Sunday, May 19, 2013

Daily Crime Incidents for May 19, 2013


ಅಪಘಾತ ಪ್ರಕರಣ

ಸುರತ್ಕಲ್ ಠಾಣೆ

  • ದಿನಾಂಕ: 17-05-13 ರಂದು ಪಿರ್ಯಾದಿದಾರರಾದ ಸವಿನ್ ಕುಮಾರ್ (26) ತಂದೆ: ಲೋಕನಾಥ ಕರ್ಕೇರ, ವಾಸ: ಸ್ಐಟ್ ನಂಬ್ರ 51, 2ನೇ ಬ್ಲಾಕ್ ಮೀನಕಳಿಯ  ಬೈಕಂಪಾಡಿ ಮಂಗಳೂರು ರವರು ತನ್ನ ಅಣ್ಣ ಕಿರಣ್ ಎಂಬವರ ಜೊತೆ ಕುಳಾಯಿ ಶೆಟ್ಟಿ ಐಸ್ ಕ್ರೀಂ ಬಳಿ ಇರುವ ವಜ್ರದುಂಬಿ ಹೊಟೇಲ್ ನಲ್ಲಿ ಊಟ ಮಾಡಿ ನಂತರ ಬೈಕಂಪಾಡಿ ಕಡೆಗೆ ಹೋಗುವರೇ ಬಸ್ಸಿಗಾಗಿ ಬಸ್ಸು ನಿಲ್ದಾಣದಲ್ಲಿ ಕಾಯುತ್ತಿರುವಾಗ ಅಪರಾಹ್ನ  ಸುಮಾರು 3-30 ಗಂಟೆಗೆ ಸುರತ್ಕಲ್ ಕಡೆಯಿಂದ ಕೆಎ-19-ಡಿ-4299 ನೇ ಕಾರನ್ನು ಅದರ ಚಾಲಕ ಶಬೀರ್ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸುರತ್ಕಲ್ ಕಡೆಯಿಂದ ಬೈಕಂಪಾಡಿ ಕಡೆಗೆ ಬರುವ ಒಂದು ಲಾರಿಯನ್ನು ಅದರ ಎಡ ಬದಿಯಿಂದ ಓವರ್ ಟೇಕ್ ಮಾಡಿ ರಸ್ತೆಯ ಪೂರ್ಣ ಎಡ ಬದಿಗೆ ಬಂದು ರಸ್ತೆ ಬದಿಯಲ್ಲಿ ಪಿರ್ಯಾದಿದಾರರ ಜೊತೆಯಲ್ಲಿ ನಿಂತಿದ್ದ ಪಿರ್ಯಾದಿದಾರರ ಅಣ್ಣ ಕಿರಣ್ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಕಿರಣ್ ರವರ  ತಲೆಗೆ, ಭುಜಕ್ಕೆ , ರಕ್ತಗಾಯವಾಗಿದ್ದು ಚಿಕಿತ್ಸೆಗೆ ಅದೇ ಕಾರಿನಲ್ಲಿ ಮಂಗಳೂರು ಎ.ಜೆ.ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಜ್ಯೋತಿ ಕೆಎಂಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬುದಾಗಿ ಸವಿನ್ ಕುಮಾರ್ ರವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣಾ ಮೊ. ನಂ. 139/2013 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ವಾಹನ ಕಳವು ಪ್ರಕರಣ

