Thursday, May 16, 2013

Daily Crime Incidents For May 16, 2013


ಅಪಘಾತ ಪ್ರಕರಣ:

ಸುರತ್ಕಲ್ ಠಾಣೆ;


  • ದಿನಾಂಕ 15-05-13 ರಂದು  ರಾತ್ರಿ 10-00 ಗಂಟೆಗೆ ಅವರ ಪರಿಚಯದ ಬಸವರಾಜ್  ಎಂಬವರ ಜೊತೆಗೆ ಅವರ ಬಾಬ್ತು ಕೆಎ-19-ಇಬಿ-6510 ನೇ ಮೋಟಾರ್ ಸೈಕಲ್ಲಿನಲ್ಲಿ ಸಹಸವಾರರಾಗಿ ಕುಳಿತು ಸುರತ್ಕಲ್ನಿಂದ ಹೊಸಬೆಟ್ಟು ಕಡೆಗೆ ಹೋಗುತ್ತಾ ಹೊಸಬೆಟ್ಟು ಕೋರ್ದಬ್ಬು ದೈವಸ್ಥಾನದ ಹತ್ತಿರ ತಲುಪಿದಾಗ ಅವರ ಹಿಂದಿನಿಂದ ಅಂದರೆ ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ಒಂದು ಪಿಕಪ್ ವಾಹನವನ್ನು ಅದರ ಚಾಲಕನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸಹಸವಾರಾಗಿದ್ದ ಮೋಟಾರ್ ಸೈಕಲ್ಲಿಗೆ ಡಿಕ್ಕಿ ಪಡಿಸಿ ಪಿಕಪ್ ವಾಹನ ಚಾಲಕ ಪಿಕಪ್ನ್ನು ನಿಲ್ಲಿಸದೇ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿದ್ದು ಅಪಘಾತದ  ಪರಿಣಾಮ ಅವರಿಬ್ಬರೂ ಮೋಟಾರ್ ಸೈಕಲ್ ಸಮೇತ ಕೆಳಗಡೆ ಬಿದ್ದು ಪಿರ್ಯಾದಿದಾರರಿಗೆ ತೀವ್ರ ತರದ ಗಾಯ ಹಾಗೂ ಬಸವರಾಜುರವರಿಗೆ ಕೂಡಾ ತೀವ್ರ ತರದ ಗಾಯವಾಗಿದ್ದು ಬಳಿಕ ಅಲ್ಲಿ ಸೇರಿದವರು ಪಿರ್ಯಾದಿದಾರರನ್ನು ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ  ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಅಲ್ಲದೇ ಗಾಯಾಳು ಬಸವರಾಜ್ರವರನ್ನು  ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿದ ವಿಚಾರ ತಿಳಿದಿರುತ್ತದೆ ಎಂಬಿತ್ಯಾದಿಯಾಗಿರುತ್ತದೆ ಎಂಬುದಾಗಿ ಗಂಗಾಧರ ಎಚ್ (51) ವಾಸ: ಹೊಸಬೆಟ್ಟು ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 133/2013 ಕಲಂ: 279-338-304 (ಎ) ???ಸಿ & ಕಲಂ 134 (ಎ)(ಬಿ) ಮೋ.ವಾ.ಕಾಯ್ದೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.




  • ದಿನಾಂಕ 14-05-13 ರಂದು  ಅವರ ಬಾಬ್ತು ಅಟೋರಿಕ್ಷಾ ನಂಬ್ರ ಕೆಎ-19-ಡಿ-1324 ನೇದನ್ನು ಚಲಾಯಿಸುತ್ತಾ ಹೊನ್ನಕಟ್ಟೆ ಬಸ್ ಸ್ಟಾಪ್ ಬಳಿಯಿಂದ ಕುಳಾಯಿ ಗುಡ್ಡೆ ಕಡೆಗೆ ಹೊಗುವರೇ ಮಂಗಳೂರು-ಸುರತ್ಕಲ್ ರಾ ಹೆ 66ರ ರಸ್ತೆಯನ್ನು ದಾಟುವರೇ ಸಂಜೆ 6-30 ಗಂಟೆಗೆ ರಸ್ತೆಯ ಎಡಬದಿಯಲ್ಲ ರಿಕ್ಷಾ ನಿಲ್ಲಿಸಿದ್ದ ಸಮಯ ಮಂಗಳೂರು ಕಡೆಯಿಂದ ಲಾರಿ ನಂಬ್ರ ಕೆಎ-29-9373 ನೇದನ್ನು ಅದರ ಚಾಲಕ ಪ್ರಕಾಶ್ ಹೊಸಮನಿ ಎಂಬವರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ರಿಕ್ಷ್ಕಾಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ರಿಕ್ಷಾದಿದಂದ ಹೊರಗೆ ಎಸೆಯಲ್ಪಟ್ಟು ಅವರಿಗೆ ತಲೆಗೆ ಹಾಗೂ ಬುಜಕ್ಕೆ ರಕ್ತಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದವರು ಹಾಗೂ ಲಾರಿಯ ಚಾಲಕರು ಮತ್ತು ಜಾಯ್ಸನ್ ಎಂಬವರು ಪಿರ್ಯಾದಿದಾರರನ್ನು ಮಂಗಳೂರು ಎ.ಜೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ಅವರನ್ನು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಎಂಬುದಾಗಿ ಸಿರಿಲಲ್ ಅಲೆಕ್ಸಾಂಡರ್ ಮಿನಿಜಸ್  ಪ್ರಾಯ ಃ 55 ವರ್ಷ ತಂದೆಃ ಮೌರಿಸ್ ಮಿನೇಜಸ್  ವಾಸ್ಷ ಪಾತಿಮಾ ಮಂದಿರದ ಬಳಿ ವಿದ್ಯಾನಗರ ಕುಳಾಯಿ ಮಂಗಳೂರು ರವರು ನೀಡಿದ ದುರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 134/2013 ಕಲಂ: 279-338-304 (ಎ) ? ಸಿ & ಕಲಂ 134 (ಎ)(ಬಿ) ಮೋ.ವಾ.ಕಾಯ್ದೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



