪಿಯು ತನ್ನ ಬಾಬ್ತು ಟಾಟಾ ಸುಮೋ ನಂ: ಕೆಎ 1 ಎಚಿಡಿ 9688 ನೇದ್ದನ್ನು ಮಂಗಳೂರು ತಾಲೂಕಿನ ಪೆಮರ್ುದೆ ಗ್ರಾಮದ ಪೆಮರ್ುದೆ ಜಂಕ್ಷನ್ ಕಡೆಯಿಂದ ಒ.ಎನ್.ಜಿ.ಸಿ. ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಅತೀವೇಗ ಮತ್ತು ದುಡುಕುತನದಿಂದ ಚಲಾಯಿಸಿ ಕ್ರಾಸ್ ಪದವು ಎಂಬಲ್ಲಿ ಆಕ್ಟಿವ ಹೋಂಡ ನಂ: ಕೆಎ 19 ವೈ 3851 ನೇದ್ದಕ್ಕೆ ಡಿಕ್ಕಿ ಮಾಡಿದ ಪರಿಣಾಮ ಸದ್ರಿ ದ್ವಿ ಚಕ್ರ ವಾಹನದಲ್ಲಿ ಸಹ ಸವಾರಳಾಗಿದ್ದ ಲೀಸಾ ರೈನಾ ಡಿ'ಕುನ್ನ (12) ಎಂಬ ಬಾಲಕಿಯ ಬಲಕಾಲಿನ ಮೂಳೆ ಮುರಿತವಾಗಿ ಗಂಭೀರ ರೀತಿಯ ಗಾಯವಾಗಿರುತ್ತದೆ.  ಗಾಯಾಳು ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ಲ್ವಿನ್ ಡಿ'ಸೋಜಾ, 26 ವರ್ಷ, ತಂದೆ: ಇಗ್ನೇಷಿಯಸ್ ಡಿ'ಸೋಜಾ, ವಾಸ: ಆಲ್ವಿನ್ ಕ್ಫಟೇಜ್, ಪೆಮರ್ುದೆ ಗ್ರಾಮ ಮತ್ತು ಅಂಚೆ, ಮಂಗಳೂರು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 140/2013 ಕಲಂ: 279, 338 ಐಪಿಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ:

ದಕ್ಷಿಣ ಠಾಣೆ;


  • ದಿನಾಂಕ 10-05-13 ಸುಮಾರು 11-00 ಗಂಟೆ ರಂದು ಫಿರ್ಯಾದುದಾರರ ಜೊತೆ ಕೆಲಸ ಮಾಡುವ ಕಿಶೋರ್ ಎಂಬವರು  ಕೆಲಸ ಮಾಡುತ್ತಿದ್ದು, ಸಮಯಕ್ಕೆ ನನಗೆ ಸೌಖ್ಯವಿಲ್ಲ. ವೈಧ್ಯರಲ್ಲಿ ಚಿಕಿತ್ಸೆ ಪಡೆದು ಬರುವುದಾಗಿ ಹೇಳಿ ಹೋಗಿರುತ್ತಾರೆ. ನಂತರ    11-30 ಗಂಟೆಗೆ ಫಿರ್ಯಾದುದಾರರ ಮೊಬೈಲ್ಗೆ ಯಾರೋ ಸಾರ್ವಜನಿಕರು ಕರೆ ಮಾಡಿ ಕಿಶೋರ್ ಎಂಬವರು ಪಾಂಡೇಶ್ವರ ಶ್ರೀನಿವಾಸ ಕಾಲೇಜು ಬಳಿ ಬಿದ್ದಿರುವ ವಿಚಾರ ತಿಳಿಸಿದರು. ಕೂಡಲೇ ಸದ್ರಿ ಸ್ಥಳಕ್ಕೆ ಹೋಗಿ ಸಾರ್ವಜನಿಕರ ಸಹಾಯದಿಂದ ಕಿಶೋರ್ರವರನ್ನು ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿನ ವೈಧ್ಯರು ಪರೀಕ್ಷಿಸಿ ಕಿಶೋರ್ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಆದುದರಿಂದ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಯತೀಶ್, ಪ್ರಾಯ: 36 ವರ್ಷ ತಂದೆ: ಕೃಷ್ಣಪ್ಪ ಮಡಿವಾಳ ವಾಸ:ಕೆಲ್ರೈ, ಕೊಡಂಗೆ, ತಿರುವೈಲು, ವಾಮಂಜೂರು, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಯು.ಡಿ.ಆರ್ ನಂ: 40/2013 ಕಲಂ 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:

Post a Comment