ಸುರತ್ಕಲ್ ಠಾಣೆ

  • ಪಿರ್ಯಾದಿದಾರರಾದ ಟೋಪಣ್ಣ ಬಿ.ಟಿ (ಪ್ರಾಯ 30), ತಂದೆ ಬರ್ಮಪ್ಪ, ಚೌಡೇಶ್ವರಿ ದೇವಸ್ಥಾನದ ಹತ್ತಿರ, ಮೇದೂರು ಅಂಚೆ ಮತ್ತು ಗ್ರಾಮ, ಹಿರೆಕೆರೂರು ತಾಲೂಕು, ಹಾವೇರಿ ಜಿಲ್ಲೆ ರವರು ಚಾಲಕರಾಗಿರುವ ಟ್ಯಾಂಕರ್ ಲಾರಿ ನಂಬ್ರ ಕೆಎ-20 ಸಿ-3044 ನೇಯದ್ದನ್ನು ನಿನ್ನೆ ದಿನ ದಿನಾಂಕ 17-05-2013 ರಂದು ಸಂಜೆ 5-30 ಗಂಟೆಗೆ ಟ್ಯಾಂಕರ್ನ್ನು ಪಿರ್ಯಾದಿದಾರರು ಬಾಡಿಗೆಗೆ ವಾಸವಿರುವ  ಹೊನ್ನಕಟ್ಟೆಯ ಮನೆಯ ಮುಂದೆ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದು, ಈ ದಿನ ದಿನಾಂಕ 18-05-2013 ರಂದು ಬೆಳಿಗ್ಗೆ ಸುಮಾರು 06-00 ಗಂಟೆಗೆ ಎದ್ದು ನೋಡಿದಾಗ ಅವರು ನಿಲ್ಲಿಸಿದ್ದ ಸ್ಥಳದಲ್ಲಿ ಟ್ಯಾಂಕರ್ ಲಾರಿ ಅಲ್ಲಿ ಇರಲಿಲ್ಲ. ಕೂಡಲೇ ಅವರು ಅಲ್ಲಿ ಅಕ್ಕ-ಪಕ್ಕದವರಲ್ಲಿ ವಿಚಾರಿಸಿ ಎಲ್ಲಾ ಕಡೆ ಹುಡುಕಾಡಿದ್ದು ಎಲ್ಲಿಯೂ ಪತ್ತೆಯಾಗಲಿಲ್ಲ. ಹಾಗೂ ಈ ಬಗ್ಗೆ ಟ್ಯಾಂಕರ್ ಮಾಲಕರಿಗೆ ವಿಷಯ ತಿಳಿಸಿರುತ್ತಾರೆ. ದಿನಾಂಕ 17-05-25013 ರಂದು ಸಂಜೆ ಸುಮಾರು 5-30 ಗಂಟೆಯಿಂದ ಈ ದಿನ ದಿನಾಂಕ 18-05-2013 ರಂದು ಬೆಳಿಗ್ಗೆ 06-00 ಗಂಟೆಯ ಮಧ್ಯೆ ಯಾರೋ ಕಳ್ಳರು ಟ್ಯಾಂಕರ್ ಲಾರಿ ನಂಬ್ರ ಕೆಎ-20 ಸಿ-3044 ನ್ನು ಕಳ್ಳತನ ಮಾಡಿರುವುದಾಗಿದೆ ಎಂಬುದಾಗಿ ಟೋಪಣ್ಣ ಬಿ.ಟಿ ರವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣಾ 140/2012 ಕಲಂ: 379  ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ

ದಕ್ಷಿಣ ಠಾಣೆ

  • ಫಿಯರ್ಾದಿದಾರರಾದ ಕಾಶೀನಾಥ್ ರವರು ಮಂಗಳೂರು ದಕ್ಷಿಣ ದಕ್ಕೆಯಲ್ಲಿ ಬೋಟ್ ರಿಪೇರಿ ಕೆಲಸ ಮಾಡಿಕೊಂಡಿರುತ್ತಾರೆ ಈ ದಿನ ದಿನಾಂಕ 18-05-2013 ರಂದು  ಮಂಗಳೂರು ನಗರದ ಫ್ರೆಂಡ್ಸ್ ಬಾರ್ನ ಪಕ್ಕದ ಗೂಡ್ಸ್ ರೈಲ್ವೆ ನಿಲ್ದಾಣದ ಬಳಿಯ ದಂಡೆಯೊಂದರ ಬಳಿ ಜನ ಸೇರಿದ್ದು, ಅದನ್ನು ನೋಡಿದ ಫಿಯರ್ಾದುದಾರರು ಹೋಗಿ ನೋಡಿದಾಗ, ಸುಮಾರು 35 ರಿಂದ 40 ವರ್ಷ ಪ್ರಾಯದ ಒರ್ವ ಅಪರಿಚಿತ ವ್ಯಕ್ತಿ ಮಲಗಿದಲ್ಲಿಯೇ ಮೃತಪಟ್ಟಿದ್ದು, ಸದ್ರಿ ವ್ಯಕ್ತಿಗಿದ್ದ ಯಾವುದೋ ಕಾಯಿಲೆಯಿಂದ ಯಾ ವಿಪರೀತ ಅಮಲು ಪದಾರ್ಥ ಸೇವನೆಯಿಂದ ಮೃತಪಟ್ಟಿರಬಹುದಾಗಿದೆ ಎಂಬುದಾಗಿ ಕಾಶೀನಾಥ್ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ    ಯು.ಡಿ.ಆರ್. ನಂ: 43/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


