Wednesday, May 15, 2013

Daily Crime Incidents for May 15, 2013


ಹಲ್ಲೆ ಪ್ರಕರಣ

ದಕ್ಷಿಣ ಠಾಣೆ


  • ಪಿರ್ಯಾದಿದಾರರಾದ ಸರ್ಫರಾಜ್ (25), ತಂದೆ: ಇಬ್ರಾಹಿಂ, ವಾಸ: ಕಮರ್ಾರು ಮನೆ, ಅಡ್ಯಾರ್ ಅಂಚೆ, ಮಂಗಳೂರು ರವರು ಆಟೊ ಚಾಲಕರಾಗಿ ದುಡಿಯುತ್ತಿದ್ದು, ಈದಿನ ದಿನಾಂಕ  14-05-2013 ರಂದು ಬೆಳಿಗ್ಗೆ 10-30 ಗಂಟೆಗೆ ವೆಲೆನ್ಸಿಯ ಸರ್ಕಲ್ನ  ಕೆನರಾ ಬ್ಯಾಂಕ್ ಬಳಿಯಲ್ಲಿ ಪ್ರಯಾಣಿಕರನ್ನು ಇಳಿಸಿ ಹೊರಡುವ ಸಮಯದಲ್ಲಿ, ಪಿರ್ಯಾದಿದಾರರ ಪರಿಚಯದ ಕೆಎ 19 ಸಿ 8695 ನೇ ಆಟೊ ಚಾಲಕರಾದ ಆರೋಪಿ ಲತೀಪ್ ಎಂಬಾತನು ಅಲ್ಲಿಗೆ ಬಂದಿದ್ದು, ಆತನಲ್ಲಿ ಪಿರ್ಯಾದಿದಾರರು ವಿನಾ: ಕಾರಣ ಶಾಂತಿ ನಗರದ ಅನ್ವರ್ ಎಂಬವರಲ್ಲಿ ನಿನ್ನೆ ದಿನ ಗಲಾಟೆ ಮಾಡಿದ್ದೀಯಾ ಎಂದು ಕೇಳಿದಾಗ, ಆರೋಪಿ ಲತೀಪನು ಏಕಾಏಕಿ ತನ್ನ ಆಟೊದಿಂದ ಇಳಿದು ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ  ನಾಯಿಂಡೆ ಮೋನೆ ಸೂಳೆಡೆ ಮೋನೆ ಎಂಬಿತ್ಯಾದಿಯಾಗಿ ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದಿದಾರರನ್ನು ಆಟೊದಿಂದ ಎಳೆದು ಹೊರಗೆ ಹಾಕಿ ಕೈಗಳಿಂದ ಮುಖಕ್ಕೆ  ಹೊಡೆದಾಗ ಏಕೆ ಸುಮ್ಮನೆ ಹೊಡೆಯುತ್ತೀಯಾ ಎಂದು ಪಿರ್ಯಾದಿದಾರರು ಕೇಳಿದಾಗ, ನೀನು ಸಹ ಅನ್ವರ್ಗೆ ಸಪೋಟರ್್ ಮಾಡುತ್ತೀಯಾ ಎಂದು ಹೇಳಿ ಅಲ್ಲೇ ಬಿದ್ದಿದ್ದ ಒಂದು ಕಲ್ಲಿನಿಂದ ಪಿರ್ಯಾದಿದಾರರಿಗೆ ಹೊಡೆದಾಗ ಪಿರ್ಯಾದಿದಾರರು ತಪ್ಪಿಸಿದಾಗ, ಆ ಕಲ್ಲು ಆರೋಪಿಯ ಆಟೊ ರಿಕ್ಷಾದ ಎದುರಿನ ಗ್ಲಾಸಿಗೆ ತಾಗಿ ಗ್ಲಾಸು ಹುಡಿಯಾಯಿತು. ಆರೋಪಿತರು ಇನ್ನೊಂದು ಕಲ್ಲಿನಿಂದ ಹೊಡೆದು ಪಿರ್ಯಾದಿದಾರರ ಆಟೊದ ಹಿಂಬದಿ ಗ್ಲಾಸನ್ನು ಹುಡಿಮಾಡಿದ್ದಲ್ಲದೇ, ನಂತರ ಪಿರ್ಯಾದಿದಾರರನ್ನು ಹಿಡಿದು ಎಳೆದಾಡಿ ಆರೋಪಿ ಪಿರ್ಯಾದಿದಾರರ ಎಡ ಕೈಗೆ ಕಚ್ಚಿ ರಕ್ತಗಾಯವನ್ನುಂಟು ಮಾಡಿರುವುದಲ್ಲದೇ, ಇನ್ನು ಮುಂದಕ್ಕೆ ತಂಟೆಗೆ ಬಂದರೆ ಜೀವ ಸಮೇತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಸರ್ಫರಾಜ್ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ  ಮೊ.ನಂ.133/2013, ಕಲಂ 323, 325, 427, 504, 506 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ


  • ದಿನಾಂಕ   14-05-2013 ರಂದು ಬೆಳಿಗ್ಗೆ 08-00 ಗಂಟೆಗೆ ಪಿರ್ಯಾದಿದಾರರಾದ ಮಹಮ್ಮದ್ ಅಸ್ಲಂ ರವರು ಮಂಗಳೂರು ನಗರದ ಧಕ್ಕೆಯ ಪೋಟರ್್ ರೋಡ್ನ ಬಳಿ  ಇರುವಾಗ್ಗೆ ಪ್ರಾಯ ಸುಮಾರು 50 ವರ್ಷದ ಅಪರಿಚಿತ ವ್ಯಕ್ತಿಯು ರಸ್ತೆ ಬದಿಯಲ್ಲಿ  ಬಿದ್ದು ಕೊಂಡಿರುವುದನ್ನು ಕಂಡು, ಆತನನ್ನು ಸಾರ್ವಜನಿಕರ ಸಹಾಯದಿಂದ ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಲ್ಲಿ, ಅಲ್ಲಿನ ವೈಧ್ಯರು ಪರೀಕ್ಷಿಸಿ  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮೃತನು ಯಾವುದೋ ಕಾಯಿಲೆಯಿಂದ ಯಾ ವಿಪರೀತ ಅಮಲು ಪದಾರ್ಥ ಸೇವನೆಯಿಂದ ಮೃತ ಪಟ್ಟಿರಬಹುದಾಗಿದೆ. ಆದುದರಿಂದ  ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಮಹಮ್ಮದ್ ಅಸ್ಲಂ ಪ್ರಾಯ 32 ವರ್ಷ, ಕೆ.ಪಿ.ಇಸ್ಮಾಯಿಲ್, ಎಮ್.ಜೆ.ಎಮ್. ನಂಬ್ರ 143 ಬೆಂಗ್ರೆ ಕಸಬಾ, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಯು.ಡಿ.ಆರ್. ನಂ: 41/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಅಪಘಾತ ಪ್ರಕರಣ

ಬಜಪೆ ಠಾಣೆ


  • ದಿನಾಂಕ: 8-05-2013 ರಂದು 21-00 ಗಂಟೆಗೆ ಮಂಗಳೂರು ತಾಲೂಕಿನ ಅಡ್ಡೂರು ಗ್ರಾಮದ , ಕಾಜಿಲ ಎಂಬಲ್ಲಿ ಗೂಡ್ಸ್ ವಾಹನ ನಂ: ಕೆಎ 13-2297  ರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೆಸ್ಕಾಂ ಗೆ ಸೇರಿದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ, ವಿದ್ಯುತ್ ಕಂಬ ತುಂಡಾಗಿ ಮೆಸ್ಕಾಂ ಗೆ ಸುಮಾರು 27530/- ರೂಪಾಯಿ ನಷ್ಟವಾಗಿರುತ್ತದೆ ಎಂಬುದಾಗಿ ಜಗದೀಶ್ ಮೂತರ್ಿ, 57 ವರ್ಷ, ತಂದೆ: ದಿ: ದೇವಿರಾಚಾರ್, ಜೂನಿಯರ್ ಇಂಜಿನಿಯರ್, ಓ & ಎಂ. ಡಿವಿಜನ್, ಮೆಸ್ಕಾಂ, ಕೈಕಂಬ ಶಾಖೆ. ಮಂಗಳೂರು ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ: 144/2013 ಕಲಂ:279 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



