Sunday, December 9, 2012

Daily Crime Incidents for December 09, 2012.


ವಂಚನೆ ಪ್ರಕರಣ

ಉತ್ತರ ಠಾಣೆ:

  •  ಈ ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದಿದಾರರಾದ ಶ್ರೀಮತಿ ತಾರಾ ಭಂಡಾರ್ಕರ್ ಪ್ರಾಯ 75 ವರ್ಷ, ಗಂಡ: ಅಚ್ಚುತ ಭಂಡಾರಕರ್, ವಾಸ: ಡೋರ್ ನಂಬ್ರ 215/2, ಕಕ್ಕೆಬೆಟ್ಟು ಹೌಸ್, ಕುಲಶೇಖರ, ಮಂಗಳೂರು ರವರು ದಿನಾಂಕ 08-12-2012 ರಂದು ಬೆಳಿಗ್ಗೆ 11:30 ಮನೆಯಿಂದ ಬಸ್ಸಿನಲ್ಲಿ ಹಂಪನಕಟ್ಟೆಗೆ ಬಂದು ಇಳಿದು, ನಡೆದುಕೊಂಡು ಮಹಮ್ಮಾಯಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ, ನಂತರ ವೆಂಕಟರಮಣ ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿ, ಊಟ ಮಾಡಿ, ನಂತರ ಪಂಚಮಾಲ್ ಅಂಗಡಿಗೆ ಹೋಗಿ ಸಾಮಾನು ಖರೀದಿಸಿ, ನಡೆದುಕೊಂಡು ಹಂಪನಕಟ್ಟೆ ಕಡೆಗೆ ನಡೆದುಕೊಂಡು ಬರುವಾಗ  ರಾಜೇಶ್ ಕುಡ್ವ ವಕೀಲರ ಆಫೀಸ್ ಬಳಿ ಇರುವ ಬೊಂಡ ಮಾರುವ ತಳ್ಳು ಗಾಡಿಯ ಬಳಿ ಸುಮಾರು 15:00 ಗಂಟೆಗೆ ತಲುಪಿದಾಗ ಹಿಂದಿನಿಂದ ಒಬ್ಬ ಅಪರಿಚಿತ ವ್ಯಕ್ತಿಯು ಪಿರ್ಯಾದಿದಾರರಲ್ಲಿ ಹಿಂದಿನಿಂದ ಪೊಲೀಸರು ಕರೆಯುತ್ತಿದ್ದಾರೆ ಎಂದು ನಿಲ್ಲಿಸಿದರು. ಪಿರ್ಯಾದಿದಾರರಲ್ಲಿ ಆ ಇಬ್ಬರು ವ್ಯಕ್ತಿಗಳು ನಿನ್ನೆ ದಿನ ಶಾರದಾ ಎಂಬ ಹೆಂಗಸಿಗೆ ಚೂರಿ ಹಾಕಿ ಬಂಗಾರ ಕೊಂಡು ಹೋಗಿರುತ್ತಾರೆ, ಈ ದಾರಿಯಲ್ಲಿ ಯಾರೂ ಚಿನ್ನ ಹಾಕಿಕೊಂಡು ಹೋಗಬಾರದು, ಇಲ್ಲಿ ಚಿನ್ನ ಹಾಕಿಕೊಂಡು ಹೋಗಬಾರದು, ಎಲ್ಲಾ ಚಿನ್ನ ತೆಗೆಯಿರಿ ಎಂದು ಇಬ್ಬರು ವ್ಯಕ್ತಿಗಳು ಹೇಳಿದಾಗ, ಪಿರ್ಯಾದಿದಾರರು ತನ್ನ ಕುತ್ತಿಗೆಯಲ್ಲಿ ಇದ್ದ ಸುಮಾರು 2 ಪವನ ತೂಕದ ಒಂದು ಬಂಗಾರದ ಚೈನು ಹಾಗೂ ಒಂದುವರೆ ಪವನ ತೂಕದ ಒಂದು ಬಂಗಾರದ ಚೈನು ಜೊತೆಗೆ ಸಣ್ಣ ಪೆಂಡೆಂಟ್ ನ್ನು ಪಸರ್ಿನಲ್ಲಿ ಇಟ್ಟಾಗ, ಪಿರ್ಯಾದಿದಾರರ ಕೈಯಲ್ಲಿದ್ದ ಪ್ಲಾಸ್ಟಿಕ್ ತೊಟ್ಟೆ ಜಾರಿ ಕೆಳಗೆ ಬಿದ್ದಿದ್ದು, ಅದನ್ನು ಆರೋಪಿತನು ತೊಟ್ಟೆಯನ್ನು ಹಿಡಿದು ಅವನ ಕೈಯಲ್ಲಿದ್ದ ಒಂದು ಕಟ್ಟನ್ನು ಚೀಲದ ಒಳಗೆ ಇಟ್ಟನು. ನಂತರ ಪಿರ್ಯಾದಿದಾರರು ವಾಪಾಸು ದೇವಸ್ಥಾನಕ್ಕೆ ವಿಷಯ ತಿಳಿಸಲು ಬಂದು, ಚೀಲವನ್ನು ನೋಡಿದಾಗ ಬಂಗಾರವು ಇರದೇ ಆರೋಪಿತನ ಕೈಯಲ್ಲಿದ್ದ ಕಟ್ಟು ಇರುವುದು ಕಂಡು ಬಂದಿರುತ್ತದೆ. ಅದನ್ನು ತೆರೆದು ನೋಡಿದಾಗ ಅದರಲ್ಲಿ ಎರಡು ಬಳೆಗಳು ಕಂಡು ಬಂದಿರುತ್ತದೆ. ಆರೋಪಿತರುಗಳು ಪಿರ್ಯಾದಿದಾರರನ್ನು ಮೋಸದಿಂದ ಬಂಗಾರವನ್ನು ಕೊಂಡು ಹೋಗಿದ್ದು, ಅದರ ತೂಕ 3 ವರೆ ಪವನ್ ಆಗಿದ್ದು, ಒಟ್ಟು ಮೌಲ್ಯ ರೂ. 65,000/- ಆಗಿರುತ್ತದೆ. ಶ್ರೀಮತಿ ತಾರಾ ಭಂಡಾರ್ಕರ್ ನೀಡಿದ ದೂರಿನಂತೆ ಉತ್ತರ ಠಾಣೆ ಅಪರಾದ ಕ್ರಮಾಂಕ 196/2012 ಕಲಂ 420 ಜೊತೆಗೆ 34 ಐಪಿಸಿ ಪ್ರಕಾರ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣಗಳು

