Wednesday, December 19, 2012

Daily Crime Incidents for Dec 19, 2012


ಅಪಘಾತ ಪ್ರಕರಣ:

ಸಂಚಾರ ಪೂರ್ವ ಠಾಣೆ;


  • ದಿನಾಂಕ 17-12-2012 ರಂದು ಸಮಯ ಸುಮಾರು ಸಂಜೆ 16-30 ಗಂಟೆಗೆ ಪಿರ್ಯಾದುದಾರರು ತನ್ನ ಪತ್ನಿ ಆಯಿಷಾ ಹಾಗೂ ಮಗುವಿನೊಂದಿಗೆ ರೈಲ್ವೇ ಸ್ಟೇಶನ್ ಬಳಿ ಇರುವ ನೂರ್ ಮಸೀದಿ ಸಮೀಪದ ಕೈರಾಳಿ ಹೋಟೆಲ್ ಎದುರು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮಿಲಾಗ್ರೀಸ್ ಕಡೆಯಿಂದ ಕಾರು ನಂಬ್ರ ಏಐ-14 ಉ 5594ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಪತ್ನಿ ಆಯಿಷಾರವರಿಗೆ ಡಿಕ್ಕಿ ಮಾಡಿದ ಪರಿಣಾಮ ಅವರು ರಸ್ತೆಗೆ ಬಿದ್ದು ಬಲಕಾಲಿನ ಮೊಣಗಂಟಿಗೆ ಗುದ್ದಿದ ಗಾಯ ಮತ್ತು ಕೈಗಳಿಗೆ ತರಚಿದ ಗಾಯವಾಗಿ ಇಂದಿರಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಮಹಮ್ಮದ್ ಆಲಿ  (42 ವರ್ಷ) ತಂದೆ- ದಿ.ಮೊದಿನ್ ವಾಸ: ಕೋಳಿಕಾಡ್ ಹೌಸ್, ಪರ್ಪ ಪೋಸ್ಟ್, ಕಾಂಜ್ಞಗಾಡ್, ಕಾಸರಗೋಡು 184/2012 279 , 338 ಐ.ಪಿ.ಸಿ, ರಂತೆ ಪ್ರಕರಣ  ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಹುಡುಗಿ ಕಾಣೆ:

ದಕ್ಷಿಣ ಠಾಣೆ 


  • ದಿನಾಂಕ  09-12-12 ರಂದು ಬೆ 10-30 ಗಂಟೆಗೆ ಫಿರ್ಯಾದಿದಾರರ ಮನೆಯಲ್ಲಿ ಕೆಲಸಕ್ಕಿದ ಶಿವಮೊಗ್ಗ ನಿವಾಸಿ ನೂರ್ಜಹಾನ್, ಪ್ರಾಯ ಸುಮಾರು 20 ವರ್ಷ ಇವರು ಮನೆಯಿಂದ ಹೊರಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು ವಾಪಸ್ಸು ಬಂದಿರುವುದಿಲ್ಲ. ಈ ವರೆಗೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ ಎಂಬುದಾಗಿ ಶ್ರೀಮತಿ ಆಯಿಷ (37), ಗಂಡ: ಅಶ್ರಫ್ ಎಸ್.ಬಿ, ವಾಸ:  ವೆಸ್ಟ್ ಗೇಟ್ ಪ್ರೈಡ್, ಭಾರತ್ ಪೆಟ್ರೋಲ್ ಪಂಪ್ ಎದುರುಗಡೆ, ಫಳ್ನೀರ್ ಮಂಗಳೂರು ನೀಡಿದ ದೂರಿನಂತೆ ದಕ್ಷಿಣ ಠಾಣೆಯ ಅಪರಾದ ಕ್ರಮಾಂಕ 221/12 ಕಲಂ ಹುಡುಗಿ ಕಾಣೆ ಪ್ರಕರಣ  ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಉವರ್ಾ ಠಾಣೆ;