  • ದಿನಾಂಕ: 14-05-2013 ರಂದು 10-30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು, ಕೈಕಂಬ ಎಂಬಲ್ಲಿ ಫಿರ್ಯಾದಿದಾರರಾದ ಶ್ರೀಮತಿ ಸಿಲ್ವಿಯಾ ವೇಗಸ್, ಪ್ರಾಯ: 47 ವರ್ಷ, ಗಂಡ: ಲ್ಯಾನ್ಸಿ ವೇಗಸ್, ವಾಸ: ಸೈಂಟ್ ಆಂಟನಿ ಕಂಪೌಂಡ್, ಡೋರ್ ನಂ: 3-35/110, ಸಂತೋಷ್ ನಗರ, ಪಚ್ಚನಾಡಿ ಗ್ರಾಮ, ಮಂಗಳೂರು ಡಿತಡಿಣ ರಸ್ತೆ ಬದಿಯಲ್ಲಿ ನಿಂತಿದ್ದಾಗ, ಮೋಟಾರು ಸೈಕಲ್ ನಂ: ಕೆಎ 19 ಇಎಫ್ 5744 ನೇದರ ಸವಾರ ಮೋಟಾರು ಸೈಕಲನ್ನು ಕಿನ್ನಿಕಂಬಳ ಕಡೆಯಿಂದ ಮಂಗಳೂರು ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರ ತಲೆಗೆ ಮತ್ತಿತರ ಕಡೆ ರಕ್ತ ಗಾಯವಾಗಿದ್ದು, ಗಾಯಾಳು ಚಿಕಿತ್ಸೆಯ ಬಗ್ಗೆ   ಮಂಗಳೂರು ಎಸ್.ಸಿ.ಎಸ್. ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬುದಾಗಿ ಶ್ರೀಮತಿ ಸಿಲ್ವಿಯಾ ವೇಗಸ್ ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ: 145/2013 ಕಲಂ: 279, 337 ಐಪಿಸಿ ಮತ್ತು ಕಲಂ: 134(ಎ) &(ಬಿ) ಐಎಂವಿ ಕಾಯಿದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



 ಕಾವೂರ್ ಠಾಣೆ


  • ದಿನಾಂಕ 13-05-2013 ರಂದು ಪಿರ್ಯಾದಿದಾರರಾದ ಲಕ್ಷೀನಾರಾಯಣ ಶೆಟ್ಟಿ (49 ವರ್ಷ), ತಂದೆ: ಸುಂದರ ಶೆಟ್ಟಿ, ವಾಸ: ಶ್ರೀ ದೇವಿ ಕೃಪಾ, ಶಿವನಗರ, ಮುಲ್ಲಕಾಡು, ಕಾವೂರು ಮಂಗಳೂರು ರವರು ತನ್ನ ಮನೆಯಿಂದ ಕಾವೂರು ಜಂಕ್ಷನ್ ಗೆ ತರಕಾರಿ ತರಲು ತನ್ನ ಬಾಬ್ತು ಕೆಎ-19-ಯು-5913 ನೇ ಮೋಟಾರು ಸೈಕಲಿನಲ್ಲಿ ರಾತ್ರಿ 7-30 ಗಂಟೆಗೆ ಕಾವೂರು ಮಹಾಲಿಂಗೇಶ್ವರ ದೇವಾಸ್ಥಾನದ ಬಳಿ ತಲುಪಿದಾಗ ಕಾವೂರು ಕಡೆಯಿಂದ ಬಂದ ಕೆಎ-19-ಅರ್-8874 ನೇ ಮೋಟಾರು ಸೈಕಲ್ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದು, ಎಡಕಾಲಿನ ಮೊಣಗಂಟಿಗೆ ಗುದ್ದಿದ ಗಾಯ ಮತ್ತು ಬಲಕಾಲಿನ ಪಾದದ ಬಳಿ ತರಚಿದ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ ಎಂಬುದಾಗಿ ಲಕ್ಷೀನಾರಾಯಣ ಶೆಟ್ಟಿ ರವರು ನೀಡಿದ ದೂರಿನಂತೆ ಕಾವೂರು ಪೊಲೀಸ್ ಠಾಣೆ ಅ.ಕ್ರ: 104/2013 ಕಲಂ  279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:

Post a Comment