Friday, December 14, 2012

Daily Crime Incidents for December 14, 2012


ವಾಹನ ಕಳವು ಪ್ರಕರಣ :

ಪಣಂಬೂರು ಠಾಣೆ ;

  • ಪಿರ್ಯಾದಿದಾರರು ಅವರ ಮಾಲಕತ್ವದ  ಕೆಎ-03/ಬಿ-9481ನೇ ಟಾಟಾ ಸುಮೋ ವಾಹನವನ್ನು ರಿಪೇರಿ ಬಗ್ಗೆ ಸುಮಾರು 3 ತಿಂಗಳ ಹಿಂದೆ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಮುಂಗಾರು ಬಳಿ ಇರುವ ಸಂಶು ಎಂಬವರ ಗ್ಯಾರೇಜಿನಲ್ಲಿ ಇರಿಸಿದ್ದು, ದಿನಂಪ್ರತಿ ಗ್ಯಾರೇಜಿಗೆ ಹೋಗಿ ವಾಹನವನ್ನು ನೋಡಿ ಬರುತ್ತಿದ್ದು ದಿನಾಂಕ 30-11-2012ರಂದು ಬೆಳಿಗ್ಗೆ ನೋಡಿ ಬಂದಿದ್ದು ದಿನಾಂಕ 01-12-2012ರಂದು ಬೆಳಿಗ್ಗೆ ಹೋಗಿ ನೋಡಲಾಗಿ ವಾಹನವು ಇಲ್ಲದೇ ಇದ್ದು ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗದೇ ಇದ್ದು ಸದ್ರಿ ವಾಹನವನ್ನು ಯಾರೋ ಕಳ್ಳರು ದಿನಾಂಕ 30-11-2012ರ ರಾತ್ರಿ ಸಮಯ ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸುಮೋ ವಾಹನದ ಮೊತ್ತ 2 ಲಕ್ಷ ರೂಪಾಯಿ ಆಗಬಹುದು ಎಂಬುದಾಗಿ ರಜಾಕ್ ಪ್ರಾಯ 35 ವರ್ಷ ತಂದೆ: ದಿ: ಮೂಸಬ್ಬ ವಾಸ: ಕಿಲರಿಯಾ ಮಸೀದಿಯ ಹತ್ತಿರ ತಣ್ಣೀರುಬಾವಿ ಮಂಗಳೂರು ರವರು ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣಾ ಅ.ಕ್ರ ಃ 218/12 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಜುಗಾರಿ ಆಡುತ್ತಿದ್ದವರ ಬಂಧನ :

ಕಾವೂರು ಠಾಣೆ ;

  •  ದಿನಾಂಕ: 12-12-2012 ರಂದು ರಾತ್ರಿ ಮಂಗಳೂರು ತಾಲೂಕು ಮರಕಡ ಗ್ರಾಮದ ಮರಕಡ ಗುಡ್ಡೆ ಎಂಬಲ್ಲಿ ಜುಗಾರಿ ಆಡುತ್ತಿದ್ದಾರೆ ಎಂಬುದಾಗಿ ದೊರೆತ ಖಚಿತ ಮಾಹಿತಿಯಂತೆ ಪಿಎಸ್ಐ ಉಮೇಶ್ ಕುಮಾರ್ ಎಂ.ಎನ್. ಆದ ನಾನು ಸಿಬ್ಬಂದಿಗಳು ಮತ್ತು ಪಂಚರೊಂದಿಗೆ ಇಲಾಖಾ ವಾಹನದಲ್ಲಿ ಸದ್ರಿ ಸ್ಥಳಕ್ಕೆ ತೆರಳಿ ರಾತ್ರಿ 22-00 ಗಂಟೆಗೆ ಧಾಳಿ ನಡೆಸಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಎಂಬ ನಸಿಬಿನ ಜೂಜಾಟ ಆಡುತ್ತಿದ್ದ ಆರೋಪಿಗಳಾದ ಯೋಗೀಶ, ಚರಣ್ ಮತ್ತು ಹೇಮಚಂದ್ರ ಎಂಬವರನ್ನು ವಶಕ್ಕೆ ತೆಗೆದುಕೊಂಡು ಸ್ಥಳದಲ್ಲಿದ್ದ ಒಟ್ಟು ರೂಪಾಯಿ 1715/-,  ಇಸ್ಪೀಟ್, ಕ್ಲೆವರ್, ಡೈಮಂಡ್ ಆಟೀನ್ ಹೀಗೆ ಒಟ್ಟು 52 ಇಸ್ಪೀಟ್ ಎಲೆಗಳು, ನೋಕಿಯಾ ಕಂಪೆನಿಯ ಕಪ್ಪುಬಣ್ಣದ ಮೂರು ಮೊಬೈಲ್ ಫೋನ್ಗಳನ್ನು, ಪ್ಲಾಸ್ಟಿಕ್, ಅರ್ಧ ಉರಿದ ಮೇಣದ ಬತ್ತಿಗಳನ್ನು ಮುಂದಿನ ಕ್ರಮದ ಮಹಜರು ಮೂಲಕ ಸ್ವಾಧೀನಪಡಿಸಿಕೊಂಡಿರುವುದಾಗಿದೆ, ಆರೋಪಿಗಳ ಪೈಕಿ  2-3 ಮಂದಿ ಓಡಿ ತಪ್ಪಿಸಿಕೊಂಡಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಕಾವೂರು ಪೊಲೀಸು ಠಾಣಾ ಅ.ಕ್ರ. 187/2012 ಕಲಂ: 87 ಕೆ.ಪಿ. ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ :

ಬಜಪೆ ಠಾಣೆ ;

  • ದಿನಾಂಕ: 12/12/2012 ರಂದು 15-00 ಗಂಟೆ ಸಮಯಕ್ಕೆ,ಪಿರ್ಯಾದಿದಾರರು ತನ್ನ ಪರಿಚಯದ ರಮೇಶ್ ಎಂಬವರ ಆಟೋ ರಿಕ್ಷಾ ನಂಬ್ರ: ಕೆಎ 19 ಸಿ 3771 ನೇದರಲ್ಲಿ ಗುರುಪುರಕ್ಕೆ ಹೋಗುವರೇ ತನ್ನ ಸ್ನೇಹಿತರಾದ ಯೋಗೀಶ್ ಮತ್ತು ಆನಂದ ಎಂಬವರೊಂದಿಗೆ ಪ್ರಯಾಣಿಸುತ್ತಾ ಮಂಗಳೂರು ತಾಲೂಕು ಮೂಳೂರು ಗ್ರಾಮದ ಗುರುಪುರ ಅಣೆಬಳಿ ತಲುಪುವಾಗ ಸದ್ರಿ ರಿಕ್ಷಾ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ರಿಕ್ಷಾ ಮಗುಚಿ ಬಿದ್ದು, ಪ್ರಯಾಣಿಕರಾದ ಯೋಗೀಶ್ ಮತ್ತು ಆನಂದ ಎಂಬವರಿಗೆ ಸಾಮಾನ್ಯ ಸ್ವರೂಪದ ಗಾಯವಾಗಿರುತ್ತದೆ ಎಂಬುದಾಗಿ ಪುಷ್ಪರಾಜ್ 23 ವರ್ಷ, ತಂದೆ: ಕೃಷ್ಣ ಜೋಗಿ, ಮಳಲಿ ಮಟ್ಟಿ, ಬಡಗ ಉಳಿಪಾಡಿ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ: 246/2012, ಕಲಂ: 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


No comments:

Post a Comment