ಸಂಚಾರ ಪೂರ್ವ ಠಾಣೆ;

  • ದಿನಾಂಕ 07-12-2012 ರಂದು ಸಮಯ ಸುಮಾರು 15.15 ಗಂಟೆಗೆ ಮೋಟಾರು ಸೈಕಲ್ ನಂಬ್ರ ಏಂ-20 ಗಿ  4424 ನ್ನು  ಅದರ ಸವಾರ ವಿಜಯ ರಾಜ್ ಎಂಬವರು ಕದ್ರಿ ಶಿವಬಾಗ್ ಕಡೆ ಯಿಂದ ಹಾಟರ್ಿಕಲ್ಚರ್ ಜಂಕ್ಷನ್ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಹೋಗಿ ಸೈಂಟ್ ಆಗ್ನೇಸ್ ಶಾಲೆಯ ಎದುರು ರಸ್ತೆ ದಾಟುತ್ತಿದ್ದ ಬೇಬಿ ಕಾವ್ಯ ಎಂಬವರಿಗೆ ಡಿಕ್ಕಿ ಮಾಡಿದ ಪರಿಣಾಮ ಕಾವ್ಯ ರಸ್ತೆಗೆ ಬಿದ್ದು, ಎರಡು ಕಾಲುಗಳಿಗೆ ಕೈಗಳಿಗೆ ತರಚಿದ ಗಾಯ ಹಾಗೂ ಹಣೆಗೆ ಗುದ್ದಿದ ಗಾಯವುಂಟಾಗಿ ಸಿಟಿ ಆಸ್ಪತ್ರಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಯೋಗೀಶ  (38ವರ್ಷ) ತಂದೆ: ಭಾಸ್ಕರ ದೇವಾಡಿಗ ವಾಸ: ಕದ್ರಿ ಗಾನದ ಕೊಲ್ಯ ಹೌಸ್, ನಿಯರ್ ವಿಜಯ ಕ್ಲಿನಿಕ್ ಹಾಸ್ಪಿಟಲ್,  ಮಂಗಳೂರು ಇವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣಯ ಅಪರಾದ ಕ್ರಮಾಂಕ ೆ175/2012 279, 337 ಐ.ಪಿ.ಸಿ ಪ್ರಕಾರ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ


ಕಾವೂರು  ಠಾಣೆ;

  • ದಿನಾಂಕ 07-12-2012 ರಂದು ಫಿರ್ಯಾಧುದಾರರಾದ ಶ್ರೀ ವರ್ಧಮಾನರವರು ವೀರಪ್ಪ ಭಾಗವನರ್ ರವರ ಜೊತೆಯಲ್ಲಿ ಅವರ ಬಾಬ್ತು ಮೋಟಾರು ಸೈಕಲ್  ನಂಬ್ರ. ಕೆಎ-19-ಇ.ಡಿ-8771 ರಲ್ಲಿ ಸಹ ಸವಾರರಾಗಿ ಕೂಳೂರಿನಿಂದ ಮರಕಡ ಕಡೆಗೆ ಹೋಗುತ್ತಿದ್ದು, ಮೋಟಾರು ಸೈಕಲ್ ಸವಾರರಾದ ವೀರಪ್ಪ ಭಾಗವನರ್ ರವರು ತನ್ನ ಬಾಬ್ತು ಮೋಟಾರು ಸೈಕಲ್ನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾವೂರು ಶ್ರೀ ವೈದ್ಯನಾಥ ದೇವಸ್ಥಾನದ ಬಳಿ ರಾತ್ರಿ 10-40 ಗಂಟೆಗೆ ತಲುಪುವಾಗ್ಗೆ ಇನ್ನೊಂದು ವಾಹನಕ್ಕೆ ಸೈಡು ಕೊಡುವ ಸಮಯದಲ್ಲಿ ನಿರ್ಲಕ್ಷತನದಿಂದ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಫಿರ್ಯಾಧುದಾರರು ಹಾಗೂ ವೀರಪ್ಪ ಭಾಗವಾನರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ಫಿರ್ಯಾಧುದಾರರ ಎಡಕಾಲಿನ ಪಾದದ ಮೇಲೆ ತರಚಿದ ಗಾಯವಾಗಿದ್ದು, ವೀರಪ್ಪ ಭಾಗವಾನರ್ ರವರ ಎಡ ಕಣ್ಣಿನ ಮೇಲೆ ಹಾಗೂ ಬಲ ಮತ್ತು ಎಡ ಕಾಲಿಗೆ ರಕ್ತ ಬರುವ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಎ.ಜೆ.ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದಾರೆೆ ಎಂಬುದಾಗಿ ಶ್ರೀ ವರ್ಧಮಾನ (28) ತಂದೆ: ಬಸವಣ್ಣಪ್ಪ, ವಾಸ: ಕೊರಂಟಾಡಿ,  ಮರಕಡ, ಕಾವೂರು, ಮಂಗಳೂರು ಇವರು ನೀಡಿದ ದೂರಿನಂತೆ ಕಾವೂರು  ಠಾಣೆಯ    ಅಪರಾದ ಕ್ರಮಾಂಕ 183/2012 ಕಲಂ: 279, 337 ಐಪಿಸಿ  ಪ್ರಕಾರ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ


ಬಜಪೆ ಠಾಣೆ;