  • ಫಿಯರ್ಾದಿದಾರರಾದ ಪ್ರಕಾಶ್ ರವರು   ದಿನಾಂಕ 18-05-2013 ರಂದು ಮಂಗಳೂರು ಸರಕಾರಿ ವೆನ್ಲಾಕ್ ಅಸ್ಪತ್ರೆಯ ಹೊರ ಠಾಣೆಯಲ್ಲಿ ಕರ್ತವ್ಯದಲ್ಲಿರುವ ಸಮಯ ಸುಮಾರು 13-30 ಗಂಟೆ ಸಮಯಕ್ಕೆ ವೆನ್ಲಾಕ್ ಅಸ್ಪತ್ರೆಯ ಆವರಣದಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯು ಮೃತಪಟ್ಟಿರುವುದಾಗಿ ಬಂದ ಮಾಹಿತಿಯಂತೆ ಫಿಯರ್ಾದುದಾರರ ಸದ್ರಿ ಸ್ಥಳಕ್ಕೆ ಹೋಗಿ ನೋಡಿದಾಗ, ದಿನಾಂಕ 17-05-2013 ರಂದು ಮಲೇರಿಯಾ ಖಾಯಿಲೆ ಬಗ್ಗೆ ಅಸ್ಪತ್ರೆಯಲ್ಲಿ ದಾಖಲಾಗಿ, ದಿನಾಂಕ 18-05-2013 ರಂದು ಬೆಳಿಗ್ಗೆ 6-00 ಗಂಟೆಗೆ ಕಾಣೆಯಾಗಿದ್ದ ಧರ್ಮ ಪ್ರಾಯ 38 ವರ್ಷ ಎಂಬವರಾಗಿದ್ದು, ಮೃತ ಧರ್ಮ ಎಂಬಾತನಿಗಿದ್ದ  ಮೆಲೇರಿಯಾ ಖಾಯಿಲೆಗೆ ಸರಿಯಾದ ಚಿಕಿತ್ಸೆ ಪಡೆಯದೆ ಅಥವಾ ಬೇರೆ ಯಾವುದೋ ಖಾಯಿಲೆಯಿಂದಾಗಿ ಮೃತಪಟ್ಟಿರ ಬಹುದಾಗಿದೆ ಎಂಬುದಾಗಿ ಪ್ರಕಾಶ್ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ    ಯು.ಡಿ.ಆರ್. ನಂ: 44/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


  • ಫಿಯರ್ಾದಿದಾರರಾದ ಶ್ರೀಮತಿ ಪುಷ್ಪ ರವರ ಅಕ್ಕನ ಮಗನಾದ ಸಂತೋಷ್ ಕುಮಾರ್ ಪ್ರಾಯ 36 ವರ್ಷ ರವರು ಮಂಗಳೂರಿನ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಎಟೆಂಡರ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ಇವರು ತನ್ನ ಮನೆಯಾದ ಕುಂಬ್ಳೆಯಲ್ಲಿ ದಿನಾಂಕ 16-05-13 ರಂದು ತನ್ನ ಹೆಂಡತಿ ಶ್ರೀಮತಿ ಸುಕನ್ಯ ಜೊತೆ ಗಲಾಟೆ ಮಾಡಿ ಚಿಕ್ಕಮ್ಮನ ಮನೆಯಾದ ಜಪ್ಪು ಬಪ್ಪಾಲ್ಗೆ ಬಂದಿರುತ್ತಾರೆ. ಈ ದಿನ ದಿನಾಂಕ 18-05-13 ರಂದು ಸಂಜೆ ಸುಮಾರು 15-00 ಗಂಟೆಯ ವೇಳೆಗೆ ಮನೆಯಲ್ಲಿ ಫ್ಯಾನಿಗೆ ಶಾಲ್ನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿರುತ್ತಾರೆ. ಇವರು ಗಂಡ ಹೆಂಡತಿಯ ನಡುವಿನ ಮನಸ್ತಾಪದಿಂದ ಬೇಸತ್ತುಗೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ಕುತ್ತಿಗೆಗೆ ನೇಣೂ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿ ಶ್ರೀಮತಿ ಪುಷ್ಪ  ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ    ಯು.ಡಿ.ಆರ್. ನಂ: 45/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



No comments:

Post a Comment