  • ದಿನಾಂಕ 17-12-2012 ರಂದು ಸಂಜೆ 7:00 ಗಂಟೆಗೆ ಪಿಯರ್ಾದಿದಾರರ ಮಗಳಾದ ಕುಮಾರಿ ಕೋಮಲ್ ಗಜಾಕೋಶ್(15) ಎಂಬವಳು ಮಂಗಳೂರಿನ ಬೋಳೂರಿನಲ್ಲಿರುವ ಅಮೃತ ವಿದ್ಯಾಲಯ ಶಾಲೆಯಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿದ್ದು, ಶಾಲೆಯಲ್ಲಿ ಪ್ರೊಜೆಕ್ಟ್ ವಕರ್್ ಇದೆಯೆಂದು ಮನೆಯಿಂದ ಹೊರಗೆ ಹೋದವಳು ವಾಪಾಸು ಮನೆಗೆ ಬಾರದೇ ಇದ್ದು, ಈ ಬಗ್ಗೆ ಸ್ನೇಹಿತರಲ್ಲಿ ವಿಚಾರಿಸಿದಲ್ಲಿ ಅದೇ ಶಾಲೆಯಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹೃಷಿಕೇಶ ಎಂಬವನೊಂದಿಗೆ ಹೋಗಿರಬಹುದು ಎಂಬುದಾಗಿ ತಿಳಿಸಿದ್ದು, ಕಾಣೆಯಾದ ಕುಮಾರಿ ಕೋಮಲ್ನನ್ನು ಪತ್ತೆ ಮಾಡಬೇಕೆಂಬುದಾಗಿ ಶ್ರೀಮತಿ ಹರ್ಷ ಗಜಾಕೋಶ್, ಗಂಡ: ಶಶಿಧರ್ ಗಜಾಕೋಶ್, ವಾಸ: ಫ್ಲಾಟ್ ನಂಬ್ರ 205, ಬಿ-2, ಅಶೋಕ ಎಕ್ಸಲೆನ್ಸಿ, ಉವರ್ಾ ಮಾರಿಗುಡಿ ಬಳಿ, ಉವರ್ಾ, ಮಂಗಳೂರು ರವರು ನೀಡಿದ ದೂರಿನಂತ ಉವರ್ಾ ಠಾಣೆ ಅಪರಾದ ಕ್ರಮಾಂಕ  62/2012 ಕಲಂ ಹುಡುಗಿ ಕಾಣೆ ಪ್ರಕರಣ  ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮನುಷ್ಯ ಕಾಣೆ:

ಮಂಗಳೂರು ಪೂರ್ವ ಠಾಣೆ


  • ದಿನಾಂಕ: 15-12-2012 ಪಿರ್ಯಾದಿದಾರರ ತಂದೆ: ಬೇಬಿ ಪೂಜಾರಿ ಎಂಬವರು ಮಂಗಳೂರಿನ ಅಳಕೆ ಎಂಬಲ್ಲಿರುವ ಹೋಟೆಲ್ ಪ್ರಕಾಶ್ ಎಂಬಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದು, ತನ್ನ ತಂಗಿಯಾದ ಸುಚಿತ್ರಾಳಿಗೆ ನಿಶ್ಚಿತಾರ್ಥವಿದ್ದು ಆ ಕಾರ್ಯಕ್ರಮಕ್ಕೆ ಬರಬೇಕಾದವರು ಬಾರದೇ  ಇದ್ದುದರಿಂದ ಪಿರ್ಯಾದಿದಾರ ತಂದೆಯವರು ಕೆಲಸ ಮಾಡುತ್ತಿರುವ ಹೋಟೆಲ್ ಪ್ರಕಾಶ್ ಎಂಬಲ್ಲಿಗೆ ಬಂದು ಅದರ ಮಾಲೀಕರಲ್ಲಿ ವಿಚಾರಿಸಿದಲ್ಲಿ ಕಾಣೆಯಾದ  ದಿನಾಂಕದಿಂದ ಹೋಟೆಲಿನಿಂದ  ಮನೆಗೆ ಹೋಗುವುದಾಗಿ ಹೇಳಿ ಹೋಗಿರುತ್ತಾರೆ ಎಂದು ತಿಳಿಸಿರುತ್ತಾರೆ ಹೋಟೆಲಿನಿಂದ ಹೋದವರು ಮನಗೆ ಬಾರದೇ ವಾಪಾಸ್ಸು ಹೋಟೆಲಿಗೆ ಹೋಗದೇ ಕಾಣೆಯಾಗಿರುತ್ತಾರೆ ಎಂಬುದಾಗಿ ಶ್ರೀ.ಸಚಿನ್(20), ತಂದೆ:ಬೇಬಿ ಪೂಜಾರಿ, ವಾಸ:ಕಂರ್ಬಡ್ಕ ದಖರ್ಾಸು ಮನೆ, ಬಡಗ ಕಜೆಕಾರು ಗ್ರಾಮ, ಪಾಂಡವರ ಕಲ್ಲು, ಬಂಟ್ವಾಳ ರವರು ನೀಡಿದ ದೂರಿನಂತೆ ಮಂಗಳೂರು ಪೂರ್ವ ಠಾಣೆ ಅಪರಾದ ಕ್ರಮಾಂಕ 182/2012 ಕಲಂ: ಮನುಷ್ಯ ಕಾಣೆ ಪ್ರಕರಣ  ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


No comments:

Post a Comment