  • ದಿನಾಂಕ 15-05-13 ರಂದು ಕಾವೂರಿನಿಂದ ರೂಟ್ ನಂಬ್ರ 13-ಎ ನೇ ಕೆಎ-07-5527 ನೇ ನಂಬ್ರದ ಬಸ್ಸಿನಲ್ಲಿ ಸುರತ್ಕಲ್ ಕಡೆಗೆ ಪ್ರಯಾಣಿಸುತ್ತಾ ಅಪರಾಹ್ನ 14-40 ಗಂಟೆಗೆ ಕುಳಾಯಿಯ ಶೆಟ್ಟಿ ಐಸ್ಕ್ರೀಂ ಬಳಿ ಬಸ್ಸಿನ ಚಾಲಕ ಅಮನ್ರವರು ಪ್ರಯಾಣಿಕರನ್ನು ಇಳಿಸುವರೇ ಬಸ್ಸನ್ನು ನಿಲ್ಲಿಸಿದ್ದು ಪ್ರಯಾಣಿಕರು ಇಳಿಯುತ್ತಿರುವಾಗ ಅದರ ಕಂಡಕ್ಟರ್ ಚಾಲಕರಿಗೆ ಯಾವುದೇ ಸೂಚನೆಯನ್ನು ನೀಡುವ ಮೊದಲೇ ಚಾಲಕ ಬಸ್ಸನ್ನು ಒಮ್ಮೇಲೇ ನಿರ್ಲಕ್ಷತನದಿಂದ ಮುಂದಕ್ಕೆ ಚಲಾಯಿಸಿದ ಪರಿಣಾಮ ಸದ್ರಿ ಬಸ್ಸಿನಿಂದ ಇಳಿಯುತ್ತಿದ್ದ ಪಿರ್ಯಾದಿದಾರರ ಪರಿಚಯದ ಮೈನೂಲ್ ಅಹ್ಮದ್ ಲಾಸ್ಕರ್ ಎಂಬವರು ಬಸ್ಸಿನಿಂದ ಕೆಳಗೆ ಬಿದ್ದು ಅವರ ತಲೆಯ ಮೇಲೆ ಬಸ್ಸಿನ ಹಿಂಬದಿಯ ಚಕ್ರ ಹರಿದು ಬಸ್ಸಿನಲ್ಲಿದವರು ಬೊಬ್ಬೆ ಹಾಕಿದಾಗ ಚಾಲಕ ಬಸ್ಸನ್ನು ನಿಲ್ಲಿಸಿದ್ದು ನೋಡಲಾಗಿ  ಆತ ತಲೆಗೆ ಗಂಬೀರ ಸ್ವರೂಪದ ರಕ್ತಗಾಯಗೊಂಡು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾಗಿದೆ ಎಂಬುದಾಗಿ ಅಬ್ದುಲ್ ಖಾದರ್ ಪ್ರಾಯ ಃ 36 ವರ್ಷ ತಂದೆ: ಡಿ.ಹೆಚ್ ಬಾವಾ  ವಾಸಃ ಮುಂಚೂರು ಸರಕಾರಿ ಪ್ರಾಥಮಿಕ ಶಾಲೆಯ ಬಳಿ ಶ್ರೀನಿವಾಸ ನಗರ ಅಂಚೆ  ಚೇಳಾರು ಗ್ರಾಮ  ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 136/2013 ಕಲಂ: 279-338-304 (ಎ) ? ಸಿ & ಕಲಂ 134 (ಎ)(ಬಿ) ಮೋ.ವಾ.ಕಾಯ್ದೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಪಣಂಬೂರು ಠಾಣೆ;


  • ದಿನಾಂಕ: 15-05-13 ರಂದು 21-15 ಗಂಟೆಗೆ ಬೈಕಂಪಾಡಿ ಜಂಕ್ಷನ್ ಬಳಿ ಮುಬಾರಕ್ ಹೋಟೇಲಿನ ಎದುರು ರಾ ಹೆ ಎಡಬದಿ ನಿಂತುಕೊಂಡಿರುವಾಗ ಪಣಂಬೂರು ಕಡೆಯಿಂದ ಕೆಎ-19/ಡಿ9097 ಕಂಟೈನರನ್ನು ಅದರ ಚಾಲಕ ಗೋಪಾಲ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಹಣೆಗೆ ಮೂಗಿಗೆ ಶರೀರದ ಮೇಲೆ ತರಚಿದ ಗಾಯವಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ ಎಂಬುದಾಗಿ ಬೆಲೆರಿಯನ್ 35 ತಂದೆ: ಪಾಡ್ರಿಕ್ ಕಿಡುವು ನಾವ್ಗಾಂವ್ ಮುಂಗಾಟ್ ಡೋಲಿ ಸುಂದರಘಡ್ ಒರಿಸ್ಸಾ ರವರು ನೀಡಿದ ದೂರಿನಂತೆ ಪಣಂಬೂರು ಠಾಣೆ ಅಪರಾದ ಕ್ರಮಾಂಕ ಮೊ ನಂ: 76/13 ಕಲಂ: 279-337 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದ.

No comments:

Post a Comment