  • ದಿನಾಂಕ 08/12/2012 ರಂದು 11-15 ಗಂಟೆಯ ಹೊತ್ತಿಗೆ ಆರೋಪಿಯು ಮಿನಿ ಗೂಡ್ಸ್ ಟೆಂಪೋ ಕೆ.ಎ.28 ಎ 3723 ನೆಚಿುದನ್ನು ಮಂಗಳೂರು ನಗರದ ಬಜಪೆಕಡೆಯಿಂದ ಕೈಕಂಬ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ದುಡುಕುತನ ಅಥವಾ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಚಿುವಾಗುವ ರೀತಿಯಲ್ಲಿ ಚಲಾಯಿಸಿ ಪಡುಪೆರಾರ ಗ್ರಾಮದ ಕಜೆಪದವು ಎಂಬಲ್ಲಿ ಎದುರುಕಡೆಯಿಂದ ಹೋಗುತ್ತಿದ್ದ ಮೋಟಾರು ಸೈಕಲ್ ಸವಾರರಾದ ಹರೀಶ ಅಚಾರ್ಯ ಎಂಬವರಿಗೆ ತೀವ್ರಸ್ವರೂಪದ ಗಾಯವಾತದ್ದಲ್ಲದೇ ಅವರ ಮೋಟಾರು ಸೈಕಲು ಜಖಂಗೊಂಡಿರುವುದಾಗಿ  ಅರುಣ್ ಕುಮಾರ್ (32), ಗೋಪಾಲ ಸುವರ್ಣ, ಮಿತ್ತಬೈಲ್, ನಡುಗೋಡು ಗ್ರಾಮ, ಮಂಗಳೂರು ಇವರು ನೀಡಿದ ದೂರಿನಂತೆ ಬಜಪೆ   ಠಾಣೆಯ   ಅಪರಾದ ಕ್ರಮಾಂಕ 242/2012 ಕಲಂ: 279, 338  ಐ.ಪಿ.ಸಿ. ಪ್ರಕಾರ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಕಳವು ಪ್ರಕರಣ

ಮುಲ್ಕಿ ಠಾಣೆ;

  • ದಿನಾಂಕ 05/12/2012 ರ ರಾತ್ರಿ 11:30 ರಂದು ಹಾಗೂ ದಿನಾಂಕ 06/12/2012 ರಂದು ರಾತ್ರಿ 11:30 ರ ಸಮಯ ಪಿರ್ಯಾದಿದಾರರ ಮನೆಯ ಹಿಂಬದಿಯ ಹೊರಗಡೆ ಇರುವ  ಕೋಳಿ ಗೂಡಿನಲ್ಲಿರುವ ಸುಮಾರು 35 ರಿಂದ 45 ಕೋಳಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು , ಇದರ ಅಂದಾಜು ಮೌಲ್ಯ 15,000/- ದಿಂದ 20,000/- ಆಗಬಹುದು. ಈ ಕಳವನ್ನು ಪಿರ್ಯಾದಿ ಮನೆಯ ಹತ್ತಿರದಲ್ಲಿರುವ ಪಿರ್ಯಾದಿಯವರ ಜಾಗದ ತಗಾದೆ ಇರುವ ನವೀನ್ ಡಿಸೋಜಾ ಎಂಬವರು ಮಾಡಿಸಿರಬಹುದು. ಎಂಬ ಶಂಕೆಯಿದೆ. ಎಂಬುದಾಗಿ ಲಿಲ್ಲಿ ಡಿಸೋಜಾ (59), ತಂದೆ : ದಿ/ ಆಲ್ಬಟರ್್ ಡಿಸೋಜಾ, ವಾಸ: ಜೋಡುಬೇಲಿ  ಹೌಸ್, ಬಾಬಕೋಡಿ ಬಳಿ, ತಾಳಿಪಾಡಿ ಗ್ರಾಮ, ಕಿನ್ನಿಗೋಳಿ ಅಂಚೆ, ಮಂಗಳೂರು ತಾಲೂಕು ಇವರು ನೀಡಿದ ದೂರಿನಂತೆ ಮುಲ್ಕಿ ಠಾಣೆಯ  ಅಪರಾದ ಕ್ರಮಾಂಕ 152/2012 ಕಲಂ:380 ಐ.ಪಿ.ಸಿ. ಪ್ರಕಾರ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


No comments:

Post a Comment